ನೀವು ಈ ವರ್ಷ ಆದಾಯ ತೆರಿಗೆ ಪಾವತಿಸುವವರೇ?
ನೀವು ತಿಳಿದಿರಲೇಬೇಕಾದ ಮಾಹಿತಿಗಳು ಇವು
ವೇತನ ಪಡೆಯುವ ವ್ಯಕ್ತಿಗಳು ಮತ್ತು ಕಂಪನಿಗಳು ಆದಾಯ ತೆರಿಗೆ ಪಾವತಿಸುವ ಸಮಯವಿದು. ವಿವಿಧ ರೂಪಗಳಲ್ಲಿ ಆದಾಯ ತೆರಿಗೆ ಸಲ್ಲಿಸಲು ಅವಕಾಶವಿದೆ. ಗಳಿಸಿದ ಆದಾಯ ಮತ್ತು ಪಾವತಿಸಿದ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸುವುದು. ಆದಾಯ ತೆರಿಗೆ ಸಲ್ಲಿಸುವ ಫಾರಂಗಳು
www.incometaxindia.gov.in ವೆಬ್ತಾಣದಲ್ಲಿ ಲಭ್ಯವಿದೆ.
ವಿತ್ತೀಯ ವರ್ಷ (ಎಫ್ವೈ) ಮತ್ತು ವಿಶ್ಲೇಷಣೆ ವರ್ಷದ (ಎವೈ) ನಡುವಿನ ವ್ಯತ್ಯಾಸವೇನು?
ವಿತ್ತೀಯ ವರ್ಷವೆಂದರೆ ನಿಮ್ಮ ತೆರಿಗೆ ಸಲ್ಲಿಸಬೇಕಾದ ಆದಾಯವನ್ನು ನೀವು ಗಳಿಸಿದ ಕಾಲ. 2015 ಏಪ್ರಿಲ್ 1ರಿಂದ 2016 ಮಾರ್ಚ್ 31ರೊಳಗೆ ಗಳಿಸಿದ ಆದಾಯವು ವಿತ್ತೀಯ ವರ್ಷ 2015-16ರಲ್ಲಿ ಬೀಳುತ್ತದೆ. ವಿಶ್ಲೇಷಣಾ ವರ್ಷವೆಂದರೆ ವಿತ್ತೀಯ ವರ್ಷದ ನಂತರದ ವರ್ಷ. ಅದರ ಆದಾಯವನ್ನು ವಿಶ್ಲೇಷಿಸಬೇಕು. ಆ ವರ್ಷ ಪೂರ್ಣವಾದ ಮೇಲೆ ನೀವು ತೆರಿಗೆ ಸಲ್ಲಿಸಬೇಕು.
ಆದಾಯ ತೆರಿಗೆ ಸ್ಲಾಬ್ ಮತ್ತು 2015-16 ಎಫ್ವೈ ಮತ್ತು 2016-17 ಎವೈಗೆ ದರ ಪರಿಣಾಮವೇನು?
1. ವೈಯಕ್ತಿಕ ತೆರಿಗೆದಾರರು
2. ಹಿರಿಯ ನಾಗರಿಕರು 60 ವರ್ಷಗಳಾದವರು,ಆದರೆ 80 ವರ್ಷಗಳಿಗಿಂತ ಕೆಳಗಿನವರು.
3. ಹಿರಿಯ ನಾಗರಿಕರು 80 ವರ್ಷಗಳಿಗಿಂತ ಮೇಲಿನವರಿಗೆ.
ದೇಶಿ ಸಂಸ್ಥೆಯಿಂದ ಪಡೆಯುವ ಡಿವಿಡೆಂಡ್ ಆದಾಯ ರೂ 10 ಲಕ್ಷವನ್ನು ಮೀರಿದಲ್ಲಿ ಹೆಚ್ಚುವರಿ ಶೇ 10 ತೆರಿಗೆ ಪಾವತಿಸಬೇಕು.
ಆದಾಯ ತೆರಿಗೆ ಸಲ್ಲಿಸುವ ಕೊನೆಯ ದಿನ ಯಾವಾಗ?
ವ್ಯಕ್ತಿಗಳು /HUF/BOP/AOI ಮೊದಲಾದವರಿಗೆ ಪ್ರಸ್ತುತ ವಿಶ್ಲೇಷಣಾ ವರ್ಷದಲ್ಲಿ ಕೊನೆಯ ದಿನಾಂಕ ಜುಲೈ 31.
ವಿಶ್ಲೇಷಣಾ ವರ್ಷ 2016-17ಕ್ಕೆ ಆದಾಯ ತೆರಿಗೆ ಸಲ್ಲಿಸಲು ಫಾರಂಗಳು
ವಿಶ್ಲೇಷಣಾ ವರ್ಷ 2016-17ಕ್ಕೆ ಆದಾಯ ತೆರಿಗೆ ಕಾನೂನಿಡಿ ಸೂಚಿಸಿರುವ ಫಾರ್ಮ್ಗಳು ವಿತ್ತೀಯ ವರ್ಷ 2015-16ಕ್ಕೆ ಆದಾಯ ತೆರಿಗೆ ಇಲಾಖೆ ವೆಬ್ತಾಣ http://www.incometaxindia.gov.in or http://incometaxindiaefiling.gov.in ಯಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.