ನಿಮ್ಮ ಕಾರಿನ ಪೇಯಿಂಟ್ ರಕ್ಷಣೆ ಹೇಗೆ?
ಇಲ್ಲಿವೆ ಉಪಯುಕ್ತ ಸಲಹೆಗಳು
ಕಾರಿಗೆ ಪೈಂಟ್ ಕೊಡುವ ಉದ್ದೇಶ ವಾಹನಕ್ಕೆ ಮೌಲ್ಯವನ್ನು ಒದಗಿಸಲು ಮಾತ್ರವಲ್ಲ, ಅದನ್ನು ರಕ್ಷಿಸಲೂ ಸಹ. ಬಹಳಷ್ಟು ಮಂದಿ ತನ್ನ ನಿತ್ಯ ಜೀವನದಲ್ಲಿ ಕಾರಿಗೆ ಹಾನಿಯಾದರೆ ಅದನ್ನೇ ಹಿಡಿದುಕೊಂಡು ತಿರುಗುತ್ತಾರೆ.
ಕೆಲವೊಮ್ಮೆ ಪಕ್ಷಿಗಳ ಹಿಕ್ಕೆಯಿಂದಲೂ ಬಣ್ಣ ಸವೆದು ಹೋಗುತ್ತದೆ. ಕಾರನ್ನು ತುಕ್ಕು ಹಿಡಿಯುವುದು ಅಥವಾ ಇತರ ರೀತಿಯಲ್ಲಿ ಕಾರಿಗೆ ಹಾನಿಯಾಗುವುದರಿಂದ ಹೇಗೆ ತಪ್ಪಿಸಬಹುದು? ಇಲ್ಲಿವೆ ಹಾದಿ...
ಸ್ಪಿಲ್ಡ್ ಫ್ಯೂಯೆಲ್
ಫ್ಯೂಯೆಲ್ ಟ್ಯಾಂಕ್ ತುಂಬಿಸುವಾಗ ಪ್ರತೀ ಬಿಂದುವೂ ಕಾರಿನ ಟಾಂಕಿಗೆ ತುಂಬಬೇಕು ಎಂದು ಹಲವರು ಪ್ರಯತ್ನಿಸುತ್ತಾರೆ. ಆದರೆ ಕಾರಿನ ಮೇಲೂ ದ್ರವ ಬೀಳುವ ಸಾಧ್ಯತೆಯಿದೆ. ಹಾಗೆ ಬಿದ್ದರೆ ಬೇಗನೇ ಒರೆಸಲು ಸಾಧ್ಯವಾಗುವುದಿಲ್ಲ. ಫ್ಯೂಯೆಲ್ ಕಾರಿನ ಮೇಲಣ ಪೈಂಟ್ ಕೋಟಿಂಗ್ ಹೊಳಪನ್ನು ತೆಗೆಯುತ್ತದೆ. ಹಾಗೆ ಕಾರಿನ ಮೇಲೆ ಕಲೆ ಉಳಿಯುತ್ತದೆ.
ಸಲಹೆ: ಕಂದು ಬಣ್ಣದ ಫ್ಯೂಯೆಲ್ ಕಲೆಯನ್ನು ಕಾರಿನ ಮೇಲೆ ಉಳಿಯದಂತೆ ತಡೆಯಲು ಫ್ಯೂಯೆಲ್ ಹಾಕಿದಾಗ ಬಿದ್ದ ಬಿಂದುವನ್ನು ತಕ್ಷಣವೇ ಮೈಕ್ರೋಫೈಬರ್ ಬಟ್ಟೆ ಬಳಸಿ ಒರೆಸಿ.
ಮೇಲ್ಮೈ ಮೇಲೆ ಜೀವಿಗಳು
ಜೀವಿಗಳು ಅತೀ ಚಿಕ್ಕದಾಗಿದ್ದರೂ, ಬಣ್ಣ ಕೆರೆಯಲು ಸಾಕು. ಕೀಟಗಳು ಅಚ್ಚರಿಯೆನ್ನುವಂತೆ ಅಸಿಡಿಕ್ ಆಗಿರುತ್ತವೆ. ಕಾರಿನ ಮೇಲ್ಮೈ ಮೇಲಿಂದ ಅವುಗಳನ್ನು ಪೂರ್ಣವಾಗಿ ಸ್ವಚ್ಛಗೊಳದೆ ಇದ್ದರೆ ಬಣ್ಣ ಮಾಸಲು ಕಾರಣವಾಗಬಹುದು.
ಸಲಹೆ: ಜೀವಿಗಳು ಕಾರಿನ ಮೇಲೆ ಬಹಳ ಧೀರ್ಘ ಕಾಲ ಕೂರಲು ಬಿಡಬೇಡಿ. ನಂತರ ಅವುಗಳನ್ನು ನಿವಾರಿಸಲು ಕಷ್ಟವಾಗಬಹುದು. ಬಟ್ಟೆ ಅಥವಾ ಎಲ್ಬೊ ಗ್ರೀಸ್ ತೆಗೆದುಕೊಂಡು ಸ್ವಚ್ಛ ಮಾಡಿ.
ಪಕ್ಷಿಗಳ ಹಿಕ್ಕೆ
ಪಕ್ಷಿಗಳ ಹಿಕ್ಕೆ ಕೆಟ್ಟದಾಗಿರುತ್ತವೆ ಮಾತ್ರವಲ್ಲ, ಪೈಂಟಿಗೆ ಹಾನಿ ಮಾಡುತ್ತವೆ. ಪಕ್ಷಿ ಹಿಕ್ಕೆಯಲ್ಲಿ ತುಂಬಾ ಕಾಳುಗಳು ಮತ್ತು ಬೀಜಗಳಿರುತ್ತವೆ. ಅವು ಅಸಿಡಿಕ್ ಆಗಿದ್ದು ಬಣ್ಣದ ಮೇಲೆ ಕೆಲಸ ಮಾಡುತ್ತವೆ. ಕಾರಿನ ಮೇಲೆ ಅವು ಬಹಳ ಧೀರ್ಘ ಇರಲು ಬಿಡಬೇಡಿ.
ಸಲಹೆ: ವಾಷ್ ಸೊಲ್ಯುಷನನ್ನು ಸ್ಪ್ರೇ ಮಾಡಿ ಹಿಕ್ಕೆಗಳಿರುವ ಜಾಗವನ್ನು ಸ್ವಚ್ಛ ಮಾಡಿ. ಮೃದು ಮೈಕ್ರೋಫೈಬರ್ ಬಟ್ಟೆಯಿಂದ ನಿಧಾಣವಾಗಿ ತೊಳೆಯಿರಿ.
ಕಲ್ಲಿನ ತುಂಡುಗಳು
ಸಡಿಲವಾದ ಕಲ್ಲಿನ ತುಂಡುಗಳು, ಕಲ್ಲುಗಳು, ಕಲ್ಲಿನ ಚಿಪ್ಪೆಗಳು ರಸ್ತೆಯಲ್ಲೆಲ್ಲ ಇರುತ್ತವೆ. ಈ ಸಣ್ಣ ಚೂರುಗಳು ನೆಲದಿಂದ ಹಾರಿ ಕಾರಿಗೆ ರಟ್ಟಬಹುದು. ಇವು ಕಾರಿನ ಬಣ್ಣವನ್ನು ನಿವಾರಿಸಬಹುದು.
ಸಲಹೆ: ಈ ಕಲ್ಲಿನ ಚೂರುಗಳನ್ನು ಅಂಟಿಕೊಂಡ ಜಾಗದಿಂದ ಬೇಗನೇ ತೆಗೆಯಬೇಕು. ಅವುಗಳನ್ನು ತುಕ್ಕು ಹಿಡಿಯಲು ಬಿಡಬಾರದು.
ಬೆರಳಚ್ಚುಗಳು
ನಾವೆಲ್ಲರೂ ನಮ್ಮ ಬೆರಳುಗಳನ್ನು ಮೋಜಿನ ಸಂದೇಶಗಳನ್ನು ಬರೆಯಲು ಬಳಸುತ್ತೇವೆ. ಅಥವಾ ಧೂಳು ತುಂಬಿದ ಕಾರಿನ ಮೇಲೆ ನಮ್ಮ ಹಸ್ತಾಕ್ಷರಗಳನ್ನು ಬರೆಯುತ್ತೇವೆ. ಆದರೆ ಈ ಅಮಾಯಕ ಕೆಲಸದಿಂದ ಕಾರಿನ ಬಣ್ಣ ಹೋಗುವ ಸಾಧ್ಯತೆಯಿದೆ. ನಿಮ್ಮ ಬೆರಳುಗಳನ್ನು ಪೈಂಟಿನ ಮೇಲೆ ಎಳೆಯುವುದರಿಂದ ಹಲವು ಗುರುತುಗಳನ್ನು ಅಲ್ಲಿ ಬಿಡುತ್ತದೆ. ದೂಳು ಹೋದ ಮೇಲೂ ಅಲ್ಲಿ ಬೆರಳಿನ ಗುರುತುಗಳಿರುತ್ತವೆ.
ಸಲಹೆ: ಇದನ್ನು ಮಾಡದೆ ಇದ್ದರಾಯಿತು. ಕಾರನ್ನು ತೊಳೆಯಲು ಡಸ್ಟರನ್ನು ಬಳಸಬೇಕು. ಸಣ್ಣ ಗೀಚುಗಳನ್ನು ತೆಗೆಯಲು ಸ್ವಲ್ಪ ಪಾಲಿಶ್ ಬಳಸಬಹುದು. ಪಾಲಿಶ್ ಮಾಡುವ ಮೊದಲು ಕಾರನ್ನು ತೊಳೆಯಬೇಕು.
ಬೂದಿ
ಮಲಿನ ಗಾಳಿ ಕಾರಿನ ಮೇಲೆ ಬೂದಿ ಅಥವಾ ಕೊಳೆಯನ್ನು ಬಿಡಬಹುದು. ಅದನ್ನು ತಕ್ಷಣವೇ ನೀರಿನಿಂದ ತೊಳೆಯಬಾರದು. ನೀರಿನ ಜೊತೆಗೆ ಬೂದಿ ಮಿಶ್ರವಾದಾಗ ಕಾರಿನ ಫಿನಿಶಿಂಗ್ ಹಾಳಾಗಬಹುದು.
ಸಲಹೆ: ಸರಳವಾದ ಹಾದಿ ಎಂದರೆ ಹೊರಗೆ ಪಾರ್ಕ್ ಮಾಡುತ್ತಿದ್ದಲ್ಲಿ, ಕಾರನ್ನು ಮುಚ್ಚಿಡಬೇಕು. ಬೂದಿಯಿಂದ ನಿವಾರಣೆ ಪಡೆಯಲು ಡಸ್ಟರ್ ಬಳಸಿ ಅದನ್ನು ನಿವಾರಿಸಿ.
ಕೊಳೆಯಾದ ವಾಷಿಂಗ್ ಪರಿಕರಗಳು
ನೀವು ನಿಮ್ಮ ಕಾರನ್ನು ಎಷ್ಟು ಸಲ ಬೇಕಾದರೂ ತೊಳೆದರೂ, ಕೆಟ್ಟ ಪರಿಕರ ಬಳಸಿ ತೊಳೆದಲ್ಲಿ ಉಪಯೋಗವಿಲ್ಲ. ಅವು ಶಾಶ್ವತ ನಷ್ಟ ಉಂಟು ಮಾಡಬಹುದು. ಮೃದುವಾದ ಮೈಕ್ರೋಫೈಬರ್ ಅಥವಾ ಸ್ಪಂಜು ಬಳಸಿ ತೊಳೆದರು ಸಹ ಅದೇ ಪರಿಣಾಮ ಕಾಣುವಿರಿ. ಬದಲಾಗಿ ಕಾರಿಗೆ ಗೀಚುಗಳಾಗಬಹುದು.
ಸಲಹೆ: ನಿಮ್ಮ ತೊಳೆಯುವ ಸ್ಪಂಜು ಅಥವಾ ಬಟ್ಟೆ ನೆಲಕ್ಕೆ ಬಿದ್ದರೆ ಹೊಸತನ್ನು ತೆಗೆದುಕೊಳ್ಳಿ. ಹೆಚ್ಚುವರಿ ಬಟ್ಟೆ ಇಟ್ಟುಕೊಳ್ಳುವುದು ಅಗತ್ಯ. ಕೊಳೆ ಇರುವ ಪರಿಕರಗಳು ಪೈಂಟ್ ಮೇಲೆ ಶಾಶ್ವತ ಗಾಯ ಮಾಡುತ್ತವೆ. ಸ್ಪರ್ಶಿಸದೆಯೇ ಕಾರನ್ನು ತೊಳೆದರೆ ಇನ್ನೂ ಉತ್ತಮ.
ಕೃಪೆ: ndtv.com