ಮಾ.25ರಿಂದ ‘ಜಾನಪದ ಮೇಳ 2016’
ಬೆಂಗಳೂರು, ಮಾ.22: ಶ್ರೀನಿಧಿ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸಂಸ್ಥೆ ವತಿಯಿಂದ ಮಾ.25 ರಿಂದ ಎ.3 ರವರೆಗೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ‘ಜಾನಪದ ಮೇಳ 2016’ ಹಮ್ಮಿಕೊಳ್ಳಲಾಗಿದೆ.
ಜಾನಪದ ಮೇಳವನ್ನು ವಿಧಾನಪರಿಷತ್‌ನ ಸದಸ್ಯೆ ತಾರಾವೇಣು ಉದ್ಘಾಟನೆ ಮಾಡಲಿದ್ದು, ಬಿಎಂಎಸ್ ಸಂಸ್ಥೆಯ ಉಪಾಧ್ಯಕ್ಷ ಡಿ.ವಿ.ರಾಮಮೂರ್ತಿ ಉಪಸ್ಥಿತರಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಗೋಪಿನಾಥ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮೇಳದಲ್ಲಿ 23 ರಾಜ್ಯದ 100ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ತಂಜಾವೂರ್ ಪೇಂಟಿಂಗ್ಸ್, ಜಾನಪದ ಶೈಲಿಯ ಕರಕುಶಲ ವಸ್ತುಗಳು, ಕೇನ್ ಅಂಡ್ ಬ್ಯಾಂಬೂ ಉತ್ಪನ್ನಗಳು, ಶುದ್ಧ ರೇಷ್ಮೆ ಸೀರೆಗಳು, ಮಧುಬನಿ ಪೇಂಟಿಂಗ್ಸ್, ಕಾಶ್ಮೀರಿ ಶಾಲುಗಳು, ಕೇರಳದ ಆಯಿಲ್ ಪೇಂಟಿಂಗ್ಸ್, ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
Next Story