ನಿಮ್ಮ ಬಜೆಟ್‌ನಲ್ಲಿ ಅತ್ಯುತ್ತಮ ಸ್ಮಾರ್ಟ್ ಫೋನ್‌ಗಳು ಇಲ್ಲಿವೆ
2016ರ ಭಾರತದ ಅತ್ಯುತ್ತಮ ಬಜೆಟ್ ಫೋನ್‌ಗಳು ವಿವಿಧ ಬ್ರಾಂಡ್‌ಗಳಲ್ಲಿ ಸಿಗುತ್ತಿವೆ. ಇಲ್ಲಿ 15,000 ರೂ. ಒಳಗಿನ ಕೆಲವು ಅತ್ಯುತ್ತಮ ಬಜೆಟ್ ಫೋನ್‌ಗಳ ವಿವರ ಕೊಟ್ಟಿದ್ದೇವೆ.
ಲಿಇಕೋ ಲಿ 1ಎಸ್( LeEco Le 1S)
ಜಾಣ ಬೆಲೆ ನಿಗಧಿ ಮಾಡುವ ಕಾರ್ಯತಂತ್ರದಿಂದ ಮತ್ತು ಈ ಬೆಲೆ ವಿಭಾಗದಲ್ಲಿ ಅತ್ಯುತ್ತಮ ಕಾರ್ಯವೈಖರಿಯಿಂದಾಗಿ ಇದು ಉತ್ತಮ ಮೊಬೈಲ್ ಆಗಿದೆ. ಆದರೆ ಫೋನಲ್ಲಿ ಉತ್ತಮ ಕ್ಯಾಮರಾ ಇಲ್ಲ. 3 ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಮತ್ತು 5.5. ಇಂಚು 1080 ಡಿಸ್ಪ್ಲೇ ಕಾರಣ ಉತ್ತಮ ಫೋನ್.
ಆಸಸ್ ಜೆನ್‌ಫೋನ್ 2 ( Asus Zenfone 2 )
ಬೆಲೆ 13,999 ರೂ. ಈ ಮಾಡೆಲ್ 2 ಜಿಬಿ ರ್ಯಾಮ್ ಹೊಂದಿದೆ. ಅತೀ ವೇಗದ ಸ್ಮಾರ್ಟ್ ಫೋನ್ ಎಂದೂ ಹೆಸರು ಪಡೆದಿದೆ. ಕ್ಸಿಯೋಮಿ ಎಂಐ 4ಐ ಅತ್ಯುತ್ತಮ ಆಯ್ಕೆ. ಬ್ಯಾಟರಿ ಬಾಳಿಕೆ, ಉತ್ತಮ ಕಾರ್ಯವೈಖರಿ ಮತ್ತು ಉತ್ತಮ ಕ್ಯಾಮರಾವನ್ನೂ ಕೊಡುತ್ತದೆ.
ಲಿನೋವೋ ವೈಬ್ ಕೆ4 ನೋಟ್ (Lenovo Vibe K4 Note )
ಕೆ3 ನೋಟ್‌ಗೆ ಪರ್ಯಾಯವಾಗಿ ವೈಬ್ ಕೆ4 ನೋಟ್ ಬಂದಿದೆ. ಮೊಟೊರೊಲಾ ಫೋನ್‌ಗಳಿಂದ ಎರವಲು ಪಡೆದ ವಿನ್ಯಾಸ. ಸ್ವಲ್ಪ ಬಾಗಿದ ಹಿಂಬದಿಯಿದೆ. ಒಕ್ಟಾ ಕೋರ್ ಪ್ರೊಸೆಸರ್ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ಹಿಂಬದಿಯಲ್ಲಿದೆ. ಬಜೆಟ್ ಒಳಗೆ ಉತ್ತಮ ಫೋನ್.
ಮೋಟೋ ಜಿ ಟರ್ಬೋ ( Moto G Turbo )
ಮೊಟೊರೋಲಾ ಪ್ರತೀ ಬೆಲೆ ವಿಭಾಗದಲ್ಲಿ ಒಂದೇ ಫೋನ್ ಇಟ್ಟಿದೆ. ಮೋಟೋ ಜಿ ಟರ್ಬೋ ಫೋನಿನಲ್ಲಿ ಮೋಟೋ ಎಕ್ಸ್ ಪ್ಲೇಯ ಪ್ರೊಸೆಸಿಂಗ್ ಪವರ್‌ನಿಂದ ಮೋಟೋ ಜಿಯ ಜಲನಿರೋಧಕ ಸ್ವರೂಪವೂ ಇದೆ. ಇತ್ತೀಚೆಗೆ ಬೆಲೆ ಕಡಿತವಾಗಿ ಆಕರ್ಷಕವಾಗಿದೆ.
ಮೈಜು ಎಂ2 ನೋಟ್ ( Meizu M2 Note )
10 ಸಾವಿರದ ವಿಭಾಗದಲ್ಲಿ ಖರೀದಿಸಬಹುದಾದ ಉತ್ತಮ ಫೋನ್ ಇದಾಗಿದೆ. ಫೋನಿನಲ್ಲಿ ಸುಂದರ ಐಜಿಝೆಡ್‌ಒ ಡಿಸ್ಪ್ಲೇ ಮತ್ತು ಅತ್ಯುತ್ತಮ ಕಾರ್ಯವೈಖರಿ ಇದೆ.
ಆಕ್ಸರ್ ಲಿಕ್ವಿಡ್ ಝೆಡ್630ಎಸ್ ( Acer Liquid Z630s )
ವರ್ಷಗಳ ಪ್ರಯತ್ನದ ಬಳಿಕ ಅಂತಿಮವಾಗಿ ಎರಡು ಉತ್ತಮ ಫೋನುಗಳು ಬಂದಿವೆ. ಲಿಕ್ವಿಡ್ 530 ಮತ್ತು 630. ಇವುಗಳಲ್ಲಿ 13 ಎಂಪಿ ಕ್ಯಾಮರಾ ಇಲ್ಲದಿರಬಹುದು. ಆದರೆ ಉಳಿದ ವಿವರಗಳು ಉತ್ತಮವಾಗಿವೆ. ಒಕ್ಟಾ ಕೋರ್ ಎಸ್‌ಒಸಿ, 3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಇರುವ ಕಾರಣ ಖರೀದಿಗೆ ಉತ್ತಮವಾಗಿದೆ.
ಲಿನೋವೋ ಕೆ3 ನೋಟ್ ( Lenovo K3 Note )
ಕೆ4 ನೋಟ್ ಪರಿಚಯಿಸಿದ್ದರೂ ಕೆ3 ನೋಟ್ ಈಗಲೂ ಖರೀದಿಗೆ ಉತ್ತಮ. ಆಲ್ ರೌಂಡರ್ ಕಾರ್ಯವೈಖರಿಯ ಸಾಧನ ನಿರೀಕ್ಷಿಸುತ್ತಿದ್ದಲ್ಲಿ ಈ ಫೋನ್‌ನಲ್ಲಿ ಪ್ರಭಾವಿ ಒಕ್ಟಾ ಕೋರ್ ಎಸ್‌ಒಸಿ ಇದೆ. ಉತ್ತಮ ಡಿಸ್ಪ್ಲೇ ಮತ್ತು ಶಿಸ್ತಿನ ಆಡಿಯೋ ಔಟ್ಪುಟ್ ಇದೆ.
ಕೂಲ್‌ಪ್ಯಾಡ್ ನೋಟ್ 3 ( Coolpad Note 3)
ಕೂಲ್‌ಪ್ಯಾಡ್ ನೋಟ್ 3 ವೇಗವಾದ ಮತ್ತು ಅತೀ ಕರಾರುವಕ್ಕಾದ ಬೆರಳಚ್ಚು ಸ್ಕಾನರುಗಳನ್ನು ಹೊಂದಿವೆ. ಒಕ್ಟಾ ಕೋರ್ ಪ್ರೊಸೆಸರ್ ಇದೆ ಮತ್ತು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಈ ವಿಭಾಗದಲ್ಲಿ ಹೊಂದಿದೆ.
ಮೈಕ್ರೋಸಾಫ್ಟ್ ಲ್ಯುಮಿಯ 640ಎಕ್ಸ್‌ಎಲ್ ಡ್ಯುಯಲ್ ಸಿಮ್ ( Microsoft Lumia 640XL Dual SIM )
ವಿಂಡೋಸ್ ಫೋನಿನಲ್ಲಿ ಹೂಡಿಕೆ ಮಾಡುವ ಇಚ್ಛೆ ಇದ್ದಲ್ಲಿ ಲುಮಿಯಾ 640 ಎಕ್ಸ್‌ಎಲ್ ಉತ್ತಮ ಆಯ್ಕೆ. ಪೂರ್ಣ ದಿನದ ಬ್ಯಾಟರಿ ಬಾಳ್ವಿಕೆ ಇದೆ ಮತ್ತು ಉತ್ತಮ ರೇರ್ ಕ್ಯಾಮರಾ ಇದೆ. 5.7 ಇಂಚಿನ 720ಪಿ ಡಿಸ್ಪ್ಲೇ ಇದೆ.