ಸಂಶೋಧನೆಯ ಹೆಸರಲ್ಲಿ 333 ತಿಮಿಂಗಿಲಗಳನ್ನು ಕೊಂದ ಜಪಾನ್
ಟೋಕಿಯೋ : ಅಂರ್ಟಾಕ್ಟಿಕ್ಸಾಗರದಲ್ಲಿ 300ಕ್ಕೂ ಹೆಚ್ಚು ಮಿಂಕ್ ತಿಮಿಂಗಿಲಗಳನ್ನು ಕೊಂದು ಜಪಾನಿನ ಹಡಗುಗಳು ಹಿಂದಿರುಗಿವೆಯೆಂದು ದೇಶದ ಮೀನುಗಾರಿಕಾ ಏಜನ್ಸಿ ಮಾಹಿತಿ ನೀಡಿವೆ.
ಜಪಾನಿನ ಇನ್‌ಸ್ಟಿಟ್ಯೂಟ್ ಆಫ್ ಸೆಟಸಿಯನ್ ರಿಸರ್ಚ್‌ನಿಂದ ನಾಲ್ಕು ಹಡಗುಗಳು ಅಂರ್ಟಾಕ್ಟಿಕ್ ಸಾಗರದತ್ತ ಪಯಣಿಸಿ 230 ಹೆಣ್ಣು ತಿಮಿಂಗಿಲಗಳು ಸೆರಿದಂತೆ 333 ಮಿಂಕ್ ತಿಮಿಂಗಿಲಗಳನ್ನು ಕೊಂದಿದೆಯೆಂದು ವರದಿ ತಿಳಿಸಿದ್ದು ಇವುಗಳಲ್ಲಿಶೇ. 90ರಷ್ಟು ತಿಮಿಂಗಿಲಗಳು ಗರ್ಭ ಧರಿಸಿದ್ದವು.
ಅಂರ್ಟಾಕ್ಟಿಕ್ ಸಾಗರದಲ್ಲಿ ತಿಮಿಂಗಿಲಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಸಂಶೋಧನೆಯ ಭಾಗವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆಯೆಂದು ಜಪಾನಿನ ಮೀನುಗಾರಿಕಾ ಸಚಿವಾಲಯಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಂಶೋಧನೆಯ ನೆಪದಲ್ಲಿ ನಡೆಸಲಾಗುವ ಇಂತಹ ಕಾರ್ಯಾಚರಣೆಯನ್ನು ಹಿಂದೆ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳು ಬಲವಾಗಿ ವಿರೋಧಿಸಿದ್ದವು2014ರಲ್ಲಿ ವಿಶ್ವ ಸಂಸ್ಥೆಯ ಇಂಟರ್‌ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ಜಪಾನಿಗೆ ಇಂತಹ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಕಾರ್ಯಾಚರಣೆ ಸಂಶೋಧನೆಗೆ ಸಂಬಂಧಪಟ್ಟಿದ್ದೇ ಹೊರತು ಯಾವುದೇ ವಾಣಿಜ್ಯ ಉದ್ದೇಶ ಹೊಂದಿಲ್ಲವೆಂದು ಜಪಾನ್ ವಾದಿಸುತ್ತಿದೆ.
ಆದರೆ ಜಪಾನಿನ ಫಿಶರೀಸ್ ಏಜನ್ಸಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಲಯದ ಪ್ರಕಾರ2014ರ ಕೋರ್ಟ್ ನಿರ್ದೇಶನದನ್ವುಯ ಪ್ರತಿ ವರ್ಷ 333 ತಿಮಿಂಗಿಲಗಳನ್ನು ಕೊಲ್ಲಬಹುದು. ಜಪಾನಿನ ಈ 12 ವರ್ಷಗಳ ಸಂಶೋಧನಾ ಕಾರ್ಯಕ್ರಮದಂಗವಾಗಿ ಸುಮಾರು 4000 ಮಿಂಕ್ ವೇಲ್‌ಗಳನ್ನು ಕೊಲ್ಲಲಾಗುವುದೆಂದು ತಿಳಿದು ಬಂದಿದೆ.