ತಲೆ ನೋವು...! ಕಾರಣಗಳು ಮತ್ತು ಚಿಕಿತ್ಸೆ
ಭಾಗ-5
ಕೆನ್ನೆದವಡೆಯ ತೊಂದರೆಗಳು
(Temporomandibular Disorders)
ದೇಹದ ಹಲವಾರು ರೋಗ ಪ್ರಕ್ರಿಯೆಗಳು ಅಂತಿಮವಾಗಿ ಈ ರೋಗ ಲಕ್ಷಣಗಳೊಂದಿಗೆ ವ್ಯಕ್ತಗೊಳ್ಳಬಹುದು. ಈ ತೊಂದರೆಯ ಸಾಮಾನ್ಯ ಲಕ್ಷಣಗಳೆಂದರೆ, ಕೆನ್ನೆಯ ಭಾಗದಲ್ಲಿ ತಲೆನೋವು, ಕಿವಿನೋವು, ಮುಖನೋವು, ಬಾಯಿ ಅಗಲವಾಗಿ ತೆರೆಯಲು ಸಾಧ್ಯವಾಗದಿರುವುದು ಅಥವಾ ದವಡೆಗಳ ಸಂದಿನಲ್ಲಿ ಸದ್ದು. ಹೆಚ್ಚಿನ ಈ ತೊಂದರೆಗಳು ಆಕಾರಣವಾಗಿ ಹಠಾತ್ ತಲೆಯೆತ್ತಿರುತ್ತವಾದರೂ, ನೂರಕ್ಕೆ 40 ಮಂದಿಯಲ್ಲಿ ಆಘಾತದಂತಹ ಪೂರ್ವ ಕಾರಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ತೊಂದರೆಯಲ್ಲಿ ಭಾವನಾತ್ಮಕ-ಮಾನಸಿಕ ಅಂಶಗಳ ಪಾತ್ರವನ್ನೂ ಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ.
ನೇರವಾಗಿ ಕೆನ್ನೆಯ ದವಡೆ ಸಂದಿಯಲ್ಲಿ ಊತ ಮತ್ತು ದವಡೆ ಸಂದಿ ಚಲಿಸಿದಾಗ ನೋವು ಕಂಡುಬರುವುದು ಅಪರೂಪ ಮತ್ತ್ತು ಇಂತಹ ಸ್ಥಿತಿಯನ್ನು ಕ್ಷ-ಕಿರಣ ಬಿಂಬ ತಪಾಸಣೆಯ ವೇಳೆ ಖಂಡಿತವಾಗಿ ಗುರುತಿಸುವುದು ಸಾಧ್ಯ. ಆದರೆ ನೂರಕ್ಕೆ 60-70 ಮಂದಿಯಲ್ಲಿ ಈ ನೋವಿನ ಜೊತೆ ಇದಕ್ಕಿಂತ ಹೆಚ್ಚಾಗಿ ಸ್ನಾಯುಗಳ ನೋವಿರುತ್ತದೆ. ಜಗಿಯುವ ಸ್ನಾಯುಗಳನ್ನು ಮುಟ್ಟಿದರೆ ನೋವು ಇರುತ್ತದೆ.
ತಲೆಬುರುಡೆಯೊಳಗೆ ರಕ್ತದೊತ್ತಡ ಏರು ನಿರಪಾಯಕಾರಿ ಸ್ಥಿತಿ
(Pseudotumor Cerebri)
ಆಗಾಗ ವೈವಿಧ್ಯಮಯ ತೀವ್ರತೆಯ ತಲೆನೋವು ಕಾಣಿಸಿಕೊಳ್ಳುವ ಸ್ಥಿತಿ ಇದು. ಹೆಚ್ಚಾಗಿ ಅವರ ನರ ಸಂಬಂಧಿ ತಪಾಸಣೆಗಳ ವೇಳೆ ಗಮನಾರ್ಹ ದೋಷಗಳೇನೂ ಪತ್ತೆ ಆಗಿರುವುದಿಲ್ಲ. ರೋಗಿಗೆ ಕಣ್ಣುಗುಡ್ಡೆಗಳು ಊದಿಕೊಂಡಿರುತ್ತವಾದರೂ (ಜ್ಝ್ಝಿಛಿಛಿಞ), ಸಿ.ಟಿ. ಸ್ಕ್ಯಾನ್ ವೇಳೆ ಗಡ್ಡಿಯಾಗಲಿ, ತಲೆಬುರುಡೆಯಲ್ಲಿ ದ್ರವ ತುಂಬಿರುವ ಸ್ಥಿತಿಯಾಗಲಿ, ಕಂಡುಬರುವುದಿಲ್ಲ. ಬೆನ್ನುಹುರಿಯ ದ್ರವದ ಒತ್ತಡ 200ಞಞ ಏ2ಗಿಂತ ಹೆಚ್ಚಿರುತ್ತದಾದರೂ, ಅದರಲ್ಲಿ ಅಸಹಜತೆಗಳೇನಾದರೂ ಇರುವುದಿಲ್ಲ.
ಇಂತಹ ರೋಗಿಗಳಲ್ಲಿ ಈ ತೊಂದರೆಯ, ಜೊತೆಗೆ ಅನಿಯಮಿತ ಋತುಸ್ರಾವ ಅಥವಾ ಬೇರೆ ಎಂಡೊಕ್ರೈನ್ ತೊಂದರೆಗಳು, ಕಳೆದ 6 ತಿಂಗಳಿನಲ್ಲಿ ಶೇ.10ಕಿಂತ ಹೆಚ್ಚು ತೂಕ ಏರಿರುವುದು, ಹಲವಾರು ತಿಂಗಳುಗಳ ಕಾಲ ದೃಷ್ಟಿಯ ವ್ಯಾಪ್ತಿ ಸಂಕುಚನಗೊಂಡಿರುವುದು ಮೊದಲಾದ ಲಕ್ಷಣಗಳು ಕಂಡುಬರಬಹುದು.
ಈ ತೊಂದರೆ ಇರುವವರಿಗೆ ಅಸೆಟಾಸೀಲಾಮೈಡ್ ಮತ್ತು ಪ್ಯುರೊಸೆಮೈಡ್‌ನಂತಹ ಔಷಧಿಗಳನ್ನು ಬಳಸಿ ಬೆನ್ನುಹುರಿಯದ ದ್ರವ ಉತ್ಪಾದನೆಯ ಪ್ರಮಾಣವನ್ನು ತಗ್ಗಿಸಬೇಕಾಗುತ್ತದೆ.