ಎಲ್ಲೆಲ್ಲಿ ಯಾಕೆ? ಭಾರತದಲ್ಲೇ ನೋಡಿ ಈ 10 ಅತ್ಯುತ್ತಮ ಸ್ಥಳಗಳನ್ನು!
ಪ್ರತೀ ವರ್ಷ ಪ್ರಯಾಣ ವೆಬ್ತಾಣ ಟ್ರಿಪ್ ಅಡ್ವೈಸರ್ ತನ್ನ ಪ್ರಯಾಣದ ಆಯ್ಕೆಯ ಸ್ಥಳಗಳನ್ನು ಸೂಚಿಸುತ್ತದೆ. ತಮ್ಮ ಬಳಕೆದಾರರು ನೀಡಿದ ಮಾಹಿತಿಗೆ ಅನುಗುಣವಾಗಿ ಅವರು ಇಲ್ಲಿ 2016ರ ಟಾಪ್ 10 ಭಾರತೀಯ ನಗರಗಳನ್ನು ಪಟ್ಟಿ ಮಾಡಿದ್ದಾರೆ.
1. ದೆಹಲಿ: ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲ್ಯೂಟನ್ಸ್ ಇಟ್ಟ ಆಧುನಿಕತೆಯ ಗಂಧ ಈಗಲೂ ದೆಹಲಿಯಲ್ಲಿ ಕಾಣಬಹುದು. ಹಳೇ ದೆಹಲಿಯ ರಸ್ತೆಗಳಿಗೂ ನವದೆಹಲಿಯ ಒಪ್ಪವಾದ ಕಟ್ಟಡಗಳಿಗೂ ಅಜಗಜಾಂತರ ಅಂತರ. ಶ್ರೀಮಂತ ಮತ್ತು ಐತಿಹಾಸಿಕ ಸಂಸ್ಕೃತಿ. ಗಾಂಧಿ ಮನೆಯಿಂದ ಹುಮಾಯೂನ್ ಸಮಾಧಿವರೆಗೆ ಮೊಘಲರ ಸಂಕೇತಗಳು ಇಲ್ಲಿವೆ. ಗೊಂದಲಮಯ ಸಾರಿಗೆಯನ್ನು ಸ್ಥಳೀಯರಿಗೆ ಬಿಡಿ. ಟಾಕ್ಸಿ ಅಥವಾ ದೆಹಲಿ ಮೆಟ್ರೋ ಪ್ರಯಾಣ ಉತ್ತಮ.
2. ಜೈಪುರ, ರಾಜಸ್ಥಾನ: ಜೈಪುರದ ಅಗಲವಾದ ರಸ್ತೆಗಳ ಉದ್ದಕ್ಕೂ ಇರುವ ಕಟ್ಟಡಗಳನ್ನು ನೋಡಿದರೆ ಪಿಂಕ್ ಸಿಟಿ ಎನ್ನುವ ಹೆಸರೇಕೆ ಬಂತು ಎಂದು ತಿಳಿಯುತ್ತದೆ. ನಗರದ ಅರಮನೆ ಹವಾ ಮಹಲ್, ಅಂಬರ್ ಮತ್ತು ಜೈಗಢ ಕೋಟೆಗಳು ಪ್ರಮುಖ ಆಕರ್ಷಣೆ. ನೆನಪಿಗೆ ಏನಾದರೂ ಕೊಳ್ಳಬೇಕಿದ್ದರೆ ಬಾಜಾರುಗಳು ಬೇಕಾದಷ್ಟಿವೆ.
3. ಗೋವಾ: ಭಾರತೀಯ ಸಂಸ್ಕೃತಿ ವಿದೇಶಿ ಸಂಸ್ಕೃತಿ ಜೊತೆ ಮಿಳಿತವಾಗುವ ರಾಜ್ಯ. ಕಡಲತೀರ, ರೆಸಾರ್ಟ್ಗಳು, ದೇವಾಲಯ, ಮಸೀದಿ, ವನ್ಯಜೀವಿ ಮೊದಲಾದ ಆಕರ್ಷಣೆಗಳಿವೆ.
4. ಮುಂಬೈ, ಮಹಾರಾಷ್ಟ್ರ: ಭಾರತದ ವಾಣಿಜ್ಯ ನಗರಿ. ಶಾಪಿಂಗಿಗೆ ಉತ್ತಮ ಸ್ಥಳ. ಮರೀನ್ ಡ್ರೈವಲ್ಲಿ ಅರಬ್ಬೀ ಸಮುದ್ರದ ಸೂರ್ಯಾಸ್ತ ನೋಡಬಹುದು. ಹಬ್ಬದ ಸಂಭ್ರಮ ಕೊಡಲಿದೆ ಜುಹು ಕಡಲತೀರ. ಗಾಂಧಿ ಮ್ಯೂಸಿಯಂ, ಎಲಿಫೆಂಟಾ ದ್ವೀಪ ಮತ್ತೊಂದು ಆಕರ್ಷಣೆ. ಹಲವು ಧಾರ್ಮಿಕ ತಾಣಗಳೂ ಇವೆ.
5. ಉದಯಪುರ, ರಾಜಸ್ಥಾನ: ಉದಯಪುರ ಪೂರ್ವದ ವೆನಿಸ್ ನಗರಿ ಎಂದು ಹೆಸರು ಪಡೆದಿದೆ. ಅರವಳಿ ಗುಡ್ಡಗಳ ತಪ್ಪಲಲ್ಲಿ ಸರೋವರಗಳ ನಡುವಿನ ನಗರ. ಫತೇ ಸಾಗರ್ ಸರೋವರದ ದ್ವೀಪಗಳು ಜಗ್ ನಿವಾಸ್ ಮತ್ತು ಜಗ್ ಮಂದಿರ, ಉದಯಪುರದ ಗ್ರಹ ವೀಕ್ಷಣಾಲಯ ಮತ್ತು ನೆಹರು ಗಾರ್ಡನ್ ಉತ್ತಮ ಆಕರ್ಷಣೆ. ಮಾಂತ್ರಿಕ ಸರೋವರ ಅರಮನೆ, ದುಬಾರಿ ಪಂಚತಾರ ಹೊಟೇಲುಗಳು ಮತ್ತು ನಗರ ಅರಮನೆ ಅದ್ಭುತ ಚಿತ್ರಕಲೆಗಳ ಬೀಡು.
6. ಜೈಸಲ್ಮೇರ್, ರಾಜಸ್ಥಾನ: ರಾಜಸ್ಥಾನದ ಮರುಭೂಮಿಯೇ ದೊಡ್ಡ ಆಕರ್ಷಣೆ. ಚಿನ್ನದ ನಗರಿ ಇಲ್ಲಿನ ಒಂಟೆಗಳ ಮೇಲಿನ ಪ್ರಯಾಣಕ್ಕೆ ಪ್ರಸಿದ್ಧಿ. 12ನೇ ಶತಮಾನದ ಹವೇಲಿಗಳು, ಮಧ್ಯಯುಗದ ಲೇನ್ಗಳಿವೆ. ಮರುಭೂಮಿಯ ರಾಷ್ಟ್ರೀಯ ಉದ್ಯಾನವನ ಸಾರಂಗಗಳು, ತೋಳಗಳು ಮತ್ತು ಕೃಷ್ಣಮೃಗಗಳನ್ನು ನೋಡಲು ಉತ್ತಮ ತಾಣ.
7. ಬೆಂಗಳೂರು, ಕರ್ನಾಟಕ: ಉದ್ಯಾನನಗರಿ ಮತ್ತು ಭಾರತದ ಸಿಲಿಕಾನ್ ಕಣಿವೆ ಎಂದು ಹೇಳಲಾಗುವ ಬೆಂಗಳೂರು ತಂತ್ರಜ್ಞಾನಿಗಳ ಸ್ವರ್ಗ. ದೇಶದ ಐಟಿ ಕಂಪನಿಗಳು ಇಲ್ಲಿ ಕೇಂದ್ರೀಕರಿಸಿವೆ. ತಿರುಗಾಡಬೇಕೆಂದರೆ ಸಾಕಷ್ಟು ಉದ್ಯಾನವನ, ಮ್ಯೂಸಿಯಂ, ಪ್ರಕೃತಿ, ಅರಮನೆ ಮತ್ತು ದೇವಾಲಯಗಳಿವೆ. ವಿಧಾನಸೌದ, ಕಬ್ಬನ್ ಪಾರ್ಕ್ ಮತ್ತು ಅಲಸೂರು ಕೆರೆಗೆ ಭೇಟಿ ಕೊಡಲೇಬೇಕು. ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಕೇಂದ್ರವೂ ಹೌದು, ಡಿಸ್ಕೋ ಥೆಕ್ಗಳ ನಗರಿಯೂ ಹೌದು.
8. ಆಗ್ರಾ, ಉತ್ತರಪ್ರದೇಶ: ಪ್ರೇಮದ ಪ್ರತೀಕ ತಾಜ್ ಮಹಲ್ ಹೊರತಾಗಿ ಇನ್ನೆಲ್ಲಿಗೆ ರೊಮ್ಯಾಂಟಿಕ್ ರಜಾ ಹೋಗಬಹುದು? ಮೊಘಲ್ ರಾಜ ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲಳಿಗಾಗಿ ಕಟ್ಟಿದ ತಾಜ್ ಮಹಲ್ ಸೌಂದರ್ಯವೇ ಅದಕ್ಕೆ ಜಗತ್ತಿನ ಎಂಟು ಅಚ್ಚರಿಗಳಲ್ಲಿ ಜಾಗಕೊಟ್ಟಿದೆ. ಭಾರತಕ್ಕೆ ಭೇಟಿ ನೀಡಿ ತಾಜ್ ಮಹಲ್ ನೋಡದೆ ಇದ್ದರೆ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಆಗ್ರಾದಲ್ಲಿ ಯುನೆಸ್ಕೊ ಪಾರಂಪರಿಕ ತಾಣಗಳಾದ ಸ್ಯಾಂಡ್ ಸ್ಟೋನ್ ಕೆಂಪು ಕೋಟೆ ಮತ್ತು ಫತೇಪುರ್ ಸಿಕ್ರಿ ಕೂಡ ಇದೆ
9.ಕೊಚ್ಚಿ, ಕೇರಳ: ಹುಳಿ ಮತ್ತು ತೆಂಗಿನಕಾಯಿ ಬೆರೆತ ಮಸಾಲೆ ಆಹಾರಗಳು. ಬಾಳೆಎಲೆ ಊಟ. ಪಾರಂಪರಿಕ ಕೊಚ್ಚಿ ಊಟ ಬಹಳ ಚೆನ್ನಾಗಿರುತ್ತದೆ. ಎಳನೀರು ಮತ್ತೊಂದು ಆಕರ್ಷಣೆ.
10. ಮನಾಲಿ, ಹಿಮಾಚಲ ಪ್ರದೇಶ: ಜಗತ್ತನ್ನೇ ನಾಶ ಮಾಡಿದ ಪ್ರವಾಹದಲ್ಲಿ ಮನು ಬದುಕುಳಿದ ಎಂದು ಹಿಂದೂವಾದ ಹೇಳುತ್ತದೆ. ನಂತರ ಆತ ಕುಲು ಕಣಿವೆಯ ಪಟ್ಟಣದೊಂದಿಗೆ ಮನುಕುಲವನ್ನು ಆರಂಭಿಸಿದ ಎನ್ನುವ ಮಾತೂ ಇದೆ. ಮನಾಲಿ ಸಾಹಸ ಪ್ರಯಾಣಿಗರು, ಹೆಲಿ ಸ್ಕೈಯಿಂಗ್, ಹೈಕಿಂಗ್, ಪರ್ವತಾರೋಹಣ ಮತ್ತು ರಿವರ್ ರಾಫ್ಟಿಂಗ್ ಬಯಸುವವರಿಗೆ ಉತ್ತಮ ತಾಣ. ಇಲ್ಲಿನ ಮರದ ಹಿಡಿಂಬ ದೇವಿ ದೇಗುಲ ಆರ್ಯುವೇದ ಔಷಧಿ ಬಯಸುವವರಿಗೆ ಮತ್ತೊಂದು ಆಕರ್ಷಣೆ.