ಪ್ರಧಾನಿಯ - ಅಸ್ಸಾಂ ಟೀ ನಂಟು ಹೇಳಿಕೆಗೆ ನಕ್ಕು ಬಿಟ್ಟ ಟ್ವಿಟ್ಟರ್
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಂಘೈ ಚಿತ್ರಗಳನ್ನು ಫೋಟೋಶಾಪ್ ಮಾಡಿ ಅಹ್ಮದಾಬಾದ್ ಚಿತ್ರ ಎಂದು ನಂಬಿಸಿದ್ದೆ . ಅದಕ್ಕಾಗಿ ನನ್ನ ಮೇಲೆ ಚೀನಾದ ಋಣ ಇದೆ.
- ಸುಮಿತ್ ರಾಯ್
ಅಸ್ಸಾಂ ನಲ್ಲಿ ಶನಿವಾರ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಟೀ ಮಾರುವ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿದ್ದಾರೆ. ಈ ಬಾರಿ ಅವರು ಅದಕ್ಕೆ " ಅಸ್ಸಾಂ ತಿರುವು" ನೀಡಿದ್ದಾರೆ. " ನಾನು ಮಾರುತಿದ್ದದ್ದು ಅಸ್ಸಾಂ ಟೀ. ಹಾಗಾಗಿ ನನಗೆ ಹೊಟ್ಟೆಪಾಡಿಗೆ ನೆರವಾದ ಅಸ್ಸಾಂ ನ ಋಣ ನನ್ನ ಮೇಲಿದೆ. ಅಸ್ಸಾಂ ಟೀ ಎಲ್ಲರಿಗೂ ಶಕ್ತಿ ನೀಡುತ್ತದೆ. ಆದರೆ ಆ ಟೀ ಬೆಳೆಯುವವರಿಗೆ ಅದು ಶಕ್ತಿ ನೀಡುತ್ತಿಲ್ಲ. ಅವರ ಮುಖದಲ್ಲಿ ನಾವು ನಗು ತರಬೇಕಿದೆ " ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ, ವ್ಯಂಗ್ಯಕ್ಕೆ ಆಹಾರ ಒದಗಿಸಿದೆ. ಮತ ಸೆಳೆಯುವ ಉದ್ದೇಶ ಮಾತ್ರ ಇದರ ಹಿಂದಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿದೆ. ಈ ವ್ಯಂಗ್ಯೋಕ್ತಿಗಳ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ :
ನಾನು ಟೀ ಮಾರುತ್ತಿದ್ದಾಗ ನನ್ನ ಚಮಚ ಸೇಲಂ ನಿಂದ ಬರುತ್ತಿತ್ತು, ಗ್ರಾಹಕರು ಉತ್ತರ ಪ್ರದೇಶದವರಾಗಿದ್ದರು,ಹಳೆಯ ಟಿನ್ ಗಳು ಬಂಗಾಳದಿಂದ ಬರುತ್ತಿದ್ದವು - ಹಾಗಾಗಿ ನನ್ನ ಮೇಲೆ ಎಲ್ಲ ಚುನಾವಣೆ ನಡೆಯುವ ರಾಜ್ಯಗಳ ಋಣವಿದೆ.
- ಸಬೀರ್ ಶುಕ್ಲ
ನಾನು ಆರೆಸ್ಸಸ್ ಪ್ರಚಾರಕನಾಗಿದ್ದಾಗ ಆರೆಸ್ಸೆಸ್ ಸಮವಸ್ತ್ರವನ್ನೇ ಹೆಚ್ಚಾಗಿ ಹಾಕಿಕೊಳ್ಳುತ್ತಿದ್ದೆ. ಅದಕ್ಕಾಗಿ ನಾನು ಮುಸೊಲೊನಿಯ ಇಟಲಿಗೆ ನಾನು ಋಣಿಯಾಗಿದ್ದೇನೆ.
- ಅಮಿತ್ ವರ್ಮ
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಂಘೈ ಯಾ ಚಿತ್ರಗಳನ್ನು ಫೋಟೋಶಾಪ್ ಮಾಡಿ ಅಹ್ಮದಾಬಾದ್ ಚಿತ್ರ ಎಂದು ನಂಬಿಸಿದ್ದೆ . ಅದಕ್ಕಾಗಿ ನನ್ನ ಮೇಲೆ ಚೀನಾದ ಋಣ ಇದೆ.
- ಸುಮಿತ್ ರಾಯ್
ನಾನು ಅಸ್ಸಾಂ ಟೀ ಮಾರಿದ್ದು ಎಂದು ಹೇಳುವ ಮೋದಿ ಇಂಗ್ಲಂಡ್ ನಲ್ಲಿ ರಾಣಿಗೆ ಡಾರ್ಜಿಲಿಂಗ್ ಟೀ ಉಡುಗೊರೆ ಕೊಟ್ಟಿದ್ದರು. ಇದನ್ನು ಅಸ್ಸಾಂ ಕ್ಷಮಿಸುವುದೇ ?
- ಚೇತನ್ ಭಗತ್
ಟೀ ಬೀಜಗಳನ್ನು ಬಿತ್ತಲು ಗುದ್ದಲಿ ಹಿಡಿದು ಅಗೆಯುತ್ತಿರುವ ಬಾಲಕ ಮೋದಿಯ ಚಿತ್ರ !
- ರಿಯಲ್ ಹಿಸ್ಟರಿ ಪಿಕ್
ಬಾಲಕ ಮೋದಿ ಅಸ್ಸಾಂ ನಲ್ಲಿ ಟೀ ಎಲೆಗಳನ್ನು ಕೀಳುತ್ತಿರುವ ಚಿತ್ರ !
- ರಿಯಲ್ ಹಿಸ್ಟರಿ ಪಿಕ್
ಮೋದಿ ಮಾರಿದ ಟೀ ಬ್ರ್ಯಾಂಡ್ ಗಳ ಪಟ್ಟಿ ಯಾರ ಬಳಿ ಇದೆ ?
-ಶಾನ್
ಇಂದು ಅಸ್ಸಾಂ ನಲ್ಲಿ ಪ್ರಚಾರ ಇರುವುದರಿಂದ ಅಸ್ಸಾಂ ಟೀ. ನಾಳೆ ಮೋದಿ ಡಾರ್ಜಿಲಿಂಗ್ ಗೆ ಪ್ರಚಾರಕ್ಕೆ ಹೋದರೆ ಡಾರ್ಜಿಲಿಂಗ್ ಟೀ !
- ಆಗನ್ 86
ನಾನು ಗಾಳಿಯಿಂದ ಟೀ ಮಾಡುವ ಸಾಮರ್ಥ್ಯ ಹೊಂದಿದ್ದೆ ಎಂದು ಹೇಳಲು ಮೋದಿ ಮರೆತಿದ್ದಾರೆ.
- ಮೊಹಮ್ಮದ್ ಉಬೈದುಲ್ಲಾ
ಚಾಇವಾಲ ಟ್ರಿಕ್ ಒಳ್ಳೇದೆ. ಆದರೆ ಈ ಅಸ್ಸಾಂ ಟೀ ಸ್ವಲ್ಪ ಅತಿಯಾಯಿತು.
ಈಗ ಮೋದಿ ತಮ್ಮ ಟೀ ಕತೆಯನ್ನು ಮಾರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ನಂತರ ಅಸ್ಸಾಮನ್ನು ಕಾರ್ಪೋರೆಟ್ ಗಳಿಗೆ ಹಾಗು ತನ್ನ ಸಿದ್ಧಾಂತ ಬಳಗದವರಿಗೆ ಮಾರುತ್ತಾರೆ.
- ಕೆ ಬಿ ಬೈಜು
ನರೇಂದ್ರ ಮೋದಿ ಇನ್ನೂ ಟೀ ಮಾರುತ್ತಿದ್ದಿದ್ದರೆ ಆ ಎಂ ಟಿ ಆರ್ ನ ಅಜ್ಜನನ್ನೂ ಪ್ರಚಾರದಲ್ಲಿ ಹಿಂದಿಕ್ಕಿ ಬಿಡುತ್ತಿದ್ದರು.
- ಅಮರ್ ರಜಪೂತ್