ಮೊದಲು ಅಂಡಮಾನ್, ಈಗ ಮಹಾರಾಷ್ಟ್ರದ 600 ಎಕರೆ ರಾಮ್ದೇವ್ ತೆಕ್ಕೆಗೆ
ಬಾಬಾ ರಾಮ್ದೇವ್ ಅವರ ಪತಂಜಲಿ ಯೋಗಪೀಠದ ಕಿತ್ತಳೆ ಸಂಸ್ಕರಣಾ ಘಟಕಕ್ಕೆ 600 ಎಕರೆ ಭೂಮಿ ಹಸ್ತಾಂತರಿಸುವ ಒಪ್ಪಂದಕ್ಕೆ ಮಹಾರಾಷ್ಟ್ರ ಸರಕಾರ ಸಹಿ ಮಾಡಿದ ಎರಡು ದಿನಗಳಲ್ಲಿ, ಹಿಮಾಚಲ ಪ್ರದೇಶ ಸರಕಾರ ಅದೇ ಕಂಪೆನಿಗೆ 28 ಎಕರೆ ಭೂಮಿಯನ್ನು ಭೋಗ್ಯಕ್ಕೆ ನೀಡಿದ್ದನ್ನು ರದ್ದು ಮಾಡಿದೆ.
ಭಾರತೀಯ ಜನತಾಪಕ್ಷ ಸರಕಾರ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ, 2010ರಲ್ಲಿ ಪತಂಜಲಿ ಯೋಗಪೀಠ ಟ್ರಸ್ಟ್ಗೆ 99 ವರ್ಷಗಳ ಅವಧಿಗೆ 17 ಲಕ್ಷ ರೂಪಾಯಿ ಮೊತ್ತಕ್ಕೆ ಬೋಗ್ಯಕ್ಕೆ ನೀಡಲಾಗಿತ್ತು. 2012ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇದರಲ್ಲಿ ನಡೆದ ಅವ್ಯವಹಾರವನ್ನು ಬಹಿರಂಗಪಡಿಸಲಾಯಿತು.ಈ ಮಧ್ಯೆ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳು, ಬಾಬಾ ಕಂಪೆನಿ ಜತೆ ಮಾಡಿಕೊಂಡು ರಿಯಾಯಿತಿ ದರದಲ್ಲಿ ಭೂಮಿ ನೀಡಿದ ಸರಕಾರದ ಕ್ರಮವನ್ನು ಆಕ್ಷೇಪಿಸಿವೆ.
ರಾಮ್ದೇವ್ ಅವರ ಅಸಂಬದ್ಧ ಹೇಳಿಕೆಗಳಿಗೆ ಸುಲಭವಾಗಿ ನಕ್ಕು ಸುಮ್ಮನಾಗುತ್ತೇವೆ. ಆದರೆ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಗ್ರಾಹಕ ಮಾರುಕಟ್ಟೆಯಲ್ಲಿ ರಾಮ್ದೇವ್ ಅವರ ಆರ್ಥಿಕ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ. ಜತೆಗೆ ಬಿಜೆಪಿ ಮೇಲೆ ಇರುವ ಅವರ ಪ್ರಭಾವವನ್ನೂ ಕಡೆಗಣಿಸುವಂತಿಲ್ಲ. ಸಂಪುಟ ಸಚಿವರು ಸಾಮಾನ್ಯವಾಗಿ ಜನರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಮಿ ನೀಡುವ ಭರವಸೆ ನೀಡುವುದಿಲ್ಲ. ಆದರೆ ಶಿಪ್ಪಿಂಗ್ ಖಾತೆ ಸಚಿವ ನಿತಿನ್ ಗಡ್ಕರಿ, ರಾಮ್ದೇವ್ ಬಾಬಾ ಅವರಿಗೆ ದ್ವೀಪದಲ್ಲಿ ಯೋಗ ರೆಸಾರ್ಟ್ ಆರಂಭಿಸಲು ಭೂಮಿ ನೀಡಲು ಕೇಂದ್ರ ಸರಕಾರ ಉತ್ಸುಕವಾಗಿದೆ ಎಂದು ಕಳೆದ ನವೆಂಬರ್ನಲ್ಲಿ ಹೇಳಿದಾಗ ಅಚ್ಚರಿಪಟ್ಟಿದ್ದರು.
ಎಚ್ಚರದ ನಡೆ: ಬಿಜೆಪಿಗೆ 2014ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಬಂದಾಗ ಅರುಣ್ ಜೇಟ್ಲಿ ಇನ್ನೂ ಹಣಕಾಸು ಸಚಿವರಾಗುವ ಮುನ್ನವೇ ಯೋಗಗುರುವಿಗೆ ಅಪೂರ್ವ ಸಂದೇಶ ರವಾನಿಸಿದ್ದರು.
1977ರ ಬಿಜೆಪಿ ಚಳವಳಿ ನಡೆದದ್ದು ವ್ಯವಸ್ಥೆಯ ಬದಲಾವಣೆಗಾಗಿ ಎಂದು ರಾಮ್ದೇವ್ ಅನುಯಾಯಿಗಳು ಏರ್ಪಡಿಸಿದ್ದ ಸಮಾರಂಭದಲ್ಲಿ ಹೇಳಿದ್ದರು.ಆದರೆ ಜೆಪಿ ಮುಂದೆ ಸರಕಾರದಿಂದ ಹೊರಗೆ ಉಳಿದರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದರೂ, ಅಧಿಕಾರ ರಚನೆಯಿಂದ ದೂರ ಉಳಿದರು ಸಾರ್ವತ್ರಿಕ ಚುನಾವಣೆಯಲ್ಲಿ ರಾಮ್ದೇವ್ ಬಿಜೆಪಿಯ ಪ್ರಮುಖ ಪ್ರಚಾರಕರಾಗಿದ್ದರು. ಬಿಜೆಪಿ ಸಂಸದ ಬಬುಲ್ ಸುಪ್ರಿಯೊ ಆರೋಪಿಸಿದ್ದಂತೆ, ಅವರು ಪಕ್ಷದ ಟಿಕೆಟ್ ಕೊಡಿಸಲು ಜನರಿಂದ ಲಂಚ ಪಡೆದಿರಬಹುದು.ಜೇಟ್ಲೆಯವರ ಹೇಳಿಕೆ ಅವರಿಗೆ ನೆನಪೋಲೆ. ಅದೆಂದರೆ, ಹೊಸ ಸರಕಾರದಿಂದ ಯಾವ ಲಾಭವನ್ನೂ ನಿರೀಕ್ಷಿಸಬೇಡಿ ಎನ್ನುವುದು.
ಜೇಟ್ಲೆ ತಮ್ಮ ಮಾತು ಉಳಿಸಿಕೊಳ್ಳಲೇಬೇಕಿತ್ತು. ರಾಮ್ದೇವ್ ಹಲವು ಬಿಜೆಪಿ ಸರಕಾರಗಳಿಂದ ರಾಜ್ಯಮಟ್ಟದಲ್ಲಿ ದೊಡ್ಡ ಮೊತ್ತದ ಪ್ರಯೋಜನ ಪಡೆದಿದ್ದರು.ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ಎರಡು ವರ್ಷಗಳ ಬಳಿಕ, ಕೇಂದ್ರದಿಂದ ಎಷ್ಟು ಲಾಭ ಪಡೆಯಲು ಸಾಧ್ಯವೋ ಅಷ್ಟನ್ನು ಪಡೆದಿದ್ದಾರೆ. ಇದು ಝೆಡ್ ವರ್ಗದ ಭದ್ರತೆಯಿಂದ ಹಿಡಿದು, ದ್ವೀಪದವರೆಗೆ ಹಬ್ಬಿದೆ.
ರಾಮ್ದೇವ್ ಶಕ್ತಿ ದ್ವೀಪದ ಮಾಲಕತ್ವ ಹೊಂದುವುದು ಇದೇ ಮೊದಲಲ್ಲ.2009ರಲ್ಲಿ, ಅನಿವಾಸಿ ಭಾರತೀಯ ದಂಪತಿ ಸ್ಕಾಟ್ಲೆಂಡ್ನ 900 ಎಕರೆ ದ್ವೀಪವನ್ನು ಕೊಡುಗೆಯಾಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಜಾರಿ ನಿರ್ದೇಶನಾಲಯ ರಾಮದೇವ್ ಅವರ ವಿರುದ್ಧ ಪ್ರಕರಣ ದಾಖಲಿಸಿ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಬಗ್ಗೆ ವಿಚಾರಣೆ ಆರಂಭಿಸಿತು.ಆದರೆ ಕಳೆದ ಮೇ ತಿಂಗಳಲ್ಲಿ ಈ ಪ್ರಕರಣವನ್ನು ಅಂತ್ಯಗೊಳಿಸಲು ನಿರ್ದೇಶನಾಲಯ ಯೋಚಿಸುತ್ತಿದೆ ಎಂದು ವರದಿಯಾಗಿತ್ತು.ಅವರ ಸಹಚರ ಬಾಲಕೃಷ್ಣ ಅವರ ವಿರುದ್ಧ 2014ರಲ್ಲಿ ಹೂಡಿದ ಹಣಕಾಸು ಅವ್ಯವಹಾರ ಪ್ರಕರಣದಂತೆ ಇದೂ ಆಗುತ್ತಿದೆ ಎಂದು ವರದಿಯಾಗಿತ್ತು.
ಚುನಾವಣೆ ಬಳಿಕ ಆರಂಭಿಕ ತಿಂಗಳುಗಳಲ್ಲಿ, ಈ ಹುರುಪು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಆಯುಷ್ ಸಚಿವ ಹರ್ಷವರ್ಧನ್ ಅವರಿಗೆ ವರ್ಗಾವಣೆಯಾಯಿತು. ಇವರು ರಾಮ್ದೇವ್ ಅವರ ಎರಡು ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು.ಇದರಲ್ಲಿ ವಿಶೇಷವೇನೂ ಇಲ್ಲದಿದ್ದರೂ, ಅದೇ ವರ್ಷದ ನವೆಂಬರ್ನಲ್ಲಿ ಹರಿದ್ವಾರದ ಪತಂಜಲಿ ಆಶ್ರಮದಲ್ಲಿ ಮೂರು ದಿನಗಳ ಆರೆಸ್ಸೆಸ ಯುುವ ಶಿಬಿರ ನಡೆಯಿತು ಎನ್ನುವುದನ್ನು ಮರೆಯುವಂತಿಲ್ಲ.
ಬಳಿಕ ಆಗಸ್ಟ್ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪತಂಜಲಿ ಯೋಗಪೀಠದ ಜತೆ ಒಪ್ಪಂದ ಮಾಡಿಕೊಂಡು ಆ ಕಂಪೆನಿಯ ಗಿಡಮೂಲಿಕೆ ಪೂರಕ ಹಾಗೂ ಆಹಾರ ವಸ್ತುಗಳನ್ನು ಮಾರಾಟ ಮಾಡುವುದಾಗಿ ಘೋಷಿಸಿತು. ಸಾಮಾನ್ಯ ಅದೇ ವೇಳೆಗೆ ಬುಡಕಟ್ಟು ಜನಾಂಗಗಳ ವ್ಯವಹಾರ ಖಾತೆ ಸಚಿವ ಜೂಲ್ ಓರಂ, ಅಪೌಷ್ಟಿಕತೆಯನ್ನು ನಿವಾರಿಸುವ ಉತ್ಪನ್ನವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ರಾಮದೇವ್ ಜತೆ ಕೈಜೋಡಿಸುವುದಾಗಿ ಘೋಷಿಸಿದರು.
ಪುಟ್ಟ ಸವಲತ್ತು: ಕಳೆದ ವರ್ಷ ರಾಮ್ದೇವ್ ಅವರಿಗೆ ಫಲಪ್ರದ ವರ್ಷ.ತಮ್ಮ ಉದ್ಯಮವನ್ನು ಕೇವಲ ಎಫ್ಎಂಸಿಜಿ ಆಗಿ ಪರಿವರ್ತಿಸಿದ್ದು ಮಾತ್ರವಲ್ಲದೇ, ಈಗಾಗಲೇ ಉದ್ಯಮದಲ್ಲಿ ಬೇರೂರಿರುವ ಕಂಪೆನಿಗಳಿಗೆ ತೀವ್ರ ಪೈಪೋಟಿಯನ್ನೂ ನೀಡಿದರು. ಇದರ ಜತೆಗೆ ಸಾಂದರ್ಭಿಕ ತೆರಿಗೆ ಲಾಭವೂ ಸಿಕ್ಕಿತು.2015ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯೋಗ ಸಂಬಂಧಿತ ದತ್ತಿ ಟ್ರಸ್ಟ್ಗಳ ಆದಾಯಕ್ಕೆ ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಘೋಷಿಸಿದರು.
2014ರ ಅಕ್ಟೋಬರ್ನಲ್ಲಿ, ಗೃಹ ಸಚಿವಾಲಯ ಅವರಿಗೆ ಝೆಡ್ ವರ್ಗದ ಭದ್ರತಾ ಸೌಲಭ್ಯ ನೀಡಿತು.ಇದರಿಂದಾಗಿ ರಾಮ್ದೇವ್ ಬಾಬಾ ಅವರು ಭಾರತದಾದ್ಯಂತ ಪ್ರವಾಸ ಕೈಗೊಳ್ಳುವ ವೇಳೆ 20 ಮಂದಿ ಸಿಆರ್ಪಿಎಫ್ ದ್ರತಾ ಸಿಬ್ಬಂದಿಯನ್ನು ಹೊಂದಲು ಅವಕಾಶ ಮಾಡಿಕೊಟ್ಟಿತು.ರಾಜಧಾನಿಯಲ್ಲಿದ್ದಾಗ ದೆಹಲಿ ಪೊಲೀಸರಿಂದ ಈ ಭದ್ರತಾ ಸೌಲಭ್ಯ ಪಡೆಯಲು ಅವಕಾಶವಾಯಿತು.ಇದು ಬಾಬಾಗೆ ಸಾಕಾಗಲಿಲ್ಲ.ವಿಮಾನ ನಿಲ್ದಾಣಗಳಲ್ಲಿ ಶೋಧನೆ ಮಾಡದವರ ಪಟ್ಟಿಯಲ್ಲಿ ಹೆಸರು ಸೇರಿಸಲು ಮನವಿ ಸಲ್ಲಿಸಿದರು.ಈ ಮನವಿ ಇನ್ನೂ ವಿಮಾನಯಾನ ಸಚಿವಾಲಯದಲ್ಲಿ ಬಾಕಿ ಇದೆ.
(ಕೃಪೆ: ಸ್ಕ್ರೋಲ್.ಇನ್)