ದೇಶದ ಅಧೀನ ನ್ಯಾಯಾಲಯಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ
ಬೆಂಗಳೂರು.ಫೆ.9:ದೇಶದ ಅಧೀನ ನ್ಯಾಯಾಲಯಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇರುವ ಅಂಶ ಬೆಳಕಿಗೆ ಬಂದಿದೆ.
ವಿವಿಧ ರಾಜ್ಯಗಳ ಜಿಲ್ಲಾ ನ್ಯಾಯಾಲಯಗಳಲ್ಲಿ 2 ಕೋಟಿ 60 ಲಕ್ಷದ 998 ಸಾವಿರ ಪ್ರಕರಣಗಳು ಬಾಕಿ ಇದೆ. ಈ ಪೈಕಿ 83 ಸಾವಿರದ 462 ಪ್ರಕರಣಗಳು ಕಳೆದ ಎರಡು ವರ್ಷಗಳಿಂದ ಬಾಕಿ ಇವೆ. 21 ಲಕ್ಷದ 72 ಸಾವಿರದ 411 ಪ್ರಕರಣಗಳು ಕಳೆದ 10 ವರ್ಷಗಳಿಂದ ಇತ್ಯರ್ಥವಾಗದಿರುವ ಅಂಶವನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ
ಸುಪ್ರೀಂಕೋಟ್ ಹಾಗೂ 24 ಹೈಕೋರ್ಟ್ ಗಳಲ್ಲಿರುವ ಬಾಕಿ ಇರುವ ಪ್ರಕರಣಗಳ ಬಗ್ಗೆ ನ್ಯಾಯಾಂಗ ಇಲಾಖೆ ನಿಯತಕಾಲಿಕೆ ವಿಭಾಗ ಈ ಮಾಹಿತಿ ಸಂಗ್ರಹಿಸಿದೆ.
ವಿಚಾರಣಾ ಪೀಠಗಳ ಕೊರತೆ ಈ ಪ್ರಕರಣಗಳ ವಿಳಂಬತೆಗೆ ಪ್ರಮುಖ ತೊಂದರೆಯಾಗಿದೆ ಎಂದು ನ್ಯಾಯಾಂಗ ಇಲಾಖೆ ಅಭಿಪ್ರಾಯಪಟ್ಟಿದೆ.
Next Story