ಭವ್ಯ ಭವಿಷ್ಯಕ್ಕೆ ಶಿಕ್ಷಣವೇ ಅಸ್ತ್ರ ಇದು ಅಂಬೇಡ್ಕರ್ ದೃಷ್ಟಿಕೋನ
ಜನಸಾಮಾನ್ಯರ ತಿಳುವಳಿಕೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರು ಮತ್ತು ನಿಮ್ನವರ್ಗದ ವಿಮೋಚಕ. ಜಾತಿ ತಾರತಮ್ಯದ ಸಂಕೋಲೆಯಲ್ಲಿ ಸಿಲುಕಿ ನರಳುತ್ತಿದ್ದ ದಲಿತರ ಉದ್ಧಾರಕ್ಕಾಗಿ ಅವರು ನಡೆಸಿದ ಅಪೂರ್ವ ಚಳವಳಿಯ ಪ್ರಭಾವಲಯ ಎಷ್ಟರಮಟ್ಟಿಗೆ ಪ್ರಖರವಾಗಿತ್ತೆಂದರೆ, ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಅದು ಮಬ್ಬಾಗಿಸಿದೆ. ಇದೀಗ ರಾಜ್ಯ ನಿರ್ದೇಶನ ತತ್ವಗಳಲ್ಲಿ ಉಲ್ಲೇಖಿಸಿರುವ ಕಡ್ಡಾಯ ಶಿಕ್ಷಣ ಹಾಗೂ 6ರಿಂದ 14 ವರ್ಷದೊಳಗಿನ ಎಲ್ಲರಿಗೆ ಉಚಿತ ಶಿಕ್ಷಣ ಒದಗಿಸುವುದು ಸರಕಾರದ ಹೊಣೆಗಾರಿಕೆ. ಭಾರತದ ಸಾಮಾಜಿಕ ಪ್ರಗತಿಯಾಗಬೇಕಾದರೆ, ಶಿಕ್ಷಣದಿಂದಷ್ಟೇ ಸಾಧ್ಯ ಎಂಬ ಅಚಲ ನಂಬಿಕೆ ಅವರದ್ದಾಗಿತ್ತು.
ಅಂಬೇಡ್ಕರ್ ಅವರು ತಮ್ಮ 65 ವರ್ಷದ ಜೀವಿತಾವಧಿಯಲ್ಲಿ 40 ವರ್ಷಗಳನ್ನು ಶಿಕ್ಷಣ ಪಡೆಯಲು ಮತ್ತು ಶಿಕ್ಷಣದ ಉತ್ತೇಜನಕ್ಕಾಗಿ ಕಳೆದರು. ಅವರಿಗೆ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ವೇಳೆ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಜಾನ್ ಡೆವೆ ಬೋಧಿಸಿದ್ದರು. ತೀರಾ ವಾಸ್ತವವಾದಿ ಮತ್ತು ಮಹಾನ್ ಮಾನವತಾವಾದಿಯಾಗಿದ್ದ ಡೆವೆ ಅವರ ವಿಚಾರಧಾರೆಯ ಪ್ರಾಜ್ಞತೆಯಲ್ಲಿ ಅಂಬೇಡ್ಕರ್ ಮಿಂದೆದ್ದರು. ಅಂಬೇಡ್ಕರ್ ಅವರು ಶಿಕ್ಷಣವನ್ನು ಕೇವಲ ವರ್ಗಾಂತರದ ಮಾಧ್ಯಮವಾಗಿ ಮಾತ್ರವಲ್ಲದೇ, ತಾರತಮ್ಯಕ್ಕೆ ಒಳಗಾದ ವರ್ಗ ಸೆಟೆದು ನಿಲ್ಲಲು ಅಸ್ತ್ರವಾಗಿ ಅದನ್ನು ಬಳಸಿಕೊಂಡರು. ತುಳಿತಕ್ಕೊಳಗಾದ ಸಮಾಜದಲ್ಲಿ ಶಿಕ್ಷಣ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲದು ಎಂದು ಅವರು ದೃಢವಾಗಿ ನಂಬಿದ್ದರು. ಜತೆಗೆ ಎಲ್ಲರಿಗೂ ಸಮಾನವಾದ ಬದಲಾವಣೆಯ ಮಾರ್ಗವನ್ನು ಸೃಷ್ಟಿಸಬಲ್ಲದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅಂಬೇಡ್ಕರ್ ಅವರ ವಿಚಾರಧಾರೆ, ಪ್ರಸ್ತುತ ಶೈಕ್ಷಣಿಕ ಉಪನ್ಯಾಸಗಳಲ್ಲಿ ಅನುರಣಿಸುತ್ತಿದ್ದು, ಈ ಕಾರಣದಿಂದ ಅವರನ್ನು ಇಂದಿಗೂ ಪ್ರಸ್ತುತರನ್ನಾಗಿಸಿದೆ. ಜತೆಗೆ ಶಿಕ್ಷಣ ಕ್ಷೇತ್ರದಿಂದ ಮರೆಯಾಗಿರುವ ದೃಷ್ಟಿಕೋನವನ್ನು ಮತ್ತೆ ತರುವಲ್ಲಿ ಅವರ ವಿಚಾರಧಾರೆ ಮಹತ್ವದ ಪಾತ್ರ ವಹಿಸಲಿದೆ.
ಕಡ್ಡಾಯ ಮೂಲಶಿಕ್ಷಣ
ಭಾರತದ ಸಮಾಜ ಐತಿಹಾಸಿಕವಾಗಿ ಅಂತರ್ಗತವಾಗಿದ್ದ ಜಾತಿ ವ್ಯವಸ್ಥೆಯಿಂ ದಾಗಿ ಅಸಮಾನ ಸಮಾಜವಾಗಿಯೇ ಉಳಿದಿದೆ ಎನ್ನುವುದು ಅವರಿಗೆ ಮನವರಿ ಕೆಯಾಗಿತ್ತು. ಆದ್ದರಿಂದ ಆಧುನಿಕ ಕಲ್ಪನೆಗಳಾದ ಸಮಾನತೆ, ಮಾನವೀಯತೆ, ತಮ್ಮ ಬದುಕನ್ನು ಮರು ರೂಪಿಸಿಕೊಳ್ಳುವ ಜನಸಾಮಾನ್ಯರ ಶಕ್ತಿ ಮತ್ತಿತರ ಅಂಶಗಳು ಈ ಸಮಾಜಕ್ಕೆ ಸೂಕ್ತವಾಗುವುದಿಲ್ಲ ಎಂದು ನಂಬಿದ್ದರು. ದಲಿತರು ಮತ್ತು ಕಾರ್ಮಿಕ ವರ್ಗಕ್ಕೆ, ರೊಸೆಯು ಅವರ ಸಾಮಾಜಿಕ ಗುತ್ತಿಗೆ, ಮಾರ್ಕ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆ, ಕಾರ್ಮಿಕರ ಸ್ಥಿತಿಗತಿ ಕುರಿತ ಪೋಪ್ ಲಿಯೊ 13 ಅವರ ಎನ್ಸೈಕ್ಲಿಕಾ ಹಾಗೂ ಜೆ.ಎಸ್.ಮಿಲ್ ಅವರ ವಿಮೋಚನೆ ಪರಿಕಲ್ಪನೆಯಷ್ಟೇ, ಆಧುನಿಕ ಯುಗದಲ್ಲಿ ಯಾವುದೇ ಸಾಮಾಜಿಕ ಅಥವಾ ಸರಕಾರಿ ಸಂಸ್ಥೆಗಳ ದಾಖಲೆಯಾಗಬಲ್ಲದು ಎನ್ನುವುದು ಅವರ ಅಭಿಮತ. ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ತರಗತಿ ಗಳಿಗೆ ಪ್ರವೇಶಾತಿ ವಿಚಾರದಲ್ಲಿ ಬದ್ಧತೆ ಅನಿವಾರ್ಯ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಉದ್ಯೋಗದಲ್ಲಿ ಮೀಸ ಲಾತಿಗೆ ಸಂಬಂಧಿಸಿದಂತೆ ಅಂಬೇಡ್ಕರ್, ತುಳಿತಕ್ಕೊಳಗಾದ ವರ್ಗದವರು ಸಾರ್ವಜನಿಕ ಸೇವಾ ಕ್ಷೇತ್ರವನ್ನು ಪ್ರವೇಶಿಸದೇ, ಅವರಿಗೆ ಶಿಕ್ಷಣಕ್ಕೆ ಉತ್ತೇಜನ ದೊರಕದು ಎಂದು ಬರೆದಿದ್ದರು.
ಅನಕ್ಷರಸ್ಥರ ಪೂರ್ವಸಿದ್ಧತೆ
ಅವರ ಅಭಿಪ್ರಾಯದ ಪ್ರಕಾರ, ಪ್ರಾಥಮಿಕ ಶಿಕ್ಷಣದ ಮುಖ್ಯ ಗುರಿಯೆಂದರೆ, ಪ್ರಾಥಮಿಕ ಶಾಲೆಯನ್ನು ಪ್ರವೇಶಿಸಿದ ಪ್ರತಿ ಮಗು ಕೂಡಾ, ಸಂಪೂರ್ಣ ಸಾಕ್ಷರತೆ ಸಾಧಿಸಿಯೇ ಶಾಲೆ ಯಿಂದ ಹೊರಬರುವಂತಾಗಬೇಕು. ಜತೆಗೆ ಜೀವನದುದ್ದಕ್ಕೂ ಆತ ಸಾಕ್ಷರನಾಗಿಯೇ ಉಳಿಯಬೇಕು. ಆದರೆ ಆ ಕಾಲದಲ್ಲಿ ಅರ್ಧದಿಂದ ಶಾಲೆ ಬಿಡುವವರ ಪ್ರಮಾಣ ಅತ್ಯಧಿಕವಾದ ಕಟುವಾಸ್ತವದ ಬಗ್ಗೆ ಅವರಿಗೆ ಅರಿವು ಇತ್ತು. 1916-17ರಿಂದ 1922-23ರ ಅವಧಿಯಲ್ಲಿ ಅರ್ಧದಿಂದ ಶಾಲೆಬಿಡುವವರ ಪ್ರಮಾಣ ಶೇಕಡ 82ರಷ್ಟು ಇದ್ದುದನ್ನು ಮನಗಂಡ ಅವರು, ಇದೇ ಪರಿಸ್ಥಿತಿ ಮುಂದುವರಿದರೆ, ಮತ್ತೆ ಅವರು ಅನಕ್ಷರತೆಯ ಕೂಪಕ್ಕೆ ಬೀಳುತ್ತಾರೆ ಎಂದು ಎಚ್ಚರಿಸಿದ್ದರು.
ವೆಚ್ಚ ಮತ್ತು ಲಾಭ
ಶಿಕ್ಷಣದ ವೆಚ್ಚ ಹಾಗೂ ಲಾಭವನ್ನು ಲೆಕ್ಕಾಚಾರ ಮಾಡುವ ಹೊಸ ಸಂಪ್ರದಾಯಕ್ಕೆ ಅಂಬೇಡ್ಕರ್ ನಾಂದಿ ಹಾಡಿದರು. ಮುಂಬೈ ಪ್ರಾಂತದಲ್ಲಿ ಪ್ರತಿ ವಿದ್ಯಾರ್ಥಿಯ ಶಿಕ್ಷಣಕ್ಕೆ ತಗಲುತ್ತಿದ್ದ ತಲಾ ವೆಚ್ಚ ಅಂದಿನ ದಿನದಲ್ಲಿ ಕೇವಲ 14 ಆಣೆ. ಆದರೆ ಸರಕಾರ ಹೆಚ್ಚುವರಿಯಾಗಿ 2 ಆಣೆ ಹಾಗೂ 9 ಪೈಸೆಯನ್ನು ಅಧಿಕವಾಗಿ ಪಡೆಯುತ್ತಿದೆ. ಸರಕಾರ ಅವರಿಂದ ಎಷ್ಟು ಹಣ ಪಡೆಯುತ್ತದೆಯೋ ಅದೆಲ್ಲವನ್ನೂ ಶಿಕ್ಷಣಕ್ಕಾಗಿ ವೆಚ್ಚ ಮಾಡುವುದು ನ್ಯಾಯಯುತ. ಈ ವಿಚಾರವನ್ನು ಪರಿಗಣಿಸಿದಾಗ, ಅನುಭವಿ, ಕೌಶಲಪೂರ್ಣ ಅರ್ಥಶಾಸ್ತ್ರಜ್ಞನಾಗಿ ಅಂಬೇಡ್ಕರ್ ಕಂಡುಬರುತ್ತಾರೆ. ಶಿಕ್ಷಣದಲ್ಲಿ ಮಾಡಿರುವ ಹೂಡಿಕೆ, ಮುಂಬೈ ಸುಧಾರಣೆಗೆ ಮಾಡುವ ವೆಚ್ಚಕ್ಕಿಂತ ಹೆಚ್ಚು ಲಾಭದಾಯಕ ಎನ್ನುವುದು ಅವರ ಪ್ರತಿಪಾದನೆ.
ವ್ಯಾಪಾರವಲ್ಲ
ಶಾಸನಸಭೆಯ ಇನ್ನೊಂದು ಚರ್ಚೆಯಲ್ಲಿ, ಮುಂಬೈ ಪ್ರಾಂತದಲ್ಲಿ ಕಾಲೇಜು ಶಿಕ್ಷಣಕ್ಕೆ ಆಗುತ್ತಿರುವ ವೆಚ್ಚದ ಶೇಕಡ 36ರಷ್ಟು ಶುಲ್ಕದ ರೂಪದಲ್ಲೇ ಸಂಗ್ರಹವಾಗುತ್ತದೆ. ಅಂತೆಯೇ ಪ್ರಾಥಮಿಕ ಶಿಕ್ಷಣದಲ್ಲಿ ಶುಲ್ಕದಿಂದ ಬರುವ ಆದಾಯ ಶೇಕಡ 31ರಷ್ಟಿದೆ. ಮಾಧ್ಯಮಿಕ ಶಾಲೆಯಲ್ಲಿ ಈ ಪ್ರಮಾಣ ಶೇಕಡ 26ರಷ್ಟು ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದ್ದರು. ಶಿಕ್ಷಣ ಇಲಾಖೆ ವ್ಯಾಪಾರಿ ಘಟಕವಲ್ಲ; ಆದ್ದರಿಂದ ಲಾಭ- ನಷ್ಟದ ಲೆಕ್ಕಾಚಾರ ಇಲ್ಲಿ ಸಲ್ಲದು ಎಂದು ಖಂಡತುಂಡವಾಗಿ ಹೇಳಿದ್ದರು.
ಬಹಿಷ್ಕೃತ ಹಿತಕಾರಿಣಿ ಸಭಾದ ಪರವಾಗಿ ಸೈಮನ್ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ, ಶಿಕ್ಷಣದ ಬಗ್ಗೆ ಆಧಿಕಾರಯುತ ಚಿತ್ರಣವನ್ನು ನೀಡಿದ್ದರು. ಶಿಕ್ಷಣದ ವಿಚಾರದಲ್ಲಿ ಬ್ರಿಟಿಷರು ಉಳ್ಳವರ ಪರವಾಗಿ ಪಕ್ಷಪಾತದ ಧೋರಣೆ ಹೊಂದಿದ್ದಾರೆ ಎಂದು ಆಕ್ಷೇಪಿಸಿದರು.
ಅಂಬೇಡ್ಕರ್ ಅವರ ಅಭಿಪ್ರಾಯದ ಪ್ರಕಾರ, ವಿಶ್ವವಿದ್ಯಾನಿಲಯಗಳು ಕೇವಲ ಪರೀಕ್ಷೆ ನಡೆಸಿ, ಪದವಿಗಳನ್ನು ಪ್ರದಾನ ಮಾಡುವ ಸಂಸ್ಥೆಗಳಾಗಬಾರದು; ಇದರ ಬದಲಾಗಿ ಈ ಕೆಳಗಿನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಅಸ್ತ್ರವಾಗಬೇಕು ಎಂದು ಪ್ರತಿಪಾದಿಸಿದ್ದರು. 1. ವಾಸ್ತವ ಅಂಶ ಹಾಗೂ ವಾಸ್ತವ ಅಭಿಪ್ರಾಯದ ನಡುವಿನ ವ್ಯತ್ಯಾಸವನ್ನು ಅರಿಯುವುದು. 2. ವಿಷಯಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು, ಸಿದ್ಧಾಂತಕ್ಕೆ ಕಟ್ಟುಬೀಳುವ ಬದಲು ಅದರ ಮಹತ್ವದ ಹಿನ್ನೆಲೆಯಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದು. 3. ನ್ಯಾಯಬದ್ಧವಾಗಿ ಅಭಿವ್ಯಕ್ತಪಡಿಸಲು ಮತ್ತು ಕಲಿಕಾರ್ಥಿ ವಿರೋಧಿಸಲು ಅನುಕೂಲವಾಗುವಂಥ ವಿವೇಚನೆಯನ್ನು ಬೆಳೆಸುವುದು; 4. ಪರಿಶೀಲಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಲಹೆಗಳನ್ನು ನೀಡುವುದು ಹಾಗೂ ಒಂದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಮೊದಲು ಏನು ಮಾಡಬೇಕು ಎಂಬ ವಿವೇಚನೆ ಪೋಷಿಸುವುದು.
5. ಒಂದು ವಾದವನ್ನು ಅನುಸರಿಸುವ ಅಥವಾ ಟೀಕಿಸುವ ಮುನ್ನ ಅದರ ಪುರಾವೆ ಗಳನ್ನು ವೌಲ್ಯಮಾಪನ ಮಾಡುವ ರೀತಿಯಲ್ಲಿ ಒಬ್ಬ ಮೂಲ ವಿದ್ಯಾರ್ಥಿಯನ್ನು ಅಭಿವೃದ್ಧಿಪಡಿಸುವುದು ಹಾಗೂ ಆತನಿಗೆ ಬೋಧಿಸಿದ್ದಕ್ಕೆ ಅನುಗುಣವಾಗಿ ಸ್ವಯಂ ಆಗಿ ವೌಲ್ಯವನ್ನು ಬೆಳೆಸಿಕೊಳ್ಳಲು ಪೂರಕ ವಾತಾರವಣ ಸೃಷ್ಟಿಸುವುದು.
ಸಂಕುಚಿತ ಮನೋಭಾವ ಮುರಿಯುವ ಸಾಮರ್ಥ್ಯ
ಸಾಂಪ್ರದಾಯಿಕವಾಗಿ ಬಂದಿರುವ ಕಲ್ಪನೆಗಳಿಗೆ ಸವಾಲು ಹಾಕುವ ರೀತಿಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕಮಟ್ಟ ಬೆಳೆಯಬೇಕು ಎಂದು ಅಂಬೇಡ್ಕರ್ ನಿರೀಕ್ಷಿಸಿದ್ದರು. ಜತೆಗೆ ಸಾಂಸ್ಕೃತಿಕವಾಗಿಯೂ ಸಂಕುಚಿತ ಅಂಶಗಳನ್ನು ಉಲ್ಲಂಘಿಸುವಂತೆ ವಿದ್ಯಾರ್ಥಿಗಳು ರೂಪುಗೊಳ್ಳಬೇಕು. ಸಾಮಾನ್ಯವಾಗಿ ಅಂಬೇಡ್ಕರ್ ಸ್ವತಃ ತಮ್ಮ ಅನುಯಾಯಿಗಳಿಗೆ, ಸಮಾಜದಲ್ಲಿ ಅವರ ಆದರ್ಶವನ್ನು ವಿಸ್ತರಿಸಿಕೊಳ್ಳುವಂತೆ, ಟೀಕೆಗಳನ್ನು ಸ್ವೀಕರಿಸುವಂತೆ ಹಾಗೂ ವಿವೇಚನಾತ್ಮಕವಾಗಿ ಮತ್ತು ತರ್ಕಬದ್ಧವಾಗಿ ವಾದ ಮಂಡಿಸುವಂತೆ ಸಲಹೆಗಳನ್ನು ನೀಡುತ್ತಿದ್ದರು. ನಾವು ಈ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಮುಂದೆ ಸಾಗಿದ್ದರೆ, ಅದಕ್ಕೆ ವಿಶ್ವದ ಪ್ರಮುಖ ಸಂವಿಧಾನವನ್ನು ರಚಿಸಿದ ಶಿಲ್ಪಿ ಕೊನೆಯ ಉಸಿರಿನ ವರೆಗೂ ಹೋರಾಡಿದ ಫಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇದು ಸಕಾಲ.
ಕಾರ್ಮಿಕ ವರ್ಗಕ್ಕೆ ಈ ದೇಶದ ಎರಡು ಪ್ರಬಲ ಶತ್ರುಗಳು 1. ಬ್ರಾಹ್ಮಣವಾದ, 2. ಬಂಡವಾಳ ಶಾಹಿ ವಾದ .
-ಡಾ. ಬಿ. ಆರ್. ಅಂಬೇಡ್ಕರ್