ಮ್ಯಾಕ್ ಬುಕ್ ನ ಲುಕ್ 14 ಗಂಟೆರೀ ಇದರ ಬ್ಯಾಟರಿ, ಬೆಲೆ ಕೇವಲ 20 ಸಾವಿರ ರೂ! ಇನ್ನೇನು ಬೇಕು?
ಅಗ್ಗದಲ್ಲಿ ಪ್ರೀಮಿಯಂ ಲುಕ್ ಇರುವ ಲಾಪ್ ಟಾಪ್ ಹುಡುಕುತ್ತಿದ್ದರೆ, ಆಕ್ಸರ್ ಮಳಿಗೆಗೆ ಹೋಗಬೇಕು. ತೈವಾನಿ ಕಂಪ್ಯೂಟರ್ ತಯಾರಕ ಮಂಗಳವಾರ ಆಕ್ಸರ್ ಕ್ರೋಮ್ ಬುಕ್ 14 ಘೋಷಿಸಿದ್ದಾರೆ. ಈ ನೋಟ್ ಬುಕ್‌ನಲ್ಲಿ 14 ಗಂಟೆಗಳ ಬ್ಯಾಟರಿ ಇದೆ. ರೂ 19,900ಕ್ಕೆ ಲಭ್ಯವಿದೆ.
ಆಕ್ಸರ್ ಕ್ರೋಮ್ ಬುಕ್ 14 ಮೂಲಕ ತೈವಾನಿ ಕಂಪನಿ ಕ್ರೋಮ್ ಬುಕ್ ಬಳಕೆದಾರರಿಗೆ ಹೆಚ್ಚಿನ ಆಯ್ಕೆ ಕೊಡುತ್ತಿದ್ದಾರೆ. 11 ಇಂಚ್ ಡಿಸ್ಪಲೇ ಬದಲಾಗಿ ಆಕ್ಸರ್ ಕ್ರೋಮ್ ಬುಕ್ 14 ಇಂಚ್ ಡಿಸ್ಪಲೇ ಕೊಡುತ್ತಿದೆ. ಎರಡು ಸ್ಕ್ರೀನ್ ರೆಸೊಲ್ಯುಷನಲ್ಲಿ ಲಭ್ಯವಿದೆ. ಪೂರ್ಣ ಎಚ್‌ಡಿ ಇದೆ. ಆಲ್ ಮೆಟಲ್ ಚಾಸಿ ಇದೆ. ಆಕ್ಸರ್ ಪ್ರಕಾರ ಮಾಡೆಲ್ 1080ಪಿ ಡಿಸ್ಪಲೇ 12 ಗಂಟೆಗಳ ಕಾಲ ಬರಲಿದೆ. ಮತ್ತೊಂದು ಮಾಡೆಲ್ 14 ಗಂಟೆಗಳ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದಾಗ ಕೊಡಲಿದೆ.
ಪ್ರೊಸೆಸರ್ ಬಗ್ಗೆ ಹೇಳಬೇಕೆಂದರೆ ಆಕ್ಸರ್ ಬಳಕೆದಾರರಿಗೆ ಕ್ವಾಡ್ ಕೋರ್ ಇಂಟೆಲ್ ಸೆಲೆರಾನ್ ಪ್ರೊಸೆಸರ್ ಮತ್ತು ಡ್ಯುಯಲ್ ಕೋರ್ 1.6 ಜಿಗಾಹರ್ಟ್ಸ್ ಇಮಟೆಲ್ ಸೆಲೆರಾನ್ ಎನ್3060 ಪ್ರೊಸೆಸರ್ ನಡುವೆ ಆಯ್ಕೆಯಿದೆ. ಇತರ ಲಕ್ಷಣಗಳಲ್ಲಿ 2ಜಿಬಿ ಮತ್ತು 4ಜಿಬಿ , 16 ಜಿಬಿ ಅಥವಾ 32 ಜಿಬಿ ಸಂಗ್ರಹವಿದೆ. ಡ್ಯುಯಲ್ ಬ್ಯಾಂಡ್ 802.11ಎಸಿ ವೈಫೈ, ಎರಡು ಯುಎಸ್‌ಬಿ 3.1 ಟೈಪ್ ಎ ಪೋರ್ಟ್, ಒಂದು ಔಟ್ ಮತ್ತು ಎಚ್‌ಡಿ ವೆಬ್‌ಕ್ಯಾಮ್ ಇದೆ. ಸಾಫ್ಟವೇರಲ್ಲಿ ಆಕ್ಸರ್ ಕ್ರೋಮ್ ಬುಕ್ 14 ಕ್ರೋಮ್ ಒಎಸ್ ಬಳಸುತ್ತದೆ.
ಉದ್ಯಮದಲ್ಲೇ ಅತೀ ಹೆಚ್ಚು 14 ಗಂಟೆಗಳ ಬಾಳಿಕೆ ಬರುವ ಬ್ಯಾಟರಿ ಮೂಲಕ ಆಕ್ಸರ್ ಕ್ರೋಮ್ ಬುಕ್ 14 ಒಂದು ಪ್ರಮುಖ ಹೊಸ ಉತ್ಪನ್ನವಾಗಿದೆ ಎಂದು ಆಕ್ಸರ್ ನೋಟ್ಬುಕ್ ಬ್ಯುಸಿನೆಸ್ ಗ್ರೂಪ್ ಅಧ್ಯಕ್ಷ ಜೆರಿ ಕಾವೋ ಹೇಳಿದ್ದಾರೆ. ಕ್ರೋಮ್ ಬುಕ್ 14ಗೆ ಆಕ್ಸರ್ ಸಾಗಾಟ ವಿವರ ಕೊಟ್ಟಿಲ್ಲ. ಆದರೆ ಕಂಪನಿ ಪ್ರಕಾರ ಪ್ರಾಥಮಿಕ ಮಾಡೆಲ್ 32 ಜಿಬಿ ಸಂಗ್ರಹದ, 4ಜಿಬಿ ರಾಮ್, ಪೂರ್ಣ ಎಚ್‌ಡಿ ಡಿಸ್ಪಲೇ ಮತ್ತು ಡ್ಯುಯಲ್ ಕೋರ್ ಪ್ರೊಸೆಸರ್ 300 ಡಾಲರ್ ಗೆ ಸಿಗಲಿದೆ.