Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮುಸ್ಲಿಂ ಯುವಕನಿಗೆ ಕಿಡ್ನಿ ದಾನ ಮಾಡಿದ...

ಮುಸ್ಲಿಂ ಯುವಕನಿಗೆ ಕಿಡ್ನಿ ದಾನ ಮಾಡಿದ ಕ್ರೈಸ್ತ ಪಾದ್ರಿ

ವಾರ್ತಾಭಾರತಿವಾರ್ತಾಭಾರತಿ14 Feb 2016 8:31 PM IST
share
ಮುಸ್ಲಿಂ ಯುವಕನಿಗೆ ಕಿಡ್ನಿ ದಾನ ಮಾಡಿದ ಕ್ರೈಸ್ತ ಪಾದ್ರಿ

ಫೆಬ್ರವರಿ ಎಂದರೆ ಎಲ್ಲರಿಗೂ ಪ್ರೇಮಿಗಳ ದಿನಾಚರಣೆ  ನೆನಪಾಗುತ್ತದೆ. ಆದರೆ ಮೂರು ವರ್ಷಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಕೇರಳದ ಅಳಪ್ಪುಳ ದಲ್ಲಿ ಇಬ್ಬರು ವ್ಯಕ್ತಿಗಳು ಅದೇ ಪ್ರಥಮ ಬಾರಿ ಭೇಟಿಯಾಗುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರೂ ಅಪರಿಚಿತರು. ಒಬ್ಬರು ಕ್ರೈಸ್ತ ಪಾದ್ರಿ. ಇನ್ನೊಬ್ಬ ಮುಸ್ಲಿಂ ಯುವಕ. ಆದರೆ ಅವರಲ್ಲೊಬ್ಬರು ತೆಗೆದುಕೊಂಡ ದೃಢ  ನಿರ್ಧಾರ ಇನ್ನೊಬ್ಬನ ಜೀವನವನ್ನೇ ಬದಲಾಯಿಸಿತು, ಅಲ್ಲ ಉಳಿಸಿತು. ಮಾನವ ಪ್ರೇಮದ ಇದಕ್ಕಿಂತ ಉತ್ತಮ ಉದಾಹರಣೆ ಬಹುಶ: ನಮ್ಮ ಸಮೀಪದಲ್ಲೆಲ್ಲೂ ಸಿಗದು. ಆ ಭೇಟಿಯ ಮೂರನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಅದನ್ನು ಮತ್ತೆ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇವೆ. ಇದು ನಮ್ಮ ವೆಲೆಂಟೈನ್ ಡೇ ಸ್ಪೆಶಲ್ ! ಯಾಕೆಂದರೆ ಕೆಲವು ವಿಷಯಗಳು ನೆನಪು ಮಾಡಿಕೊಂಡಷ್ಟು ಅದರಿಂದ ಪ್ರೇರೇಪಣೆ, ಚೈತನ್ಯ ಸಿಗುತ್ತದೆ . 

ಫೆಬ್ರವರಿ 25, 2013 . ಫಾದರ್ ಕೆ . ಸೆಬಾಸ್ಟಿಯನ್ ಅವರು ಕೇರಳದ ಚಾಲುಕ್ಕುಡಿಯಿಂದ ಎರ್ನಾಕುಲಂಗೆ ಹೋಗುವ ಬಸ್ಸಿನಲ್ಲಿ ಪ್ರಯಾನಿಸುತ್ತಿದ್ದರು. ಪೆರುಂಬವೂರ್ ಎಂಬಲ್ಲಿ ವ್ಯಕ್ತಿಯೊಬ್ಬ ಬಸ್ಸಿಗೆ ಹತ್ತಿ ಫಾದರ್ ಪಕ್ಕದ ಸೀಟಿನಲ್ಲೇ ಕುಳಿತ. ನೋಡಲು ತೀವ್ರ ಬಳಲಿದಂತಿದ್ದ ಆತನ ಕೈಯಲ್ಲಿ ಆಸ್ಪತ್ರೆಯ ಫೈಲ್ ಗಳಿದ್ದವು. ಆತನನ್ನು ಮಾತನಾಡಿಸಿದ ಫಾದರ್ ಗೆ ಆತನ ಅವಸ್ಥೆ ಕಂಡು ಮರುಕ ಹುಟ್ಟಿತು.ಆತನ ಹೆಸರು ರಸದ್ ಮೊಹಮ್ಮದ್ . ಅಲಪ್ಪುಳ ಜಿಲ್ಲೆಯ ಹರಿಪದ್ ಎಂಬ ಊರಿನವನು. ಸೌದಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸದಲ್ಲಿದ್ದ. ಇದ್ದಕ್ಕಿದ್ದಂತೆ ಆತನ ದೃಷ್ಟಿ ಮಂದವಾಯಿತು. ವೈದ್ಯಕೀಯ ಪರೀಕ್ಷೆಗಳ ಬಳಿಕ ಕಿಡ್ನಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಮತ್ತೆ ಅನಿವಾರ್ಯವಾಗಿ ಕೆಲಸ ಬಿಟ್ಟು ಊರಿಗೆ ಬರಬೇಕಾಯಿತು. ಇಲ್ಲಿಗೆ ಬಂದ ಮೇಲೆ ಆತನ ಸಮಸ್ಯೆ ಉಲ್ಬಣವಾಗುತ್ತಾ ಹೋಯಿತು. ಕೊನೆಗೆ ಕಿಡ್ನಿ ಕಸಿ ಮಾಡದೆ ಮೊಹಮ್ಮದ್ ನ ಜೀವ ಉಳಿಸಲು ಬೇರೆ ದಾರಿಯೇ ಇಲ್ಲ ಎಂದು ವೈದ್ಯರು ಕೈ ಎತ್ತಿದರು. ಆದರೆ ಕಿಡ್ನಿ ಅಷ್ಟು ಸುಲಭದಲ್ಲಿ ಸಿಗುತ್ತದೆಯೇ ? ಏಜೆಂಟ್ ಒಬ್ಬ ಎರಡೂವರೆ ಲಕ್ಷ ರೂಪಾಯಿಗೆ ಕಿಡ್ನಿ ಕೊಡಿಸುತ್ತೇನೆ ಎಂದು ಹೇಳಿ ಮೂರು "ದಾನಿಗಳನ್ನು" ಕರೆದುಕೊಂಡು ಬಂದರೂ ಅವರ ಕಿಡ್ನಿ ಈತನಿಗೆ ಹೊಂದಾಣಿಕೆ ಆಗಲಿಲ್ಲ. ನಾಲ್ಕನೇ "ದಾನಿ"ಯ ಕಿಡ್ನಿ ಓಕೆ ಆದರೂ ಆತ ಕೊನೆ ಕ್ಷಣದಲ್ಲಿ ಹಿಂದೆ ಸರಿದುಬಿಟ್ಟ. ಹಾಗಾಗಿ ಮೊಹಮ್ಮದ್ ಈಗ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದ. 

ಇಷ್ಟು ವಿಷಯ ಕೇಳಿದ ಮೇಲೆ ಮೊಹಮ್ಮದ್ ನಲ್ಲಿ  ಫಾದರ್ ಸೆಬಾಸ್ಟಿಯನ್ ಕೇಳಿದ್ದು ಒಂದೇ ಪ್ರಶ್ನೆ . ನಿನ್ನ ರಕ್ತದ ಗುಂಪು ಯಾವುದು ? " ಎ ಪ್ಲಸ್ "  ಎಂದು ಮೊಹಮ್ಮದ್ ಉತ್ತರಿಸಿದ. ಅಲ್ಲಿಗೆ ಫಾದರ್ ತಮ್ಮ ಜೀವನದ ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. " ನನ್ನದೂ ಎ ಪ್ಲಸ್. ನನ್ನ ಕಿಡ್ನಿ ನಿನಗೆ ಹೊಂದಾಣಿಕೆ ಆದರೆ ನಾನು ನನ್ನ ಒಂದು ಕಿಡ್ನಿಯನ್ನು ನಿನಗೆ ದಾನ ಮಾಡುತ್ತೇನೆ " ಎಂದು ಬಿಟ್ಟರು  ಫಾದರ್ ! ಆದರೆ ಮೊಹಮ್ಮದ್ ಅದನ್ನು ನಂಬಲಿಲ್ಲ . ನಂಬುವುದಾದರೂ ಹೇಗೆ ? 

ಆತನ ದೂರವಾಣಿ ಸಂಖ್ಯೆ ಪಡೆದ ಫಾದರ್ ಮರುದಿನ ಕರೆ ಮಾಡಿ ಆತನೊಂದಿಗೆ ತಾನೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುತ್ತೇನೆ ಎಂದು ಹೇಳಿದಾಗಲೇ ಮೊಹಮ್ಮದ್ ನಂಬಿದ್ದು . 

ಫಾದರ್ ತನ್ನ ಮಾತಿನಂತೆ ಆಸ್ಪತ್ರೆಗೆ ಹೋದರು. ಎಲ್ಲ ಪರೀಕ್ಷೆಗಳು ನಡೆದವು. ಒಂದು ತಿಂಗಳಲ್ಲಿ ಫಾದರ್ ಕಿಡ್ನಿ ಮೊಹಮ್ಮದ್ ಗೆ ಹೊಂದಾಣಿಕೆ ಆಗುತ್ತದೆ ಎಂದು ವೈದ್ಯರು ಘೋಷಿಸಿದರು. ಆದರೆ ಅದರ ನಂತರ ಎರಡು ತಿಂಗಳು ಉಳಿದ ಕಾನೂನು , ದಾಖಲೆ  ಪ್ರಕ್ರಿಯೆಗಳು ನಡೆದವು. ಫಾದರ್ ಅವರು ಬಿಷಪ್ ರಿಂದ ಅನುಮತಿ ಪಡೆಯಬೇಕಿತ್ತು . ಹಾಗು ಅವರ ಮನೆಯವರಿಂದ ನಿರಾಕ್ಷೇಪಣೆ ಪತ್ರ ಪಡೆಯಬೇಕಿತ್ತು. ಅವರು ಒಪ್ಪುವರೇ ಎಂದು ಫಾದರ್ ಗೆ ಹಿಂಜರಿಕೆ ಇತ್ತು. ಉಳಿದೆಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮನೆಯವರ ಅನುಮತಿ ಕೇಳಿದರು, ನಿರಾಕರಿಸಬಾರದು ಎಂಬ ಬಲವಾದ ಮನವಿಯೊಂದಿಗೆ. ಆದರೆ ಆಶ್ಚರ್ಯವೆಂದರೆ, ಎಲ್ಲರೂ ಅವರನ್ನು ಬೆಂಬಲಿಸಿದರು. " ಸಾಮಾನ್ಯ ಇಂಜೆಕ್ಷನ್ ತೆಗೆದುಕೊಳ್ಳುವಾಗಲೇ ಒಂದು ರೀತಿಯ ಹಿಂಜರಿಕೆ ಆಗುತ್ತದೆ. ಆದರೆ ಈ ವಿಷಯದಲ್ಲಿ ನನಗೆ ಒಂಚೂರೇ ಚೂರು ಭಯವಾಗಲಿಲ್ಲ. ಅದು ದೇವರ ದಯೆ " ಎನ್ನುತ್ತಾರೆ ಫಾದರ್ ಸೆಬಾಸ್ಟಿಯನ್. ಜೂನ್ ಒಂದರಂದು ಫಾದರ್ ರ ಒಂದು ಕಿಡ್ನಿ ಮೊಹಮ್ಮದ್ ದೇಹಕ್ಕೆ ಯಶಸ್ವಿಯಾಗಿ ಕಸಿಯಾಯಿತು. 

ಮೊಹಮ್ಮದ್ ಗೆ ಕೇವಲ 30 ವರ್ಷ ವಯಸ್ಸು. ಆದರೆ ಕಿಡ್ನಿ ಕೊಟ್ಟ ಫಾದರ್ ಏನೂ ವೃದ್ದರಲ್ಲ. ಅವರಿಗೆ ಆಗ ಕೇವಲ 42 ವರ್ಷ ವಯಸ್ಸು. ಆದರೂ ಅವರು ಅಷ್ಟು ಬೇಗ ಕಿಡ್ನಿ ದಾನ ಮಾಡಲು ನಿರ್ಧರಿಸಲು ಕಾರಣವೇನು ? " ನನ್ನ ಎದುರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಒಬ್ಬ ಯುವಕ ನಿಂತಿದ್ದ. ನನಗೆ ಬೇರೇನೂ ಯೋಚಿಸುವ ಅಗತ್ಯವೇ ಬೀಳಲಿಲ್ಲ. ಹೇಗೂ ನಮಗೆ ಒಂದು ಕಿಡ್ನಿಯೊಂದಿಗೆ ಬದುಕಬಹುದು " ಎಂಬುದು ಫಾದರ್ ಉತ್ತರ . ಇದರ ಹಿಂದೆ ಇನ್ನೊಂದು ಬಲವಾದ ಕಾರಣವಿತ್ತು . ೨೦೦೯ರಲ್ಲಿ ಫಾದರ್ ಡೇವಿಸ್ ಚಿರಮೆಲ್ ಎಂಬವರು ಒಬ್ಬ ಅಪರಿಚಿತ ಹಿಂದೂವಿಗೆ ತನ್ನ ಒಂದು ಕಿಡ್ನಿ ದಾನ ಮಾಡಿದ್ದರು. ಅದರ ಬಗ್ಗೆ ಕೇಳಿದಾಗಲೇ ಫಾದರ್ ಸೆಬಾಸ್ಟಿಯನ್  ಅದೇ ರೀತಿ ಮಾಡಬೇಕೆಂದು ಪ್ರತಿಜ್ಞೆ ಮಾಡಿದ್ದರು. ಆ ಪ್ರತಿಜ್ಞೆ ಮಾಡಿದ ಬಳಿಕ ಅವರಿಗೆ ಕಿಡ್ನಿಯ ಅಗತ್ಯದೊಂದಿಗೆ ಸಿಕ್ಕಿದ ಮೊದಲ ವ್ಯಕ್ತಿ ಮೊಹಮ್ಮದ್ . ಅಲ್ಲಿಗೆ ಅವರು ನಿರ್ಧಾರ ಮಾಡಿಬಿಟ್ಟರು. " ಈ ವಿಷಯ ಫಾದರ್ ಚಿರಮೆಲ್ ಅವರಿಗೆ ತಿಳಿದಾಗ ಈ ವಿಷಯವನ್ನು ಬಹಿರಂಗಪಡಿಸಲೇ ಬೇಕು ಎಂದು ಅವರು ಹೇಳಿದರು. ನನಗೆ ಪ್ರಚಾರ ಬೇಡ ಎಂದು ನಿರ್ಧರಿಸಿದ್ದರೂ ಇತರರಿಗೆ ಪ್ರೇರಣೆಯಾಗಲು ಇದನ್ನು ಬಹಿರಂಗಪಡಿಸಬೇಕಾಯಿತು"  ಎಂದು ಫಾದರ್ ಹೇಳಿದರು. 

ಫಾದರ್ ಚಿರಮೆಲ್ ಅವರಿಂದ ಪ್ರೇರಣೆ ಪಡೆದು ಈವರೆಗೆ ಕನಿಷ್ಠ ಹನ್ನೊಂದು ಪಾದ್ರಿಗಳು, ಐವತ್ತು ಮಂದಿ ಇತರರು ಅಪರಿಚಿತರಿಗೆ ಕಿಡ್ನಿ ದಾನ ಮಾಡಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X