ಕನ್ನಡದ ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ವಿಧಿವಶ

ಬೆಂಗಳೂರು, ಫೆ.5: ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಪ್ರಮುಖ ಸಾಹಿತಿ ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ ಸಾ.ಶಿ ಮರುಳಯ್ಯ ಅವರು ಇಂದು ಬೆಳಗ್ಗೆ ನಗರದ ಜಯದೇವ್ ಆಸ್ಪತ್ರೆಯಲ್ಲಿ ನಿಧನರಾದರು.
85 ವರ್ಷದ ಮರುಳಯ್ಯ ಅವರು ಕಳೆದ 15 ದಿನಗಳಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ಮರುಳಯ್ಯ ಅವರು ಇಬ್ಬರು ಗಂಡುಮಕ್ಕಳು, ಓರ್ವ ಮಗಳನ್ನು ಅಗಲಿದ್ದಾರೆ.
1931ರಲ್ಲಿ ಸಾ.ಶಿ. ಮರುಳಯ್ಯನವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದಲ್ಲಿ ಜನಿಸಿದ್ದರು. ತಂದೆ ಶಿವರುದ್ರಯ್ಯ,
ಅವರು ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ವಿವಿಧ ಕಾಲೇಜುಗಳಳ್ಲಿ ಸುಮಾರು ಮೂವತ್ತು ವರ್ಷಗಳ ಸೇವೆ ಸಲ್ಲಿಸಿದ್ದರು.1995 ರಿಂದ 1998ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
Next Story