ಹಾಜಿ ಯು.ಎಚ್. ಇಬ್ರಾಹೀಮ್
ಮಂಗಳೂರು, ಫೆ.22: ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ, ಸಾಮಾಜಿಕ ನೇತಾರ ಹಾಜಿ ಯು.ಎಚ್. ಇಬ್ರಾಹೀಮ್ (67) ಅಲ್ಪಕಾಲದ ಅಸೌಖ್ಯದಿಂದ ಫೆ.22 ರಂದು ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ಕು ಮಂದಿ ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ದಫನ ಕಾರ್ಯ ಫೆ.22ರಂದು ಅಸರ್ ನಮಾಝ್ ನ ಬಳಿಕ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story