ಅರಳುವುದು
ಒಂದು ಮಗು ಮುಗುಳು ಅರಳುವುದು ಹೇಗೆ ಎನ್ನುವುದನ್ನು ನೋಡಬೇಕು ಎಂದು ರಾತ್ರಿಯಿಡೀ ದೀಪ ಹಚ್ಚಿ ಹೂವಿನ ಗಿಡದ ಮುಂದೆ ಕಾದು ಕುಳಿತಿತು. ಅದೆಷ್ಟು ಕಾದರೂ ಹೂವು ಅರಳಲೇ ಇಲ್ಲ. ಹಾಗೆ ನಿದ್ದೆ ಹೋಗಿ, ಬೆಳಗ್ಗೆ ಎದ್ದಾಗ ಹೂವು ಅರಳಿತ್ತು. ‘ಅರೆ ಹೂವು ಅರಳಿದ್ದು ಯಾವಾಗ?’’ ಎಂದು ಮಗು ಅಚ್ಚರಿಯಿಂದ ತಾಯಿಯ ಬಳಿ ಕೇಳಿತು.
ಅಮ್ಮ ಹೇಳಿದಳು ‘‘ನೀವು ಇಷ್ಟೆತ್ತರ ಬೆಳೆದದ್ದು ಯಾವಾಗ ಎಂದು ಯಾರಾದರೂ ಕೇಳಿದರೆ ನನಗೂ ಗೊತ್ತಿಲ್ಲ ಮಗು. ನನ್ನ ಕಣ್ಣೆದುರೇ ನೀನು ನನಗೆ ಗೊತ್ತಿಲ್ಲದ ಹಾಗೆ ಬೆಳೆದೆ’’
-ಮಗು
Next Story