ಚಾರ್ಜಿಗಿಟ್ಟ ಮೋಬೈಲ್ ಸ್ಪೋಟ: ಆಪತ್ತು ಕಾದಿದೆ !
ಹೊಸದಿಲ್ಲಿ: ಆಗಾಗ ಜನರು ಮೊಬೈಲ್ ಚಾರ್ಜಿಂಗ್‌ಗೆ ಇಟ್ಟು ಅದರಲ್ಲಿ ಗೇಮ್ ತೆರೆದು ಆಡುತ್ತಿರುತ್ತಾರೆ. ಅಥವಾ ಯಾವುದಾದರೊಂದು ಆ್ಯಪ್‌ನ್ನು ಚಲಾಯಿಸುತ್ತಿರುತ್ತಾರೆ. ಆದರೆ ಫೋನ್ ಚಾರ್ಜಿಂಗ್ ಇಟ್ಟು ಉಪಯೋಗಿಸುವುದು ಭಾರೀ ಅಪಾಯಕಾರಿ ಎಂದು ಸಾಬೀತಾಗಿದೆ. ತಮಿಳ್ನಾಡಿನಲ್ಲಿ ಇಂತಹ ಮೊಬೈಲ್ ಸ್ಫೋಟಗೊಂಡು ಒಂಬತ್ತು ವರ್ಷದ ಬಾಲಕ ದಾರುಣವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಫೋನ್ ಚಾರ್ಜಿಂಗ್‌ನಲ್ಲಿ ಇಟ್ಟಿದ್ದಾಗ ಒಂದು ಫೋನ್ ಬಂದಿತ್ತು. ಬಾಲಕ ಆ ಫೋನ್‌ನ್ನು ಎತ್ತಿಕೊಂಡು ಹಲೋ ಎನ್ನುವಷ್ಟರಲ್ಲಿ ಅದು ಸ್ಫೋಟಗೊಂಡಿತ್ತು. ಧನುಷ್ ಎಂಬ ಈ ಹುಡುಗ ನಾಲ್ಕನೆ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಘಟನಾ ನಂತರ ಅವನನ್ನು ಚೆಂಗಲ್ಪಟ್ಟು ಸರಕಾರಿ ಆಸ್ಪತ್ರೆಗೆ ಧಾಖಲಿಸಲಾಯಿತು. ಅವನ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ಮನಗಂಡ ವೈದ್ಯರು ಕಿಲ್ಪಾಕ್ ಸರಕಾರಿ ಆಸ್ಪತ್ರೆಗೆ ಸೇರಿಸಲು ಸಲಹೆ ನೀಡಿದ್ದಾರೆ. ಅಲ್ಲಿ ಈಗಲೂ ಅವನ ಆರೋಗ್ಯ ಸ್ಥಿತಿ ವಿಷಮಾವಸ್ಥೆಯಲ್ಲಿದೆ ಎಂದು ತಿಳಿದು ಬಂದಿದೆ.
Next Story