ರೈಲ್ವೆ ಬಜೆಟ್ ಹೈಲೈಟ್ಸ್
ದಿಲ್ಲಿಯಲ್ಲಿ ವರ್ತುಲ ರೈಲ್ವೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಉಲ್ಬಣಿಸುತ್ತಿರುವ ವಾಯುಮಾಲಿನ್ಯದ ಇಳಿಕೆ.
ಜಪಾನ್ ನೆರವಿನೊಂದಿಗೆ ಅಹ್ಮದಾಬಾದ್ನಿಂದ ಮುಂಬೈಗೆ ಅತೀ ವೇಗದ ಪ್ಯಾಸೆಂಜರ್ ಕಾರಿಡಾರ್.
ರೈಲು ಹಳಿಗಳ ಪರಿಸರದ ಜಮೀನನ್ನು ತೋಟಗಾರಿಕೆ ಹಾಗೂ ಚಹಾತೋಟ ನಿರ್ಮಾಣಕ್ಕೆ ಗುತ್ತಿಗೆ ನೀಡುವ ಆದಾಯ ಸಂಗ್ರಹ.
ನಿಲ್ದಾಣ ಅಭಿವೃದ್ಧಿ ಹಾಗೂ ಪುನರಾಭಿವೃದ್ಧಿ, ಸಾರಿಗೆ ರಹಿತ ಮೂಲಗಳಿಂದ ರೈಲು ಆದಾಯ ಸಂಗ್ರಹಕ್ಕೆ ರೈಲ್ವೆ ಭೂಮಿಯ ಬಳಕೆ
ಭಾರತದ ಪ್ರಪ್ರಥಮ ರೈಲ್ವೆ ಆಟೋ ಜಾಲ ಚೆನ್ನೈನಲ್ಲಿ ಶೀಘ್ರವೇ ಆರಂಭ.
ಚರ್ಚ್ಗೇಟ್-ವಿರಾರ್ ಹಾಗೂ ಸಿಎಸ್ಟಿ-ಪನ್ವೇಲ್ಗಳಲ್ಲಿ ಎರಡು ಉಪನಗರ ರೈಲ್ವೆ ಕಾರಿಡಾರ್ಗಳ ನಿರ್ಮಾಣ.
ರಾಜ್ಯ ಸರಕಾರದ ಪಾಲುದಾರಿಕೆ ಯೊಂದಿಗೆ 21 ನಿಲ್ದಾಣಗಳನ್ನು ಒಳಗೊಂಡ ವರ್ತುಲ ರೈಲ್ವೆ ಜಾಲ.
ಕೂಲಿಗಳನ್ನು ಇನ್ನು ಮುಂದೆ ಸಹಾಯಕರೆಂದು ಕರೆಯಲಾಗುವುದು.
ಅಜ್ಮೀರ್,ಅಮೃತಸರ,ಗಯಾ, ಮಥುರಾ, ನಾಂದೇಡ್, ನಾಸಿಕ್, ಪುರಿ, ತಿರುಪತಿ,ವಾರಣಾಸಿ, ನಾಗಪಟ್ಟಣ ಮತ್ತಿತರ ಯಾತ್ರಾಸ್ಥಳಗಳ ರೈಲು ನಿಲ್ದಾಣಗಳ ಸುಂದರೀಕರಣ.
ರೈಲುಗಳಲ್ಲಿ ಮಕ್ಕಳ ಖಾದ್ಯಗಳನ್ನು ಪರಿಚಯಿಸಲಾಗುವುದು.
ರೈಲು ನಿಲ್ದಾಣಗಳಲ್ಲಿ ಪೋರ್ಟರುಗಳಿಗೆ ನೂತನ ಸಮವಸ್ತ್ರ.
ಅದಕ್ಷತೆಯನ್ನು ಪತ್ತೆಹಚ್ಚಿಲು ನಿರ್ದಿಷ್ಟ ಪ್ರದೇಶಗಳಲ್ಲಿ ರೈಲ್ವೆ ಕಾರ್ಯನಿರ್ವಹಣೆಯ ತಪಾಸಣೆಗೆ ವಿಶೇಷ ತಂಡಗಳು.
ಬೋಗಿಗಳ ಒಳಗೆ ಜಿಪಿಎಸ್ ಸೇವೆ, ಮಾಹಿತಿ ಮಂಡಳಿಗಳ ಸಂಖ್ಯೆ ಹೆಚ್ಚಳ.
ರಿಸರ್ವೇಶನ್ ಕೋಟಾದ ಸೀಟುಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ.
ವಿದ್ಯುತ್ ನಿರ್ವಹಣೆಯಲ್ಲಿ ಸುಧಾರಣೆಯ ಮೂಲಕ 3 ಸಾವಿರ ಕೋಟಿ ರೂ. ಉಳಿತಾಯ.
ಹಾಲು ಹಾಗೂ ಔಷಧಿಗಳನ್ನು ಒದಗಿಸಲು ರೈಲು ನಿಲ್ದಾಣದಲ್ಲಿ ಬಹುಉದ್ದೇಶಿತ ಅಂಗಡಿಗಳ ನಿರ್ಮಾಣ.
ಪತ್ರಕರ್ತರಿಗೆ ರಿಯಾಯಿತಿ ಪಾಸುಗಳ ಮೇಲೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ.
ಪ್ರಯಾಣಿಕರಿಗೆ ಅವರ ಆಯ್ಕೆ ಸ್ಥಳೀಯ ಖಾದ್ಯಗಳ ಲಭ್ಯತೆ.
ಹಂತಹಂತವಾಗಿ ರೈಲ್ವೆಯಲ್ಲಿ ಐಆರ್ಸಿಟಿಸಿಯಿಂದ ಆಹಾರ ಪೂರೈಕೆ ಸೇವೆ ಆರಂಭ.
ಉಧಂಪುರ್-ಶ್ರೀನಗರ್-ಬಾರಾಮುಲ್ಲಾ ಸೆಕ್ಷನ್ನ ಕತ್ರಾ-ಬನಿಹಾಲ್ ವಿಭಾಗದ ರೈಲ್ವೆ ಲಿಂಕ್ ಕಾಮಗಾರಿಯಲ್ಲಿ ತೃಪ್ತಿಕರ ಪ್ರಗತಿ ಹಾಗೂ 35 ಕಿ.ಮೀ. ವಿಸ್ತೀರ್ಣದ ಕೊಳವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.
ಎಲ್ಲ ರೈಲು ನಿಲ್ದಾಣಗಳಿಗೆ ಇ-ಕೇಟರಿಂಗ್ ಸೌಲಭ್ಯ ವಿಸ್ತರಣೆ.
ವಿದೇಶಿ ಡೆಬಿಟ್-ಕ್ರೆಡಿಟ್ ಕಾರ್ಡ್ ಗಳಿಗೂ ಇ-ಟಿಕೆಟ್ ಸೌಲಭ್ಯ.
ಪ್ರಯಾಣಿಕರ ಬೇಡಿಕೆಯ ಮೇರೆಗೆ ಕೋಚ್ ಸ್ವಚ್ಛಗೊಳಿಸುವ ಸೌಲಭ್ಯ ಆರಂಭ.
11 ಎ-ದರ್ಜೆಯ ನಿಲ್ದಾಣಗಳಲ್ಲಿ ಈ ವರ್ಷ ದೈಹಿಕ ಅಶಕ್ತರಿಗಾಗಿ ಶೌಚಾಲಯ ಸೌಲಭ್ಯ.
ಪ್ರಯಾಣಿಕ ದಟ್ಟಣೆಯ ಮಾರ್ಗಗಳಲ್ಲಿ ಉತ್ಕೃಷ್ಟ್-ಡಬಲ್ ಡೆಕರ್ ಎಸಿ ಯಾತ್ರಿ ಎಕ್ಸ್ಪ್ರೆಸ್
ಪ್ರಮುಖ ನಿಲ್ದಾಣಗಳಲ್ಲಿ ಬಾರ್ಕೋಡ್ ಇರುವ ಟಿಕೆಟ್ಗಳನ್ನು ಪರಿಚಯಿಸಲಾಗುವುದು.
ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ ಪ್ರಾಂತಗಳಲ್ಲಿ ಸರಕು ಸಾಗಾಟ ಕಾರಿಡಾರ್ ಸ್ಥಾಪನೆಯ ಪ್ರಸ್ತಾಪ.
ಪ್ರಯಾಣಿಕ ದಟ್ಟಣೆಯ ಪ್ರದೇಶಗಳಲ್ಲಿ ಉದಯ್ ಎಕ್ಸ್ಪ್ರೆಸ್ ಡಬಲ್ ಡೆಕ್ಕರ್ ರೈಲುಗಳನ್ನು ಆರಂಭಿಸುವ ಮೂಲಕ ಶೇ.40ರಷ್ಟು ಹೆಚ್ಚುವರಿ ಪ್ರಯಾಣಿಕರ ಸಾಗಾಟ.
ತಾಸಿಗೆ 130 ಕಿ.ಮೀ. ವೇಗದಲ್ಲಿ ಓಡುವ ಸಂಪೂರ್ಣ ಹವಾನಿಯಂತ್ರಿತ ಹಮ್ಸಫರ್ ರೈಲುಗಳ ಮೂರು ನೇರ ಸೇವೆ ಆರಂಭ.
ರಿಸರ್ವೇಶನ್ ಪ್ರಯಾಣಿಕರಿಗಾಗಿ ಹಮ್ಸಫರ್, ತೇಜಸ್ ಹಾಗೂ ಉದಯ್ ರೈಲುಗಳ ಆರಂಭ.
ಅಂತ್ಯೋದಯ ಎಕ್ಸ್ಪ್ರೆಸ್ (ದೂರ ಅಂತರದ, ಸಂಪೂರ್ಣ ರಿಸರ್ವೇಶನ್ ರಹಿತ ಸೂಪರ್ಫಾಸ್ಟ್ ಸೇವೆ) ಹಾಗೂ 2-4 ದೀನ ದಯಾಳು ಕೋಚ್ಗಳ ಆರಂಭ.
ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ.
2020ರೊಳಗೆ ಎಲ್ಲ್ಲ ಕಾವಲುರಹಿತ ಕ್ರಾಸಿಂಗ್ಗಳ ರದ್ದು.
ರೈಲ್ವೆಯಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಎರಡು ನೂತನ ರೈಲು ಬೋಗಿ ನಿರ್ಮಾಣ ಕಾರ್ಖಾನೆಗಳ ಸ್ಥಾಪನೆ.
ಮುಂದಿನ ಹಣಕಾಸು ವರ್ಷದಲ್ಲಿ ಕೆಳ ಬರ್ತ್ಗಳ ಸೀಟುಗಳ ಮೀಸಲಾತಿ ಕೋಟಾದಲ್ಲಿ ಹೆಚ್ಚಳ. ಹಿರಿಯ ನಾಗರಿಕರ ರಿಸರ್ವೇಶನ್ ಕೋಟಾದಲ್ಲಿ ಶೇ.50ರಷ್ಟು ಏರಿಕೆ.
ರೈಲುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು 2020ರೊಳಗೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ.
ವಾರಣಾಸಿ ಹಾಗೂ ದಿಲ್ಲಿ ನಡುವೆ ಅತ್ಯಾಧುನಿಕ, ನವೀಕೃತ ಕೋಚ್ಗಳ ‘ಮಹಾಮನಾ ಎಕ್ಸ್ಪ್ರೆಸ್’ ಆರಂಭ.
ಇ-ಟಿಕೆಟ್ ಸಾಮರ್ಥ್ಯದ ಸಂಖ್ಯೆಯನ್ನು ಪ್ರತಿ ನಿಮಿಷಕ್ಕೆ 2 ಸಾವಿರ ಟಿಕೆಟ್ಗಳಿಂದ 7,200ಕ್ಕೇರಿಕೆ.
2016-17ರಲ್ಲಿ 100 ನಿಲ್ದಾಣಗಳಲ್ಲಿ ಹಾಗೂ 2017-18ರಲ್ಲಿ 400 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಮುನ್ನ 475 ನಿಲ್ದಾಣಗಳಲ್ಲಿ 17 ಸಾವಿರ ಜೈವಿಕ ಶೌಚಾಲಯಗಳು ಹಾಗೂ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ.
ಸೇತುವೆಗಳ ಮೇಲೆ ರೈಲುಮಾರ್ಗ ನಿರ್ಮಾಣಕ್ಕಾಗಿ ಭಾರತೀಯ ರೈಲ್ವೆ ಜೊತೆ ಜಂಟಿ ಯೋಜನೆಗಳನ್ನು ರಚಿಸಲು 17 ರಾಜ್ಯಗಳ ಸಮ್ಮತಿ.
2016-17ರಲ್ಲಿ ರೈಲ್ವೆ ಇಲಾಖೆಯು ಸಂಪೂರ್ಣವಾಗಿ ಕಾಗದರಹಿತ ಗುತ್ತಿಗೆ ವ್ಯವಸ್ಥೆಗೆ ಮಾರ್ಪಾಡುಗೊಳ್ಳಲಿದೆ
40 ಸಾವಿರ ಕೋಟಿ ರೂ. ವೆಚ್ಚದಲ್ಲಿ 2 ಲೋಕೋಮೊಟಿವ್ ಕಾರ್ಖಾನೆಗಳ ಸ್ಥಾಪನೆ.
ವಿಶ್ರಾಂತಿ ಕೊಠಡಿಯ ಬುಕ್ಕಿಂಗ್ಗೂ ಆನ್ಲೈನ್ ಸೌಲಭ್ಯ.
92,714 ಕೋಟಿ ರೂ. ವೌಲ್ಯದ 44 ನೂತನ ಯೋಜನೆಗಳು ಈ ವರ್ಷ ಅನುಷ್ಠಾನಗೊಳ್ಳಲಿದೆ.
2017-18ರ ವಿತ್ತವರ್ಷದಲ್ಲಿ ರೈಲ್ವೆಯಿಂದ 9 ಕೋಟಿ ಹಾಗೂ 2018-19ರಲ್ಲಿ 14 ಕೋಟಿ ಮಾನವ ದಿನಗಳ ಸೃಷ್ಟಿ.
2016-17ರಲ್ಲಿ 1600 ಕಿ.ಮೀ. ಹಾಗೂ 2017-18ರಲ್ಲಿ 2000 ಕಿ.ಮೀ. ವಿಸ್ತೀರ್ಣದ ರೈಲುಮಾರ್ಗಗಳ ವಿದ್ಯುದೀಕರಣ.
ರೈಲ್ವೆ ಮೂಲಸೌಕರ್ಯದ ಆಧುನೀಕರಣಕ್ಕಾಗಿ 5 ವರ್ಷಗಳಲ್ಲಿ 8.5 ಲಕ್ಷ ರೂ. ವೆಚ್ಚ.
ಮುಂದಿನ ವರ್ಷ 2,800 ಕಿ.ಮೀ. ವಿಸ್ತೀರ್ಣದ ನೂತನ ರೈಲು ಮಾರ್ಗಗಳ ಸ್ಥಾಪನೆ.
2016-17ರಲ್ಲಿ ರೈಲ್ವೆಯಿಂದ 1.21 ಲಕ್ಷ ಕೋಟಿ ರೂ. ಹೂಡಿಕೆ.