ಪಿ.ಎಂ.ಅಬ್ದುಲ್ ಖಾದರ್ ಮಲಾರ್
ಉಳ್ಳಾಲ, ಎ.6: ಪಾವೂರು ಗ್ರಾಮದ ಮಲಾರ್ ಅರಸ್ತಾನ ನಿವಾಸಿ ಐ.ಎಸ್.ಅಬ್ದುಲ್ ಖಾದರ್(76) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ಪತ್ರಕರ್ತ ಹಂಝ ಮಲಾರ್ ಸಹಿತ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರು ಕೃಷಿ ಮತ್ತು ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿ, ಮಲಾರ್ ಅರಸ್ತಾನ ಹಯಾತುಲ್ ಇಸ್ಲಾಂ ದಫ್ ಕಮಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಐ.ಎಸ್. ಬೀಡಿ ಮೂಲಕ ಐ.ಎಸ್.ಖಾದರ್ ಎಂದೇ ಖ್ಯಾತರಾಗಿದ್ದರು.
Next Story