ಮಂಚ
ಬಡಗಿಯ ಬಳಿ ಶ್ರೀಮಂತ ಬಂದ.
‘‘ಬೆಲೆಬಾಳುವ ಮರಗಳಿಂದ ಕೆತ್ತಿದ ಸುಂದರ ಮಂಚ ಬೇಕಾಗಿತ್ತು....’’
ಅಪರೂಪದ ಕೆತ್ತನೆಗಳಿಂದ ಕೂಡಿದ ಮಂಚವನ್ನು ರಾತ್ರಿಯಿಡೀ ಕೆತ್ತಿ, ಬೆಳಗ್ಗೆ ಆ ಮಂಚದ ಕೆಳಗೆ ನಿದ್ದೆ ಹೋದ.
ಮರುದಿನ ಶ್ರೀಮಂತ ಬಂದವನೇ ಬಡಗಿಯಲ್ಲಿ ಕೇಳಿದ ‘‘ಮಂಚದಲ್ಲಿ ಮಲಗದೇ ಕೆಳಗೆ ಯಾಕೆ ಮಲಗಿದ್ದೀಯ?’’
‘‘ನೆಲದಲ್ಲಿ ಮಲಗಿದರಷ್ಟೇ ನನಗೆ ಕಣ್ತುಂಬ ನಿದ್ದೆ ಬರುವುದು’’ ಬಡಗಿ ಹೇಳಿದ.
ಅಂದು ರಾತ್ರಿಯಿಡೀ ಹೊಸ ಮಂಚದಲ್ಲಿ ಶ್ರೀಮಂತ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದ.
Next Story