Maruti Suzuki Swift ವಿಶ್ವಾದ್ಯಂತ ಎಷ್ಟು ಮಾರಾಟವಾಗಿದೆ ಗೊತ್ತೆ?
ಭಾರತದ ಅತೀ ಜನಪ್ರಿಯ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಜಾಗತಿಕವಾಗಿ ಹೊಸ ಮೈಲಿಗಲ್ಲನ್ನು ತಲುಪಿದೆ. 2016 ಏಪ್ರಿಲ್ ಸಮಯಕ್ಕೆ ಅದು ಜಾಗತಿಕವಾಗಿ ಐದು ದಶಲಕ್ಷ ಕಾರುಗಳನ್ನು ಮಾರಿದೆ. 2004ರಲ್ಲಿ ಈ ಕಾರನ್ನು ಮೊದಲಿಗೆ ಬಿಡುಗಡೆ ಮಾಡಲಾಗಿತ್ತು. ಕಳೆದ 12 ವರ್ಷಗಳಿಂದ ಮಾರುಕಟ್ಟೆಯಲ್ಲಿದೆ ಮತ್ತು ಭಾರತದಲ್ಲಿಯೇ 11 ವರ್ಷಗಳಿಂದ ಮಾರಾಟವಾಗುತ್ತಿದ್ದರೂ ಬೇಡಿಕೆ ಕಳೆದುಕೊಂಡಿಲ್ಲ. ಕಂಪನಿಯ ಮಾಹಿತಿ ಪ್ರಕಾರ ಭಾರತದಲ್ಲಿಯೇ ಜಾಗತಿಕ ಮಾರಾಟದ ಶೇ 54ರಷ್ಟು ಕಾರುಗಳು ಖರೀದಿಯಾಗಿವೆ. ಅಂದರೆ 2.7 ದಶಲಕ್ಷ ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಸೈರ್ ಈವರೆಗೆ ಭಾರತದಲ್ಲಿ ಮಾರಾಟವಾಗಿದೆ. ಇತರ ಪ್ರಮುಖ ಮಾರಾಟ ಸ್ಥಳಗಳೆಂದರೆ ಯುರೋಪ್ (ಶೇ.17), ಜಪಾನ್ (ಶೇ.10) ಮತ್ತು ಇತರ ಮಾರುಕಟ್ಟೆಗಳು (ಶೇ.19). ಜಗತ್ತಿನ ರಚನಾತ್ಮಕ ಕಾರೆಂದು ಜನಪ್ರಿಯವಾಗಿರುವ ಸುಜುಕಿ ಮೋಟಾರ್ ಕಂಪನಿಯ ಸ್ವಿಫ್ಟ್ ಈಗ ಜಾಗತಿಕವಾಗಿ ಏಳು ದೇಶಗಳಲ್ಲಿ ನಿರ್ಮಾಣವಾಗುತ್ತಿದೆ. ಭಾರತ, ಜಪಾನ್, ಹಂಗೇರಿ, ಚೀನಾ ಮತ್ತು ಥೈಲಾಂಡುಗಳಲ್ಲಿ ಕಾರು ನಿರ್ಮಾಣವಾಗುತ್ತಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದಿದ ಯುರೋಪ್ ಹಾಗೂ 140ಕ್ಕೂ ಅಧಿಕ ಇತರ ದೇಶಗಳಲ್ಲಿ ಜಾಗತಿಕವಾಗಿ ಸ್ವಿಫ್ಟ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಸ್ವಿಫ್ಟ್ 2005ರಲ್ಲಿ ಬಿಡುಗಡೆಯಾಗಿತ್ತು. ಸುಜುಕಿಯ ವಾರ್ಷಿಕ ಮಾರಾಟದಲ್ಲಿ ಶೇ 30ರಷ್ಟನ್ನು ಭಾರತದಿಂದಲೇ ಅದು ಪಡೆಯುತ್ತಿದೆ. ಸ್ವಿಫ್ಟ್ ಮತ್ತು ಅದರ ಕಾಂಪಾಕ್ಟ್ ಸೆಡಾನ್ ಸ್ವಿಫ್ಟ್ ಡಿಸೈರ್ ದೇಶದಲ್ಲಿ ಟಾಪ್ 3 ಮಾರಾಟವಾಗುವ ಕಾರುಗಳ ಸ್ಥಾನದಲ್ಲಿ ಭದ್ರವಾಗಿ ಕುಳಿತಿವೆ. ತನ್ನದೇ ದಾಖಲೆಯನ್ನು ವರ್ಷಾನುವರ್ಷ ಇದು ಉತ್ತಮಪಡಿಸಿಕೊಳ್ಳುತ್ತಾ ಬಂದಿದೆ. ಭಾರತದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯಾದ ಮೇಲೆ ಎರಡು ಬಾರಿ 2005 ಮತ್ತು 2011ರಲ್ಲಿ ವರ್ಷದ ಕಾರು ಪ್ರಶಸ್ತಿ ಪಡೆದಿದೆ. ಸ್ವಿಫ್ಟ್ ಡಿಸೈರ್ 2008ರಲ್ಲಿ ಬಿಡುಗಡೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ದೇಶದ ಅತ್ಯುತ್ತಮ ಮಾರಾಟವಾಗುವ ಸೆಡಾನ್ ಆಗಿದೆ. ಬಿಡುಗಡೆಯಾದ ಮೇಲೆ ಆ ವಿಭಾಗದ ನಾಯಕನಂತೆ ಇದ್ದು, ಮಾರುತಿ ಸುಜುಕಿ ಸಂಸ್ಥೆಗೆ ಸೆಡಾನ್ ವಿಭಾಗದಲ್ಲಿ ಉತ್ತಮ ಎಂಟ್ರಿ ಸಿಗುವಂತೆ ಮಾಡಿದೆ.
ಜಾಗತಿಕವಾಗಿ ಮಾರುತಿ ಸುಜುಕಿ ಸ್ವಿಫ್ಟ್ ಸ್ಟಾಂಡರ್ಡ್ ಮತ್ತು ಡ್ಯುಯಲ್ ಜೆಟ್ ಎರಡು ವರ್ಷಗಳಲ್ಲಿ ಬರುವ ಕಂಪನಿಯ ಜನಪ್ರಿಯ K12B 1.2-litre VVT 4WD ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಯೂರೋ ಸ್ಪೆಕ್ ಮಾಡೆಲ್ ಕ್ರೀಡಾ ಮತ್ತು ವರ್ಷನ್ ಕೂಡ ಪಡೆದಿದೆ. ಮತ್ತೊಂದೆಡೆ ಭಾರತದಲ್ಲಿ ಸ್ವಿಫ್ಟ್ ಪೆಟ್ರೋಲ್ ಮತ್ತು ಡೀಸಲ್ ಇಂಜಿನ್ ಆಯ್ಕೆ ಎರಡರಲ್ಲೂ ಸಿಗುತ್ತಿದೆ. 1.2-litre K-Series VVT 190Nm ಮತ್ತು 1.3-litre DDIS ಇಂಜಿನುಗಳಲ್ಲಿ ಲಭ್ಯವಿದೆ. ಪೆಟ್ರೋಲ್ ವರ್ಷನ್ 83bhp ಮತ್ತು 115Nm ಪೀಕ್ ಟಾರ್ಕ್ ಅಭಿವೃದ್ಧಿಪಡಿಸುತ್ತದೆ. ಆಯಿಲ್ ಬರ್ನರ್ ಇದ್ದು ಅಭಿವೃದ್ಧಿಪಡಿಸುತ್ತದೆ. ಎರಡೂ ಇಂಜಿನುಗಳಲ್ಲಿ ಟ್ರಾನ್ಸಮಿಶನ್ ಡ್ಯೂಟಿಯನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸಿನಿಂದ ನಿಭಾಯಿಸಲಾಗಿದೆ.