ಮನೆ ಖರೀದಿಸಲು ಹೊರಟಿದ್ದೀರಾ? ಈ ವಿಷಯಗಳು ಗಮನದಲ್ಲಿರಲಿ
ನಿಮ್ಮ ಸುತ್ತಮುತ್ತಲಿನವರು ಆಸ್ತಿಯಲ್ಲಿ ಹಣ ಹೂಡಲು ಯೋಜಿಸುತ್ತಿದ್ದಾರೆ ಅಥವಾ ಹೂಡಿದ್ದಾರೆ. ಆದರೆ ಸರಿಯಾದ ಆಸ್ತಿ ಸರಿಯಾದ ಬೆಲೆಗೆ ಸಿಗದೆ ನೀವು ಸುಮ್ಮನಿರಬಹುದು. ಹಾಗಿದ್ದರೆ ಬಿಲ್ಡರ್ ಆಯ್ಕೆ ಹೇಗೆ ಮಾಡಬಹುದು?
ಮಂತ್ರ: ಚೆನ್ನಾಗಿ ಅಧ್ಯಯನ ಮಾಡಿ
ಬಹಳಷ್ಟು ಮಂದಿ ಸ್ಥಳ ಮತ್ತು ಹಣದ ಬಗ್ಗೆ ಯೋಚಿಸುತ್ತಾರೆ. ಆದರೆ ಡೆವಲಪರ್ ಕೂಡ ಮುಖ್ಯ. ಉತ್ತಮ ಬಿಲ್ಡರ್ ನಿಮ್ಮ ಮನೆಯನ್ನು ಹಾಕಿದ ಮೌಲ್ಯಕ್ಕೆ ತಕ್ಕಂತೆ ಉತ್ತಮವಾಗಿ ನಿಮ್ಮ ಮುಂದಿಡುತ್ತಾನೆ. ಯೋಜನೆಗಳು ವಿಳಂಬವಾಗಲು ಅಂಗೀಕಾರ ಸರಿಯಾಗಿ ಇರದೆ ಇರುವುದು ಅಥವಾ ಡೆವಲಪರಿಗೆ ಹಣಕಾಸು ಸಮಸ್ಯೆಗಳು ಇರುವುದು ಕಾರಣವಾಗಬಹುದು. ಯಾವಾಗಲೂ ಡೆವಲಪರಿನ ಟ್ರಾಕ್ ರೆಕಾರ್ಡ್ ನೋಡಬೇಕು. ಬಿಲ್ಡರ್ ಯೋಜನೆಗಳನ್ನು ಸಕಾಲದಲ್ಲಿ ಕೊಟ್ಟಿದ್ದಾನೆಯೇ ಎಂದು ಗಮನಹರಿಸಿ. ಕಾರ್ಯತಂತ್ರಗಳು
ನಿಧಾನಗತಿಯ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಕಾರ್ಯತಂತ್ರಗಳು ಮುಖ್ಯವಾಗಿರುತ್ತವೆ. ರಿಯಲ್ ಎಸ್ಟೇಟಲ್ಲೂ ಅದು ನಡೆಯುತ್ತದೆ. ಮಾರುಕಟ್ಟೆ ತಂತ್ರಗಳು ನಿಮಗೆ ಹೆಚ್ಚು ಮಾಹಿತಿಯನ್ನು ತಂದು ಹಾಕುತ್ತದೆ. ಅದಕ್ಕೆ ಕುರುಡಾಗಿ ಮರುಳಾಗಬೇಡಿ. ಬೆಲೆಕಡಿತ, ಡೀಲುಗಳು, ಭರವಸೆಯ ವಾಪಾಸಾತಿ ಅಥವಾ ವಾಪಾಸು ಖರೀದಿ ಗ್ಯಾರಂಟಿ ಇದೆಲ್ಲ ಕೇಳಿರಬಹುದು. ಇವೆಲ್ಲ ಮಾರುಕಟ್ಟೆಯ ಒತ್ತಡಗಳ ಸೂಚನೆ. ಮಾರಾಟಗಳ ಉತ್ತೇಜನಕ್ಕೆ ಡೆವಲಪರುಗಳು ಒಟ್ಟು ಹಣದಲ್ಲಿ ರಿಯಾಯಿತಿ ನೀಡುವುದು, ಚಿನ್ನದ ನಾಣ್ಯ ನೀಡುವುದು ಕಾರು ಕೊಡುವುದು ಮಾಡುತ್ತಾರೆ. ಇವೆಲ್ಲ ನ್ಯಾಯಯುತವಲ್ಲ. ಖರೀದಿದಾರರಾಗಿ ಹಣ ಹೂಡುವಾಗ ಬಲೆಗೆ ಬೀಳದಂತೆ ಜಾಗರೂಕರಾಗಿರಿ. ಮನೆ ಹೊಂದಿಕೊಂಡರೆ ಅದನ್ನು ಖರೀದಿಸಿ. ಯೋಜನೆಗೆ ಎಲ್ಲಾ ನಿಯಂತ್ರಣ ಪ್ರಾಧಿಕಾರಿಗಳ ಎನ್‌ಒಸಿ ಇದೆಯೇ ನೋಡಿ. ಅಗತ್ಯ ಅಂಗೀಕಾರಗಳನ್ನು ಪಡೆಯಲಾಗಿದೆಯೇ ಗಮನಿಸಿ. ಚರಂಡಿ, ನೀರಿನ ಸಂಪರ್ಕ ಮತ್ತು ವಿದ್ಯುತ್ ಕಡೆಗೂ ಗಮನ ಹರಿಸಬೇಕು. ಸ್ವತಃ ಹಿಂಜರಿಯಬೇಡಿ
ಮ್ಯಾಜಿಕ್ ಬ್ರಿಕ್ಸ್ ಸಂಸ್ಥೆಯ ಸಮೀಕ್ಷೆ ಪ್ರಕಾರ ಶೇ 39ರಷ್ಟು ಮನೆ ಖರೀದಿಸುವವರು ಕುಟುಂಬದ ಸಲಹೆಯನ್ನೇ ಪರಿಗಣಿಸುತ್ತಾರೆ. ಶೇ 33ರಷ್ಟು ಮಂದಿ ಅಂತರ್ಜಾಲವನ್ನು ನಂಬುತ್ತಾರೆ. ಮಧ್ಯವರ್ತಿಗಳು, ಪತ್ರಿಕಾ ಜಾಹೀರಾತು ನೋಡುವವರೂ ಇದ್ದಾರೆ. ಆಸ್ತಿ ವಿಷಯದಲ್ಲಿ ಎಲ್ಲರೂ ಸಲಹೆ ನೀಡುತ್ತಾರೆ. ಹಿಂದಿನ ಉತ್ತಮ ಮತ್ತು ಕೆಟ್ಟ ಅನುಭವ ಗಣನೆಗೆ ತೆಗೆದುಕೊಳ್ಳಿ. ಕೇಳಿಸಿಕೊಳ್ಳುವುದು ಉತ್ತಮವಾದರೂ ಹೊಸ ವಿಷಯ ತಿಳಿಯಲು ಹಿಂಜರಿತ ಬೇಡ. ಎಂತಹ ಮನೆ ಬೇಕೆನ್ನುವುದನ್ನು ಪಟ್ಟಿ ಮಾಡಿ. ಬಿಲ್ಡರ್ ಆಯ್ಕೆ ಮಾಡಿ. ವಿಭಿನ್ನ ಬಿಲ್ಡರುಗಳ ಅನುಭವ ಪರೀಕ್ಷಿಸಿ. ಯೋಜನೆ ಮತ್ತು ಕಟ್ಟಡ ನಿರ್ಮಾಣ ಗಮನಿಸಿ ಮುಂದಡಿಯಿಡಿ. ಹೊಸ ಬಿಲ್ಡರನ್ನೂ ಕೂಡ ಆರಿಸಬಹುದು.
ಮಾರಾಟದ ನಂತರ ಕಂಪನಿ ಎಷ್ಟು ಉತ್ತಮ
ಬಿಲ್ಡರ್- ಗ್ರಾಹಕ ಸಂಬಂಧ ಮಾರಾಟದ ನಂತರ ಮುಗಿಯುವುದಿಲ್ಲ. ಮಾರಾಟ ಮುಗಿದ ಮೇಲೆ ನಂತರ ಬರುವ ಸಮಸ್ಯೆಗಳನ್ನೂ ಅವರು ಆಲಿಸುತ್ತಾರೆ. ಬಹಳಷ್ಟು ದೊಡ್ಡ ಬಿಲ್ಡರುಗಳು ವಿಳಂಬದಿಂದಾಗಿ ಮತ್ತು ಮೂಲ ನಕ್ಷೆಗೆ ತಕ್ಕಂತೆ ಇರಲು ಸಾಧ್ಯವಾಗದೆ ವಿಶ್ವಾಸಾರ್ಹತೆ ಕಳೆದುಕೊಂಡಿರುತ್ತಾರೆ. ಕಂಪನಿಯು ನಿರ್ಮಾಣವಿವರ, ವಿಳಂಬ ಮತ್ತು ಇತರ ಸುದ್ದಿಗಳಿರುವ ವೆಬ್ ತಾಣದ ಮೂಲಕ ಮಾಹಿತಿ ನೀಡುತ್ತಿದ್ದರೆ ವಿಶ್ವಾಸ ಉಳಿದುಕೊಂಡಿರುತ್ತದೆ. ಸಂಘಟಿತರಲ್ಲದ ಬಿಲ್ಡರುಗಳ ಯೋಜನೆಗಳಲ್ಲಿ ಹಣ ಹೂಡಬೇಡಿ. ಬಹುತೇಕ ಖರೀದಿದಾರರಿಗೆ ಆಸ್ತಿ ಎನ್ನುವುದು ದೊಡ್ಡ ಹೂಡಿಕೆ. ಹೀಗಾಗಿ ಅತ್ಯುತ್ತಮವಾದುದನ್ನೇ ನಂಬಿ.