ಲಂಚಕೋರರ-ಭ್ರಷ್ಟಾಚಾರಿಗಳ ಫೈಲ್ ಫಯರ್‌ಪ್ರೂಫ್ ಲಾಕರ್‌ನ
ಭ್ರಷ್ಟಾಚಾರಿ ನೇತಾರರು ಮತ್ತು ಅಕಾರಿಗಳು ತಮ್ಮ ಮೇಲಿನ ಆರೋಪಗಳನ್ನು ಹೋಗಲಾಡಿಸಲು ಸಾಕ್ಷಿಗಳನ್ನು ನಾಶಗೊಳಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಭ್ರಷ್ಟಾಚಾರ ನಿರೋಧಕ ಬ್ಯೂರೋ (ಎಸಿಬಿ) ಇದೀಗ ಹೊಸ ಹೆಜ್ಜೆ ಇರಿಸಿದೆ. ತನ್ನ ಪ್ರತೀ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಫಯರ್‌ಪ್ರೂಫ್‌ನ ಲಾಕರ್ ತಂದಿದೆ. ಈ ಲಾಕರ್‌ಗಳ ಮೇಲೆ ಸಿಸಿಟಿವಿ ಕೂಡಾ ಇರಿಸಲಾಗಿದೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ದೀಕ್ಷಿತ್ ಅವರು ಭ್ರಷ್ಟಾಚಾರ ನಿರೋಧಕ ಬ್ಯೂರೋದ ಮಹಾ ನಿರ್ದೇಶಕರಾಗಿದ್ದವರು. ಆವಾಗ ಅನೇಕ ಲಂಚಕೋರರ - ಭ್ರಷ್ಟಾಚಾರಿಗಳ ಮೇಲೆ ಅಂಕುಶ ಹಾಕಿದ್ದರು. ಬಾಣಗಂಗಾ ಪ್ರಕಲ್ಪ ಆಗಲಿ, ಮಹಾರಾಷ್ಟ್ರ ಸದನದ ಹಗರಣಗಳಾಗಲಿ ಇಲ್ಲಿ ದೊಡ್ಡ ದೊಡ್ಡ ನೇತಾರರು ಆರೋಪಿಗಳಾಗಿದ್ದಾರೆ. ಕಾಂಗ್ರೆಸ್- ಎನ್.ಸಿ.ಪಿ. ಸರಕಾರದ ಸಮಯ ಮಂತ್ರಾಲಯಕ್ಕೆ ಬೆಂಕಿ ಬಿದ್ದಿತ್ತು. ಹಾಗೂ ಅನೇಕ ಮಹತ್ವಪೂರ್ಣ ದಾಖಲೆಗಳು ಸ್ವಾಹಾ ಆಗಿತ್ತು. ಈ ಎಲ್ಲಾ ಸಂಗತಿಗಳನ್ನು ಮುಂದಿಟ್ಟು ಎಸಿಬಿ ಅಕಾರಿಗಳು ಈ ಹೆಜ್ಜೆ ಇರಿಸಿದ್ದಾರೆ.
ಮನಪಾ ಎಚ್-ಪಶ್ಚಿಮ ವಾರ್ಡ್‌ನಿಂದ ಸಾವಿರಾರು ಫೈಲುಗಳು ಕಾಣೆ!
ನೀರು ಸರಬರಾಜಿಗೆ ಸಂಬಂಸಿ ಸುಮಾರು ಏಳು ಸಾವಿರ ಫೈಲುಗಳು ಮುಂಬೈಯ ಬಾಂದ್ರಾದಿಂದ ಸಾಂತಾಕ್ರೂಜ್ ತನಕದ ಎಚ್-ಪಶ್ಚಿಮ ವಾರ್ಡ್‌ನಿಂದ ಇತ್ತೀಚೆಗೆ ಕಾಣೆಯಾದ ವರದಿಯೊಂದು ಬಂದಿದೆ. ಮಾಹಿತಿ ಅಕಾರ ಕಾನೂನಿನಡಿ ಈ ಸಂಗತಿ ತಿಳಿದುಬಂದಿದೆ. ಇದೇ ರೀತಿ ಅನ್ಯ ಆರ್‌ಟಿಐ ಯಿಂದ ತಿಳಿದು ಬಂದ ಮಾಹಿತಿಯಂತೆ ಮೇ 2013 ರಿಂದ ಶಹರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಸಿದ 6 ಸಾವಿರ ಫೈಲ್‌ಗಳು ಕಾಣೆಯಾಗಿತ್ತು.
ವರ್ತಮಾನ ಘಟನೆಯಲ್ಲಿ ಬಾಂದ್ರಾದ ಸೈಂಟ್ ಜಾನ್ ಬಾಪ್ಟಿಸ್ಟ್ ರೋಡ್‌ನಲ್ಲಿ ವಾಸಿಸುವ ವಿನಯ ರಾಣೆ ಅವರು ತನಗೆ ಮತ್ತು ತನ್ನ ನೆರೆಮನೆಯವರಿಗೆ ಎಷ್ಟು ಹೆಚ್ಚುವರಿ ನೀರು ಪೂರೈಕೆಯಾಗುತ್ತದೆ ಎಂದು ತಿಳಿಯಲು ಇಚ್ಛಿಸಿದ್ದರು. ರಾಣೆ ಅವರು ತನ್ನ ಕ್ಷೇತ್ರಕ್ಕೆ ಸಂಬಂಸಿದ ಫೈಲುಗಳ ವಿವರಣೆ ಕೇಳಿದ್ದರು. ಆಗ ಸೂಚನಾ ಅಕಾರಿ ಕೇವಲ 28 ಫೈಲುಗಳು ಕಾಣೆಯಾಗಿವೆೆ ಅಂದರು. ಅವರಿಗೆ ಬೇರೆ ಬೇರೆ ರೀತಿಯ ಮಾಹಿತಿ ಸಿಗುತ್ತಲೇ ಅಪೀಲು ಫೈಲ್ ಮಾಡಿದರು. ಯಾವುದೇ ಸಂತೋಷಕರ ಉತ್ತರ ಬಾರದಿದ್ದಾಗ ಅವರು ಮಾಹಿತಿ ಹಕ್ಕು ಆಯೋಗದ ಮೊರೆ ಹೋದರು. ಸ್ಥಳೀಯ ನಿವಾಸಿ ವಿನಯ ರಾಣೆಯವರು ತಮ್ಮ ಕ್ಷೇತ್ರದ ನಗರ ಸೇವಕರ ಬಳಿ ನಗರ ಸೇವಕ ನಿಯಿಂದ ನೀರಿನ ಪೈಪ್‌ಲೈನ್ ತಾಗಿಸಲಾಗಿದೆ ಅಂದಿದ್ದೀರಿ. ಆದರೆ ಹೆಚ್ಚುವರಿ ನೀರು ಬರುತ್ತಿಲ್ಲ. ನೀರಿನ ಸ್ಪೀಡ್‌ನಲ್ಲೂ ಏರಿಕೆ ಆಗಿಲ್ಲವಲ್ಲ ಎಂದು ಕೇಳಿದಾಗ, ಅಕಾರಿಗಳು ಫೈಲ್ ಕಾಣೆಯಾಗಿದೆ ಅಂದಿದ್ದಾರೆ ಎಂಬ ಉತ್ತರ ನೀಡಿದರು. ಈ ವಾರ್ಡ್‌ನಲ್ಲಿ ಬಹಳಷ್ಟು ಜೋಪಡಿಗಳಿವೆ. ಈ ಜೋಪಡಿ ಪಟ್ಟಿಗಳಲ್ಲಿ ನೀರಿನ ಕಳ್ಳತನಕ್ಕಾಗಿ ನಕಲಿ ರೇಶನ್ ಕಾರ್ಡ್ ಮಾಡಲಾಗಿ ನೀರಿನ ಕನೆಕ್ಷನ್ ಪಡೆಯಲಾಗುತ್ತದೆ.
ಕ್ಲಸ್ಟರ್ ಮಾದರಿಯಲ್ಲಿ ಕಾಮಾಟಿಪುರಕ್ಕೆ ಕಾಯಕಲ್ಪ: ಮುಂಬೈ ಮಹಾನಗರದ ಪ್ರಖ್ಯಾತ ರೆಡ್‌ಲೈಟ್ ಏರಿಯಾ ದಕ್ಷಿಣ ಮುಂಬೈಯ ಕಾಮಾಟಿಪುರ ಶೀಘ್ರವೇ ನವೀಕರಣಗೊಳ್ಳುವ ಸೂಚನೆ ಬಂದಿದೆ. ಇಲ್ಲಿರುವುದು ಹೆಚ್ಚಾಗಿ ಹಳೆಕಾಲದ ಕಟ್ಟಡಗಳು. ಕಾಮಾಟಿಪುರ 39 ಎಕರೆ ಜಮೀನಿನಲ್ಲಿ ವ್ಯಾಪಿಸಿದ್ದು ಪುನರ್ವಿಕಾಸದ ಕೆಲಸಗಳಿಗೆ ಟೆಂಡರ್ ಕರೆಯಲಾಗುವುದು. ಈ ಪುನರ್ವಿಕಾಸ ಯೋಜನೆಯನ್ನು ಕ್ಲಸ್ಟರ್ ಮಾಡೆಲ್ ಮೂಲಕ ನಿರ್ಮಿಸಲಾಗುವುದು. ಕಾಮಾಟಿಪುರದ ಏರಿಯಾವನ್ನು 1795ರಲ್ಲಿ ಅಭಿವೃದ್ಧಿಪಡಿಸಲು ಬ್ರಿಟಿಷರು ನಿರ್ಧರಿಸಿದ್ದರು. ಅಂದಿನಿಂದಲೇ ಈ ಕ್ಷೇತ್ರದಲ್ಲಿ ತವಾಯ್ಗಳು, ನಂತರ ವೇಶ್ಯೆಯರು ತಮ್ಮ ದಂಧೆ ಆರಂಭಿಸತೊಡಗಿದ್ದರು. ಈ ಕಾರಣ ಇಲ್ಲಿನ ಪರಿಸರದಲ್ಲಿ ಗೃಹಸ್ಥರು ಮನೆಗಳನ್ನು ಖರೀದಿಸಲು ಹಿಂಜರಿಯುತ್ತಾ ಬಂದರು. ಆದರೆ ಈಗ ಇಲ್ಲಿನ ಜಮೀನಿನ ಬೆಲೆ ಗಗನಕ್ಕೇರುತ್ತಿದ್ದು ಆಡಳಿತದ ಗಮನಕ್ಕೂ ಬಂದಿದೆ. ದಕ್ಷಿಣ ಮುಂಬೈಯಂತಹ ಪ್ರಮುಖ ಕ್ಷೇತ್ರದಲ್ಲಿ 39 ಎಕರೆಯ ಜಮೀನು ಅಂದರೆ ಅದರ ಮಹತ್ವವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಏರಿಯಾದಲ್ಲಿ ಸುಮಾರು ಏಳುನೂರರಷ್ಟು (700) ಕಟ್ಟಡಗಳಿದ್ದು ಇಲ್ಲಿ ಐದು ಸಾವಿರಕ್ಕೂ ಅಕ ಜನರು ವಾಸಿಸುತ್ತಿದ್ದಾರೆ. ಈ ಏರಿಯಾದ ನವೀಕರಣಕ್ಕಾಗಿ ಸ್ಥಳೀಯ ಜನರು ಮತ್ತು ಕಾಮಾಠಿಪುರ ಜಮೀನು ಮಾಲಕರ ಸಂಘಟನೆ (ಕೆ.ಎಲ್.ಎ) ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ.
ಕೆ.ಎಲ್.ಎ. ಮಹಾಕಾರ್ಯದರ್ಶಿ ರಾಜೇಂದ್ರ ಸತ್ಲಾ ತಿಳಿಸಿದಂತೆ ಸ್ಥಳೀಯ ಜನರು 525 ಚದರ ಅಡಿ ಮನೆ ಮತ್ತು ಈ ಕ್ಷೇತ್ರದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬೇಡಿಕೆ ಇರಿಸಿದ್ದಾರೆ. ಇದಕ್ಕಾಗಿ ಕ್ಲಸ್ಟರ್ ಡೆವಲಪ್‌ಮೆಂಟ್ ಏಕಮಾತ್ರ ಪರಿಹಾರವಾಗಿದೆ. ಯೋಜನಾ ಪ್ರಬಂಧಕ ಶೈಲೇಶ್ ಮಹಿಮತುರ್ ಅವರು ಈ ಬಗ್ಗೆ ಒಂದು ರಿಪೋರ್ಟ್ ಕೂಡಾ ತಯಾರಿಸಿದ್ದನ್ನು ಹೇಳಿದ್ದಾರೆ. ಶೀಘ್ರವೇ ಟೆಂಡರ್ ಕರೆದು ಉತ್ತಮರಿಗೆ ಇದನ್ನು ನೀಡಲಾ ಗುವುದು. ಕ್ಲಸ್ಟರ್ ಡೆವಲಪ್‌ಮೆಂಟ್ ಯೋಜನೆಯಂತೆ ಚಿಕ್ಕಚಿಕ್ಕ ಕಟ್ಟಡಗಳನ್ನು ದೊಡ್ಡ ದೊಡ್ಡ ಕಟ್ಟಡಗಳನ್ನಾಗಿ ಪರಿವರ್ತಿಸಲಾಗುವುದು.
ಬಾಲಿವುಡ್ ಜನರಿಗೆ ಈಗ ಕನ್ಹಯ್ಯ ಕತೆಯತ್ತ ಆಕರ್ಷಣೆ: ಯಾವಾಗಿನಿಂದ ದೇಶಭಕ್ತಿ ಅತ್ತು ದೇಶದ್ರೋಹದ ವಿವಾದದಲ್ಲಿ ಕನ್ಹಯ್ಯೋ ಕುಮಾರ್ (ಜೆಎನ್‌ಯು. ವಿದ್ಯಾರ್ಥಿ ನಾಯಕ) ಸಿಕ್ಕಿ ಬಿದ್ದರೋ ಬಾಲಿವುಡ್‌ನಲ್ಲಿ ಈ ಕತೆಯನ್ನು ಯಾವ ರೀತಿ ಫಿಲ್ಮ್ ಮಾಡಬಹುದು ಎಂದು ಕೆಲವರು ಲೆಕ್ಕ ಹಾಕಲು ಶುರುಮಾಡಿದ್ದಾರೆ. ಕೆಲವು ನಿರ್ಮಾಪಕರು ಫಿಲ್ಮ್‌ನ ಟೈಟಲ್ಸ್ ಬುಕ್ ಮಾಡಲೂ ಮುಂದಾಗಿದ್ದಾರೆ. ವೆಸ್ಟರ್ನ್ ಇಂಡಿಯಾ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್‌ನ ಮಹಾಕಾರ್ಯದರ್ಶಿ ಪ್ರಭಾತ್ ಪಾಂಡೆ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಇದೇನು ಹೊಸ ದೃಶ್ಯವಲ್ಲ. ಬಹಳ ಹಳೆಯ ಟ್ರೆಂಡ್. ನಾನಾವಟಿ ಮರ್ಡರ್ ಕೇಸ್ ಆಗಲಿ, ಸೀರಿಯಲ್ ಬಾಂಬ್ ಸೊಓಂೀಟಕಾಂಡ ಆಗಲಿ, ಮುಂಬೈಗೆ ಭಯೋತ್ಪಾದಕರ ದಾಳಿ ಆಗಿರಲಿ, ಯಾವುದೇ ಆಕರ್ಷಕ ಘಟನೆ ಕಂಡಾಗ ಬಾಲಿವುಡ್ ಫಿಲ್ಮ್ ಮಾಡುವತ್ತ ಗಮನ ಹರಿಸುತ್ತಾ ಬಂದಿದೆ. ಕನ್ಹಯ್ಯಾ ಹೆಸರು ಇಂದು ಮನೆ ಮನೆಗೂ ಗೊತ್ತಾಗಿದೆ. ಹೀಗಾಗಿ ಬಾಲಿವುಡ್‌ಗಾಗಿ ಹಾಟ್‌ಕೇಕ್‌ಗಿಂತ ಇದು ಕಡಿಮೆಯೇನಿಲ್ಲ. ಅನೇಕ ರೈಟರ್-ಡೈರೆಕ್ಟರ್ ಈ ದಿನಗಳಲ್ಲಿ ಸಂಶೋಧನೆ ಮಾಡುವುದಕ್ಕೆ ಜೆಎನ್‌ಯು ಓಡಾಡುತ್ತಿದ್ದಾರೆ.
ಇದಕ್ಕೆ ಇನ್ನೊಂದು ಕಾರಣ ಅಂದರೆ ಇತ್ತೀಚೆಗೆ ಫಿಲ್ಮ್‌ಕಾರ ಹಂಸಲ್ ಮೆಹ್ತಾ ಜೆಎನ್‌ಯು ಕ್ಯಾಂಪಸ್‌ನಲ್ಲಿದ್ದುದು. ಅಲ್ಲಿ ಆಡಿಟೋರಿಯಂನಲ್ಲಿ ಅವರು ವಿವಾದಗಳು ಸುತ್ತುವರಿದ ಹೊಸ ಫಿಲ್ಮ್ ಅಲೀಗಢ್‌ನ ಸ್ಪೆಶಲ್ ಸ್ಕ್ರೀನಿಂಗ್ ಇರಿಸಿದ್ದರು. ಅವರು ಕಲಾ ಮತ್ತು ಸೌಂದರ್ಯ ಶಾಸದ ವಿದ್ಯಾರ್ಥಿಗಳಿಂದ ವಿಚಾರಗಳ ಆದಾನ - ಪ್ರದಾನ ಕೂಡಾ ಮಾಡಿದ್ದರು.ಇತ್ತೀಚಿನ ಘಟನೆಗಳ ನಂತರ ಮಹೇಶ್ ಭಟ್ ಕೂಡಾ ಜೆಎನ್‌ಯುನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಪ್ರಸಾದ್‌ರ ಹತ್ಯೆಯ ನಡುವೆಯೇ ಬಂದ್ ಮಾಡಲಾಗಿದ್ದ ಫಿಲ್ಮ್ ಚಂದೂನ ಶೂಟಿಂಗ್ ಮತ್ತೆ ಆರಂಭಿಸುವ ಘೋಷಣೆ ಮಾಡಿದ್ದಾರೆ.
ಪ್ರವಾಸಿ ಪಕ್ಷಿಗಳ ಸಮೀಕ್ಷೆ ಆರಂಭ: ಫೆಬ್ರವರಿ-ಮಾರ್ಚ್ ತಿಂಗಳು ಆರಂಭವಾದಂತೆ ಮುಂಬೈ ಸುತ್ತಮುತ್ತ ದೇಶವಿದೇಶಗಳ ಪ್ರವಾಸಿ ಪಕ್ಷಿಗಳು ಕಾಲಿಡಲು ಶುರುವಾಗುತ್ತದೆ. ಇದಕ್ಕೆ ಉತ್ತರಭಾರತದಲ್ಲಿ ಕಂಡು ಬರುವ ಚಳಿಗಾಲದ ಹಿಮಾವೃತ ದೃಶ್ಯವೂ ಕಾರಣ. ಹೀಗಾಗಿ ಹಿಮಾಲಯದ ಪಕ್ಷಿಗಳೂ ಮುಂಬೈ ಶಹರಕ್ಕೆ ಬರಲಾರಂಭಿಸುತ್ತವೆ. ಪಕ್ಷಿ ಪ್ರೇಮಿಗಳು ಈ ದಿನಗಳಲ್ಲಿ ಅನೇಕ ಜಾತಿಗಳ ಪಕ್ಷಿಗಳ ಉಪಸ್ಥಿತಿಯನ್ನು ದಾಖಲಿಸಲು ಆರಂಭಿಸಿದ್ದಾರೆ. ಮುಂಬೈಯಲ್ಲಿ ಈಗಾಗಲೇ ಬರ್ಡ್‌ರೇಸ್ ಹೆಸರಿನ ಒಂದು ಕಾರ್ಯಕ್ರಮ ಆರಂಭವಾಗಿದೆ. ಇದರಲ್ಲಿ 250 ಕ್ಕೂ ಅಕ ಪಕ್ಷಿಪ್ರೇಮಿಗಳು ಶಹರಕ್ಕೆ ಬರುವ ಪ್ರವಾಸಿ ಪಕ್ಷಿಗಳ ಸಮೀಕ್ಷೆ ಆರಂಭಿಸಿದ್ದಾರೆ. ಉರಣ್, ಕರ್ನಾಲಾ, ಾಂಸದ, ಸಂಜಯ ಗಾಂ ರಾಷ್ಟ್ರೀಯ ಉದ್ಯಾನ..... ಮೊದಲಾದ ಸ್ಥಳಗಳಲ್ಲಿ ಬರುವ ಪ್ರವಾಸಿ ಪಕ್ಷಿಗಳು ತಮ್ಮದೇ ಆದ ವಾಸಸ್ಥಳವನ್ನು ಮಾಡಿಕೊಳ್ಳುತ್ತಿವೆ. ಕರ್ನಾಲಾದಲ್ಲಿ ಅಲ್ಟ್ರಾ ಮರೀನ್ ್ಲೆಕ್ಯಾಚರ್ ಜಾತಿಯ ಪಕ್ಷಿಗಳು ಕಂಡು ಬಂದಿವೆ ಯಂತೆ. ಈ ಪಕ್ಷಿ ಹಿಮಾಲಯದ ಅರಣ್ಯಗಳಲ್ಲಿರುತ್ತವೆ. ಬರ್ಡ್‌ರೇಸ್ ಕಾರ್ಯಕ್ರಮದ ಸಮನ್ವಯಕರ ಅನುಸಾರ 2005 ರಿಂದ 2015 ರ ನಡುವೆ ಕಾಂಕ್ರಿಟೀಕರಣದ ಕಾರಣ ಮುಂಬೈ ಪರಿಸರದಲ್ಲಿ ಶೇ.20 ಪ್ರವಾಸಿ ಪಕ್ಷಿಗಳ ಸಂಖ್ಯೆ ಇಳಿಕೆಯಾಗಿದೆಯಂತೆ.
ಖಾಸಗಿ ಸುರಕ್ಷಾ ಕಂಪೆನಿಯ ಕೈಯಲ್ಲಿ ಥಾಣೆ ಮನಪಾ ಆಯುಕ್ತರ ಸುರಕ್ಷೆ: ಮುಂಬೈ ಸಮೀಪದ ಥಾಣೆಯ ಮಹಾನಗರಪಾಲಿಕೆಯ ಆಯುಕ್ತರಿಗೆ ಪೊಲೀಸರು ಮತ್ತು ಮನಪಾ ಸುರಕ್ಷಾ ಗಾರ್ಡ್‌ಗಳ ಮೇಲೆ ಭರವಸೆ ಹೋಗಿ ಬಿಟ್ಟಿದೆಯಂತೆ. ಹಾಗಾಗಿ ಆಯುಕ್ತ ಸಂಜೀವ ಜೈಸ್‌ವಾಲಾ ಅವರ ಸುರಕ್ಷೆಯನ್ನು ಮನಪಾ ಆಡಳಿತವು ಖಾಸಗಿ ಸುರಕ್ಷಾ ಏಜನ್ಸಿಗೆ ವಹಿಸಿದ್ದು, ಐವರು ಖಾಸಗಿ ಸುರಕ್ಷಾ ರಕ್ಷಕರನ್ನು ನಿಯುಕ್ತಿಗೊಳಿಸಲಾಗಿದೆ. ಮನಪಾ ಆಡಳಿತದ ವತಿಯಿಂದ ಖಾಸಗಿ ಸುರಕ್ಷಾ ರಕ್ಷಕರಿಗೆ 11 ತಿಂಗಳ ಅವಗಾಗಿ 14 ಲಕ್ಷ 63 ಸಾವಿರ ರೂ. ಖರ್ಚು ಮಾಡಲಿದೆ.
ಥಾಣೆ ಮನಪಾದ ಆರ್ಥಿಕ ಸ್ಥಿತಿ ಕಳೆದ ವರ್ಷಕ್ಕಿಂತ ಹೆಚ್ಚು ಕಷ್ಟಕರವಿದೆ. ಹೀಗಿರುವಾಗ ಆಯುಕ್ತರಿಗಾಗಿ ಖಾಸಗಿ ಸುರಕ್ಷಾ ರಕ್ಷಕರ ನಿಯುಕ್ತಿಯ ಅಗತ್ಯವಿದೆಯೋ? ಇದು ಥಾಣೆಯ ನಾಗರಿಕರ ಚರ್ಚೆಯಾಗುತ್ತಿದೆ. ಥಾಣೆ ಮನಪಾ ವ್ಯಾಪ್ತಿಯಲ್ಲಿ ಈಗ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಮನಪಾ ಆಯುಕ್ತರು ಈ ಸಂದರ್ಭದಲ್ಲಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಹಲ್ಲೆ ನಡೆಯದಂತೆ ಮುಂಜಾಗೃತಾ ಕ್ರಮಕ್ಕಾಗಿ ಈ ಖಾಸಗಿ ಸುರಕ್ಷಕರನ್ನು ಇರಿಸಲಾಗಿದೆ.
ಶರಾಬುಕೋರ ಚಾಲಕರನ್ನು ಪತ್ತೆ ಹಚ್ಚುವ ಮೂರನೆ ಒಂದರಷ್ಟು ಮೆಷಿನ್‌ಗಳು ಬಂದ್: ಶರಾಬು ಕುಡಿದು ವಾಹನ ಚಲಾಯಿಸುವವರ ವಿರುದ್ಧ ಮುಂಬೈ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಆದರೆ ಶರಾಬು ಕುಡಿದ ವಾಹನ ಚಾಲಕರನ್ನು ಪತ್ತೆ ಹಚ್ಚುವ ಮೆಷಿನ್‌ಗಳಲ್ಲಿ ಮೂರನೆ ಒಂದರಷ್ಟು ಮೆಷಿನ್‌ಗಳು ಬಂದ್ ಬಿದ್ದಿದೆ. ಡ್ರಂಕ್ ಆ್ಯಂಡ್ ಡ್ರೆವ್ ಸಂಬಂಸಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಜನಹಿತ ಅರ್ಜಿಯ ವಿಚಾರಣೆ ಸಮಯ ನ್ಯಾಯಾೀಶ ಅಭಯ್ ಓಕ್ ಮತ್ತು ಸಿವಿ ಭಡಂಗ್ ಅವರ ಪೀಠವು ಹಿಂದಿನ ವಿಚಾರಣೆಯಲ್ಲಿ ಸರಕಾರಕ್ಕೆ ಈ ಬಗ್ಗೆ ಉತ್ತರ ನೀಡಲು ಆದೇಶಿಸಿತ್ತು. ಈ ಬಗ್ಗೆ ಸರಕಾರವು ತನ್ನ ಉತ್ತರದಲ್ಲಿ ಮಹಾರಾಷ್ಟ್ರದಾದ್ಯಂತ ಟ್ರಾಫಿಕ್ ಪೊಲೀಸರ ಬಳಿ ಒಟ್ಟು 385 ಮೆಷಿನ್‌ಗಳಿವೆ. ಇದರಲ್ಲಿ 78 ಮುಂಬೈ ಪೊಲೀಸರ ಬಳಿ ಇವೆ. ಇದರಲ್ಲಿ ೆಬ್ರವರಿ ತನಕ 54 ಕೆಲಸ ಮಾಡುತ್ತಿದ್ದರೆ ಉಳಿದ 24 ಹಾಳಾಗಿವೆ.
ಇದೀಗ ಯಾವ ಪೊಲೀಸ್ ಠಾಣೆಗಳಲ್ಲಿ ಎಷ್ಟು ಮೆಷಿನ್‌ಗಳ ಅಗತ್ಯವಿದೆ? ಇದರ ಒಂದು ವರದಿ ನ್ಯಾಯಾಲಯಕ್ಕೆ ಸಲ್ಲಿಸಲು ಸರಕಾರಕ್ಕೆ ಕೋರ್ಟ್ ಆದೇಶಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 385 ಮೆಷಿನ್‌ಗಳಿದ್ದು 294 ಮೆಷಿನ್‌ಗಳು ಕೆಲಸ ಮಾಡುತ್ತಿವೆ. 91 ಮೆಷಿನ್‌ಗಳು ಹಾಳಾಗಿವೆ.
ಮುಂಬೈ ಪೊಲೀಸರ ಎರಡು ಟ್ವಿಟರ್: ಮುಂಬೈ ಪೊಲೀಸರು ಈ ದಿನಗಳಲ್ಲಿ ತಮ್ಮ ಎರಡು ಟ್ವಿಟರ್‌ನ ಬಳಕೆಯನ್ನು ಕೇವಲ ಜನರ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲ, ಜನರನ್ನು ಜಾಗೃತಗೊಳಿಸುವುದಕ್ಕೂ ಉಪಯೋಗಿಸುತ್ತಿದ್ದಾರೆ. ಮುಂಬೈ ಪೊಲೀಸರು ಎರಡು ತಿಂಗಳ ಹಿಂದೆ ತಮ್ಮ ನೂತನ ಪ್ರಶಾಸಕೀಯ ಕಟ್ಟಡದಲ್ಲಿ ಕೆಲಸ ಕಾರ್ಯ ಆರಂಭಿಸಿದ್ದಾರೆ. ಇವುಗಳಲ್ಲಿ ಒಂದು ಟ್ವಿಟರ್ ಅಕೌಂಟ್ ಮುಂಬೈ ಪೊಲೀಸ್ ಕಮಿಷನರ್‌ರ ನೇತೃತ್ವದಲ್ಲಿ ನಡೆದರೆ, ಇನ್ನೊಂದು ಅಕೌಂಟ್ ಕ್ರೆಂ ಬ್ರ್ಯಾಂಚ್‌ನ ಡಿಸಿಪಿ ಮಾರ್ಗದರ್ಶನದಲ್ಲಿ ಏಳು ಪೊಲೀಸ್ ಕಾನ್ಸ್ಟೇಬಲ್‌ಗಳ ಟೀಮ್ ಹ್ಯಾಂಡಲ್ ಮಾಡುತ್ತಿದೆ.
ಶಿವಸೇನಾ ನಾಯಕ್‌ನಿಂದ
ಉಚಿತ ವಡಾಪಾವ್ ಸಿಗದಿದ್ದಕ್ಕೆ ಗಲಾಟೆ; ಮುಂಬೈಯ ವಿಲೆಪಾರ್ಲೆ ಪಶ್ಚಿಮದಲ್ಲಿ ಇತ್ತೀಚೆಗೆ ಶಿವಸೇನೆಯ ನಾಯಕರೊಬ್ಬರು ವಡಾಪಾವ್ ಅಂಗಡಿಯವನಿಗೆ ಲಾಟಿಯಿಂದ ಹೊಡೆದರು. ಈ ವಡಾಪಾವ್ ಅಂಗಡಿಯಾತ ಗೆವೆರಿಯಾ ಎಂಬವ. ಡಿ.ಜೆ. ರೋಡ್‌ನಲ್ಲಿ ಅಂಗಡಿ ಇದೆ. ಶಿವಸೇನಾ ನಾಯಕ ಸುನಿಲ್ ಮಹಾಡಿಕ್ ಎಂಬಾತ ನೂರು ವಡಾಪಾವ್ ಉಚಿತವಾಗಿ ನೀಡುವಂತೆ ಈ ಅಂಗಡಿಗೆ ಜನ ಕಳುಹಿಸಿದ. ಅಷ್ಟೊಂದು ವಡಾಪಾವ್ ತನ್ನಲ್ಲಿಲ್ಲ ಎಂದು ವಾಪಸು ಕಳುಹಿಸಿದ ಅಂಗಡಿಯಾತ. ವಡಾಪಾವ್ ಪುಕ್ಕಟೆ ಸಿಗಲಿಲ್ಲ ಎಂದು ಬೇಸರಗೊಂಡ ಮಹಾಡಿಕ್ ಅಂಗಡಿಗೆ ತಾನೇ ಸ್ವತಹ ಬಂದು ಲಾಟಿಯಿಂದ ಹಲ್ಲೆಗೈದ. ಈ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಕಾಣಿಸಿ ವಾಟ್ಸ್‌ಅಪ್‌ನಲ್ಲಿ ಹರಡಿತು. ಜುಹು ಪೊಲೀಸರು ಎ್ಐಆರ್ ದಾಖಲಿಸಿದರು. ಸ್ಥಳೀಯ ಚ್ಯಾನೆಲ್‌ನವರೂ ಇದನ್ನು ಪ್ರಸಾರ ಮಾಡಿದರು. ಶಿವಸೇನೆ ಇದರಿಂದ ಮುಜುಗರ ಪಟ್ಟು ಯುವನಾಯಕ ಸುನೀಲ್ ಮಹಾಡಿಕ್‌ನನ್ನು ಶಿವಸೇನೆಯಿಂದ ತೆಗೆದುಹಾಕಿತು. ಶಿವಸೇನೆಯ ಯುವಸೇನೆಯ ಪ್ರಮುಖ ಆದಿತ್ಯ ಠಾಕ್ರೆಯೇ ಈ ಶಿವಸೈನಿಕನನ್ನು ಪಕ್ಷದಿಂದ ತೆಗೆದು ಹಾಕಿದರು.
ಈ ಘಟನೆಯ ನಂತರ ಶಿವಸೇನೆಯಿಂದ ಹೊರಬಂದಿದ್ದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆಯವರ ಸ್ವಾಭಿಮಾನ್ ಸಂಘಟನೆ ಶಿವಸೇನೆಗೆ ನಾಚಿಗೆಯಾಗಲಿ ಎಂದು ತಾನು ಉಚಿತವಾಗಿ ವಡಾಪಾವ್ ವಿತರಿಸುವ ಕಾರ್ಯಕ್ರಮ ಆಯೋಜಿಸಿದರು. ದಾದರ್‌ನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.