ಭಾರತಕ್ಕೂ ಬರಲಿದೆ ಹೊಸ ರೆನೊ ಕ್ಯಾಪ್ಚರ್
ರಷ್ಯಾಕ್ಕೂ ವ್ಯಾಪಿಸಿರುವ ರೆನಾಲ್ಟ್ ಅಧಿಕೃತವಾಗಿ 5 ಸೀಟುಗಳ ಕ್ರಾಸ್ ಓವರ್ ಕ್ಯಾಪ್ಟರ್ ಅನ್ನು ಪರಿಚಯಿಸುತ್ತಿದೆ. ಈಗ ನಾವು ಸರಿಯಾಗಿ ಉಚ್ಛರಿಸಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಇದು ಯುರೋಪಿನ ಹ್ಯಾಚ್ ಕ್ಯಾಪ್ಚರ್ ಅಲ್ಲ. ಇದನ್ನು ಮೊದಲಿಗೆ ರಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲದಿನಗಳಲ್ಲಿ ಭಾರತಕ್ಕೂ ಬರುವ ಸಾಧ್ಯತೆಯಿದೆ.
ರೆನಾಲ್ಟ್ ಕ್ಯಾಪ್ಚರ್ ಫ್ರಂಟ್
ಈ ಕಾರು ಯುರೋಪಿನ ಕ್ಯಾಪ್ಚರ್‌ನಿಂದ ಎಷ್ಟು ಭಿನ್ನವಾಗಿದೆ? ಹೆಚ್ಚೇನೂ ಇಲ್ಲ. ಕ್ಯಾಪ್ಚರ್ ಹಿಂದೆಂದೂ ಪಡೆಯದ ಆಲ್ ವೀಲ್ ಡ್ರೈವ್ ವ್ಯವಸ್ಥೆ ಇದೆ. ಇದರ ಯುರೋಪಿಯನ್ ದ್ವಿಅಳತೆಯ 4333 ಎಂಎಂ ಉದ್ದಕ್ಕಿಂತ 210 ಎಂಎಂ ಇನ್ನೂ ಹೆಚ್ಚು ಉದ್ದವಿದೆ. ಲಾಕಿಂಗ್ ಸೆಂಟರ್ ಡಿಫರೆನ್ಷಿಯಲ್, ಇಲವೇಟೆಡ್ ರೈಡ್ ಹೈಟ್ ಮತ್ತು ಹೆವಿಯರ್ ಡ್ಯೂಟಿ ಸಸ್ಪೆನ್ಷನ್ ಇದು ಹೊಂದಿದೆ. ಹೋಲಿಸಿದಾಗ ವಿನ್ಯಾಸದಲ್ಲಿ ಸಾಮ್ಯತೆಗಳಿದ್ದರೂ ಮಸ್ಕ್ಯುಲರ್ ಫ್ರಂಟ್ ಬಂಪರ್ ಕಾರಣದಿಂದ ಹೆಚ್ಚು ರೌದ್ರವಾಗಿ ಕಾಣಿಸುತ್ತದೆ. ಹೆಚ್ಚು ರಗ್ಡ್ ಮತ್ತು ಅಗಲವಾಗಿದೆ. ಸಿ ಆಕಾರದ ಡಿಆರ್‌ಎಲ್‌ಗಳನ್ನು ಉತ್ತಮವಾಗಿ ಜೋಡಿಸಲಾಗಿದೆ.
ರೆನಾಲ್ಟ್ ಕ್ಯಾಪ್ಚರ್ ಕ್ಯಾಬಿನ್ (ಮ್ಯಾನುವಲ್)
ಸರಳವಾದ ಸ್ವಚ್ಛವಾಗಿ ಕಾಣುವ ಇಂಟೀರಿಯರ್ ಇದೆ.
ಭಾರತದ ರೆನಾಲ್ಟ್ ಡಸ್ಟರಲ್ಲಿ ಇರುವಂತೆ 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಮತ್ತು ಕ್ಲೈಮೇಟ್ ಕಂಟ್ರೋಲ್ ಇದರಲ್ಲಿದೆ. ರೆನಾಲ್ಟ್ ಕ್ಯಾಪ್ಚರ್ ಕ್ಯಾಬಿನ್ (ಆಟೋಮ್ಯಾಟಿಕ್)
ರೆನಾಲ್ಟ್ ತಾಂತ್ರಿಕ ನಿರ್ದಿಷ್ಟತೆಗಳನ್ನು ಇನ್ನೂ ಹೇಳಿಲ್ಲ. ಚಿತ್ರಗಳಲ್ಲಿ ಕಾಣುವಂತೆ 6 ವೇಗದ ಆಟೋಮ್ಯಾಟಿಕ್ ವೇರಿಯಂಟ್ ಇದೆ. ಕಾರನ್ನು ರಷ್ಯಾದಲ್ಲಿ ರೆನಾಲ್ಟ್ ಮಾಸ್ಕೋ ಘಟಕದಲ್ಲಿ ನಿರ್ಮಿಸಲಾಗುವುದು. 2016 ಸಾವೋ ಪೌಲೋ ಅಂತಾರಾಷ್ಟ್ರೀಯ ಮೋಟಾರ್ ಶೋನಲ್ಲಿ ಕಾರನ್ನು ಪ್ರದರ್ಶಿಸುವ ಸಾಧ್ಯತೆಯಿದೆ. ಬ್ರೆಜಿಲಲ್ಲಿ 2017ರಲ್ಲಿ ಪರಿಚಯಿಸಿದ ಮೇಲೆ ಇದು ಭಾರತಕ್ಕೂ ಬರಬಹುದು.