ಮೆಟ್ರೋ ಗಜ ಪ್ರಸವಕ್ಕೆ ಕ್ಷಣಗಣನೆ
ಹಲವು ತಪ್ಪಿದ ಗಡುವುಗಳ ನಂತರ, ಸಂಪೂರ್ಣ ಕಾರ್ಯಾಚರಿಸುವ ಮೆಟ್ರೊ ಹಂತ-1ರ ಕಾಯುವಿಕೆ ಅದರ ಅಂತ್ಯವನ್ನು ಸಮೀಪಿಸುತ್ತಿದೆ. ನಗರದ ಸಂತೋಷದ ಕ್ಷಣ ಕೇವಲ ಐದು ತಿಂಗಳು ದೂರವಿದೆ. ಜೂನ್ ಮಧ್ಯ ಸಮಯದಲ್ಲಿ ನಮ್ಮ ಮೆಟ್ರೊ ಹಂತ-1 ಸಂಪೂರ್ಣವಾಗಿ ಕಾರ್ಯಾಚರಿಸಲಿದೆ. 42 ಕಿ.ಮೀ.ಗಳ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಈಗಾಗಲೇ 27 ಕಿ.ಮೀ. ಕಾರ್ಯಾಚರಿಸುತ್ತಿದೆ. ಉಳಿದಿರುವ ಕೆಲಸವೂ ಶೇ.96ರಷ್ಟು ಸಂಪೂರ್ಣವಾಗಿದೆ.
ನಗರದ ಮಧ್ಯದಲ್ಲಿ ಬಿಲಗಳನ್ನು ತೋಡುತ್ತಾ ನಾಲ್ಕು ದೂರ ಕೋನಗಳತ್ತ ಸಾಗಲು ಸುದೀರ್ಘ ಎಂಟು ವರ್ಷಗಳನ್ನು ಪಡೆದ ಬೃಹತ್ ಕಾಮಗಾರಿ, ನಮ್ಮ ಮೆಟ್ರೊದಿಂದ ಲಾಭಾಂಶವನ್ನು ನಿರೀಕ್ಷಿಸುವ ಕಾಲವಿದು. ಆದರೂ ಮೆಟ್ರೊದ ಜನನ ಸಮಯದ ನೋವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮೆಟ್ರೊ ಹುಟ್ಟುವಾಗ ಮರಗಳು ಧರೆಗುರುಳಿದವು, ಮನೆಗಳು ಬಿರುಕುಬಿಟ್ಟವು, ರಸ್ತೆಗಳು ತಡೆಬೇಲಿಗಳನ್ನು ಕಂಡವು, ಸ್ಟೀಲ್ ಮತ್ತು ಕಬ್ಬಿಣದ ರಾಶಿಗಳು, ಶಬ್ದ ಮತ್ತು ಧೂಳುಗಳು ಕಂಡವು. ಆದರೆ ಈಗ ನಿಟ್ಟುಸಿರಿನ ಕೊಯ್ಲು ಮಾಡುವ ಸಮಯ. ಈ ಎಂಟು ವರ್ಷಗಳಲ್ಲಿ ನಗರ ಅನುಭವಿಸಿದ ಯಾತನೆಯು ಅದರ ಜನರು ನಗರದ ಜನಜಂಗುಳಿಯಿಂದ ಕೂಡಿದ ರಸ್ತೆಗಳ ಕೆಳಗೆ ಮೆಟ್ರೊದಲ್ಲಿ ಸಂತೋಷವಾಗಿ ಪ್ರಯಾಣಿಸುವಾಗ ಮರೆತುಹೋಗಬಹುದು. ಆದರೆ ಸುರಂಗಗಳನ್ನು ನಿರ್ಮಿಸುವುದು ಅಥವಾ ಹಳಿಗಳನ್ನು ನಿರ್ಮಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಸಾಲ ಪಡೆಯುವುದೇನೋ ಸುಲಭವಾಗಿತ್ತು ಆದರೆ ಭೂಮಿಯ ಒಳಪದರದಲ್ಲಿ ಬಿರುಕು ಮೂಡಿಸುವುದು ಕಠಿಣವಾಗಿತ್ತು ಮತ್ತು ಒಮ್ಮೆ ಬಿರುಕು ಮೂಡಿದರೆ ಅದನ್ನು ಕೊರೆಯುವುದು ಕಷ್ಟವಾಗಿತ್ತು.
ಅಸಾಧಾರಣ ಕಾರ್ಯ
ಹೊಸದಾಗಿ ಸೃಷ್ಟಿಸುವ ನಗರಕ್ಕೆ ಮೂಲಸೌಕರ್ಯ ಒದಗಿಸುವುದು ಸುಲಭ, ಆದರೆ ಜನಜೀವನ ಹೊಂದಿರುವ ನಗರಕ್ಕೆ ಅಷ್ಟು ಸುಲಭವಲ್ಲ ಎಂದು ಹೇಳುತ್ತಾರೆ ಬಿಎಂಆರ್‌ಸಿಎಲ್‌ನ ಮುಖ್ಯಸ್ಥ ಪ್ರದೀಪ್ ಸಿಂಗ್ ಖರೋಲಾ. ನಗರದ ಅಡಿಯಲ್ಲಿ ಮತ್ತು ಕಿಕ್ಕಿರಿದ ಪ್ರದೇಶಗಳ ಕೆಳಗೆ ಸುರಂಗಗಳನ್ನು ತೋಡುವುದು ಒಂದು ಅಸಾಧಾರಣ ಸವಾಲು. ನಾವು ಬೃಹತ್ ತುಂಡರಿಸುವ ಯಂತ್ರಗಳು ಮತ್ತು ಸ್ಫೋಟಕಗಳನ್ನು ಬಳಸುತ್ತೇವೆ. ಅದು ಪರ್ವತ ಅಥವಾ ಕಾಡು ಪ್ರದೇಶದಲ್ಲಿ ಅಣೆಕಟ್ಟು ಕಟ್ಟಿದಂತಲ್ಲ. ನಗರದ ಅಡಿಭಾಗದಲ್ಲಿ ಕೆಲಸ ಮಾಡುವಲ್ಲಿರುವ ಕಠಿಣತೆಗಳನ್ನು ನೋಡಿಯೇ ನಂಬಬೇಕು ಎಂದವರು ಸೇರಿಸುತ್ತಾರೆ. ಖರೋಲಾರ ಪ್ರಕಾರ, ಹಂತ-1ನ್ನು ಸಂಪೂರ್ಣವಾಗಿ ಕಾರ್ಯಾಚರಿಸಲು ಯೋಗ್ಯ ಮಾಡಲು ಅತ್ಯಂತ ಪ್ರಮುಖ ಕೊಂಡಿಯಾಗಿರುವ ಮೆಜೆಸ್ಟಿಕ್‌ನಲ್ಲಿನ ಮೆಟ್ರೊದ ವಿಭಾಗಗಳನ್ನು ಸಂಪೂರ್ಣಗೊಳಿಸಲು 10 ದೊಡ್ಡ ಗುತ್ತಿಗೆದಾರರ ಅಡಿಯಲ್ಲಿ 1500 ಕೆಲಸಗಾರರು ದಿನರಾತ್ರಿ ದುಡಿಯುತ್ತಿದ್ದಾರೆ. ಈ ಬಗ್ಗೆ ಲೆಕ್ಕಾಚಾರ ಹಾಕುವ ಖರೋಲಾ, ಈ ವಿಭಾಗಕ್ಕೆ ಒಂದು ಲಕ್ಷ ಕ್ಯುಬಿಕ್ ಮೀಟರ್ ಕಾಂಕ್ರಿಟ್‌ನ ಆವಶ್ಯಕತೆಯಿದೆ ಎಂದು ಹೇಳುತ್ತಾರೆ. ನಿಲ್ದಾಣದ ಮೇಲೆ 90 ಮೀಟರ್ ವ್ಯಾಸದ ಗುಮ್ಮಟವಿರುತ್ತದೆ. ಭೂಮಿಯ 80 ಅಡಿ ಕೆಳಗೆ 300್ಡ
300 ಪ್ರದೇಶದಲ್ಲಿ ಈ ವಿಭಾಗವು ಹರಡಿರುತ್ತದೆ. ಪ್ರಯಾಣಿಕನಿಗೆ ಸಿಗುವ ಅತ್ಯಂತ ಕನಿಷ್ಠ ಆಳವು ಭೂಪ್ರದೇಶದ ಕೆಳಗಿನ ಏಳು ಮಹಡಿಗಳಿಗೆ ಸಮಾನ. ಉತ್ತರ-ದಕ್ಷಿಣ ಹಳಿಯು 25 ಮೀಟರ್ ಆಳದಲ್ಲಿದ್ದರೆ ಪೂರ್ವ-ಪಶ್ಚಿಮ ಹಳಿಯು 16 ಮೀಟರ್ ಆಳದಲ್ಲಿರುತ್ತದೆ. ಪ್ರಯಾಣಿಕರ ಸಂಖ್ಯೆ
ನಗರದ ಜನರಲ್ಲಿ ಮೆಟ್ರೊ ಈಗಾಗಲೇ ತನ್ನ ಆಕರ್ಷಣೆಯನ್ನು ಮೂಡಿಸಲು ಆರಂಭಿಸಿದೆ. ನಾಗಸಂದ್ರ-ಪೀಣ್ಯ ವಿಭಾಗ (ರೀಚ್ 3ಬಿ) ಈಗಾಗಲೇ ಪ್ರತೀದಿನ 30ರಿಂದ 40 ಸಾವಿರ ಪ್ರಯಾಣಿಕರನ್ನು ಹೊಂದಿದೆ ಎಂದು ಖರೋಲಾ ಹೇಳು ತ್ತಾರೆ. ಮೆಜೆಸ್ಟಿಕ್ ಅಂತರ್ ವಿಭಾಗ ಆರಂಭವಾದ ಕೂಡಲೇ ಈ ಸಂಖ್ಯೆ ಒಂದು ಲಕ್ಷಕ್ಕೇರುವ ಮತ್ತು ಹಂತ-1 ಸಂಪೂರ್ಣವಾಗಿ ಕಾರ್ಯಾಚರಿಸಲು ಆರಂಭಿಸುವಾಗ ನಾಲ್ಕು ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಖರೋಲಾ ತಿಳಿಸುತ್ತಾರೆ. ಆದರೂ, ನಮ್ಮ ಮೆಟ್ರೊ ದಿನಕ್ಕೆ ಒಂದು ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿಯುತ್ತಾರೆ. ಮೆಟ್ರೊದಲ್ಲಿ ಪ್ರಯಾಣಿಸುವುದರಿಂದ ಉಂಟಾಗುವ ಬದಲಾವಣೆಯನ್ನು ಹೇಗೆ ಅಳೆಯಬಹುದೆಂದರೆ, ಮೆಟ್ರೊದಲ್ಲಿ ಶ್ರೀರಾಮ್‌ಪುರದಿಂದ ಮೆಜೆಸ್ಟಿಕ್‌ಗೆ ತಲುಪಲು ಬೇಕಾಗಿರುವ ಸಮಯ ಕೇವಲ ಒಂದು ನಿಮಿಷ. ಸದ್ಯ ರಸ್ತೆಯ ಮೇಲಿಂದ ಈ ದೂರವನ್ನು ಕ್ರಮಿಸಲು 25 ನಿಮಿಷಗಳು ಬೇಕು.
30 ಎಸ್ಕಲೇಟರ್‌ಗಳು
ಮೆಜೆಸ್ಟಿಕ್ ನಿಲ್ದಾಣ (ಇನ್ನಷ್ಟೇ ಹೆಸರಿಡಬೇಕಿದೆ)ವು 30 ಎಸ್ಕಲೇಟರ್ ಗಳಿಂದ ತುಂಬಲಿದೆ. (ಇವುಗಳಲ್ಲಿ ಈಗಾಗಲೇ 20 ಎಸ್ಕಲೇಟರ್‌ಗಳನ್ನು ನಿರ್ಮಿಸಲಾಗಿದೆ) ಮತ್ತು 45 ಕಡೆ ಮೆಟ್ಟಿಲುಗಳನ್ನು ಹೊಂದಲಿದೆ. ಈ ಸೌಕರ್ಯವು ಮುಂದಿನ 50 ವರ್ಷಗಳ ಕಾಲ ಸುಸ್ಥಿರವಾಗಿರಲಿದೆ ಮತ್ತು ಒಂದೇ ಸಮಯದಲ್ಲಿ 20,000 ಪ್ರಯಾಣಿಕರನ್ನು ನಿಭಾಯಿಸಲಿದೆ (ಆದರೆ ನಾಲ್ಕು ರೈಲುಗಳು ಸಮಯಕ್ಕೆ ಸರಿಯಾಗಿ ಬಂದರೆ 10,000ಕ್ಕಿಂತ ಹೆಚ್ಚು ಪ್ರಯಾಣಿಕರು ಇರಲಾರರು). ಗಾಳಿವಾಹಕಗಳು ಗರಿಷ್ಠ ಸಂಖ್ಯೆಯ ಪ್ರಯಾಣಿಕರಿಗೆ ಶುದ್ಧಗಾಳಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಚಿಕ್ಕಪೇಟೆ ಬಳಿ ಗಟ್ಟಿ ಕಲ್ಲೊಂದು ಅಡ್ಡಬಂದ ಪರಿಣಾಮ ಕೊರೆಯುವ ಯಂತ್ರ ‘ಗೋದಾವರಿ’ ಮುಂದಕ್ಕೆ ಚಲಿಸಲು ಕಷ್ಟವಾಗಿ ಪೂರ್ವ-ಪಶ್ಚಿಮ ಹಳಿಯ ಕಾಮಗಾರಿಯು ದೊಡ್ಡ ಸವಾಲಾಗಿ ಪರಿಣಮಿಸಿತು. ಈ ಪ್ರದೇಶದಲ್ಲಿ ಇನ್ನು 150 ಮೀಟರ್ ಕೊರೆಯಲಷ್ಟೇ ಬಾಕಿಯಿದ್ದು ಆ ಮೂಲಕ ಮೆಜೆಸ್ಟಿಕ್ ನಲ್ಲಿ ಯಂತ್ರವು ಮೇಲಕ್ಕೆ ಬಂದು ಈ ವಿಭಾಗದ ಎರಡು ಸುರಂಗಗಳಲ್ಲಿ ಒಂದು ಸಂಪೂರ್ಣವಾಗುತ್ತದೆ. ಈ ಕಾರ್ಯ ಮಾರ್ಚ್ ಮಧ್ಯದ ವೇಳೆಗೆ ಸಂಪೂರ್ಣಗೊಳ್ಳಬಹುದು ಎಂದು ಖರೋಲಾ ನಿರೀಕ್ಷಿಸುತ್ತಾರೆ.
ಹಂತ-2: ಸ್ಥಿರ ಮುಂದುವರಿಕೆ
ನಮ್ಮ ಮೆಟ್ರೊದ ಹಂತ-2ರ ಕಾರ್ಯ ಸ್ಥಿರವಾಗಿ ಸಾಗುತ್ತಿದೆ. ಹಂತ-2 ಮೆಟ್ರೊವನ್ನು ಬೆಂಗಳೂರು ಉಪನಗರಗಳ ಪಶ್ಚಿಮದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ (6.645 ಕಿ.ಮೀ) ಮತ್ತು ಪೂರ್ವದಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ (15.5 ಕಿ.ಮೀ) ವಿಸ್ತರಿಸಲಿದೆ. ಬಿಎಂಆರ್ ಸಿಎಲ್ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಕೆಂಗೇರಿ ಕಡೆಯಲ್ಲಿ 50ಕ್ಕೂ ಅಧಿಕ ಕಟ್ಟಡಗಳನ್ನು ಅದಕ್ಕಾಗಿ ಕೆಡವಿದೆ. ಈ ಪ್ರದೇಶದಲ್ಲಿ ಅಂತರ್ ಬದಲಾವಣೆಯ ಅಗತ್ಯವಿಲ್ಲದಿರುವುದರಿಂದ ಅಷ್ಟೊಂದು ಸಮಸ್ಯೆಯಾಗದು ಎಂದು ಖರೋಲಾ ಭಾವಿಸುತ್ತಾರೆ ಮತ್ತು ಸುಲಭವಾಗಿ ಮೇಲಕ್ಕೆ ತರಬಹುದು ಎಂದು ನಂಬಿದ್ದಾರೆ. ಮುಂದಿನ ಮೂರು ವರ್ಷಗಳ ಒಳಗೆ ಕೆಂಗೇರಿಯಿಂದ ರೈಲುಗಳು ಚಲಿಸಲು ಆರಂಭವಾಗಬಹುದು ಎಂಬುದು ಅವರ ಊಹೆ. ಇದೇ ರೀತಿ, ಹಂತ-2ರ ಪೂರ್ವದ ಭಾಗದಲ್ಲಿ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ 57 ಕಟ್ಟಡಗಳನ್ನು ಕೆಡವಲಾಗಿದೆ ಮತ್ತು ರೂ. 107 ಕೋಟಿ ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ.
ಕಲ್ಲಿನಿಂದ ಕೂಡಿದ ಭೂಮಿ
ಅಂತಿಮ ಹಂತದಲ್ಲಿ ಚಿಕ್ಕಪೇಟೆಯ ಅಡಿಯಲ್ಲಿ ಮೆಜೆಸ್ಟಿಕ್ ತಲುಪಲು ಎದುರಾದ ಸವಾಲುಗಳನ್ನು ಇಕ್ಕಟ್ಟಿನ ಭೀತಿಯಿಂದ ನರಳುವ ಸ್ಥಿತಿ ಎಂದು ಬಣ್ಣಿಸಬಹುದು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂಶಾಸ್ತ್ರಜ್ಞರು ಈ ಭೂಪ್ರದೇಶವನ್ನು ‘ಮುರಿದ ಕಲ್ಲುಗಳು’ ಎಂದು ಬಣ್ಣಿಸಿದ್ದಾರೆ. ಕಟ್ಟಿಂಗ್ ಮೆಷಿನ್‌ಗಳು ಬಹುಬೇಗನೆ ಹಾಳಾಗಿ ಅವುಗಳನ್ನು ಬದಲಾಯಿಸಬೇಕಾಗುತ್ತಿತ್ತು ಎಂದು ಖರೋಲಾ ತಿಳಿಸುತ್ತಾರೆ. ಕಟ್ಟಿಂಗ್‌ಗಾಗಿ ಯಂತ್ರಗಳನ್ನು ತಯಾರಿಸಲು ಬೇಕಾಗಿದ್ದ ಸಮಯ ನಿಜವಾಗಿ ಕಲ್ಲುಗಳನ್ನು ತುಂಡರಿಸಲು ಬೇಕಾಗಿದ್ದ ಸಮಯ ಕ್ಕಿಂತ ಹೆಚ್ಚಾಗಿತ್ತು ಎಂದು ಅವರು ಹೇಳುತ್ತಾರೆ. ಒಂದು ಹಂತದಲ್ಲಂತೂ ಕಟರ್‌ಅನ್ನು ಅಳವಡಿಸುವ ಯಂತ್ರದ ಭಾಗ ಬಿರುಕುಬಿಟ್ಟು ಅದನ್ನು ಹೊರತೆಗೆಯಲು ಒಂದು ಬಾವಿಯನ್ನು ತೋಡಬೇಕಾಯಿತು ಮತ್ತು ಕ್ರೇನ್ ಬಳಸಬೇಕಾಯಿತು. ದೇವರ ದಯದಿಂದ, ಇಟಾಲಿಯನ್ ಕಂಪೆನಿಯೊಂದು ದಾಖಲೆಯ ಸಮಯದಲ್ಲಿ ಹೆಚ್ಚು ಸಮಯ ವ್ಯರ್ಥವಾಗದಂತೆ ಯಂತ್ರದ ತಲೆಯನ್ನು ಕಳುಹಿಸಿತು. ಸುರಂಗವು ನೆರೆ ಹಾವಳಿಗೆ ತುತ್ತಾಗುವ ಅಪಾಯದಿಂದ ತುಂಬಿರುತ್ತದೆ, ಆದರೆ ಅಂತಹ ಅಪಾಯವನ್ನು ಅತ್ಯಂತ ಶಕ್ತಿಶಾಲಿ ಗಾಳಿವಾಹಕ ಯಂತ್ರಗಳನ್ನು ಬಳಸುವ ಮೂಲಕ ನೀರನ್ನು ದೂರವಿಡುವ ಮೂಲಕ ತಪ್ಪಿಸಲಾಗಿತ್ತು. ಮೆಟ್ರೊ ರೈಲುಗಳು ಮತ್ತು ಹಳಿಗಳನ್ನು ಕಠಿಣ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಇತ್ತೀಚೆಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ರೈಲನ್ನು ‘ಮೆಷರಿಂಗ್ ವೀಲ್’ ಪರೀಕ್ಷೆಗೆ ಒಳಪಡಿಸಿದರು. ಸ್ವೀಡನ್ ದೇಶದ ಪರಿಣತರು ನಡೆಸುವ ಈ ಪರೀಕ್ಷೆಯಲ್ಲಿ ಚಕ್ರಗಳನ್ನು ಹಲವು ಸಂವೇದಿಗಳ ಮೂಲಕ ಮುಚ್ಚಿ ಸುರಕ್ಷತೆಯ ಗರಿಷ್ಠ ಮಟ್ಟವನ್ನು ಖಚಿತಪಡಿಸಿಕೊಂಡರು. ಅದರ ಫಲಿತಾಂಶ ಹದಿನೈದು ದಿನಗಳಲ್ಲಿ ಬರಬಹುದು. ಅಗ್ನಿಶಾಮಕ ಇಲಾಖೆ ಕೂಡಾ ತಮ್ಮ ಸ್ಪಷ್ಟನೆಗಾಗಿ ಹಲವು ಪರೀಕ್ಷೆಗಳನ್ನು ನಡೆಸಿವೆ.
ಹಣಕಾಸು
ಹಂತ-2 ರೂ. 26,000 ಕೋಟಿ ಮೊತ್ತವನ್ನು ಬಯಸುತ್ತದೆ. ಅದರಲ್ಲಿ ಅರ್ಧ ಅಂದರೆ ರೂ. 13,000 ಕೋಟಿ ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. ಹುಡ್ಕೊ ರೂ. 600 ಕೋಟಿ ನೀಡಿದರೆ ಬಾಂಡ್‌ಗಳನ್ನು ಇಡುವ ಮೂಲಕ ರೂ. 1,000 ಕೋಟಿ ನಿರೀಕ್ಷಿಸಲಾಗಿದೆ. ಅದಲ್ಲದೆ ಬಿಎಂಆರ್ ಸಿಎಲ್ ಬಡ್ಡಿದರಗಳು ನಿರಂತರವಾಗಿ ಬೀಳುತ್ತಿರುವುದರಿಂದ ದೇಶೀಯ ಸಾಲವನ್ನು ಪಡೆಯುವ ಪ್ರಸ್ತಾಪವನ್ನೂ ಇಟ್ಟಿದೆ.