ಎಚ್ಚರ! ವಾಟ್ಸ್‌ಅಪ್ ಮೂಲಕ ಶಾಂತಿ ಕದಡುವ ಹುನ್ನಾರಕ್ಕೆ ಬಲಿ ಬೀಳದಿರಿ
ಸಮಾಜಿಕ ಜಾಲಾತಾಣದಲ್ಲಿ ಸುದ್ದಿಗಳನ್ನು ನಂಬಿ ನೀವೇನಾದರೂ ತಲೆ ಕೆಡಿಸಿಕೊಂಡರೆ ಅದು ನಿಮ್ಮ ತಪ್ಪು ಏಕೆಂದರೆ ಫೇಸ್ಬುಕ್ ನಂತರ ಈಗ ಜನರ ನೆಮ್ಮದಿ ಕೆಡಿಸುತ್ತಿರುವುದು ವಾಟ್ಸ್‌ಅಪ್. ಹೌದು ವಾಟ್ಸ್‌ಅಪ್ ನಲ್ಲಿ ಹರಿದಾಡುವ ಸುದ್ದಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದು ಇದರಿಂದಾಗಿ ಜನರ ಶಾಂತಿ ನೆಮ್ಮದಿ ಹಾಳಾಗುತ್ತಿದೆ. ಇಲ್ಲಿರುವ ಚಿತ್ರವನ್ನು ನೀವು ವಾಟ್ಸ್‌ಅಪ್ ನಲ್ಲಿ ನೋಡಿರಬಹುದು. ಬಹುತೇಕ ಎಲ್ಲ ವರ್ಗದ ಗುಂಪುಗಳಲ್ಲಿ ಇದು ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಚಿತ್ರ ಒಂದು. ಆದರೆ ಸುದ್ದಿ ಮಾತ್ರ(ವಿಷಯ) ಮಾತ್ರ ಎರಡು.
ಸುದ್ದಿ1: ಮೊದಲ ವರ್ಗ( ಹಿಂದೂ)ಗಳ ಗುಂಪುಗಳಲ್ಲಿ ಈ ಚಿತ್ರವನ್ನು ಬಳಿಸಿಕೊಂಡು ಗುಜರಾತ್ ನ ರಾಜಕೋಟ್ ಎಂಬಲ್ಲಿ ಮಸಿ500 ಮಸೀದಿಯೊಂದರಲ್ಲಿ ಕ್ಕೂ ಹೆಚ್ಚು ತಲವಾರುಗಳು, ಶಸ್ತ್ರಾಸ್ತ್ರಗಳನ್ನು ಅಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದೇ ಮಸಿೀದಿಯಲ್ಲಿ ಇಷ್ಟೊಂದು ಶಸ್ತ್ರ ಗಳು ಲಭಿಸಿದ್ದರೆ ಇನ್ನೂ ದೇಶದಾದ್ಯಂತ ಇರುವ ಮಸೀದಿಗಳಲ್ಲಿ ಎಷ್ಟೊಂದು ಶಸ್ತ್ರಾಸ್ತ್ರಗಳು ಇರಲು ಸಾಧ್ಯ ಎಂಬ ಪ್ರಶ್ನೆಯನ್ನು ವಾಟ್ಸ್‌ಅಪ್ ನಲ್ಲಿ ಮಾಡಿದ್ದು ಪ್ರತಿಯೊಂದು ಮಸೀದಿಗಳನ್ನು ಹಾಗೂ ಮುಸ್ಲಿಮರನ್ನು ವಿರೋಧಿಗಳು, ದೇಶದ್ರೋಹಿಗಳು ಎನ್ನುವಂತೆ ಬಿಂಬಿಸಿ ಇಲ್ಲಿನ ಸಾಮಾನ್ಯ ಹಿಂದುವೊಬ್ಬ ತಮ್ಮ ನೆರೆಯ ಮುಸ್ಲಿಮ ವ್ಯಕ್ತಿಯೊಬ್ಬನನ್ನು ದ್ವೇಷಿಸುವಂತಹ ಸ್ಥಿತಿ ಇಂತಹ ಸಂದೇಶಗಳ ಮೂಲಕ ಹರಿಯಬಿಡಲಾಗುತ್ತಿದೆ.
ಸುದ್ದಿ2: ಇನ್ನೂ ಎರಡನೇ ವರ್ಗ(ಮುಸ್ಲಿಂ)ದ ವಾಟ್ಸ್‌ಆಪ್ ನಲ್ಲಿ ಇದೇ ಚಿತ್ರವನ್ನು ಬಸಿ ಗುಜರಾತ್ ನ ದೇವಸ್ಥಾನವೊಂದರಲ್ಲಿ ಸಂಘಪರಿವಾರದವರು ಅಕ್ರಮವಾಗಿ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡು ನಾಲ್ವರನ್ನು ಬಂದಿಸಿದ್ದಾರೆ ಎನ್ನುವುದಾಗಿತ್ತು.
ಇದರಿಂದಾಗಿ ಹಿಂದೂಗಳು ಮುಸ್ಲಿಮರ ವಿರೋಧಿಗಳು, ಅವರು ಮುಸ್ಲಿಮರನ್ನು ನಾಶ ಮಾಡಲು ಇಂತಹ ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದಾರೆ ಎನ್ನುವ ಭಾವನೆ ಹುಟ್ಟಬೇಕು. ಈ ಮೂಲಕ ಪರಸ್ಪರರು ಹೊಡೆದಾಡಿಕೊಂಡು ಸಮಾಜದಲ್ಲಿ ಗಲಭೆ ದಂಗೆಗಳು ಏಳುವಂತಾಗಬೇಕು. ಇದರ ಲಾಭ ರಾಜಕೀಯ ವ್ಯಕ್ತಿಗಳು ಪಡೆದುಕೊಳ್ಳುವಂತಾಗಬೇಕು.
ಇಂತಹ ಸುದ್ದಿಗಳು ವಾಟ್ಸ್‌ಅಪ್ ಮೂಲಕ ಹರಿಬಿಡುತ್ತಿರುವುದು ಇದು ಮೊದಲೇನಲ್ಲ. ಇಂತಹ ಕಪೋಲಕಲ್ಪಿತ ಗಾಳಿ ಸುದ್ದಿಗಳು ಬಹಳಷ್ಟು ಬಂದಿವೆ. ಕೆಲವು ಇದಕ್ಕೆ ತಲೆಕೆಡಿಸಿ ಕೊಂಡು ಸಮಾಜದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಮತ್ತೇ ಕೆಲವರು ನಮಗೇಕೆ ಬೇಕು ಇದರ ಉಸಬಾರಿಕೆ ಕಾನೂನು ಇದೆ ಪೊಲೀಸರು ಇದ್ಧಾರೆ ಕ್ರಮ ಜರಗಿಸುತ್ತಾರೆ ಎಂದು ತೆಪ್ಪಗಿರುತ್ತಾರೆ.
ಇತ್ತಿಚೆಗೆ ರಾಜ್ಯದ ಗಾಳಿ ಸರಿಯಾಗಿಲ್ಲ. ಕೆಲವು ಬೇಕೆಂತಲೇ ಕೋಮುಗಲಭೆಗಳನ್ನು ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ. ಉ.ಕ ಜಿಲ್ಲೆಯ ಸಂಸದರ ಇತ್ತಿಚಿನ ಹೇಳಿಕೆಯೆ ಇದಕ್ಕೆ ಸಾಕ್ಷಿ. ಮೈಸೂರಿನಲ್ಲಿ ಸಂಘಪರಿವಾರದ ಕಾರ್ಯಕರ್ತನೋರ್ವನ ಹತ್ಯೆಯಾಗಿದೆ. ಒಟ್ಟಾರೆಯಾಗಿ ರಾಜ್ಯಸರ್ಕಾರ ಉಳಿದ ತನ್ನ ಅವಧಿಯ್ನು ಸುಸೂತ್ರವಾಗಿ ನಡೆಸಲು ಬಿಡೇವು ಎಂಬ ಸಂದೇಶ ವಿರೋಧ ಪಕ್ಷದವರಿಂದ ಸರ್ಕಾರಕ್ಕೆ ಈಗಾಗಲೆ ರವಾನೆಯಾಗಿದೆ. ಮತ್ತೇ ಇಂತಹ ತಲೆಬುಡ ಇಲ್ಲದೆ ಸುದ್ದಿಗಳು ಸಾಮಾಜಿಕ ಜಾಲಾತಾಣಗಳ ಮೂಲಕ ಹರಡಿ ಸಮಾಜದಲ್ಲಿ ಗಲಭೆಗೊಂದಲಗಳಿಗೆ ಕಾರಣವಾಗಬಲ್ಲುದು.
ಚಿತ್ರದ ವಾತ್ಸವ?? ಹೌದು ಚಿತ್ರದಲ್ಲಿರುವ ತರವಾರುಗಳು, ಶಸ್ತ್ರಾಸ್ತ್ರಗಳ ನೈಜತೆಯಾದರೂ ಏನು? ಎನ್ನುವುದು ಎಲ್ಲರ ಪ್ರಶ್ನೆ. ಇದಕ್ಕೆ ಉತ್ತರ ದೇಶ ಗುಜರಾತ್ ಡಾಟ್ ಕಾಂ ಎಂಬ ಆನ್ ಲೈನ್ ತಾಣದಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದೆ. ಗುಜರಾತ್ ನ ರಾಜಕೋಟೆಯ ಹೈವೆ ಹೋಟೇಲ್ ನಲ್ಲಿರವ ಅಂಗಡಿಯೊಂದರಲ್ಲಿ ಅಕ್ರಮವಾಗಿವಾಗಿ ಸಂಗ್ರಹಿ¹ರುವ ಶಸ್ತ್ರಾಸ್ತ್ರಗಳು ಇವು. ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ಮಾಡಿ ಅವುಗಳನ್ನು ವಶಪಡಿ¹ಕೊಂಡಿದ್ದಾರೆ. ಈ ಅಸ್ತ್ರಗಳನ್ನು ಯಾಕೆ ಕೂಡಿಡಲಾಗಿತ್ತು. ಇದರ ಹಿಂದಿರುವ ಉದ್ದೇಶವೇನು ಎಂಬುದು ಆನ್ ಲೈನ್ ವರದಿಯಲ್ಲಿ ತಿಳಿಸಿಲ್ಲ.
ಪೊಲೀಸ್ ಇಲಾಖೆ ಇಂತಹ ಅಪಪ್ರಚಾರ ಹರಡುವ ಮಂದಿಯನ್ನು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಬಂಧಿಸಬೇಕು. ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಇನ್ನೊಬ್ಬರನ್ನು ನೊೀವಾಗುವಂತಹ ಕಾಮೆಂಟ್‌ಗಳಾಗಲಿ ದೇಶಕ್ಕೆ ಮಾರಕವಾಗುವ ವಿಷಯಗಳಾಗಿ ಪ್ರಕಟಿ¹zÀÝ°è ಅಂತಹ ಕ್ರಿವಿುಗಳನ್ನು ಹತೋಟಿಗೆ ತರಬೇಕು.ಇಲ್ಲವಾದರೆ ಈ ಕ್ರಿಮಿಗಳು ಇಡೀ ಭಾರತದ ಶಾಂತಿಗೆ ಭಂಗವನ್ನುಂಟು ಮಾಡಬಲ್ಲರು. ಸಮಯ ಮೀರುವ ಮುಂಚೆ ಎಚ್ಚೆತ್ತುಕೊಳ್ಳಬೇಕಾಗಿದೆ.ಯಾವುದೇ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯದೆ ವಾಟ್ಸ್‌ಅಪ್ ಗೆ ಬಂದ ಸಂದೇಶಗಳನ್ನು ಮತ್ತೊಬ್ಬರಿಗೆ ಕಳುಹಿಸುವುದಾಗಲಿ ಮಾಡದೆ,ಯಾವುದೇ ಸಂದೇಶ ಕಳುಹಿಸುವಾಗ ಹತ್ತು ಸಲ ಯೋಚಿಸಿ ಫಾರ್ವರ್ಡ್ ಮಾಡುವುದು ಒಳಿತು. ನಮ್ಮಿಂದ ಇನ್ನೊಬ್ಬರನ್ನು ನೋಯಿಸುವುದಾಗಲಿ,ಅಪಮಾನಿಸುವುದಾಗಲಿ ಸಲ್ಲ.