ಅಮರಿಂದರ್‌ಗೆ ಆಪ್ ಸಮಸ್ಯೆ
ಭಾರತದಲ್ಲಿ ಚುನಾವಣೆಗಳನ್ನು ಧರ್ಮದ ತಳಹದಿಯಲ್ಲಿ ನಡೆಯುತ್ತಿಲ್ಲ ಎಂದು, ಪಾಟಿಯಾಲದ ಮಾಜಿ ರಾಜವಂಶದ ಉತ್ತರಾಧಿಕಾರಿ, ಕಾಂಗ್ರೆಸ್ ನಾಯಕ ಅಮರೀಂದರ್ ಸಿಂಗ್ ಭಾವಿಸುತ್ತಿದ್ದಾರೆ. ತನ್ನ ಬೆಂಬಲಿಗರಿಂದ ‘ಕ್ಯಾಪ್ಟನ್’ ಎಂದೇ ಅಕ್ಕರೆಯಿಂದ ಕರೆಯಿಸಿಕೊಳ್ಳುವ ಅವರು, ಪಂಜಾಬ್ ಚುನಾವಣೆ ಸಮೀಪಿಸುತ್ತಿರುವಂತೆಯೇ ಹಲವಾರು ಪಕ್ಷಗಳ ವಿರುದ್ಧ ಸೆಣಸಾಡಲು ಸಿದ್ಧರಾಗಬೇಕಿದೆ. ಕಾಂಗ್ರೆಸ್‌ಗೆ ಆಡಳಿತಾರೂಢ ಅಕಾಲಿದಳ ಹಾಗೂ ಬಿಜೆಪಿ, ಪ್ರಬಲ ವಿರೋಧಿಗಳಾಗಿದ್ದಾರೆ. ಇದೂ ಸಾಲದೆಂಬಂತೆ, ಅರವಿಂದ್ ಕೇಜ್ರಿವಾಲ್‌ರ ಆಮ್‌ಆದ್ಮಿ ಪಕ್ಷವೂ ಕಾಂಗ್ರೆಸ್ ಮತಬ್ಯಾಂಕ್‌ಗೆ ಕನ್ನ ಹಾಕಲು ಸಜ್ಜಾಗಿದೆ. ಕಾಂಗ್ರೆಸ್‌ಗಿಂತ ಕೇಜ್ರಿವಾಲ್ ಹಾಗೂ ಅವರ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ. ಏಕೆಂದರೆ, ದಿಲ್ಲಿಯ ಮುಖ್ಯಮಂತ್ರಿಯವರು ಪಂಜಾಬ್‌ನಲ್ಲಿ ಕೆಲವು ಪತ್ರಕರ್ತರಿಗೆ ಎಎಪಿ ಟಿಕೆಟ್‌ಗಳನ್ನು ನೀಡಿದ್ದಾರೆ. ಪ್ರಾದೇಶಿಕ ಮಾಧ್ಯಮಗಳಲ್ಲಿ ಕಾಂಗ್ರೆಸನ್ನು ಗುರಿಯಾಗಿಸಿಕೊಂಡು ತಾವು ಪ್ರಕಟಿಸಿದ ಲೇಖನಗಳಿಗೆ ಪ್ರತಿಯಾಗಿ ಅಮೃತಸರ, ಜಲಂಧರ ಹಾಗೂ ಚಂಡೀಘಡನಿಂದ ಚುನಾವಣಾ ಟಿಕೆಟ್ ಕೋರಿ, ಕೆಲವು ಪತ್ರಕರ್ತರು ದಿಲ್ಲಿ ಮುಖ್ಯಮಂತ್ರಿಗೆ ಅರ್ಜಿಗಳನ್ನು ಕಳುಹಿಸಿದ್ದಾರೆ. ಈ ಪತ್ರಕರ್ತರು ಕಾಂಗ್ರೆಸ್ ರ್ಯಾಲಿಗಳನ್ನು ತಾವಾಗಿಯೇ ವರದಿ ಮಾಡುತ್ತಿದ್ದು, ಜನರ ಪ್ರತಿಕ್ರಿಯೆ ನೀರಸವಾಗಿದೆಯೆಂಬಂತೆ ಬಿಂಬಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಚುನಾವಣೆಯಲ್ಲಿ ವೈಫಲ್ಯ ಕಂಡಲ್ಲಿ, ಅದು ಪತ್ರಕರ್ತರನ್ನು ದೂರಲು ಸಿದ್ಧವಿದೆಯೇ?...