ಬಡವರ ವಿದ್ಯುತ್ ಸಬ್ಸಿಡಿಗಳನ್ನು ಕದಿಯುವ ಭಾರತದ ಶ್ರೀಮಂತರು
ಭಾರತದ ಶೇ.20ರಷ್ಟು ಜನಸಂಖ್ಯೆಗೆ ವಿದ್ಯುತ್ ಸೌಲ ಭ್ಯವೇ ಇಲ್ಲ, ಜನಸಂಖ್ಯೆಯ ಶೇ.40ರಷ್ಟು ಶ್ರೀಮಂತರು ಸಬ್ಸಿಡಿ ಮಾಡಿದ ವಿದ್ಯುತ್ ಬಳಸುತ್ತಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಜೊತೆಗೆ, ಭಾರತದಲ್ಲಿ ವಿದ್ಯುತ್ತನ್ನು ಸಹ ಸರಕಾರವೇ ನಿಯಂತ್ರಿಸುತ್ತದೆ ಮತ್ತು ಅದರ ಮೇಲೆ ಸಬ್ಸಿಡಿ ಯನ್ನೂ ಕೊಡಲಾಗುತ್ತಿದೆ. ವಿದ್ಯುತ್ ಶುಲ್ಕಗಳನ್ನು ಉದ್ದೇಶ ಪೂರ್ವಕವಾಗಿ ಬಡ ಮನೆಗಳಿಗೆ ಕಡಿಮೆ ಇಡಲಾಗಿದೆ. ದುರದೃಷ್ಟವೆಂದರೆ ಬಹುತೇಕ ವಿದ್ಯುತ್ ಉದ್ಯಮ ಮತ್ತು ಕೈಗಾರಿಕಾ ಬಳಕೆದಾರರು ಮತ್ತು ದೇಶಿ ವಲಯದಲ್ಲಿ ಶ್ರೀಮಂತ ಬಳಕೆದಾರರು ಬಡವರಿಗಿಂತ ಹೆಚ್ಚಾಗಿ ಲಾಭ ಮಾಡಿಕೊಳ್ಳುವಂತೆ ವಿತರಿಸಲಾಗಿದೆ.
ಕತ್ತಲಲ್ಲಿ ಬಡ ಮನೆಗಳು
ವಸತಿ ಮನೆಗಳಿಗೆ ಸಂಬಂಧಿಸಿದ ವಿದ್ಯುತ್ ವಲಯದಲ್ಲಿ ಭಾರತ ದ ಒಟ್ಟು ವಿದ್ಯುತ್ ಬಳಕೆಯ ಕಾಲುವಾಸಿ ವಿದ್ಯುತ್ ಬಳಕೆಯಾ ಗುತ್ತದೆ. ಶೇ.87ರಷ್ಟು ವಿದ್ಯುತ್ ಸಬ್ಸಿಡಿ ಪಾವತಿಗಳು ಬಡವರ ಬದಲಾಗಿ ಬಡತನ ರೇಖೆಗಿಂತ ಮೇಲಿರುವ ಮನೆಗಳಿಗೆ ಹೋಗುತ್ತಿದೆ ಎಂದು ಅಂದಾಜಿಸಲಾಗಿದೆ. ವಿಶ್ವಬ್ಯಾಂಕ್ ಪ್ರಕಾರ 2015 ಅಕ್ಟೋಬರಿನವರೆಗೆ ರಾಷ್ಟ್ರೀಯವಾಗಿ ನಿಯೋ ಜಿಸಿರುವ ಬಡತನ ಮಿತಿ 1.90 ಡಾಲರ್ಗಳು. ಇದನ್ನು ಇಂಧನ ಖರೀದಿ ಸಾಮ್ಯದ ಆಧಾರದಲ್ಲಿ ಲೆಕ್ಕ ಹಾಕಲಾಗಿದೆ.
ಸರಕಾರದ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ಒದಗಿಸಿ ರುವ ದಾಖಲೆಗಳನ್ನು ಬಳಸಿಕೊಂಡು ಮಾಡಿರುವ ಅಧ್ಯಯನ ವರದಿಗಳು ತಿಳಿಸಿರುವಂತೆ, ಅರ್ಧದಷ್ಟು ಸಬ್ಸಿಡಿ ಪಾವತಿಗಳು ಭಾರತೀಯ ಮನೆಗಳ ಶ್ರೀಮಂತ ಐದನೆ ಎರಡು ಭಾಗದ ಕಡೆಗೆ ನಿರ್ದೇಶನಗೊಂಡಿದೆ. ಉದಾಹರಣೆಗೆ 2010ರಲ್ಲಿ, ಅತೀ ಕಡಿಮೆ ಮತ್ತು ಎರಡನೇ ಅತೀ ಕಡಿಮೆ ಆದಾಯವಿರುವ ಜನಸಂಖ್ಯೆಯ ಐದನೆ ಒಂದು ಭಾಗವು ಕ್ರಮವಾಗಿ ಶೇ.14 ಮತ್ತು ಶೇ.15ರಷ್ಟು ವಿದ್ಯುತ್ ಸಬ್ಸಿಡಿ ಪಾವತಿಗಳನ್ನು ಪಡೆದುಕೊಂಡಿವೆ. ಆದರೆ ಜನಸಂಖ್ಯೆಯಶ್ರೀಮಂತ ವರ್ಗದ ಐದನೆ ಒಂದು ಭಾಗವು ಶೇ.45ರಷ್ಟು ಸಬ್ಸಿಡಿ ಪಾಲು ಪಡೆದುಕೊಂಡಿದ್ದಾರೆ. ಪ್ರತೀ ರಾಜ್ಯದ ಬಹುತೇಕ ಎಲ್ಲಾ ಮನೆಗಳೂ ತಮ್ಮ ಮಾಸಿಕ ವಿದ್ಯುತ್ ಬಳಕೆಯಲ್ಲಿ ಸ್ವಲ್ಪ ಭಾಗವಾದರೂ ಸಬ್ಸಿಡಿ ಪಡೆದುಕೊಳ್ಳುತ್ತವೆ. ಆದರೆ ಹೋಲಿಸಿ ನೋಡಿದರೆ ಬಡತನದ ಕೆಳ ಹಂತದಲ್ಲಿರುವ ಎರಡು ವರ್ಗ ಗಳ ಮನೆಗಳು ಉಳಿದವರಿಗಿಂತ ಕಡಿಮೆ ವಿದ್ಯುತ್ ಬಳಸು ತ್ತಾರೆ. ವಿದ್ಯುತ್ ಪಡೆಯುವ ಶ್ರೀಮಂತ ಮನೆಗಳು ಸಾಮಾನ್ಯ ವಾಗಿ, ಹೆಚ್ಚಲ್ಲದೆ ಇದ್ದರೂ, ಕನಿಷ್ಠ ವಿದ್ಯುತ್ ಹೊಂದಿರುವ ಬಡ ಮನೆಗಳು ಪಡೆಯುವಷ್ಟೇ ಸಬ್ಸಿಡಿಗಳಿಗೆ ಅರ್ಹತೆ ಹೊಂದಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತದೆ.
ವಿಶ್ವಬ್ಯಾಂಕ್ನ ಪ್ರಕಾರ 2011-15ರಲ್ಲಿ ಶೇ.21.3ರಷ್ಟು ಭಾರ ತೀಯ ಜನಸಂಖ್ಯೆ ವಿದ್ಯುತ್ ಸೌಲಭ್ಯವನ್ನು ಪಡೆದಿರಲಿಲ್ಲ. ಅಂದರೆ ಅತೀ ಬಡವರ್ಗದವರು ವಿದ್ಯುತ್ ಸಬ್ಸಿಡಿಗಳ ಲಾಭ ವನ್ನೇ ಪಡೆದುಕೊಂಡಿಲ್ಲ. 2017ರಲ್ಲಿ ದೇಶದ ಎಲ್ಲ ಪ್ರಾಂತ ಗಳಲ್ಲೂ ವಿದ್ಯುದೀಕರಣದ ಗುರಿಯನ್ನು ಭಾರತ ಹೊಂದಿದೆ.
ಬಡವರ ಮನೆಗಳಿಗೆ ವಿದ್ಯುತ್
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಲ್ಲಿ ರುವ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಅಡಿಯಲ್ಲಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು 2005ರಲ್ಲಿ ಆರಂಭಿಸಲಾಯಿತು. ಅದರ ಪ್ರಕಾರ ಬಡತನ ರೇಖೆಯ ಕೆಳಗೆ ಇರುವ ಮನೆಗಳು ಉಚಿತ ವಿದ್ಯುತ್ ಸಂಪರ್ಕಗಳ ನ್ನು ಪಡೆದುಕೊಳ್ಳಬೇಕು. ಈ ಯೋಜನೆಯ ಒಟ್ಟು ಅಂದಾಜು ವೆಚ್ಚವು ರೂ.16,000 ಕೋಟಿ (2.4 ದಶ ಕೋಟಿ ಡಾಲರ್). ಈ ಯೋಜನೆಯಡಿ ಫಲಾನುಭ ವಿಗಳಿಂದ ವಿದ್ಯುತ್ ವೆಚ್ಚವನ್ನು ಸಂಗ್ರಹಿಸುವ ಮೂಲಕ ವಿದ್ಯುತ್ ಸರಬರಾಜಿನ ಸುಸ್ಥಿರತೆ ಮೇಲೆ ವಿಶೇಷ ಒತ್ತು ನೀಡಿದೆ.
ಇದನ್ನು ಸಾಧಿಸಲು, ಸರಕಾರೇತರ ಸಂಘಟನೆಗಳು ಮತ್ತು ಗ್ರಾಹಕ ಸಂಘಟನೆಗಳನ್ನು ಶಾಖೆಗಳಾಗಿ ನಿಯೋಜಿಸಲು ಪ್ರಸ್ತಾ ಪಿಸಲಾಗಿದೆ. ರಾಜ್ಯ ಸರಕಾರಗಳು ಗುರಿಯಾಗಿಟ್ಟಿರುವ ಸಬ್ಸಿಡಿ ಗಳನ್ನು ಬಡ ಮನೆಗಳಿಗೆ ಒದಗಿಸುವಲ್ಲಿ ಸ್ವತಂತ್ರರು. ಕೇಂದ್ರ ಸರಕಾರವು ಅನುಷ್ಠಾನ ಮತ್ತು ನಿಭಾಯಿಸುವ ಪರಿಣತಿಯನ್ನು ಕೊಡುತ್ತದೆ. ದುರದೃಷ್ಟವಶಾತ್ ಬಹುತೇಕ ಕೃಷಿ ಸಂಪರ್ಕಗಳು ಮೀಟರ್ ಇಲ್ಲದೆ ಮಾಡಿರುವ ಕಾರಣ, ವಿದ್ಯುತ್ ಸಬ್ಸಿಡಿ ಲಾಭ ದ ಪ್ರಮಾಣವನ್ನು ಅಂದಾಜಿಸುವುದು ಕಷ್ಟದ ಕೆಲಸವಾಗಿದೆ.
ಕೆಟ್ಟ ಬೆಳವಣಿಗೆಗೆ ಉತ್ತೇಜನ
ಉಚಿತ ವಿದ್ಯುತ್ ಸೌಲಭ್ಯವು ಬಯಸದ ಪಲಿತಾಂಶಗಳಿಗೆ ಕಾರಣವಾಗಿದೆ. ಅಧಿಕ ಬಳಕೆಯ ಪರಿಣಾಮವಾಗಿ ಪ್ರಾಕೃತಿಕ ಇಂಧನ ಸರಬರಾಜಿನ ಮೇಲೆ ಅನುಚಿತ ಒತ್ತಡ ಬಿದ್ದಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಉತ್ಪಾದನೆಯಾಗಿರುವ ಶೇ.75-80ರಷ್ಟು ವಿದ್ಯುತ್ ಪ್ರಾಕೃತಿಕ ಇಂಧನಗಳಿಂದ, ಮುಖ್ಯವಾಗಿ ಕಲ್ಲಿದ್ದಲಿಂದ ಲಭ್ಯವಾಗುತ್ತಿದೆ. ಉಚಿತ ವಿದ್ಯುತ್ ಅಂತರ್ಜಲದ ಅಧಿಕ ಬಳಕೆಗೆ ಕಾರಣವಾಗಿದೆ. ಮುಖ್ಯವಾಗಿ ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಾದ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಕೃಷಿ ಉದ್ದೇಶದಲ್ಲಿ ಇದು ಕಂಡು ಬಂದಿದೆ.
ಅಲ್ಲದೆ, ಗ್ರಾಮೀಣ, ಬಡ ಮತ್ತು ಇತರ ಕಡಿಮೆ ವಿದ್ಯುತ್ ಬಳಸುವ ಮನೆಗಳಲ್ಲಿ ಸಬ್ಸಿಡಿಯನ್ನು ಶುಲ್ಕದ ರೂಪದಲ್ಲಿ ಕೊಡ ಲಾಗುತ್ತಿದ್ದು, ಅವುಗಳು ವಾಪಾಸು ಬರುವ ವೆಚ್ಚಕ್ಕಿಂತ ಕಡಿಮೆ ಇರುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಭಾರತದ ಮನೆಗಳು ಒಟ್ಟು ವಿದ್ಯುತ್ ಬಳಕೆಯ ನಾಲ್ಕನೆ ಒಂದು ಭಾಗವನ್ನು ಬಳಸು ತ್ತದೆ ಎನ್ನುವುದನ್ನು ಗಮನಿಸಿದಾಗ, ಒಟ್ಟು ವಸತಿ ವಿದ್ಯುತ್ ಸಬ್ಸಿಡಿಗಳು (ಸಬ್ಸಿಡಿ ಮತ್ತು ಕ್ರಾಸ್ ಸಬ್ಸಿಡಿ) ಮುಖ್ಯವಾಗುತ್ತವೆ.
2010ರಲ್ಲಿ, ವಸತಿ ಸಬ್ಸಿಡಿಗಳು ರೂ.22,012 ಕೋಟಿಯಾ ಗಿದ್ದವು (3.3 ದಶಕೋಟಿ). ಅದು ಆ ವರ್ಷದ ದೇಶದ ಜಿಡಿಪಿ ಯ ಶೇ.0.4ರಷ್ಟು. ವಸತಿ ವಿದ್ಯುತ್ ಸಬ್ಸಿಡಿಗಳಿಗೆ ಉದ್ಯಮ ಮತ್ತು ವಾಣಿಜ್ಯ ಮೊದಲಾದ ಕ್ಷೇತ್ರಗಳಿಂದ ಕ್ರಾಸ್ ಸಬ್ಸಿಡಿ ಗಳಲ್ಲಿ ಅನುದಾನ ನೀಡುವ ರಾಜ್ಯಗಳಲ್ಲೂ ಸಹ, ರಾಜ್ಯ ಸರಕಾ ರಗಳಿಗೆ ಮತ್ತು ಅದರ ಸಂಬಂಧಪಟ್ಟ ಕಂಪೆನಿಗಳಿಗೆ ಅವುಗಳು ಸಾಕಷ್ಟು ವೆಚ್ಚಕ್ಕೆ ಕಾರಣವಾಗುತ್ತಿವೆ.