ಸ್ಯಾಮ್ಸಂಗ್ ತರಲಿದೆ ಮಡಚಿಡುವ ಸ್ಮಾರ್ಟ್ ಫೋನ್
ಸಿಯೋಲ್: ದಕ್ಷಿಣ ಕೊರಿಯಾದ ಸ್ಮಾರ್ಟ್ ಫೋನ್ ಕಂಪನಿ ಸ್ಯಾಮ್‌ಸಂಗ್ ಮುಂದಿನ ವರ್ಷ ಮಡಚಿ ಇಡಬಹುದಾದ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ.
ಮಡಚಿದಾಗ ಐದು ಇಂಚಿನ ಸ್ಮಾರ್ಟ್‌ಫೋನ್ ಆದರೆ, ತೆರೆದಾಗ 7 ಇಂಚಿನ ಟ್ಯಾಬ್ಲೆಟ್ ಆಗಲಿದೆ ಎಂದು ಹೇಳಲಾಗಿದೆ.
ಹೀಗೆ ಮಡಚುವ ಫೋನ್‌ನ ಮಾದರಿ ಸಿದ್ಧವಾಗಿದ್ದು, ದೊಡ್ಡ ಪ್ರಮಾಣದ ಉತ್ಫಾದನೆ ಈ ವರ್ಷದ ಉತ್ತರಾರ್ಧದಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಇದಕ್ಕೆ ಅಗತ್ಯವಾದ ಎಲ್ಲ ತಂತ್ರಜ್ಞಾನಗಳನ್ನು ಈಗಾಗಲೇ ಸ್ಯಾಮ್‌ಸಂಗ್ ಸಿದ್ಧಪಡಿಸಿದೆ. ಓಎಲ್‌ಇಡಿ ಡಿಸ್‌ಪ್ಲೇ ಇರುವ ಫೋನನ್ನು ಪುಸ್ತಕದಂತೆ ಅರ್ಧದಿಂದ ಮಡಚಬಹುದಾಗಿದೆ. ವ್ಯಾಲೆಟ್‌ನಂತೆ ಒಯ್ಯಬಹುದಾದ ಇದನ್ನು ತೆರೆದು ಟ್ಯಾಬ್ಲೆಟ್‌ನಂತೆ ಬಳಸಬಹುದು.
"ನಮ್ಮ ಯೋಜನೆಯಂತೆ ಮಡಚಬಹುದಾದ ಓಎಲ್‌ಇಡಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಪಾಲುದಾರರ ಜತೆ ಚರ್ಚಿಸಲಾಗುತ್ತಿದೆ ಎಂದು ಸ್ಯಾಮ್‌ಸಂಗ್ ಡಿಸ್‌ಪ್ಲೇ ನಿರ್ದೇಶಕ ಲೀ ಚಾಂಗ್ ಹೂನ್ ಹೇಳುತ್ತಾರೆ.