ಜೆಎನ್‌ಯು ಬಿಜೆಪಿಗೆ ವಿನಾಶ ಕಾಲ
ಯಾಕೆ ಉನ್ನತ ಸ್ಥಾನಗಳಲ್ಲಿ ಕುಳಿತಿರುವವರು ಯಾವಾಗಲೂ ಕಾರಣಗಳು ಬೆಟ್ಟು ಮಾಡುವ ಮತ್ತು ಪ್ರಬುದ್ಧ ಸ್ವಹಿತಾಸಕ್ತಿ ಸಲಹೆ ನೀಡುವ ವಿರುದ್ಧ ಕಾರ್ಯಾಚರಿಸುತ್ತಾರೆ? ಯಾಕೆ ಬುದ್ಧಿವಂತ ಮಾನಸಿಕ ಕ್ರಿಯೆ ಯಾವಾಗಲೂ ಕಾರ್ಯವನ್ನು ಸ್ಥಗಿತಗೊಳಿಸಿರುವಂತೆ ಕಂಡುಬರುತ್ತದೆ? ಎಂದು ಇತಿಹಾಸತಜ್ಞೆ ಬಾರ್ಬರಾ ಡಬ್ಲೂ ಟಚ್ಮಾನ್ ತಮ್ಮ ಪ್ರಸಿದ್ಧ,ದ ಮಾರ್ಚ್ ಆಫ್ ಫೋಲಿ: ಫೋಮ್ ಟ್ರಾಯ್ ಟು ವಿಯೇಟ್ನಾಂ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ಬಿಜೆಪಿಯ ಇತ್ತೀಚಿನ ವಾರಗಳ ನಿರ್ಧಾರಗಳನ್ನು ಕಂಡಾಗ ಇದೇ ಪ್ರಶ್ನೆ ನಮ್ಮ ತಲೆಯಲ್ಲಿ ಹೊಳೆಯುತ್ತದೆ. ವಿಶ್ವವಿದ್ಯಾನಿಲಯದ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವುದರ ಮಧ್ಯೆಯೇ ಜವಾಹರ್ ಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರ ಬಂಧನದ ದೃಷ್ಟಿಯಿಂದ ಹೇಳುವುದಾದರೆ ನರೇಂದ್ರ ಮೋದಿಯವರ ಪಕ್ಷ ಮತ್ತು ಸರಕಾರ ತಮ್ಮ ಸ್ವಂತ ಆಸಕ್ತಿಗಳ ಬಗ್ಗೆಯೇ ಸ್ಪಷ್ಟವಾದ ಯೋಚನೆಯನ್ನು ಮಾಡಲು ಅಸಮರ್ಥವಾಗಿದೆ, ಇನ್ನು ಇಡೀ ದೇಶದ ವಿಷಯ ಬಿಡಿ.
ಉದಾಹರಣೆಗೆ ಬಿಜೆಪಿಯ ಇತ್ತೀಚಿನ ತಿಂಗಳ ಪರಿಸ್ಥಿತಿಯನ್ನು ತೆಗೆದುಕೊಳ್ಳಿ. ಬಿಹಾರದಲ್ಲಿ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನು ಭವಿಸಿತು. ಡಿಸೆಂಬರ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿ ಮೇಲೆ ಸಿಬಿಐ ನಡೆಸಿದ ದಾಳಿ ತಿರುಗು ಬಾಣವಾಯಿತು. ಪಠಾಣ್ ಕೋರ್ಟ್ ನಲ್ಲಿ ನಡೆಸಿದ ಭಯೋತ್ಪಾದಕರವಿರುದ್ಧದ ಕಾರ್ಯಾಚರಣೆ ವಿಫಲವಾಯಿತು. ಕಳೆದ ತಿಂಗಳು ನಡೆದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾನ ಆತ್ಮಹತ್ಯೆ ಪ್ರಕರಣ ಮೂರು ವಾರಗಳ ಕಾಲ ಬಿಜೆಪಿಗೆ ಕೆಟ್ಟ ಪ್ರಚಾರ ನೀಡುವ ಮೂಲಕ ದೇಶಾದ್ಯಂತವಿರುವ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ದಲಿತ ಪಕ್ಷಗಳಗಳ ಜೊತೆಗಿದ್ದ ಅದರ ಹೊಂದಾಣಿಕೆಯನ್ನೇ ಹಾಳುಮಾಡಿತ್ತು.ಮತ್ತೊಂದು ಕಡೆ 21ರ ಮೇನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಗೆ ನಿರ್ಣಾಯಕ ಮತಗಳನ್ನು ಹಾಕಿದ್ದ ಉದ್ಯಮ ವರ್ಗ ಮತ್ತು ನಗರದ ಮಧ್ಯಮವರ್ಗ ಕೂಡ ಪ್ರಧಾನಿ ಮೋದಿಯವರ ಮೇಲಿಟ್ಟಿದ್ದ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.ಇನ್ನು ಷೇರುಪೇಟೆ ಕೂಡಾ ಈ ಹಿಂದೆ ಯುಪಿಎ ಸರಕಾರವಿದ್ದಾಗ ಇತ್ತು ಎನ್ನಲಾದ ನೀತಿಪಕ್ಷಪಾತ ಹಂತಕ್ಕೆ ಮರಳಿದೆ. ರೂಪಾಯಿ ದರ ಶೀಘ್ರದಲ್ಲಿ ಹಿಂದೆಬರದಂತಹ ಮಟ್ಟಕ್ಕೆ ತಲುಪಿದೆ ಮತ್ತು ಹಣದುಬ್ಬರ 1 ತಿಂಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟವನ್ನು ಮುಟ್ಟಿದೆ.ಎಲ್ಲ ಅಂಶಗಳು ಸರಕಾರದ ಮೇಲೆ ಸ್ವಲ್ಪ ಸಾವಧಾನಿಸುವಂತೆ, ವ್ಯತಿರಿಕ್ತ ಸುದ್ದಿ ಗಳೆಲ್ಲಾ ಕಳೆದುಹೋಗುವವರೆಗೆ ಕಾಯುವಂತೆ ಮತ್ತು ಈ ಸಮಯವನ್ನು ಶಾಸಕಾಂಗದ ವ್ಯವಹಾರಗಳನ್ನು ನಡೆಸಲು ರಾಜಕೀಯ ಒಪ್ಪಂದಗಳನ್ನು ಮಾಡಿಕೊಳ್ಳಲು ಬಳಸುವಂತೆ ಒತ್ತಡ ಹೇರಬಹುದು. ಇಂತಹ ಪರಿಸ್ಥಿತಿಯಲ್ಲಿ ಒಂದು ಪಕ್ಷ ಮಾಡಬಹುದಾದ ಕೊನೆಯ ಕೆಲಸವೆಂದರೆ ಗ್ರಹಿಕೆಯ ಯುದ್ಧದಲ್ಲಿ ಮತ್ತೊಂದು ಸಾಧ್ಯತೆಯನ್ನು ತೆರೆಯುವುದು.
ರಾಜಕೀಯ ಅಧಿಕಾರವನ್ನು ಮರಳಿ ಪಡೆಯುವ ಹತಾಶ ಯತ್ನದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಮರ್ಥ್ಯವನ್ನು ಉಪೇಕ್ಷಿಸುವ ಘಟನಾವಳಿಗಳನ್ನು ಸೃಷ್ಟಿಸಲು ಬಿಜೆಪಿ ಶತಾಯಾಗತಾಯ ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ. ಸರಕಾರವು ಜೆಎನ್‌ಯು ವಿದ್ಯಾರ್ಥಿಗಳ ಹಿಂದೆ ಬೀಳುತ್ತದೆ, ಅಲ್ಲಿ ಏಳುತ್ತಿದ್ದ ಅಸಮಾಧಾನದ ಧ್ವನಿಗಳನ್ನು ದೇಶ ವಿರೋಧಿ ಎಂದು ವಿಭಾಗಿಸುತ್ತದೆ ಮತ್ತು ಪೊಲೀಸರಿಗೆ ವಿಶ್ವವಿದ್ಯಾನಿಲಯದ ಆವರಣ ಪ್ರವೇಶಿಸಲು ಮತ್ತು ಕ್ಯಾಮರಾಗಳನ್ನು ಅಳವಡಿಸಲು ಹಕ್ಕು ನೀಡಬೇಕೆಂದು ಬಯಸುತ್ತದೆ- ಮತ್ತೊಂದೆಡೆ ಇದೇ ವೇಳೆ ಕ್ರಿಯಾಶೀಲ ವಿದ್ಯಾರ್ಥಿ ನಾಯಕ ಕುಮಾರ್‌ನನ್ನು ಬಂಧಿಸಲಾಗುತ್ತದೆ. ಈತ ಫೆಬ್ರವರಿ 1ರಂದು ಮಾಡಿದ ಭಾಷಣದ ತುಣುಕು ಸದ್ಯ ಯೂಟ್ಯೂಬ್‌ನಲ್ಲಿ ಮಿಂಚಿನಂತೆ ಹಡಿದಾಡುತ್ತಿದೆ.
ಮಾಸಿಕ ರೂ.30 ದುಡಿಯುವ ಅಂಗನವಾಡಿ ಕಾರ್ಯಕರ್ತೆಯ ಮಗನಾಗಿರುವ ಕುಮಾರ್‌ನನ್ನು ಬಂಧಿಸುವ ವಿಷಯದಲ್ಲಿ ಪಕ್ಷದಲ್ಲಿ ಯಾರೊಬ್ಬನು ಕೂಡಾ ಆಳವಾಗಿ ಯೋಚಿಸಿದಂತೆ ಕಾಣುವುದಿಲ್ಲ. ಸಂಪುಟ ಸಚಿವರ ಮೇಲೆಯೇ ಒತ್ತಡ ತರಬಲ್ಲಷ್ಟು ಸಾಮರ್ಥ್ಯವಿರುವ ಎಬಿವಿಪಿ ನಾಯಕರು ಕುಮಾರ್‌ನ ಹಿನ್ನೆಲೆಯ ಬಗ್ಗೆ ಏನಾದರೂ ಪರಿಶೀಲನೆ ನಡೆಸಿದ್ದಾರೆಯೇ? ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಲಾಗಿತ್ತು ಎಂಬ ಅಂಶವು ಬೆಳಕಿಗೆ ಬಂದು ವಾರ ಕಳೆಯುವುದರೊಳಗೆ ಬಿಜೆಪಿ ಮತ್ತು ಅದರ ಸರಕಾರ ಓರ್ವ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಮಗನನ್ನು ಸಂಶಯಾಸ್ಪದ ಆರೋಪ ದ ಮೇಲೆ ಬಂಧಿಸಿದೆ. ದೇಶಾದ್ಯಂತ ಹೂಡಿರುವ ಈ ಸಾಂಸ್ಕೃತಿಕ ಯುದ್ಧದ ಹಾದಿಯಲ್ಲಿ ಅದು ಎಷ್ಟು ಸಾಮಾಜಿಕ ಶಕ್ತಿಗಳನ್ನು ಎದುರು ಹಾಕಿಕೊಳ್ಳುತ್ತಿದೆ ಎಂಬುದರ ಅರಿವು ಕೂಡಾ ಬಿಜೆಪಿಗೆ ಇಲ್ಲದಿರುವಂತೆ ಕಾಣುತ್ತದೆ. ಜೆಎನ್‌ಯು ಮೇಲಿನ ಶಿಸ್ತುಕ್ರಮ ಬಿಜೆಪಿಗೆ ನುಂಗಲಾರದ ತುತ್ತಾಗಲಿದೆ ಎಂಬುದಕ್ಕೆ ಬೇರೆ ಕಾರಣಗಳೂ ಇವೆ.
ಮೊದಲಿಗೆ, ವಿಶ್ವವಿದ್ಯಾನಿಲಯದ ವಿದ್ಯಾ ರ್ಥಿಗಳನ್ನು ಎದುರು ಹಾಕಿಕೊಳ್ಳುವುದು ವಿದೇಶ ಗಳಲ್ಲಿ ಮೋದಿಯ ಬಗ್ಗೆ ಇರುವ ಅಭಿಪ್ರಾ ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅಮ್ನೆಸ್ಟಿ ಈಗಾಗಲೇ ಒಂದು ಪ್ರಬಲ ಹೇಳಿಕೆಯನ್ನು ನೀಡಿದೆ. ದ ನ್ಯೂಯಾರ್ಕ್ ಟೈಮ್ಸ್, ದ ಗಾರ್ಡಿಯನ್, ದ ಎಕೊನಾಮಿಸ್ಟ್ ಮತ್ತು ಇತರರೂ ಇದನ್ನು ಅನುಸರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹಿಂದೆ ಹಲವು ಪ್ರಕರಣ ಗಳಲ್ಲಿ ಪೇಚಿಗೆ ಸಿಲುಕಿರುವ ಅವರು ಸಾಕಷ್ಟು ಮಂಕಾದ ವಾತಾವರಣವನ್ನು ಕಂಡಿದ್ದಾರೆ.ಹಾಗಾಗಿ ವರ್ತಮಾನದ ಪರಿಸ್ಥಿತಿಯು ಹೆಚ್ಚಿನ ವಿಚಾರಣೆಗಳಿಗೆ ಎಡೆಮಾಡಿಕೊಡುವುದನ್ನು ಬಯಸಲಾರರು.ರಡನೆಯದ್ದು ಮತ್ತು ಅತ್ಯಂತ ಮುಖ್ಯವಾಗಿ, ಜೆಎನ್‌ಯು ಜೊತೆ ಪುಂಡಾಟಿಕೆ ನಡೆಸುವುದು ಸುಲಭವಲ್ಲ- ಹೆಚ್ಚು ಸೂಚನೆಗಳನ್ನು ನೀಡದೆ ಅಥವಾ ತಡೆಗಳನ್ನು ಎದುರಿಸದೆ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಕೊನೆಗೊಳಿಸಲು ಮತ್ತು ಕಣ್ಗಾವ ಲನ್ನು ಹೇರಲು ಸಾಧ್ಯವಾಗಲು ಇದು ಕಾಶ್ಮೀರವಲ್ಲ. ಸಮಾಜ ವಿಜ್ಞಾನ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮತ್ತು ಜೆಎನ್‌ಯುವನ್ನು ಎಡಪಂಥೀಯ ಅಪ್ರಮುಖರ ಸ್ಥಳವೆಂದು ಎಡೆಬಿಡದೆ ಬಡಬಡಿಸುವ ಬಿಜೆಪಿಯನ್ನು ಬೆಂಬಲಿಸುವ ಬಲಪಂಥೀಯ ಟ್ವಿಟರ್ ಸೇನೆ ವಿಶ್ವವಿದ್ಯಾನಿಲಯದ ಪ್ರಭಾವ ಮತ್ತು ಆಳವನ್ನು ಕಡೆಗಣಿಸುತ್ತಿದೆ. ಹಲವು ದಶಕಗಳಲ್ಲಿ ಜೆಎನ್‌ಯು ಜಗತ್ತಿನಲ್ಲೇ ಅತ್ಯುತ್ತಮರು ಎಂದು ಪರಿಗಣಿಸಲ್ಪಟ್ಟಿರುವ ಇತಿಹಾಸತಜ್ಞರು, ಆರ್ಥಿಕತಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ರಾಜಕೀಯ ವಿಜ್ಞಾನಿಗಳನ್ನು ಸೃಷ್ಟಿ ಮಾಡಿದೆ. ಭಾರತವು ಜಾಗತಿಕವಾಗಿ ತಜ್ಞರಿಗೆ ಸಂಶೋಧನೆಗೆ ಪ್ರಮುಖ ವಸ್ತುವಾಗಿರುವ ಕಾರಣ ವಿಶ್ವವಿದ್ಯಾನಿಲಯದ ತಜ್ಞರು ಮತ್ತು ವಿದ್ಯಾರ್ಥಿಗಳು ಪ್ರಬಲ ಅಂತಾರಾಷ್ಟ್ರೀಯ ಜಾಲವನ್ನು ಹೊಂದಿದ್ದಾರೆ. ಒಂದು ನಿರ್ಣಾಯಕ ಮನೋಧರ್ಮವನ್ನು ಪೋಷಿಸುವ, ಯುವಜನರು ಸ್ವತಂತ್ರವಾಗಿ ಸೇರುವ, ಭಾರತದ ವೈವಿಧ್ಯತೆಯನ್ನು ಕಾಣಬಹುದಾದ, ಪ್ರೀತಿ ಬಯಸುವ, ಯೋಚನೆಗಳನ್ನು ಅಳುಕಿಲ್ಲದೆ ಚರ್ಚಿಸುವ ಮತ್ತು ಸಂಘಟಿತ ಶಕ್ತಿಯ ವಿರುದ್ಧ ಹೋರಾಡುವ ತಾಣವೆಂದು ಜೆಎನ್‌ಯುವನ್ನು ಪರಿಗಣಿಸಲಾಗುತ್ತದೆ. ಅದು ನಾಲ್ಕು ಗೋಡೆಗಳ ಒಳಗೆಯೇ ಅಳವಡಿಸಲ್ಪಟ್ಟ ವಿಭಿನ್ನ ಉಪಸಂಸ್ಕೃತಿ, ಶೈಕ್ಷಣಿಕ ದಿಗ್ಗಜರು ಪ್ರೀತಿ ಹೊಂದಿರುವ ಮತ್ತು ರಕ್ಷಿಸಲು, ಮುಖ್ಯವಾಗಿ ಸರಕಾರ ಕ್ರೌರ್ಯದಿಂದ ರಕ್ಷಿಸಲು ಬಯಸುವ ತಾಣವಾಗಿದೆ. ಜೆಎನ್‌ಯುನಲ್ಲಿ ಪದವಿ ಮುಗಿಸಿದ ನೂರಾರು-ಪ್ರಾಯಶಃ ಸಾವಿರಾರು ಮಂದಿ ದೇಶೀಯ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಅಥವಾ ಮಾಡಿದ್ದಾರೆ, ಇನ್ನು ಮಾಧ್ಯಮ, ಕೈಗಾರಿಕೆ ಮತ್ತು ಸರಕಾರದಲ್ಲಿರುವವರದ್ದು ಬೇರೆ ಮಾತು. ಬಿಜೆಪಿಯು, ಸಾಮೂಹಿಕವಾಗಿ ಸ್ಫೂರ್ತಿ ನೀಡುವಂತಹ ಈ ಅರ್ಹತೆಗಳನ್ನು ತೂಗಬೇಕು. ಒಟ್ಟಾರೆಯಾಗಿ ನೋಡುವುದಾದರೆ ಜೆಎನ್‌ಯು ಮೇಲೆ ನಡೆಸಿದ ಶಿಸ್ತುಕ್ರಮ ಸೊರ್ಬೊನೆ ಅಥವಾ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಅನ್ನು ದಮನಿಸುವುದಕ್ಕಿಂತ ಭಿನ್ನವೇನಲ್ಲ-ಸರಕಾರಕ್ಕೆ ತಲೆನೋವು ತರಬಲ್ಲಂತಹ ಒಂದು ಜಾಗತಿಕ ಸುದ್ದಿಯಾಗಬಲ್ಲ ಸಾಮರ್ಥ್ಯ ಇದಕ್ಕಿದೆ.
ಮೂರನೆಯದಾಗಿ, ಈ ಬಿಕ್ಕಟ್ಟು ದೇಶಾದ್ಯಂತವಿರುವ, ಅಧಿಕಾರಶಾಹಿಯಲ್ಲಿ ರುವವರನ್ನೂ ಸೇರಿಸಿ, ಬಿಜೆಪಿ ವಿರೋಧಿ ಶಕ್ತಿಗಳನ್ನು ಹುರಿದುಂಬಿಸುತ್ತದೆ. ಇದು ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಎಡ ಮತ್ತು ಬಲ ಎಂದು ಮತ್ತಷ್ಟು ಧ್ರುವೀಕರಣಗೊಳಿಸುತ್ತದೆ. ರಾಹುಲ್ ಗಾಂಧಿ ಈಗಾಗಲೇ ವಿದ್ಯಾರ್ಥಿಗಳಿಂದ ಒಂದು ವರ್ಷ ಹಿಂದೆ ಪಡೆದಿದ್ದ ಸ್ವಾಗತಕ್ಕಿಂತ ಉತ್ತಮ ಆತಿಥ್ಯವನ್ನು ಪಡೆಯುತ್ತಿದ್ದಾರೆ. ಬಿಜೆಪಿಯ ಮುಂದಿನ ಚುನಾವಣಾ ಗೆಲುವು ಎಲ್ಲಿಂದ ಬರಲಿದೆ ಎಂಬುವುದನ್ನು ನಿರೀಕ್ಷಿಸುವುದೇ ಕಷ್ಟವಾಗಿರುವ ಈ ಸಮಯದಲ್ಲಿ ಜೆಎನ್‌ಯು ವಿರೋಧಿ ಕ್ರಮಗಳನ್ನು ತೆಗೆದುಕೊಂಡಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಅಸ್ಸಾಂನಲ್ಲಿ ಒಂದು ಸ್ವಲ್ಪ ಬಿಜೆಪಿಗೆ ಗೆಲ್ಲುವ ಅವಕಾಶವಿದೆಯಾದರೂ ಪಶ್ಚಿಮ ಬಂಗಾಳ, ಪಂಜಾಬ್‌ಮತ್ತು ಕೇರಳಗಳಲ್ಲಿ ಪಕ್ಷ ಸೋಲುವ ಸಾಧ್ಯತೆಗಳೇ ಹೆಚ್ಚು. ಗುಜರಾತ್, ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶಗಳಲ್ಲಿ ಆಡಳಿತ ವಿರೋಧಿ ಅಲೆಯ ಒತ್ತಡವನ್ನು ಎದುರಿಸಬೇಕಿದ್ದರೆ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ತನ್ನನ್ನು ಕ್ರೋಡೀಕರಿಸುವ ಹಾದಿಯಲ್ಲಿದೆ. ವಿಶ್ವವಿದ್ಯಾನಿಲಯಗಳ ಸಮಸ್ತ ಭಾರತ ವಿದ್ಯಾರ್ಥಿ ಸಂಘದಿಂದಾಗಿ ಜೆಎನ್‌ಯು ನಲ್ಲಿ ನಡೆದ ಘಟನೆಗಳು ಉತ್ತರ ಪ್ರದೇಶದಲ್ಲಿ ನಡೆಯುವ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು 21ರಲ್ಲಿ ಬಿಜೆಪಿ ಅಲ್ಲಿ ಸೋತರೆ, ದೇಶದ ಅಧಿಕಾರಶಾಹಿಗಳು ತಮ್ಮ ಪಂಥಗಳನ್ನು ಸೀಮಿತಗೊಳಿಸುವ ಮತ್ತು 21ರ ದಿಗಂತದಲ್ಲಿ ನೂತನ ರಾಜಕೀಯ ನಾಯಕನೊಬ್ಬನನ್ನು ಕಾಣುವುದನ್ನು ನಾವು ಸುರಕ್ಷಿತವಾಗಿ ನಿರೀಕ್ಷಿಸಬಹುದು.ಆ ವೇಳೆಗೆ ಕಾರ್ಪೊರೇಟ್ ಭಾರತ ಕೂಡಾ ಬದಲಾವಣೆಯ ಗಾಳಿಯನ್ನು ಅನುಭವಿಸಬಹುದು.
ನಾಲ್ಕು, ತನ್ನ ಸರಕಾರಿ ಅಧಿಕಾರವನ್ನು ತನ್ನ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಉದ್ದೇಶಕ್ಕಾಗಿ ಬಳಸುವು ದನ್ನು ನೋಡುತ್ತಾ ಇರಲು ಬಿಜೆಪಿಗೆ ಸಾಧ್ಯವಿಲ್ಲ.ವಾದದ ನೆಲೆಯಲ್ಲಿ ವಿವಿಧ ವಿಶ್ವವಿದ್ಯಾನಿಲಯ ಗಳಲ್ಲಿ ಉದ್ವಿಗ್ನತೆಯನ್ನು ಸೃಷ್ಟಿ ಸುವುದು ಮಧ್ಯಮ ವರ್ಗವನ್ನು ಹೆದರಿಸುವ ಮತ್ತು ಶಿಕ್ಷಣದ ಮೇಲೆ ಈ ವರ್ಗ ಇಟ್ಟಿರುವ ಮೌಲ್ಯವನ್ನು ನಿರ್ಲಕ್ಷಿಸುವ ಕ್ರಮವಾಗಿದೆ. ಭಾರತದ ಮಧ್ಯಮವರ್ಗದ ಒಂದು ಭಾಗ ಮಾಧ್ಯಮಗಳಲ್ಲಿ ಬರುವ ಬಿಜೆಪಿ ಪರ ನಿರೂಪ ಕರಿಂದ ಮನರಂಜನೆಗೊಳ್ಳಬಹುದು ಆದರೆ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸುವ ಬಹಳಷ್ಟು ಹೆತ್ತವರು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಈ ಸಾಂಸ್ಕೃತಿಕ ಯುದ್ಧವನ್ನು ನೋಡುವ ಆಸಕ್ತಿಯನ್ನು ಹೊಂದಿಲ್ಲ, ಮುಖ್ಯವಾಗಿ ಇವುಗಳು ಚುನಾಯಿತ ಆಯ್ಕೆ ಅಥವಾ ಶೈಕ್ಷಣಿಕ ಪ್ರಕ್ರಿಯೆಯ ಮೂಲಕ ಉಂಟಾಗದೆ ದೇಹಬಲ ಮತ್ತು ಸರಕಾರಿ ಶಕ್ತಿಗಳಿಂದ ನಡೆಸಲ್ಪಟ್ಟವಾಗಿದ್ದರೆ. ನಾಗರಿಕ ಶಾಂತಿ ಮತ್ತು ಕಡಿಮೆ ತೀಕ್ಷ್ಣತೆ ಹೊಂದಿರುವ ಸಾರ್ವಜನಿಕ ಕ್ಷೇತ್ರವನ್ನು ಸೃಷ್ಟಿಸುವ ಸಲುವಾಗಿ ಇದನ್ನು ಒಪ್ಪದವರ ಜೊತೆ ಸಂಘರ್ಷದ ಹಾದಿಯನ್ನು ತುಳಿಯಬೇಕಾಗುತ್ತದೆ. ಇದನ್ನು ಕಾಂಗ್ರೆಸ್ ಮತ್ತು ಪ್ರಾದೇ ಶಿಕ ಪಕ್ಷಗಳು,ಮತದಾರರು ಈ ಪಕ್ಷಗಳ ಹಿಂದಿನ ಕಾರ್ಯಕ್ಷಮತೆಹೀನತೆ ಮತ್ತು ಬೂಟಾ ಟಿಕೆಯ ಬಗ್ಗೆ ಸಂಪೂರ್ಣವಾಗಿ ಅರಿವಿದ್ದರೂ,ಬಹಳ ಕುತೂಹಲದಿಂದ ಹಿಡಿದಿಡುತ್ತವೆ.
ಬಿಜೆಪಿಯು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ನೀಡಲು ವಿಫಲವಾಗಿಲ್ಲ. ಬದಲಿಗೆ ಮಧ್ಯಮ ವರ್ಗದ ಉದಾರ ವಿಭಾಗವನ್ನು ಅವರು ಪ್ರತೀ ಬಾರಿ ಟಿವಿ ಆನ್ ಮಾಡಿದಾಗಲೂ ಅವರನ್ನು ಪ್ರಚೋದಿಸುವ ಹಾದಿಗಳನ್ನು ಹುಡುಕುತ್ತಿವೆ. ಭರವಸೆ ನೀಡಿದ ಸೇವೆಗಳನ್ನು ಒದಗಿಸದ ಕಾರಣ ರಾಜಕಾರಣಿಗಳನ್ನು ಟೀಕಿಸುವುದು ಒಂದು ವಿಷಯ ಆದರೆ ಸೂಕ್ಷ್ಮತೆಗೆ ಧಕ್ಕೆ ತರುವ, ದೈನಂದಿನ ಆಧಾರದಲ್ಲಿ ನೈತಿಕ ಚೌಕಟ್ಟನ್ನು ಜಾರಿಗೊಳಿಸುವ ಮತ್ತು ಭಾರತದ ಮೂಲವಾಗಿರುವ ಸಹಿಷ್ಣುತೆ, ಸೌಹಾರ್ದ, ಏಕತೆ ಮತ್ತು ವೈವಿಧ್ಯ ಸಿದ್ಧಾಂತಗಳ ಬಗ್ಗೆ ಕನಿಷ್ಠ ಮಾತುಗಳನ್ನೂ ಆಡದಿರುವ ವಿರುದ್ಧ ಟೀಕೆ ಮಾಡುವುದು ಇನ್ನೊಂದು ವಿಷಯ. ಬಿಜೆಪಿಯು ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ನೀತಿಯನ್ನು ತನ್ನ ಸಂಪುಟ ಸಚಿವರು ಟ್ವಿಟರ್‌ನಲ್ಲಿ ಅನುಕರಿಸುವ ಬಲಪಂಥೀಯ ಸೋಮಾರಿಗಳ ಮೂಲಕ ಆದೇಶಿಸಲ್ಪಡುವಂತೆ ಮಾಡುತ್ತಿರುವಂತೆ ಕಾಣಿಸುತ್ತದೆ. ಇದು ಒಂದು ಗುಳ್ಳೆಯಿದ್ದಂತೆ ಮತ್ತು ಪಕ್ಷದ ವಿನಾಶದೊಂದಿಗೆ ಪರ್ಯಾವಸಾನಗೊಳ್ಳುತ್ತದೆ. ಕೃಪೆ: ಹಿಂದೂಸ್ಥಾನ್ ಟೈಮ್ಸ್
ಹಲವು ದಶಕಗಳಲ್ಲಿ ಜೆಎನ್‌ಯು ಜಗತ್ತಿನಲ್ಲೇ ಅತ್ಯುತ್ತಮರು ಎಂದು ಪರಿಗಣಿಸಲ್ಪಟ್ಟಿರುವ ಇತಿಹಾಸತಜ್ಞರು, ಆರ್ಥಿಕತಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ರಾಜಕೀಯ ವಿಜ್ಞಾನಿಗಳನ್ನು ಸೃಷ್ಟಿ ಮಾಡಿದೆ. ಭಾರತವು ಜಾಗತಿಕವಾಗಿ ತಜ್ಞರಿಗೆ ಸಂಶೋಧನೆಗೆ ಪ್ರಮುಖ ವಸ್ತುವಾಗಿರುವ ಕಾರಣ ವಿಶ್ವವಿದ್ಯಾನಿಲಯದ ತಜ್ಞರು ಮತ್ತು ವಿದ್ಯಾರ್ಥಿಗಳು ಪ್ರಬಲ ಅಂತಾರಾಷ್ಟ್ರೀಯ ಜಾಲವನ್ನು ಹೊಂದಿದ್ದಾರೆ. ಒಂದು ನಿರ್ಣಾಯಕ ಮನೋಧರ್ಮವನ್ನು ಪೋಷಿಸುವ, ಯುವಜನರು ಸ್ವತಂತ್ರವಾಗಿ ಸೇರುವ, ಭಾರತದ ವೈವಿಧ್ಯತೆಯನ್ನು ಕಾಣಬಹುದಾದ, ಪ್ರೀತಿ ಬಯಸುವ, ಯೋಚನೆಗಳನ್ನು ಅಳುಕಿಲ್ಲದೆ ಚರ್ಚಿಸುವ ಮತ್ತು ಸಂಘಟಿತ ಶಕ್ತಿಯ ವಿರುದ್ಧ ಹೋರಾಡುವ ತಾಣವೆಂದು ಜೆಎನ್‌ಯುವನ್ನು ಪರಿಗಣಿಸಲಾಗುತ್ತದೆ.