LG K-Series ಸ್ಮಾರ್ಟ್ ಫೋನ್ ಗಳು ಎಪ್ರಿಲ್ 14 ರಂದು ಬಿಡುಗಡೆ
ಕಂಪೆನಿಯ ಕೆ-ಸೀರಿಸ್ ಮೊಬೈಲ್ ಬಿಡುಗಡೆಯ ಮಾಧ್ಯಮ ಆಮಂತ್ರಣವನ್ನು ಎಲ್‌ಜಿ ಈಗಾಗಲೇ ವಿತರಿಸಿದೆ. ಆಹ್ವಾನ ಪತ್ರಿಕೆಯಲ್ಲಿ ಹೇಳಿಕೊಂಡಂತೆ "ಕೈನೆಟಿಕ್ ಟೂ ನ್ಯೂ ಸ್ಮಾರ್ಟ್‌ಫೋನ್ಸ್ ಮೇಡ್ ಬೈ ಎಲ್‌ಜಿ ಫಾರ್ 4ಜಿ". ಆಂದರೆ ಎಲ್‌ಜಿ ಕೆ7 ಹಾಗೂ ಎಲ್‌ಜಿ ಕೆ 10 ಭಾರತದಲ್ಲಿ 4ಜಿಗೆ ಅನುವು ಮಾಡಿಕೊಡಲಿವೆ.
ಸಿಇಎಸ್ ಟ್ರೇಡ್‌ಷೋ 2016ಕ್ಕೆ ಪೂರ್ವಭಾವಿಯಾಘಿ ಇದನ್ನು ಬಿಡುಗಡೆ ಮಾಡಲಾಗುತ್ತಿದ್ದು, ಏಪ್ರಿಲ್ 14ರಂದು ಅನಾವರಣಗೊಳ್ಳಲಿವೆ. ಇದು ಎಲ್‌ಜಿ ಕೆ ಸರಣಿಯ ಮೊದಲ ಫೋನ್‌ಗಳು.
ಕೆ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಫೋಟೊಗ್ರಫಿಗೆ ಅನುಕೂಲವಾಗುವಂತೆ ರೂಪಿಸಲಾಗಿದ್ದು, ಪ್ರಿಮಿಯಮ್ ಯುಎಕ್ಸ್ ತತ್ವಗಳನ್ನು ಅಳವಡಿಸಲಾಗಿದೆ. ಇದರ ಬೆಲೆ ಹಾಗೂ ಲಭ್ಯತೆ ವಿವರಗಳು ಇನ್ನೂ ಗೊತ್ತಾಗಿಲ್ಲ.
ಅದಾಗ್ಯೂ 2.5 ಆರ್ಕ್ ಗ್ಲಾಸ್ ಡಿಸೈನ್, ಗೆಶ್ಚರ್ ಶಾಟ್, ಟ್ಯಾಪ್ ಅಂಡ್ ಶಾಟ್, ಗೆಶ್ಚರ್ ಇಂಟ್ರವಲ್ ಷಾಟ್‌ಗಳ ಸೌಲಭ್ಯವಿದೆ.
ಸ್ಮಾರ್ಟ್‌ಫೋನ್ ಬಗ್ಗೆ ಹೇಳುವುದಾದರೆ ಆಂಡ್ರಾಯ್ಡಾ 5.1 ಲಾಲಿಪಾಪ್ ಸೌಲಭ್ಯವಿದ್ದು, 3ಜಿ ಹಾಗೂ 4ಜಿ ಬಳಕೆಗೆ ಯೋಗ್ಯ ಅವತರಣಿಕೆಗಳಿವೆ. 3 ಜಿಎ ಪ್ಯಾಕ್‌ನಲ್ಲಿ ಕ್ವಾಡ್ ಪ್ರೊಸೆಸರ್ 1.3ಜಿಎಚ್‌ಝೆಡ್ ಹಾಗೂ 4ಜಿ ಅವತರಣಿಕೆಯಲ್ಲಿ 1.1 ಜಿಎಚ್‌ಝೆಡ್ ಕ್ವಾಡ್ ಕೋರ್ ಪ್ರೊಸೆಸರ್‌ಗಳಿವೆ.
ಎರಡೂ ಫೋನ್‌ಗಳಲ್ಲಿ 5 ಇಂಚ್ ಎಫ್‌ಡಬ್ಲುವಿಜಿಎ (854/480 ಪಿಕ್ಸೆಲ್) ಡಿಸ್‌ಪ್ಲೇ ಇದೆ. ಎಂಟು ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ನ ಮುಂದಿನ ಕ್ಯಾಮೆರಾ, 1.5 ಜಿಬಿ ಅಥವಾ 1 ಜಿಬಿ ರ್ಯಾಮ್, 8 ಅಥವಾ 16 ಜಿಪಿ ಸ್ಟೋರೇಜ್, 2125ಎಂಎಎಚ್ ಬ್ಯಾಟರಿ ಇತರ ಕೆಲ ಸೌಲಭ್ಯಗಳು.
ಬಿಳಿ, ಇಂಡಿಗೊ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯ.