ಫೇಸ್ ಬುಕ್ ಮೆಸೆಂಜರ್ ಮೂಲಕವೇ ಉಚಿತವಾಗಿ ಹಣ ವರ್ಗಾಯಿಸಿ
ಸಾಮಾಜಿಕ ತಾಣದ ದೈತ್ಯ ಫೇಸ್ಬುಕ್ ಪೇಪಾಲ್ ರೀತಿ ಮೊಬೈಲ್ ಹಣ ವರ್ಗಾಯಿಸುವ ಸೇವೆ ನೀಡುವ ಮೆಸೆಂಜರ್ ಆಪನ್ನು ಉಚಿತವಾಗಿ ತರಲಿದೆ. ಇದನ್ನು ಬಳಸಲು ವ್ಯವಹಾರದ ಎರಡೂ ಕಡೆ ಡೆಬಿಟ್ ಕಾರ್ಡ್ ಇದ್ದರೆ ಸಾಕೆಂದು ಹೇಳಲಾಗಿದೆ.
ಅಮೆರಿಕದಲ್ಲಿ ಫೇಸ್ಬುಕ್ ಮೆಸೆಂಜರ್ ಸೇವೆ ಬಳಸುವ ಜನರು ಈಗಾಗಲೇ ಆಪ್ ಬಳಸಿ ಹಣ ಕಳುಹಿಸುವುದು ಮತ್ತು ಪಡೆದುಕೊಳ್ಳುವುದು ಮಾಡುತ್ತಿದ್ದಾರೆ. ಈ ಸೇವೆಯನ್ನು ಶೀಘ್ರವೇ ಇತರ ದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಹಣ ವರ್ಗಾವಣೆ ಸೇವೆಯನ್ನು ಮೆಸೆಂಜರಲ್ಲಿ ಆರಂಭಿಸುವ ಮೊದಲು ಮಾರ್ಕ್ ಝುಕರ್ಬಗ್ ತಾವು ಹಣ ಪಾವತಿ ಪ್ರೊಸೆಸರ್ ಭಾಗವಾಗಲು ಬಯಸಿರುವುದಾಗಿ ಹೇಳಿದ್ದರು.
ಪಾವತಿಯ ವಿಷಯದಲ್ಲಿ ಪ್ರಮುಖ ಕಾರ್ಯತಂತ್ರವೆಂದರೆ, ಮುಖ್ಯವಾಗಿ ಮೆಸೆಂಜರ್ ರೀತಿಯ ಉತ್ಪನ್ನಗಳಲ್ಲಿ ಉದ್ಯಮ ಸಂವಹನವು ಸ್ವಲ್ಪ ವ್ಯಾವಹಾರಿಕವಾಗಿರುತ್ತದೆ. ನಿಮಗೆ ಅಗತ್ಯವಿರುವ ವ್ಯವಹಾರದಿಂದ ಎಲ್ಲಾ ಸಮಸ್ಯೆಗಳನ್ನು ಹೊರಗೆ ತೆಗೆಯುವುದೇ ಪ್ರಯತ್ನವಾಗಿದೆ ಎಂದು ಅವರು ಪೋಸ್ಟ್ ಹಾಕಿದ್ದರು. ಮೆಸೆಂಜರ್ ಪಾವತಿ ಉಚಿತವಾಗಿರುತ್ತದೆ ಮತ್ತು ವ್ಯವಹಾರವು ಪಿನ್ ಆಧಾರಿತ ರಕ್ಷಣೆಯನ್ನು ಹೊಂದಿರಲಿದೆ. ಆಂಡ್ರಾಯ್ಡಿಗೆ ಮೆಸೆಂಜರ್ ಆಪ್ ಬಳಸಲು ಬಳಕೆದಾರ ಮೊದಲಿಗೆ ಪ್ರೊಫೈಲ್ ಐಕಾನ್ ಮೇಲೆ ಟಾಪ್ ಮಾಡಿ ತನ್ನ ಡೆಬಿಟ್ ಕಾರ್ಡ್ ವಿವರ ಹಾಕಿರಬೇಕು. ನಂತರ ಪಾವತಿ ಆಯ್ಕೆಗೆ ಹೋಗಿ ಹೊಸ ಡೆಬಿಟ್ ಕಾರ್ಡ್ ಸೇರಿಸಿ ಟಾಪ್ ಮಾಡಿ ಕೆಲಸ ಮುಗಿಸಬಹುದು. ಈ ಸೇವೆಯಲ್ಲಿ ಹಣ ಯಾರಿಗೆ ಕಳುಹಿಸಬೇಕೋ, ಅಥವಾ ಯಾರಿಂದ ಹಣದ ಬೇಡಿಕೆ ಇಡಬೇಕೋ, ಆ ವ್ಯಕ್ತಿಯ ಜೊತೆಗೆ ಚಾಟ್ ಮಾಡುವ ಅವಕಾಶವನ್ನೂ ಕೊಡುತ್ತದೆ. ಮೊಬೈಲ್ ಪಾವತಿ ಮಾಡಲು ಮೊದಲಿಗೆ ಪಾವತಿಬಟನ್ ಒತ್ತಬೇಕು. ನಂತರ ನೆಕ್ಸ್ಟ್ ಬಟನ್ ಒತ್ತಿ ಇನ್ಫೋ ಸ್ಕ್ರೀನ್ ದಾಟಬೇಕು. ಡಿಫಾಲ್ಟ್ ಆಗಿ ನಿಮಗೆ ಪೇ ಸ್ಕ್ರೀನ್ ಕಾಣುತ್ತದೆ. ನೀವು ಕಳುಹಿಸಬೇಕಾದ ಹಣದ ಮೊತ್ತವನ್ನು ಅಲ್ಲಿ ಹಾಕಿ ಮತ್ತು ಪಾವತಿ ಏಕೆನ್ನುವ ವಿವರವನ್ನೂ ಸೇರಿಸಬಹುದು. ನಂತರ ಪಾವತಿಮೇಲೆ ಟಾಪ್ ಮಾಡಿದರೆ ಮುಗಿಯಿತು. ಹಣ ಪಡೆಯಲು ಸ್ಕ್ರೀನ್ ಮೇಲ್ಗಡೆ ಬೇಡಿಕೆಮೇಲೆ ಟಾಪ್ ಮಾಡಿ ಮೊತ್ತ ಮತ್ತು ಕಾರಣ ಬರೆಯಿರಿ. ನಂತರ ಬೇಡಿಕೆ ಬಟನ್ ಒತ್ತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.