ವಿವಾದದ ಬಲೆಯಲ್ಲಿ ಸುಪ್ರಿಯೊ
ಕೇಂದ್ರ ನಗರಾಭಿವೃದ್ಧಿ ಸಹಾಯಕ ಸಚಿವ ಹಾಗೂ ಮಾಜಿ ಹಿನ್ನೆಲೆ ಗಾಯಕ ಬಾಬುಲ್ ಸುಪ್ರಿಯೊ, ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಈಗೀಗ ಅವರಿಗೆ ಅದು ಒಂದು ರೀತಿಯ ಹವ್ಯಾಸವಾಗಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಕೇಂದ್ರ ದಿಲ್ಲಿಯ ನಿರ್ಮಾಣ್ ಭವನದ ಮುಖ್ಯ ದ್ವಾರದಲ್ಲಿ ಗುರುತಿನ ಚೀಟಿ ತೋರಿಸುವಂತೆ ತನ್ನನ್ನು ಕೇಳಿದ ಸಿಐಎಸ್‌ಎ್ ಕಾವಲುಗಾರನೊಂದಿಗೆ ಅವರು ಜಟಾಪಟಿಗಿಳಿದಿದ್ದರು. ಸುಪ್ರಿಯೊ ಅವರ ಸಚಿವಾಲಯವಿರುವ ನಿರ್ಮಾಣಭವನಕ್ಕೆ ತೆರಳುತ್ತಿದ್ದಾಗ ಕಾವಲುಗಾರ ಆತನನ್ನು ತಡೆದಿದ್ದ. ಇದರಿಂದ ಕ್ರುದ್ಧರಾದ ಸಚಿವ, ಕಾವಲುಗಾರನಿಗೆ ಬೈಗುಳಗಳ ಸುರಿಮಳೆಗೈದರು. ಆದರೆ ಅವರು ಆನಂತರ ಕಾವಲುಗಾರನು ಗುರುತುಚೀಟಿಯನ್ನು ತೋರಿಸುವಂತೆ ಕೇಳಿದ್ದಕ್ಕಾಗಿ ತಾನು ಆತನ ಮೇಲೆ ರೇಗಿದೆಯೆಂಬುದನ್ನು ನಿರಾಕರಿಸಿದ್ದಾರೆ. ಆದರೆ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಅವರ ಮಾತನ್ನು ಒಪ್ಪುವುದಿಲ್ಲ. ಅಲ್ಲಿದ್ದ ಕಾವಲುಗಾರನು ಇದೇ ಮೊದಲ ಬಾರಿಗೆ ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರಿಂದ ಆತನಿಗೆ ಸಚಿವರನ್ನು ಗುರುತಿಸಲು ಸಾಧ್ಯವಾಗಲಿಲ್ಲವೆಂಬುದು ಆನಂತರ ಬೆಳಕಿಗೆ ಬಂದಿತು. ಸುಪ್ರಿಯೊ ಕಾರ್ಯನಿರ್ವಹಣೆ ಹಾಗೂ ಅವರು ಪದೇ ಪದೇ ವಿವಾದಗಳಿಗೆ ತುತ್ತಾಗುತ್ತಿರುವುದು ಪ್ರಧಾನಿ ಮೋದಿ ಹಾಗೂ ಹಿರಿಯ ಸಚಿವ ವೆಂಕಯ್ಯ ನಾಯ್ಡು ಅವರಿಗೂ ಅಸಮಾಧಾನವುಂಟು ಮಾಡಿದೆ. ಸಂಪುಟ ಪುನಾರಚನೆ ನಡೆದಲ್ಲಿ ಅವರಿಗೆ ಖೊಕ್ ನೀಡುವ ಸಾಧ್ಯತೆಯೂ ಇದೆ.
ಅಡ್ವಾಣಿಗೆ ಕಿಶೋರ್ ನೆನಪು
ಚುನಾವಣಾ ವ್ಯೆಹ ತಜ್ಞ ಪ್ರಶಾಂತ್ ಕಿಶೋರ್ ರಾಜಕೀಯ ವಲಯದಲ್ಲಿ ಬಲವಾದ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಕಿಶೋರ್ ಬಗ್ಗೆ ಕುತೂಹಲದಿಂದ ವಿಚಾರಿಸಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಕಿಶೋರ್‌ರನ್ನು ತನ್ನಲ್ಲಿ ಉಳಿಸಿಕೊಳ್ಳಲು ಬಿಜೆಪಿ ಯಾಕೆ ವಿಲವಾಯಿತೆಂದು ಅಡ್ವಾಣಿ ಅಚ್ಚರಿ ವ್ಯಕ್ತಪಡಿಸಿದ್ದರು. ಬಿಹಾರದಲ್ಲಿ ನಿತೀಶ್ ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಜಯವನ್ನು ತಂದುಕೊಡುವಲ್ಲಿ ಪ್ರಶಾಂತ್‌ರ ಜಾದೂ ಕೆಲಸ ಮಾಡಿತ್ತು. ಪ್ರಾಯಶಃ ಅಡ್ವಾಣಿಯವರಿಗೆ ಈಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಿಶೋರ್ ಅವರು, ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್‌ನ್ನು ಯಾವ ರೀತಿ ಮೇಲೆತ್ತುವರೆಂಬ ಬಗ್ಗೆ ಅಚ್ಚರಿಪಡುತ್ತಿರಬಹುದು.
ಗೋಯಲ್‌ರ ಮಂತ್ರ!
ಪ್ರಧಾನಿಯ ಕಾರ್ಯಶೈಲಿಯನ್ನು ಬಣ್ಣಿಸಲು ಬಿಜೆಪಿಯು ಬಳಸುತ್ತಿರುವ ಹೇಳಿಕೆಗೆ ಕೇಂದ್ರ ವಿದ್ಯುತ್ ಸಚಿವ ಪಿಯೂಶ್ ಗೋಯಲ್, ತೀರಾ ಇತ್ತೀಚೆಗೆ ಇನ್ನೊಂದು ಸಾಲನ್ನು ಸೇರಿಸಿದ್ದಾರೆ. ‘‘ನ ಖಾವೂಂಗಾ, ನಾ ಖಾನೆ ದೂಂಗಾ (ನಾನು ಲಂಚ ತಿನ್ನುವುದಿಲ್ಲ. ಇತರರಿಗೂ ಲಂಚ ತಿನ್ನಲು ಬಿಡುವುದಿಲ್ಲವೆಂದು ಇದರ ಭಾವಾರ್ಥ) ಎಂಬ ಜನಪ್ರಿಯ ಘೋಷಣೆಗೆ, ಗೋಯಲ್ ಅವರು ‘‘ ನ ಸೋವೂಂಗಾ, ನಾ ಸೋನೆ ದೂಂಗಾ ’’( ನಾನು ನಿದ್ರಿಸುವುದಿಲ್ಲ, ಇತರರಿಗೂ ನಿದ್ರೆ ಮಾಡಲು ಬಿಡುವುದಿಲ್ಲ) ಎಂಬ ಸಾಲನ್ನು ಸೇರ್ಪಡೆಗೊಳಿಸಿದ್ದಾರೆ. ಈ ಪ್ರಕಾರ ಬಾಬು (ಉನ್ನತ ಅಕಾರಿಗಳು)ಗಳು ದಿನವಿಡೀ ತಮ್ಮ ಸಚಿವಾಲಯದ ವೆಬ್‌ಸೈಟ್‌ಗಳನ್ನು ಅಪ್‌ಡೇಟ್‌ಗೊಳಿಸುತ್ತಲೇ ಇರಬೇಕೆಂದು ಪಿಯೂಶ್ ಗೋಯಲ್ ಬಯಸಿದ್ದಾರೆ. ಒಮ್ಮೆ ಮಧ್ಯರಾತ್ರಿ 12:30 ಗಂಟೆಗೆ, ಅಕಾರಿಯೊಬ್ಬರಿಗೆ ಕರೆ ಮಾಡಿದ ಸಚಿವರು, ವೆಬ್‌ಸೈಟನ್ನು ಅಪ್‌ಡೇಟ್ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಅಕಾರಿ ಇಲ್ಲವೆಂದಾಗ, ಗೋಯಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಒಟ್ಟಿನಲ್ಲಿ ಕಲ್ಲಿದ್ದಲು ಹಾಗೂ ವಿದ್ಯುತ್ ಸಚಿವಾಲಯದ ಅಕಾರಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
ಸಾರಿ ಶಾಪಿಂಗ್!
ಕೆಲಸವೊಂದನ್ನು ಬಿಟ್ಟರೆ, ಬೇರೇನೂ ಇಲ್ಲ ಎಂಬ ಮಾತಿನಲ್ಲಿ ಸೋನಿಯಾಗೆ ನಂಬಿಕೆಯಿಲ್ಲ. ಇತ್ತೀಚೆಗೆ ಅವರು ಸಂಸತ್‌ನ ಭೋಜನ ವಿರಾಮದ ವೇಳೆಗೆ
ಹೊಸದಿಲ್ಲಿಯ ಆಗಾ ಖಾನ್ ಹಾಲ್‌ನಲ್ಲಿ ಸುಮಾರು ಒಂದು ತಾಸು ಕಳೆದಿದ್ದರು.ಭಾರತೀಯ ಕರಕುಶಲ ಮಂಡಳಿ ಆಯೋಜಿಸಿದ್ದ ವಸ್ತುಪ್ರದರ್ಶನವೊಂದರಲ್ಲಿ ಅತ್ಯುತ್ಕೃಷ್ಟವಾದ ಸೀರೆಗಳನ್ನು ಖರೀದಿಸುವ ಉದ್ದೇಶದಿಂದ ಅಲ್ಲಿಗೆ ಅವರು ಭೇಟಿ ನೀಡಿದ್ದರು. ಸಂಸದೆ ಮಂಜುದುಬೆಯೊಂದಿಗಿದ್ದ ಸೋನಿಯಾ ಸಂಬಲ್‌ಪುರಿ, ಚಾಂದೇರಿ, ಚೆಟ್ಟಿನಾಡ್ ಕಾಟನ್, ಇಕ್ಕಟ್ ಹಾಗೂ ಬನಾರಸ್ ಸೀರೆಗಳನ್ನು ಖರೀದಿಸುತ್ತಿದ್ದುದು ಕಂಡುಬಂದಿತು. ತುಂಬಾ ಉಲ್ಲಸಿತರಾಗಿರುವಂತೆ ಕಾಣುತ್ತಿದ್ದ ಸೋನಿಯಾ, ಕೆಲವು ಮಹಿಳೆಯರಿಗೆ ತನ್ನೊಂದಿಗೆ ಸೆಲ್ಪಿಗಳನ್ನು ತೆಗೆಯಲು ಅವಕಾಶ ನೀಡಿದರು. ಕೈಮಗ್ಗದ ಸೀರೆಗಳ ಬಗ್ಗೆ ಸೋನಿಯಾಗೆ ತುಂಬಾ ಆಸಕ್ತಿಯಿದೆಯೆನ್ನಲಾಗಿದ್ದು, ಅವರು ಯಾವುದೇ ಮಾದರಿಯ ನೇಯ್ಗೆಯನ್ನು ಗುರುತಿಸಬಲ್ಲರು. ಸಾಮಾನ್ಯವಾಗಿ ತಾವು ಈ ಸೀರೆಗಳನ್ನು ಸೋನಿಯಾ ನಿವಾಸ 10 ಜನಪಥ್‌ಗೆ ಕಳುಹಿಸಿಕೊಡುತ್ತಿದ್ದೆವು ಎಂದು ಸಂಘಟಕರು ಹೇಳುತ್ತಾರೆ.ಆದರೆ ಸೋನಿಯಾ ಈ ಬಾರಿ ಅದನ್ನು ಹೊರತುಪಡಿಸಲು ನಿರ್ಧರಿಸಿದರು. ಅವರಲ್ಲಿರುವ ಸೀತ್ವವು, ಸೀರೆಗಳ ಮೇಲಿನ ವ್ಯಾಮೋಹದಿಂದ ಹೊರಬರಲು ಅವರಿಗೆ ಬಿಡಲಿಲ್ಲ.
ಎಲ್ಲರ ಕಣ್ಣು ರಾಜ್ಯಸಭೆ ಮೇಲೆ...
ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಇತ್ತೀಚೆಗೆ ಸೋನಿಯಾ ಹಾಗೂ ರಾಹುಲ್‌ಗಾಂಗೆ ಕರೆ ಮಾಡಿ, ರಾಜ್ಯಸಭಾ ಸದಸ್ಯತ್ವಕ್ಕೆ, ರಾಜ್ಯದಿಂದ ಹೊರಗಿನವರನ್ನು ನಾಮಕರಣ ಮಾಡುವ ಬಗ್ಗೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಉಳಿದಿರುವಂತೆಯೇ ಪಿ.ಚಿದಂಬರಂ, ಕಪಿಲ್ ಸಿಬಲ್ ಅಥವಾ ಜೈರಾಮ್ ರಮೇಶ್ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ನಾಮಕರಣಗೊಳಿಸುವುದು ಪಕ್ಷದ ಹಿತಾಸಕ್ತಿಗೆ ಧಕ್ಕೆ ತರಲಿದೆಯೆಂದು ಅವರು ವಾದಿಸಿದ್ದರು. ಉತ್ತರಾಖಂಡದಿಂದ ರಾಜ್ಯಸಭೆಗೆ ನಾಮಕರಣಗೊಳಿಸಲು ಹಿರಿಯ ಕಾಂಗ್ರೆಸ್ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಅವರ ಪೈಕಿ 2014ರ ಲೋಕಸಭಾ ಚುನಾವಣೆಗೆ ಸ್ಪರ್ಸದಿದ್ದ ಪಿ.ಚಿದಂಬರಂ ಮುಂಚೂಣಿಯಲ್ಲಿದ್ದಾರೆ. ಸಿಬಲ್ ಕೂಡಾ ಉತ್ತರಾಖಂಡದಿಂದ ರಾಜ್ಯಸಭಾ ಸೀಟು ಪಡೆದುಕೊಳ್ಳಲು ಆಸಕ್ತರಾಗಿದ್ದಾರೆ. ನ್ಯಾಯವಾದಿಯಾದ ಸಿಬಲ್, ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಗಳಿಗೆ ನೆರವಾಗುತ್ತಿದ್ದು, ತನಗೆ ರಾಜ್ಯಸಭಾ ಸ್ಥಾನದ ಉಡುಗೊರೆ ದೊರೆಯಬಹುದೆಂಬ ಆಶಾವಾದ ಹೊಂದಿದ್ದಾರೆ. ಆದಾಗ್ಯೂ ಆಂಧ್ರಪ್ರದೇದ ತನ್ನ ರಾಜ್ಯಸಭಾ ಸದಸ್ಯತ್ವದ ಅವ ಕೊನೆಗೊಳ್ಳುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಜೈರಾಮ್ ರಮೇಶ್ ಉತ್ತರಾಖಂಡದಿಂದ ನಾಮಕರಣಗೊಳ್ಳಲು ಶತಗತಾಯ ಪ್ರಯತ್ನಿಸುತ್ತಿದ್ದಾರೆ.