‘‘ಸಾರ್ ಆಕ್ಸಿಡೆಂಟಾಗಿದೆ ಅಂತಾ ಕಾಣುತ್ತೆ.... ಜನ ಸೇರಿದ್ದಾರೆ. ಬೈಕ್ ಸವಾರ ಒದ್ದಾಡುತ್ತಿದ್ದಾನೆ’’ ಆಟೋ ಡ್ರೈವರ್ ಹೇಳಿದ.
‘‘ಬೇಡದ ಉಸಾಬರಿ ನಿನಗ್ಯಾಕೆ? ನನ್ನನ್ನು ಬೇಗ ಮನೆಗೆ ಬಿಡು’’ ಅವನು ಅವಸರಿಸಿದ.
ಮನೆ ತಲುಪಿದ್ದೇ ತಡ, ಆತನ ಪತ್ನಿ ಏದುಸಿರು ಬಿಟ್ಟು ಬಂದು ಹೇಳಿದಳು ‘‘ರೀ...ಮಗನ ಬೈಕ್ ಆಕ್ಸಿಡೆಂಟಾಗಿದೆಯಂತೆ...’’
-ಮಗು