ಯಕ್ಷಗಾನ ಕಲಾವಿದ ಕೇಶವ ಶೆಟ್ಟಿಗಾರ್ ನಿಧನ
ಕಿನ್ನಿಗೋಳಿ, ಎ.6: ಯಕ್ಷಗಾನ ಕಲಾವಿದ ಕೇಶವ ಶೆಟ್ಟಿಗಾರ್ (53) ಮಂಗಳವಾರ ನಿಧನರಾದರು.
ಕಟೀಲು 2ನೇ ಮೇಳದಲ್ಲಿ ಕಲಾವಿದರಾಗಿದ್ದ ಅವರು ಯಶೋಮತಿ, ಮಾಲಿನಿ, ನಂದಿನಿ, ಶಶಿಪ್ರಭೆ ಯಂತಹ ಪಾತ್ರಗಳನ್ನು ಮನೋಜ್ಞವಾಗಿ ಮಾಡುತ್ತಿದ್ದರು. ಚಂಡಮುಂಡ, ಅಭಿಮನ್ಯು, ಬ್ರಹ್ಮ ವಿಷ್ಣು, ಕುಶಲವದಂತಹ ಪುಂಡು ವೇಷದಿಂದ ಪ್ರಸಿದ್ಧರಾಗಿದ್ದ ಅವರು 13ನೇ ವಯಸ್ಸಿನಲ್ಲಿ ಪಡ್ರೆ ಚಂದುರವರಿಂದ ನಾಟ್ಯಾಭ್ಯಾಸ ಮಾಡಿದರು. 13 ವರ್ಷ ಕಟೀಲು ಮೇಳದಲ್ಲಿ ಸತತ ತಿರುಗಾಟ ಮಾಡಿದ್ದರು. ಬಳಿಕ ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿದ ಅವರು ಅಲ್ಲಿಯೂ ಗೀತಾಂಬಿಕ ಯಕ್ಷಗಾನ ಮಂಡಳಿಯಲ್ಲಿ ಕ್ರಿಯಾಶೀಲರಾಗಿದ್ದರು. ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
Next Story