ವಾಟ್ಸ್ ಆಪ್‌ನಿಂದ ಕಿರಿಕಿರಿಯೆ? ಈ ಟ್ರಿಕ್‌ಗಳು ನಿಮಗೆ ಗೊತ್ತಿದ್ದರೆ ನೀವು ಆರಾಮವಾಗಿರಬಹುದು!
ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಅತೀ ಹೆಚ್ಚಾಗಿ ಬಳಸುವ ವಾಹಿನಿಯಾಗಿದೆ. ನಮ್ಮ ದಿನದ ಬಹುತೇಕ ಸಮಯವನ್ನು ಇದರಲ್ಲೇ ಕಳೆಯುತ್ತೇವೆ. ವಾಟ್ಸಾಪ್ ಅಲ್ಲಿ ಬಹಳಷ್ಟು ಸಮಯ ಕಳೆಯುವವರಿಗೆ ನಿಮ್ಮ ಅನುಭವ ಹೆಚ್ಚಿಸಲು ಕೆಲವು ಸಲಹೆಗಳು ಇಲ್ಲಿವೆ.
ನಿಶ್ಯಬ್ದಪಡಿಸುವ ನೊಟಿಫಿಕೇಶನ್‌ಗಳು
ಬಹಳಷ್ಟು ಮಂದಿ ಒಂದೇ ಗ್ರೂಪಲ್ಲಿ ಸಕ್ರಿಯವಾಗಿರುವಾಗ ದಿನವಿಡೀ ಸಂದೇಶ ಬರುವ ಶಬ್ದ ಮಾಡಿ ಕಿರಿಕಿರಿ ಕೊಡುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ನೀವು ಗ್ರೂಪ್ ಚಾಟ್‌ಗೆ ಹೋಗಿ ಮೆನು ಬಟನ್ ಮೇಲೆ ಒತ್ತಿ ಮತ್ತು ಮ್ಯೂಟ್ ಮಾಡಿಬಿಡಿ. ಎಷ್ಟು ಸಮಯ ಗ್ರೂಪನ್ನು ಮ್ಯೂಟ್ ಮಾಡಬೇಕು ಎನ್ನುವ ಸಮಯ ಬೇಕಾದರೂ ಆರಿಸಿಕೊಳ್ಳಬಹುದು. ಐಒಎಸ್ ಬಳಕೆದಾರರು ಗ್ರೂಪ್ ಚಾಟ್ ತೆರೆದು ಗ್ರೂಪ್ ವಿಷಯದ ಮೇಲೆ ಕ್ಲಿಕ್ ಮಾಡಿದಾಗ ಗ್ರೂಪ್ ಇನ್ಫೊ ತೆರೆದುಕೊಳ್ಳುತ್ತದೆ ಮತ್ತು ಅಲ್ಲಿ ಒತ್ತಿ ಮ್ಯೂಟ್ ಮಾಡಬಹುದು. ಅಲ್ಲೂ ಸಮಯದ ಅವಧಿ ನಿಗದಿ ಮಾಡುವ ಅವಕಾಶವಿದೆ.
ನೀಲಿ ಕಡ್ಡಿಗಳು
ನಿಮ್ಮ ಸುದ್ದಿ ಬಳಕೆದಾರರಿಗೆ ತಲುಪಿದೆಯೇ, ಅವರು ಓದಿದ್ದಾರೆಯೇ ಎಂದೂ ಕಡ್ಡಿಗಳಿಂದ ತಿಳಿದುಕೊಳ್ಳಬಹುದು. ನಿಮ್ಮ ಮಾಹಿತಿ ಎದುರು ಎರಡು ಕಡ್ಡಿಗಳಲ್ಲಿ ರೈಟ್ ಮಾರ್ಕ್ ಇದ್ದರೆ ಬಳಕೆದಾರನಿಗೆ ನಿಮ್ಮ ಸುದ್ದಿ ರವಾನೆಯಾಗಿದೆ, ಆ ಕಡ್ಡಿಗಳು ನೀಲಿ ಬಣ್ಣಕ್ಕೆ ತಿರುಗಿದಲ್ಲಿ ಆತ ಅದನ್ನು ಓದಿದ್ದಾನೆ ಎಂದರ್ಥ.
ಕೊನೆಗೆ ನೋಡಿದ ಸಮಯ ಮತ್ತು ನೀಲಿ ಕಡ್ಡಿಗಳು ಬೇಡ
ನಿಮ್ಮ ಸುದ್ದಿ ಬೇರೆಯವರು ಓದಿರುವುದು ಮತ್ತು ನೀವು ಯಾವಾಗ ಕೊನೆ ಬಾರಿ ವಾಟ್ಸಾಪ್ ನೋಡಿದ್ದೀರಿ ಎನ್ನುವ ಮಾಹಿತಿ ಬೇರೆಯವರಿಗೆ ತಿಳಿಯುವುದು ಬೇಡ ಎಂದಾದಲ್ಲಿ ಸೆಟ್ಟಿಂಗಲ್ಲಿ ಬದಲಾವಣೆ ಮಾಡಿಕೊಳ್ಳಬಹುದು Settings > Account > Privacy ಗೆ ಹೋಗಿ ಬದಲಾವಣೆ ಮಾಡಬಹುದು. ಆಂಡ್ರಾಯ್ಡಾ ಮತ್ತು ಐ ಫೋನಲ್ಲಿ ಈ ಅವಕಾಶ ಸಮಾನವಾಗಿರುತ್ತದೆ. ಆದರೆ ನೀವು ನಿಮ್ಮ ಮಾಹಿತಿಯನ್ನು ಇತರರು ಕಾಣಬಾರದೆಂದು ಅಡಗಿಸಿದರೆ, ಅವರ ಮಾಹಿತಿಯೂ ನಿಮಗೆ ಸಿಗದು.
ಹೊಸ ನಂಬರಿಗೆ ಬದಲಾಗುವುದು
ನೀವು ನಂಬರ್ ಬದಲಿಸಿದ್ದಲ್ಲಿ ಮತ್ತು ನಿಮ್ಮ ದಾಖಲೆಗಳು ಮತ್ತು ಸೆಟ್ಟಿಂಗುಗಳನ್ನು ಹೊಸ ನಂಬರಿಗೆ ಬದಲಿಸಬೇಕಾದಲ್ಲಿ ಸುಲಭವಾಗಿ ಮಾಡಬಹುದು. ನಿಮ್ಮ ಹೊಸ ನಂಬರ್ ಸಕ್ರಿಯವಾಗಿದ್ದರೆ ಮತ್ತು ಕರೆ ಮತ್ತು ಸಂದೇಶ ಪಡೆಯಲು ಸಾಧ್ಯವಾದರೆ ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದು. ಆಂಡ್ರಾಯ್ಡಾ ಫೋನಲ್ಲಿ ಈ ಕೆಳಗಿನ ದಾರಿಯನ್ನು ಬಳಸಬಹುದು.
Tap on Menu > Settings > Account > Change Number
ಐಫೋನಲ್ಲಿ ಈ ಕೆಳಗಿನ ದಾರಿಯನ್ನು ಬಳಸಬಹುದು.
Go to Settings > Account > Change Number
ಟೈಪ್ ಮಾಡಬೇಕಾಗಿಲ್ಲ, ಕೇವಲ ಮಾತಾಡಬಹುದು
ನಿಮಗೆ ಟೈಪ್ ಮಾಡುವಷ್ಟು ಸಮಯವಿಲ್ಲದಿದ್ದರೆ. ಮೈಕ್ ಐಕಾನನ್ನು ಒತ್ತಿ ಹಿಡಿದು ಏನು ಹೇಳಬೇಕೋ ಅದನ್ನು ರೆಕಾರ್ಡ್ ಮಾಡಿ ಎಂಟರ್ ಕೊಡಿ. ನಿಮ್ಮ ಮಾತು ಸಂದೇಶದ ರೂಪದಲ್ಲಿ ಇತರರಿಗೆ ಹೋಗುತ್ತದೆ. ಧ್ವನಿ ಸಂದೇಶವು ನಿಮ್ಮ ಸಮಯವನ್ನು ಉಳಿಸಲು ಉತ್ತಮ.
ನಿಮ್ಮ ಅಕ್ಕಪಕ್ಕ ಇರುವ ಸ್ಥಳವಿವರ ಕಂಡುಕೊಳ್ಳಿ
ಅಟಾಚ್ ಮೆಂಟ್ ಮೇಲೆ ಒತ್ತಿದ ಮೇಲೆ, ಸೆಂಡ್ ಸ್ಥಳದ ಮೇಲೆ ಒತ್ತಿದಾಗ ವಿಂಡೋದಲ್ಲಿ ಮ್ಯಾಪ್ ಬರುತ್ತದೆ ಮತ್ತು ಅದರಲ್ಲಿ ನಿಮ್ಮ ಸ್ಥಳವಿವರ ಕಳುಹಿಸಬಹುದು. ಅಕ್ಕಪಕ್ಕದ ಶಾಲೆಗಳು ಮತ್ತು ರೆಸ್ಟೊರಂಟ್‌ಗಳ ವಿವರವನ್ನೂ ಪಡೆಯಬಹುದು.