ಪ್ಲೆಗರಿಸಂ: ಸಾಧಕ-ಬಾಧಕಗಳು
ಇದೀಗ ಹೊಸ ತಲೆನೋವು!
ಪ್ಲೆಗರಿಸಂ ಚೆಕರ್... ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ನಿದ್ದೆ-ಊಟ ಕೆಡಿಸಿದ ಹೊಸ ಸಾಫ್ಟ್‌ವೇರ್. ಕೆಲವೊಂದು ಹೆಸರಾಂತ ವಿಶ್ವವಿದ್ಯಾನಿಲಯಗಳ ಈ ಸಾಫ್ಟ್‌ವೇರನ್ನು ಬಳಸಲಾರಂಭಿಸಿದೆ. ಅಂತೂ ಇಂತೂ ಇಷ್ಟೆಲ್ಲಾ ಹೇಳಿದ ಮೇಲೆ ಈ ಸಾಫ್ಟ್‌ವೇರ್ ಬಗ್ಗೆ ಏನಾದ್ರೂ ಓದುಗರಿಗೆ ತಿಳಿಬೇಕಾಲ್ವಾ?.
ಇದು ಒಂದು ಹೊಸ ರೀತಿಯ ಸಂಶೋಧನೆ ವಿದ್ಯಾರ್ಥಿಗಳು ಮಂಡಿಸುವ ಪ್ರಬಂಧವನ್ನು ಇದರಲ್ಲಿ ಪರೀಕ್ಷಿಸಲಾಗುತ್ತದೆ. ಅದ್ಭುತ ಇಲ್ಲೇ!
ಪ್ರಬಂಧದಲ್ಲಿ ಬಳಸಲಾದ ಸ್ವವಾಕ್ಯಗಳೆಷ್ಟು?, ಎಷ್ಟು ನಕಲೀಕರಣಗೊಂಡಿದೆಯೆಂಬ ಉತ್ತರಗಳು ಶೇಕಡಾಂಶಗಳಲ್ಲಿ ನಮಗೆ ಲಭ್ಯವಾಗುತ್ತದೆ.
‘ಸ್ವ-ರಚಿತ’ ಪ್ರಬಂಧಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿಶ್ವ ವಿದ್ಯಾನಿಲಯಗಳು ಶೇಕಡಾಂಶಗಳಲ್ಲಿ ಮಿತಿಯನ್ನು ಗೊತ್ತು ಪಡಿಸುತ್ತಿದೆ. ಈ ಸಾಫ್ಟ್ ವೇರ್ ಎಷ್ಟು ಕರಾರುವಾಕ್ ಅಂದರೆ, ಎಷ್ಟು ಪ್ರಮಾಣ ಅಂತರ್ಜಾಲದಿಂದ ನಕಲೀಕರಣಗೊಂಡಿದೆ, ಎಷ್ಟು ಬೇರೆ ಪ್ರಬಂಧಗಳಿಂದ ಹೆಕ್ಕಲಾಗಿದೆ ಎಂಬ ಅದ್ಭುತ ಅಂಕಿ-ಅಂಶಗಳು ಇಲ್ಲಿ ಪ್ರಕಟವಾಗುತ್ತದೆ.
ಸಾಧಕಗಳು
ಹಿಂದೆ ಯಾರದೋ ಸಂಶೋಧನಾ ಪ್ರಬಂಧಗಳಿಗೆ ತಮ್ಮ ಹೆಸರನ್ನು ಅಂಟಿಸುವ ಪ್ರಕಿೃಯೆ ಪದವಿ ಯಾ/ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿತ್ತು. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ಉದ್ದೇಶವನ್ನಿಟ್ಟುಕೊಂಡು ಈ ಸಾಫ್ಟ್‌ವೇರನ್ನು ಬಳಸಲಾರಂಭಿಸಲಾಯಿತು. ಮುಂದೆ ನಡೆದದ್ದು ಇತಿಹಾಸ. ವಿದ್ಯಾರ್ಥಿಗಳಲ್ಲಿ ಸ್ವಂತಿಕೆ ಆರಂಭವಾಯಿತು.
ನಾಲ್ಕನೆ ಮೂರರಷ್ಟು ಅಧಿಕ ಪ್ರಮಾಣದಲ್ಲಿ ವಿದ್ಯಾರ್ಥಿಗಳು ತಮ್ಮದೇ ವಿಷಯಗಳನ್ನು ಬರೆಯಬೇಕಾದ ಕಠಿಣತೆ ನಿರ್ಮಾಣವಾಯಿತು. ಇದು ಎಷ್ಟರ ಮಟ್ಟಿಗೆ ತೀಕ್ಷ್ಣವಾಗಿತ್ತೆಂದರೆ, ಸಾಮಾನ್ಯ ಇಂಗ್ಲೀ=ಷ್ ಪದಗಳಿಗೂ ’ಫ್ಲೆಗರೈಸ್ಡ್’( ನಕಲಿಸಲಾಗಿದೆ) ಎಂಬ ದತ್ತಾಂಶಗಳನ್ನು ತೋರಲಾರಂಬಿಸಿತು. ಇದು ವಿದ್ಯಾರ್ಥಿಗಳಲ್ಲಿ ಹೊಸ ತಲೆನೋವಾಗಿ ಪರಿಣಮಿಸಿತು. ನೂರಕ್ಕೆ ಎಪ್ಪತ್ತರಷ್ಟೂ ವಿದ್ಯಾರ್ಥಿಗಳು ತಾವು ಮಂಡಿಸಿದನ್ನು ಏನೆಂಬುವುದನ್ನೇ ತಿಳಿಯದೆ, ಯಾರದೋ ಮಂಡನೆಗಳನ್ನು ಗುಡ್ಡ ಹಾಕುತ್ತಿದ್ದವರನ್ನು ತಮ್ಮ ಪ್ರಬಂಧಗಳನ್ನು ತಲೆ ಬರಹದಿಂದ ಹಿಡಿದು ಉಪ ಸಂಹಾರದ ವರೆಗೆ ಕಣ್ಣೋಡಿಸುವುದು ಆರಂಭವಾಯಿತು. ಇದು ಉತ್ತಮ ಬೆಳವಣಿಗೆಯ ಸಂಕೇತ. ಪಾಶ್ಚಾತ್ಯರಲ್ಲಿ ಇಂತಹ ವಿಚಾರ ಇಂದು ಮೊನ್ನೆಯದಲ್ಲ. ದಶಕಗಳಿಗೂ ಹಿಂದೆ ಈ ರೀತಿಯ ಬೆಳವಣಿಗೆ ಅಮೆರಿಕ ದೇಶದಲ್ಲಿತ್ತು. ನಮ್ಮ ದೇಶದಲ್ಲಿ ಈ ಕೆಲ ವರ್ಷಗಳ ಹಿಂದೆ ಇದು ಆರಂಭಗೊಂಡಿರುವುದು ನಿಜಕ್ಕೂ ಶೈಕ್ಷಣಿಕ ರಂಗದ ಅಭಿವೃದ್ಧಿಗೆ ಹಿಡಿದ ಕನ್ನಡಿ.
ಬಾಧಕಗಳು
ನಾಲ್ಕನೆ ಮೂರರಷ್ಟು ಸ್ವರಚಿತ ಹೊಂದಿರಬೇಕು ಎಂಬ ನಿಯಮದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪೇಚಿಗೆ ಸಿಲುಕಿದ್ದಾರೆ.
ಉದಾಹರಣೆಗೆ, ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಪ್ರಬಂಧ ಮಂಡಿಸುವಾಗ ತಾವು ಆಯ್ದ ಕಂಪೆನಿಯ ಬಗ್ಗೆ ಬರೆಯಬೇಕಾಗುತ್ತದೆ. ಫ್ಲೆಗರಿಸಂ ಸಾಫ್ಟ್‌ವೇರ್ ನಲ್ಲಿ ಸ್ಕಾನ್ ಮಾಡುವ ಹೊತ್ತು ‘ಕಂಪೆನಿಯ ಹೆಸರು’ ನಕಲಿಸಲಾಗಿದೆ ಎಂದು ತೋರಿಸುತ್ತದೆ.
ಇನ್ನು ಕಂಪೆನಿಯ ಯಾವ ಇಂಡಸ್ಟ್ರಿಯಲ್ಲಿ ಒಳಗೊಂಡಿದೆಯೋ ಅದರ ಬಗ್ಗೆಯೂ ಬರೆಯಬೇಕಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮದೇ ವಾಕ್ಯಗಳಲ್ಲಿ ಬರೆದರೂ, ಅದರ ಬಗೆಗಿನ ದತ್ತಾಂಶಗಳನ್ನು ಸ್ವಂತವಾಗಿ ಬರೆಯಲಾಗುವುದಿಲ್ಲ. ಈ ವಿವರಗಳು ನಕಲಿಸಲಾಗಿದೆ ಎಂದು ‘ಕೆಂಪು ಬಾರ್ ನೊಳಗೆ’ ತೋರಿಸುತ್ತದೆ.
ಇಲ್ಲಿ ಸಾಮಾನ್ಯ ಪದಗಳು ಕೂಡಾ ಪ್ಲೆಗರೈಸ್ ಆಗುವುದರಿಂದ ಶೇ.25 ಇತಿಮಿತಿಯೊಳಗೆ ಇವುಗಳನ್ನು ನಿಲ್ಲಿಸಬೇಕಾದ ಒತ್ತಡ ವಿದ್ಯಾರ್ಥಿಗಳ ಮೇಲಿರುತ್ತದೆ. ತಮ್ಮ ಪರಿಮಿತಿಯನ್ನು ಪೂರೈಸುವುದಕ್ಕಾಗಿ ತಪ್ಪು ದತ್ತಾಂಶಗಳನ್ನು ವಿದ್ಯಾರ್ಥಿಗಳು ಬರೆಯುವ ಭಯ ಇರುತ್ತದೆ.
ಸಾಫ್ಟ್ ವೇರ್ ಪುಟ ಸಂಖ್ಯೆ (ಪೇಜ್) ಎಂಬ ಬರಹವನ್ನು ನಕಲಿಸಿದ ಬಗ್ಗೆ ವರದಿ ಪ್ರಕಟವಾಗುತ್ತದೆ.
ಇಂತಹ ಕ್ಲಿಷ್ಟಕರ ಧೋರಣೆಯಿಂದ ಹಲವು ವಿದ್ಯಾರ್ಥಿಗಳ ಪ್ರಬಂಧಗಳು ತಿರಸ್ಕಾರಗೊಳ್ಳುವ ಸಂಭಾವ್ಯವೇ ಹೆಚ್ಚು.
ಕಂಪೆನಿಯ ‘ವರ್ಷದ ವರದಿ’ಯು ಅಂತರ್ಜಾಲದಲ್ಲಿ ಈ ಮೊದಲೇ ಪ್ರಕಟಗೊಂಡಿರು ವುದರಿಂದ ಅವುಗಳನ್ನು ಬದಲಿಸಿ ಬರೆಯಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹಲವಾರು ಉತ್ತಮ ಪ್ರಬಂಧಗಳು ಅನರ್ಹಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತದೆ.
ಈ ನಿಟ್ಟಿನಲ್ಲಿ ವಿಶ್ವ ವಿದ್ಯಾನಿಲಯಗಳು ತಮ್ಮ ಮಿತಿಯನ್ನು ಕೆಳಗಿಳಿಸುವ ಹೃದಯವಂತಿಕೆ ತೋರುವುದು ವಿದ್ಯಾರ್ಥಿಗಳಿಗೆ ನ್ಯಾಯ ನೀಡಿದಂತೆ. ಪದವಿಗಳ ಪಕ್ವತೆ ಮತ್ತು ಅದರ ಉತ್ಕೃಷ್ಟತೆಗಾಗಿ ಕೇವಲ ಸಾಫ್ಟ್‌ವೇರ್‌ಗಳನ್ನು ಮಾತ್ರ ನಂಬುವುದು ಉಚಿತವಲ್ಲ. ಮೌಲ್ಯಮಾಪನವು ಯಾಂತ್ರೀಕೃತ ಮಾತ್ರವಾಗದಿರಲಿ. ವಿಶ್ಲೇಷಿಸಿ ಉತ್ತರವನ್ನೀಡುವ ಮಾನವೀಯ ಮೌಲ್ಯಮಾಪನವೂ ನಡೆಯಲಿ.