ಕೇವಲ 999 ರೂ. ಗೆ ಐಫೋನ್ ಪಡೆಯುವ ಸುವರ್ಣಾವಕಾಶ ಇಲ್ಲಿದೆ!
ಹೊಸ ಐಫೋನ್ ಎಸ್‌ಇ ಮುಂದಿಡುವಾಗ ಆಪಲ್ ಕೇವಲ ವ್ಯಾಪಾರಿ ಗ್ರಾಹಕರನ್ನು ಮಾತ್ರ ಗುರಿ ಮಾಡದೆ, ಕಾರ್ಪೋರೇಟುಗಳೂ ಲೀಸಿಗೆ ಬಳಸುವಂತೆ ಪ್ರಯತ್ನಿಸುತ್ತಿದೆ.
ಕಾರ್ಪೋರೇಟ್ ಬಳಕೆದಾರರು ಈಗ 4 ಇಂಚ್ ಸ್ಮಾರ್ಟ್ ಫೋನನ್ನು ತಿಂಗಳಿಗೆ ರೂ. 999ಕ್ಕೆ ಲೀಸಿಗೆ ಎರಡು ವರ್ಷಕ್ಕೆ ಪಡೆದುಕೊಳ್ಳಬಹುದು. ಇದು ಒಟ್ಟಾಗಿ ಎರಡು ವರ್ಷಗಳಲ್ಲಿ 23,976 ರೂ. ಆಗುತ್ತದೆ. ಇತರ ಐಫೋನ್ ಮಾಡೆಲುಗಳಿಗೂ ಇಂತಹದೇ ಯೋಜನೆಗಳಿವೆ. ಅದರಲ್ಲಿ ಐಫೋನ್ 6 ಮತ್ತು ಐಫೋನ್ 6ಎಸ್ ಕೂಡ ಸೇರಿದೆ. 16 ಜಿಬಿ ಐಫೋನ್ 6 ಎರಡು ವರ್ಷಕ್ಕೆ ಮಾಸಿಕ ಬೆಲೆ ಟ್ಯಾಗ್ ರೂ. 1,199ರಲ್ಲಿ ಬರುತ್ತದೆ. ಐಫೋನ್ 6ಎಸ್ ಬಳಕೆದಾರರು ರೂ. 1399ನ್ನು ಮಾಸಿಕ ತೆರಬೇಕಾಗುತ್ತದೆ. ಹೆಚ್ಚುವರಿಯಾಗಿ ಕಾರ್ಪೋರೇಟ್ ಬಳಕೆದಾರರು ಯಾವುದೇ ಸಮಯದಲ್ಲೂ ಐಫೋನ್ ಮಾಡೆಲುಗಳ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಆ ಮಾಡೆಲಿನ ಮಾಸಿಕ ಶುಲ್ಕ ಆಧರಿಸಿ ಇದನ್ನು ಪಡೆಯಬಹುದು. ಈ ಹೊಸ ಕೊಡುಗೆಗೆ ಭಾರತದಲ್ಲಿ ಯಶಸ್ಸು ದೊರೆಯುವ ಸಾಧ್ಯತೆಯಿದೆ. ಏಕೆಂದರೆ ಇದರಿಂದ ಐಫೋನ್ ಎಸ್‌ಇ, ಐಫೋನ್ 6 ಮತ್ತು ಐಫೋನ್ 6ಎಸ್ ಅನ್ನು ರೂ. 23,976, ರೂ. 28,776 ಮತ್ತು ರೂ. 33,576ಕ್ಕೆ ಎರಡು ವರ್ಷಗಳ ಕಾಲ ಬಳಸುವ ಅವಕಾಶ ಸಿಗುತ್ತದೆ. ಅಲ್ಲದೆ ಇದರಲ್ಲಿ ಮುಂಗಡ ಠೇವಣಿ ಇಡುವ ಅಗತ್ಯವೂ ಇರುವುದಿಲ್ಲ. ವಾಸ್ತವದಲ್ಲಿ ಐಫೋನ್ ಎಸ್‌ಇ ರೂ. 39,000, ಐಫೋನ್ 6 ರೂ. 52,000 ಮತ್ತು ಐಫೋನ್ 6ಎಸ್ ರೂ. 62,000 ಬೆಲೆ ಹೊಂದಿದೆ. ಇತರ ಐಫೋನ್ ಮತ್ತು ಐಪಾಡ್ ಮಾಡೆಲುಗಳು ಕೂಡ ಲೀಸ್ ಕಾರ್ಯಕ್ರಮದಲ್ಲಿ ಸಿಗಲಿವೆ. ಅವುಗಳು ಕೇವಲ ಕಾರ್ಪೋರೇಟರುಗಳಿಗೆ ಲಭ್ಯವಿರುತ್ತವೆಯೇ ವಿನಾ ನೇರವಾಗಿ ವೈಯಕ್ತಿಕ ಬಳಕೆಗೆ ಸಿಗುವುದಿಲ್ಲ.