ಯಕ್ಷಗಾನ ಕಲಾವಿದ ಕೇಶವ ಶೆಟ್ಟಿಗಾರ್
ಕಿನ್ನಿಗೋಳಿ, ಎ.6: ಯಕ್ಷಗಾನ ಕಲಾವಿದ ಕೇಶವ ಶೆಟ್ಟಿಗಾರ್(53) ಮಂಗಳವಾರ ನಿಧನರಾದರು.
ಮೃತರು ಕಟೀಲು 2ನೆ ಮೇಳದಲ್ಲಿ ಕಲಾವಿದರಾಗಿದ್ದರು. ಯಶೋಮತಿ, ಮಾಲಿನಿ, ನಂದಿನಿ, ಶಶಿಪ್ರಭೆಯಂತಹ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಚಂಡ ಮುಂಡ, ಅಭಿಮನ್ಯು, ಬ್ರಹ್ಮ ವಿಷ್ಣು, ಕುಶ ಲವದಂತಹ ಪುಂಡು ವೇಷಕ್ಕೆ ಪ್ರಸಿದ್ಧಿ ಪಡೆದಿದ್ದರು.
ಸತತ 13 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ್ದರು. ಬಳಿಕ ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿ, ಅಲ್ಲಿಯೂ ಗೀತಾಂಬಿಕ ಯಕ್ಷಗಾನ ಮಂಡಳಿಯಲ್ಲಿ ಕ್ರಿಯಾಶೀಲರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
Next Story