ನಿಮ್ಮ ಮೊಬೈಲ್ ಕಳಕೊಂಡ ಮೇಲೂ ಅದರ ಡಾಟಾ ಡಿಲೀಟ್ ಮಾಡಬಹುದು !
ಇನ್ನೂ ಹಲವು ಉಪಯುಕ್ತ ಟಿಪ್ ಗಳು ಇಲ್ಲಿವೆ
ನಿಮ್ಮ ಆಂಡ್ರಾಯ್ಡಾ ಫೋನ್‌ಗಳ ಎಲ್ಲ ಸಾಧ್ಯತೆಗಳನ್ನೂ ನೀವು ಕಂಡುಕೊಂಡಿರಬಹುದು. ಅದರೆ ನಿಮ್ಮ ಕೈಗೆಟುಕುವ ಕೆಲ ಸೂತ್ರಗಳ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಅನುಭವಗಳನ್ನು ಇನ್ನಷ್ಟು ಉತ್ತಮಪಡಿಸಬಹುದು. ಇದಕ್ಕೆ ವಿಶೇಷ ಪ್ರಯತ್ನವೂ ಬೇಡ; ಹೆಚ್ಚುವರಿ ಆಪ್ ಕೂಡಾ ಬೇಡ. ನಿಮ್ಮ ಫೋನ್‌ನ ಕೆಲ ಉಪಯುಕ್ತ ಲಕ್ಷಣಗಳನ್ನು ಗಮನವಿಟ್ಟು ನೋಡಿದರೆ ಸಾಕು.
1. ಸ್ಕ್ರೀನ್ ಪಿನ್ ಮಾಡಿ
ಇದು ಅಷ್ಟೊಂದು ಜನಪ್ರಿಯವಾಗದ ವಿಶೇಷತೆ. ಗುಂಪಿನಲ್ಲಿದ್ದಾಗ ಯಾವುದೇ ವಿಡಿಯೊ ತುಣುಕು ಅಥವಾ ಚಿತ್ರಗಳನ್ನು ಹಂಚಿಕೊಳ್ಳಲು ಸಹಕಾರಿ. ಯಾವುದೇ ಮಾಹಿತಿ ಕಳೆದುಹೋಗುವ, ದುರ್ಬಳಕೆ ಸಾಧ್ಯತೆ ಇಲ್ಲ. ಹೆಸರೇ ಸೂಚಿಸುವಂತೆ ಸ್ಕ್ರೀನ್ ಪಿನ್ನಿಂಗ್ ನಿಮ್ಮ ಸ್ಕ್ರೀನನ್ನು ಲಾಕ್ ಮಾಡಿದರೂ, ಇತರರು ಅದನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.
2. ಫೋನ್ ಮುಟ್ಟದೇ ವಾಟ್ಸಾಪ್ ಮೆಸೇಜ್ ಕಳುಹಿಸಿ
ಆಂಡ್ರಾಯ್ಡಾನ ಗೂಗಲ್ ನೌ ವಿಭಿನ್ನ ಧ್ವನಿ ಸಂದೇಶಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅದರಲ್ಲಿ ವಾಟ್ಸಪ್ ಸಂದೇಶ ಕಳುಹಿಸಲೂ ಸಾಧ್ಯವೇ? "ಸೆಂಡ್ ಎ ವಾಟ್ಸಪ್ ಮೆಸೇಜ್" ಎಂದು ಹೇಳಿ. ಅದು ಯಾರಿಗೆ ಎಂದು ನಿಮ್ಮನ್ನು ಕೇಳುತ್ತದೆ. ಮತ್ತು ಸಂದೇಶ ಏನು ಎಂದು ಕೇಳುತ್ತದೆ. ಅದು ಕೇಳಿದ್ದಕ್ಕೆ ಉತ್ತರಿಸಿ, ಉಳಿದ ಕೆಲಸವನ್ನು ಗೂಗಲ್ ನೌ ಮಾಡುತ್ತದೆ.
3. ಲಾಕ್ ಸ್ಕ್ರೀನ್‌ನಲ್ಲಿ ಮಾಲೀಕನ ಮಾಹಿತಿ ತೋರಿಸಿ
ಇದು ಸರಳ. ಪರಿಣಾಮಕಾರಿ ವಿಧಾನ. ನಿಮ್ಮ ಕಳೆದುಹೋದ ಫೋನ್ ಪಡೆಯಲು ಸುಲಭ ವಿಧಾನ. "ಷೋ ಓನರ್ ಇನ್ಫೋ ಆನ್ ಲಾಕ್ ಸ್ಕ್ರೀನ್’ ನಿಮ್ಮಲ್ಲಿ ಮಾಹಿತಿ ದಾಖಲಿಸಲು ಕೇಳುತ್ತದೆ. ಇದನ್ನು ದಾಖಲಿಸಿದರೆ ಲಾಕ್ ಸ್ಕ್ರೀನ್‌ನಲ್ಲಿ ಅದನ್ನು ಪ್ರದರ್ಶಿಸುತ್ತದೆ. ಇಮೇಲ್ ವಿಳಾಸ ಅಥವಾ ಪರ್ಯಾಯ ಫೋನ್ ನಂಬರ್ ನಮೂದಿಸುವುದು ಮರೆಯಬೇಡಿ.
4. ಖಾಸಗಿತನ ಹೆಚ್ಚಿಸಿ
ಸಂಕೀರ್ಣ ವಿಧಾನ ಅಥವಾ ಊಹಿಸಲು ಅಸಾಧ್ಯ ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಟ್ಟಿರಬಹುದು. ಆದರೂ ಕೆಲ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಬಹುದು. ಹೇಗೆ? ನೋಟಿಫಿಕೇಶನ್‌ನಲ್ಲಿ ಸುಳಭವಾಗಿ ಇದನ್ನು ಪತ್ತೆ ಮಾಡಬಹುದು. ಆದರೆ ಗೂಗಲ್ ನಿಮ್ಮ ಖಾಸಗಿತನವನ್ನು ರಕ್ಷಿಸುತ್ತದೆ. ಅದು ನೋಟಿಫಿಕೇಶನ್ ಮಾಹಿತಿಯನ್ನು ಹುದುಗಿಸುತ್ತದೆ. ಹೀಗೆ ಮಾಡಲು ನೋಟಿಫಿಕೇಶನ್ ವಿಭಾಗಕ್ಕೆ ಹೋಗಿ, ಸೌಂಡ್ ಅಂಡ್ ನೋಟಿಫಿಕೇಶನ್‌ನಲ್ಲಿ ಸೆಟ್ಟಿಂಗ್‌ಗೆ ಹೋಗಿ ಹೈಡ್ ಸೆನ್ಸಿಟಿವ್ ನೋಟಿಫಿಕೇಶನ್ ಕಂಟೆಟ್ ಕ್ಲಿಕ್ ಮಾಡಿ.
5. ಕಳೆದು ಹೋದ ಮೊಬೈಲ್‌ನ ಮಾಹಿತಿ ಡಿಲೀಟ್ ಮಾಡಿ
ನಿಮ್ಮ ಫೋನ್ ಕಳೆದುಹೋದರೂ ತಲೆಕೆಡಿಸಿಕೊಳ್ಳಬೇಡಿ. ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರ್ ನಿಮ್ಮ ನೆರವಿಗೆ ಇದೆ. ನಿಮ್ಮ ಫೋನ್ ಕಳ್ಳತನವಾದರೆ ಅಥವಾ ಕಳೆದುಹೋದರೆ ನೀವು ಅದನ್ನು ಪತ್ತೆ ಮಾಡಬಹುದು. ಅಗತ್ಯ ಬಿದ್ದರೆ ಮಾಹಿತಿ ಡಿಲೀಟ್ ಮಾಡಬಹುದು. ರಿಮೋಟ್ಲಿ ಲೊಕೇಟ್ ದಿಸ್ ಡಿವೈಸ್ ಮತ್ತು ಅಲೌ ರಿಮೋಟ್ ಲಾಕ್ ಅಂಡ್ ಇರೇಸ್ ಸಕ್ರಿಯಗೊಳಿಸಿದರೆ ಸಾಕು.
6.ಬ್ಯಾಟರಿ ಬಾಳಿಕೆ ಹೆಚ್ಚಿಸಿ
ಆಂಡ್ರಾಯ್ಡಾನ ಬ್ಯಾಟರಿ ಸೇವರ್ ಲಕ್ಷಣವನ್ನು ಬಳಸಿಕೊಂಡು ಈ ಸೌಲಭ್ಯ ಪಡೆಯಬಹುದು. ಬ್ಯಾಟರಿ ಕಡಿಮೆಯಾದಾಗ ಎಚ್ಚರಿಕೆ ಸಂದೇಶವನ್ನು ನಿಮಗೆ ರವಾನಿಸುತ್ತದೆ. ಆಗ ನೀವು ಬ್ಯಾಟರಿ ಸೇವರ್ ಮೋಡ್ ಕ್ಲಿಕ್ ಮಾಡಿದರಾಯಿತು.