ಪ್ರಪ್ರಥಮ ಟಿ 20 ವಿಶ್ವಕಪ್ ಗೆದ್ದು ಕೊಟ್ಟ ಜೋಗಿಂದರ್ ಶರ್ಮ ಈಗ ಯಾರನ್ನು ನಡುಗಿಸುತ್ತಿದ್ದಾರೆ ನೋಡಿ !
ಹೊಸದಿಲ್ಲಿ , ಮಾ. 9 : 2007 ರ ಟಿ 20 ವಿಶ್ವ ಕಪ್ ಫೈನಲ್ ಪಂದ್ಯದ ಹೀರೋ ಆಗಿ ಅನಿರೀಕ್ಷಿತವಾಗಿ ಮೂಡಿ ಬಂದ ಜೋಗಿಂದರ್ ಶರ್ಮ ನಿಮಗೆ ನೆನಪಿದೆಯೇ ? ಕೊನೆಯ ಒವರ್ ನ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಪಾಕಿಸ್ತಾನದ ಮಿಸ್ಬಾಉಲ್ ಹಖ್ ಅವರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಪ್ರಪ್ರಥಮ ಟಿ20 ವಿಶ್ವಕಪ್ ತಂದು ಕೊಟ್ಟ ಬೌಲರ್ ಜೋಗಿಂದರ್ ಶರ್ಮಾರನ್ನು ಹೆಚ್ಚಿನವರೂ ಮರೆತೂ ಬಿಟ್ಟಿದ್ದಾರೆ.
2007 ಆ ವಿಶ್ವ ಕಪ್ ನಲ್ಲಿ ಮಿಂಚಿದರೂ ಆ ಬಳಿಕ ಜೋಗಿಂದರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ. ಆದರೆ ವಿಶ್ವಕಪ್ ಸಾಧನೆಯಿಂದಾಗಿ ಜೋಗಿಂದರ್ ಗೆ ಹರ್ಯಾಣ ಪೊಲೀಸ್ ನಲ್ಲಿ ಡಿಎಸ್ಪಿ ಯ ಉದ್ಯೋಗ ಸಿಕ್ಕಿತು.
ಈಗ ಎಂಟೂವರೆ ವರ್ಷಗಳ ಬಳಿಕ ನೀವು ಜೋಗಿಂದರ್ ರನ್ನು ನೋಡಿದರೆ ಅವರಲ್ಲೇ ಜೋಗಿಂದರ್ ಎಲ್ಲಿದ್ದಾರೆ ಎಂದು ಕೇಳಬೇಕು. ಅಷ್ಟು ಬದಲಾಗಿದ್ದಾರೆ ಅವರು. ಸಂಪೂರ್ಣ ಕಟ್ಟುನಿಟ್ಟಿನ ಪೊಲೀಸ್ ಆಗಿ ಬದಲಾಗಿರುವ ಜೋಗಿಂದರ್ ದೊಡ್ಡ ಮೈಕಟ್ಟು , ಅದಕ್ಕೊಪ್ಪುವ ದಪ್ಪ ಮೀಸೆ ಇಟ್ಟುಕೊಂಡು ಕಳ್ಳ ಕಾಕರು ದೂರದಲ್ಲೇ ನೋಡಿ ನಡುಗಬೇಕು, ಹಾಗಾಗಿದ್ದಾರೆ.
ಅವರ ಇತ್ತೀಚಿನ ಚಿತ್ರಗಳನ್ನು Sports Illustrated India ಪ್ರಕಟಿಸಿದೆ. ಇಲ್ಲಿ ನೋಡಿ.
Sports Illustrated India finds out what @JogiSharma --the man who won India the first ICC World T20 is upto these days.
Posted by Sports Illustrated India on Tuesday, 8 March 2016