ದಾರಿಬಿಡಿ, ಹೊಸ Innova ಬರುತ್ತಿದೆ! ಲಾಂಚ್ ವಿವರಗಳು ಇಲ್ಲಿವೆ
ಕಳೆದ ತಿಂಗಳಷ್ಟೇ ಜಪಾನಿನ ಕಾರು ತಯಾರಕರಾದ ಟಯೋಟಾ ಹೊಸ ಇನೋವಾ ಕ್ರಿಸ್ತಾವನ್ನು ಆಟೋ ಎಕ್ಸಪೋ 2016ರಲ್ಲಿ ಪ್ರದರ್ಶನ ಮಾಡಿದ್ದಾರೆ. ಹೊಸ ತಲೆಮಾರಿನ ಇನೋವಾ ಈಗ ಹಿಂದಿನ ಮಾಡೆಲನ್ನು ಬದಲಿಸುತ್ತಿದೆ. ಹಳೇ ಮಾಡೆಲ್ ಇತ್ತೀಚೆಗೆ ಭಾರತದಲ್ಲಿ ತಯಾರಿ ನಿಲ್ಲಿಸಿದೆ. ಹೊಸ ಇನೋವಾ 2016 ಏಪ್ರಿಲ್ ಅಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಭಾರತದಲ್ಲೂ ಅಂತಿಮ ಸುತ್ತಿನ ಪರೀಕ್ಷೆಯ ಸಂದರ್ಭ ಒಂದೆರಡು ಇನೋವಾ ಕ್ರಿಸ್ತಾಗಳು ಕಂಡು ಬಂದಿವೆ. ಹೆಚ್ಚು ಸುದ್ದಿಯಿಲ್ಲದೆ ಈ ಪ್ರಾಯೋಗಿಕ ಪರೀಕ್ಷೆಗಳು ಮುಗಿದಿವೆ. ಹೀಗಾಗಿ ಟಯೋಟಾ ಈಗ ಹೊಸ ಮಾಡೆಲನ್ನು ಶೀಘ್ರವೇ ಬಿಡುಗಡೆ ಮಾಡಲು ಮುಂದೆ ಬಂದಿರುವುದು ಖಚಿತವಾಗಿದೆ.
ಹೊಸ ಇನೋವಾ ಆರು ಬಣ್ಣಗಳಲ್ಲಿ ಲಭ್ಯವಿರಲಿವೆ. ಅಲ್ಯುಮಿನಾ ಜೇಡ್, ಅಟಿಟ್ಯೂಡ್ ಬ್ಲಾಕ್, ಅವಂಟ್ ಗ್ರೇಡ್ ಬ್ರೋನ್ಸ್, ಡಾರ್ಕ್ ಗ್ರೇ ಮಿಕಾ ಮೆಟಾಲಿಕ್, ಸಿಲ್ವರ್ ಮೆಟಾಲಿಕ್ ಮತ್ತು ಸುಪರ್ ವೈಟ್. ಇತ್ತೀಚೆಗೆ ಪ್ರಾಯೋಗಿಕ ಪರೀಕ್ಷೆಗೆ ಒಳಗಾದ ಇನೋವಾ ಕ್ರಿಸ್ತಾಗಳು ಮೆಟಾಲಿಕ್ ಸಿಲ್ವರ್ ಮತ್ತು ಅಟಿಟ್ಯೂಡ್ ಬ್ಲಾಕ್ ಬಣ್ಣದಲ್ಲಿದ್ದವು.
ಟಯೋಟ ಇನೋವಾ ಕ್ರಿಸ್ತಾ ಬ್ಲಾಕ್
ಹೊಸ ಮಾಡೆಲಿನಲ್ಲಿ ಕೆಲವು ಉತ್ತಮ ಲಕ್ಷಣಗಳಿವೆ. ಕಾರಿನ ಹೊರಾಂಗಣ ದೃಶ್ಯವು ದೊಡ್ಡ ಫ್ರಂಟ್ ಗ್ರಿಲ್ ಅನ್ನು ಡ್ಯುಯಲ್ ಕ್ರೋಮ್ ಸ್ಲಾಟ್ಸ್, ಒಂದು ಸ್ಟೈಲಿಶ್ ಜೋಡಿ ಹೆಡ್ ಲ್ಯಾಂಪ್‌ಗಳನ್ನು ಪ್ರೊಜೆಕ್ಟರ್ ಯುನಿಟ್ಸ್ ಜೊತೆಗೆ ಹೊಂದಿದೆ. 5- ಸ್ಪೋಕ್ ಅಲಾಯ್ ವೀಲುಗಳು, ಇಲೆಕ್ಟ್ರಾನಿಕ್ ORVM ಅನ್ನು ಇಂಟಗ್ರೇಟೆಡ್ ಟರ್ನ್ LED ಲೈಟುಗಳು ಮತ್ತು ಬೂಮ್‌ರಾಂಗ್ ಶೇಪಿನ ರೇರಲ್ಲಿ ಟೈಲ್ ಲ್ಯಾಂಪ್‌ಗಳ ಜೊತೆಗಿದೆ.
ಪ್ರೀಮಿಯರ್ ಲೆದರ್ ಇಂಟೀರಿಯರ್, ಆಂಬಿಯಂಟ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಪವರ್ ವಿಂಡೋಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನೇವಿಗೇಶನ್ ಜೊತೆಗೆ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು USB & AUX-IN ಉಳಿದವುಗಳ ಜೊತೆಗಿವೆ. ಸುರಕ್ಷಾ ಲಕ್ಷಣಗಳನ್ನು ಗಮನಕ್ಕೆ ತೆಗೆದುಕೊಂಡರೆ ಹೊಸ ತಲೆಮಾರಿನ ಮಾಡೆಲ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, EBD ಜೊತೆಗೆ ABS ,ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಇತ್ಯಾದಿ ಹೊಂದಿದೆ.
ಟಯೋಟಾ ಇನೋವಾ ಕ್ರಿಸ್ತಾ ರೇರ್ ದೃಶ್ಯ
ಹೊಸ ಇನೋವಾ ಕ್ರಿಸ್ತಾದಲ್ಲಿ ಎರಡು 2 ಇಂಜಿನ್ ಆಯ್ಕೆಗಳಿವೆ. ಒಂದು ಲೀಟರ್ VVT-i ಪೆಟ್ರೊಲ್ ಮತ್ತು ಹೊಸ ಲೀಟರ್ GD ಡೀಸಲ್. ಇನೋವಾ ಕ್ರಿಸ್ತಾದ ಎಂಪಿವಿಯ ಹೊಸ ಪ್ರೀಮಿಯಂ ಪ್ರಕೃತಿಯನ್ನು ಕಂಡಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅದಕ್ಕೆ ಸ್ಪರ್ಧೆ ಇಲ್ಲ. ಸಂಪೂರ್ಣ ವಿಭಾಗವನ್ನು ಗಮನಿಸಿದಲ್ಲಿ ಅದು ಹೋಂಡಾ ಮೊಬಿಲಿ, ಮಾರುತಿ ಸುಜುಕಿ, ಎರ್ಟಿಗಾ ಜೊತೆಗೆ ಸ್ಪರ್ಧೆಯಲ್ಲಿರಬಹುದು. ಅಲ್ಲದೆ ಹ್ಯೂಂಡೈನ ಮುಂಬರುವ ಎಂಪಿವಿ ಕೂಡ ಸ್ಪರ್ಧೆ ನೀಡಬಹುದು.