ಸುರಕ್ಷಿತ ONLINE ಖರೀದಿಗೆ ಇಲ್ಲಿದೆ ಮಾರ್ಗದರ್ಶಿ
ಅಂತರ್ಜಾಲದಲ್ಲಿ ಕೊಡುವ ಕೊಡುಗೆಗಳು ನಾವು ರಸ್ತೆಬದಿಯ ಮಳಿಗೆಗಳನ್ನು ಬಿಡುವಂತೆ ಮಾಡಿದೆ. ಶಾಪಿಂಗ್ ಎಂದೂ ಇಷ್ಟು ಸರಳವಾಗಿರಲಿಲ್ಲ. ಈಗ ನಾವು ಏನೇ ಬಯಸಿದರೂ ಅದನ್ನು ಖರೀದಿಸುವುದು ಸುಲಭವಾಗಿದೆ. ಬಟ್ಟೆಗಳಿಂದ ಆರಂಭಿಸಿ, ಸರಕು, ಪೀಠೋಪಕರಣಗಳು ಹೀಗೆ ಮನೆಗೆ ಬೇಕಾದ ವಸ್ತುಗಳೆಲ್ಲವೂ ಸಿಗುತ್ತವೆ.
ಶಾಪಿಂಗಿಗೆ ಖರ್ಚು ಮಾಡುವ ಸಮಯವೂ ಕಡಿಮೆಯಾಗಿದೆ. ಹೀಗಾಗಿ ನಿಮಗಾಗಿ ಸುರಕ್ಷೆಯ ಪೂರ್ಣ ಪಟ್ಟಿ ಇಲ್ಲಿದೆ.
ನೀವು ಏನೇ ಖರೀದಿಸಿದರೂ ವೆಬ್‌ತಾಣದ ಅಧಿಕೃತ ವಿವರ ತಿಳಿದುಕೊಳ್ಳಲು ಮರೆಯಬೇಡಿ. ಅಮೆಝಾನ್, ಫ್ಲಿಪ್ ಕಾರ್ಟ್ ಮತ್ತು ಸ್ನಾಪ್‌ಡೀಲ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಕೆಲವು ಡಾಟ್ ಕಾಮ್ ಅಥವಾ ಡಾಟ್ ನೆಟ್ ಎಂದಿರುವುದನ್ನು ಆರಿಸಿ. ಡಾಟ್ ಇನ್ ಬೇಡ. ಪಾಪಪ್ ವಿಂಡೋ ಆಗಿ ಬರುವ ಯಾವುದೇ ವೆಬ್‌ತಾಣದಿಂದ ಏನನ್ನೂ ಖರೀದಿಸಬೇಡಿ. ಅವುಗಳನ್ನು ಕೇವಲ ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಕದಿಯಲು ತಯಾರಿಸಿರಬಹುದು.
ಲಾಕ್‌ಗೆ ಪ್ರಯತ್ನಿಸಿ:
ಬ್ರೌಸರ್ ವಿಂಡೋದಲ್ಲಿ ಕ್ಲೋಸ್ಡ್ ಲಾಕ್ ಇರುವ ಐಕಾನ್ ಹುಡುಕಿ. ಯುಆರ್‌ಎಲ್ ಬಾರ್ ಎದುರು ಅದಿರುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುತ್ತಿದ್ದಲ್ಲಿ ಇದನ್ನು ಗಮನಿಸಲೇಬೇಕು. ಲಾಕ್ ಐಕಾನ್ ಮೇಲೆ ಕ್ಲಿಕ್ ಮಾಡಿ ಭದ್ರತಾ ಪ್ರಮಾಣಪತ್ರ ಇದೆಯೇ ? ಗಮನಿಸಿ. ಇದು ವೆಬ್‌ತಾಣದ ಅಧಿಕೃತತೆ ತೋರಿಸುತ್ತದೆ.
ಹಂಚಿಕೊಳ್ಳುವ ಮಾಹಿತಿಯತ್ತ ಗಮನವಿರಲಿ:
ಆನ್‌ಲೈನ್ ಶಾಪಿಂಗ್ ತಾಣವು ಸಾಮಾನ್ಯವಾಗಿ ಕೇಳುವುದಕ್ಕಿಂತ ಹೆಚ್ಚು ಮಾಹಿತಿಗಾಗಿ ಕೇಳುತ್ತಿದ್ದಲ್ಲಿ ಪಾವತಿಸಬೇಡಿ. ಏಕೆಂದರೆ ಯಾರಾದರೂ ವಂಚಕನ ಕೈಗೆ ಮಾಹಿತಿ ಸಿಕ್ಕರೆ ಗುರುತು ಕದಿಯಬಹುದು.
ಇಮೇಲ್‌ಗಳು ವಂಚನೆ ಹಲವಾರು ಆನ್‌ಲೈನ್ ಮಳಿಗೆಗಳಿಂದ ದೊಡ್ಡ ರಿಯಾಯಿತಿಯ ಸಂದೇಶಗಳು ಬರಬಹುದು. ಪರೀಕ್ಷಿಸದೆ ಮರುಳಾಗಬೇಡಿ. ಅಂತಹ ವೆಬ್ ತಾಣದಲ್ಲಿ ಮಾಹಿತಿ ಕೊಡುವ ಮೊದಲು ಫೋನ್ ಅಥವಾ ಮೇಲ್ ಮೂಲಕ ಖಚಿತಪಡಿಸಿ. ಎಸ್‌ಎಸ್‌ಎಲ್ ಪ್ರಮಾಣಪತ್ರ ಪರೀಕ್ಷಿಸಿ.
ಬಲಿಷ್ಠ ಪಾಸ್ವರ್ಡ್ ಬಳಸಿ
ಈ ಬಗ್ಗೆ ಬಹಳಷ್ಟು ತಿಳಿದುಕೊಂಡಿರಬಹುದು. ದಾಖಲೆಗಳನ್ನು ಗಮನಿಸಿದರೆ ನಾವು ಅದನ್ನು ಪಾಲಿಸುವುದಿಲ್ಲ. ಬಲಿಷ್ಠ ಪಾಸ್ವರ್ಡ್‌ಗಳನ್ನೇ ಆನ್‌ಲೈನ್ ಶಾಪಿಂಗ್ ತಾಣಗಳಿಗೆ ಬಳಸಬೇಕು. ಇದು ಪ್ರಥಮ ರಕ್ಷಣಾ ಕ್ರಮವಾಗಿರುತ್ತದೆ.
ಭದ್ರತಾ ಕೋಡ್ ಪರೀಕ್ಷಿಸಿ
‘verified by VISA/Master secured code programs ಖರೀದಿ ಮಾಡುವುದಾದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳಲ್ಲಿರುವ (ವಿಸಾ/ಮಾಸ್ಟರ್ ಭದ್ರತಾ ಕಾರ್ಯಕ್ರಮಗಳಿಂದ ಪರಿಶೀಲನೆಯಾಗಿದೆ) ಎನ್ನುವ ಚಿಹ್ನೆಗೆ ಸಹಿಮಾಡಿ. ಪ್ರತೀ ವ್ಯವಹಾರದ ಅಧಿಕೃತತೆ ಇದು ಕೊಡುತ್ತದೆ. ಐಸಿಐಸಿಐನಂತಹ ಬ್ಯಾಂಕುಗಳಲ್ಲಿ ದ್ವಿ ಭದ್ರತಾ ವ್ಯವಸ್ಥೆ ಇದೆ. ಸಿವಿವಿ ಮತ್ತು ಪಾಸ್ವರ್ಡ್/ಒಟಿಪಿ ನಿಮ್ಮ ಮೊಬೈಲಿಗೆ ಬಂದ ಮೇಲೆ ವ್ಯವಹಾರ ಮಾಡಬಹುದು. ಇದನ್ನು ನಿಮ್ಮ ಬ್ಯಾಂಕಿನಿಂದ ಕೇಳಿ ಪಡೆದುಕೊಳ್ಳಿ.
ಉಡುಗೊರೆ ಕಾರ್ಡುಗಳ ಬಗ್ಗೆ ಎಚ್ಚರ
ಉಡುಗೊರೆ ಕಾರ್ಡುಗಳು ಯಾರಿಗೆ ಬೇಡ. ಆದರೆ ಅವು ಸ್ಕಾಮರುಗಳಾಗುವುದೇ ಹೆಚ್ಚು. ವೆಬ್‌ತಾಣಗಳಲ್ಲಿ ಸಿಗುವ ಇವುಗಳಿಗೆ ಮೋಸಹೋಗಬೇಡಿ.
ಆಂಟಿ ಮಾಲ್ವರೆ ಸಾಫ್ಟವೇರ್ ಅಪ್‌ಡೇಟ್ ಆಗಿರಲಿ
ಆನ್‌ಲೈನಲ್ಲಿ ಶಾಪಿಂಗ್ ಮಾಡಿದರೂ ಮಾಡದೆ ಇದ್ದರೂ ಇದು ಬೇಕು. ಏಕೆಂದರೆ ಸ್ಕಾಮರ್‌ಗಳು ನಿಮ್ಮ ಡಾಟಾ ಕದಿಯಲು ಕಾಯುತ್ತಿರುತ್ತಾರೆ. ಅದನ್ನು ರಕ್ಷಿಸಲು ಮಾಲ್ವರೆ ಬೇಕು. ಲೇಟೆಸ್ಟ್ ಆಂಟಿ ವೈರಸ್, ಆಂಟಿ ಸ್ಪೈವೇರ್ ಅಥವಾ ಆಂಟಿ ಟ್ರಾಜನ್ ನಿಮ್ಮ ಡಿವೈಸಿನಲ್ಲಿರಲಿ. ಅದನ್ನು ನಿತ್ಯವೂ ಅಪ್‌ಡೇಟ್ ಮಾಡುತ್ತಿರಿ. ಕಾಸ್ಪರ್ಸಕಿ ಮತ್ತು ನಾರ್ಟನ್ ಉತ್ತಮ ಹಣ ನೀಡಿ ಖರೀದಿಸಬಹುದಾದ ಸಾಫ್ಟ್‌ವೇರ್‌ಗಳು.