ಮುಂಜಾನೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯಿರಿ !
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಜಪಾನಿನಲ್ಲಿ ಆರಂಭವಾದ ಕಲ್ಪನೆ. ಅಲ್ಲಿ ಜನರು ಉಪಹಾರ ಸೇವಿಸುವ 30 ನಿಮಿಷ ಮೊದಲು ಖಾಲಿ ಹೊಟ್ಟೆಗೆ ನಾಲ್ಕು ಗ್ಲಾಸು ನೀರು ಕುಡಿಯುತ್ತಾರೆ. ಅದು ಸಕ್ರಿಯವಾಗಿರಲು ಮತ್ತು ಆರೋಗ್ಯಕರವಾಗಿರಲು ನೆರವಾಗುತ್ತದೆ.
ಆರೋಗ್ಯಕರ ಹೊಟ್ಟೆ ಮತ್ತು ಫಿಟ್ ಆಗಿರುವ ಜೀವನ ಶೈಲಿಗೆ ಬೆಳಗಿನ ಜಾವ ಮೊದಲು ಮಾಡಬೇಕಾದ ವಿಷಯವೆಂದರೆ ನೀರು ಕುಡಿಯುವುದು. ಅದರಿಂದ ಈ ಕೆಳಗಿನ ಲಾಭಗಳು ಸಿಗುತ್ತವೆ.
ಸ್ಪಷ್ಟವಾದ ಬಣ್ಣ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜಠರದ ಚಲನೆ ಚೆನ್ನಾಗಿರುತ್ತದೆ. ದೇಹದ ವಿಷಕಾರಿಗಳನ್ನು ಹೊರಗೆ ಹಾಕಿ ದುರ್ಬಲ ಚರ್ಮಕ್ಕೆ ಹೊಳಪು ನೀಡುತ್ತದೆ.
ಕರುಳನ್ನು ಸ್ವಚ್ಛಗೊಳಿಸಲು ನೆರವು
ಖಾಲಿ ಹೊಟ್ಟೆಗೆ ಒಂದು ಉದ್ದದ ಗ್ಲಾಸಿನಲ್ಲಿ ನೀರು ಕುಡಿದರೆ ಕರುಳನ್ನು ಮತ್ತು ಅಲ್ಲಿ ತುಂಬಿದ ಕೊಳೆ ಸ್ವಚ್ಛಗೊಳಿಸಲು ನೆರವಾಗುತ್ತದೆ. ಪೌಷ್ಠಿಕಾಂಶಗಳನ್ನು ವೇಗವಾಗಿ ಮತ್ತು ಉತ್ತಮವಾಗಿ ಹೀರಿಕೊಳ್ಳಲೂ ನೆರವಾಗುತ್ತದೆ.
ಶಕ್ತಿಯುತವಾಗಿ ಮಾಡುತ್ತದೆ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕೆಂಪು ರಕ್ತಕಣಗಳು ಪ್ರಚೋದನೆಗೊಂಡು ವೇಗವಾಗಿ ಬೆಳೆಯುತ್ತವೆ. ಅದರಿಂದ ರಕ್ತಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುತ್ತದೆ. ಇಡೀ ದಿನ ನಿಮಗೆ ಸಕ್ರಿಯವಾಗಲು ಹೆಚ್ಚು ಶಕ್ತಿ ಕೊಡುತ್ತದೆ.
ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ನೀರಿನಲ್ಲಿ ಶೂನ್ಯ ಕ್ಯಾಲರಿಗಳು ಇರುವ ಕಾರಣ ಬೇಕಾದಷ್ಟು ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಟಾಕ್ಸಿನುಗಳನ್ನು ಹೊರಗೆ ಹಾಕಿ ದೇಹ ಉಬ್ಬುವುದನ್ನು ತಡೆಯುತ್ತದೆ. ಅದು ಚಯಾಪಚಯ ಕ್ರಿಯೆಗೂ ನೆರವಾಗುತ್ತದೆ ಮತ್ತು ಕ್ಯಾಲರಿಗಳನ್ನು ವೇಗವಾಗಿ ಕಡಿಮೆ ಮಾಡುತ್ತದೆ.
ಬಲಿಷ್ಠ ನಿರೋಧಕ ವ್ಯವಸ್ಥೆ ನಿರ್ಮಿಸುತ್ತದೆ
ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ದೇಹದಲ್ಲಿ ಫ್ಲೂಯಿಡ್ ಸಮತೋಲನದಲ್ಲಿಡಲು ನೆರವಾಗುತ್ತದೆ. ಹಾಗೆ ನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದು ನಿಮಗೆ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡಿ ಕಡಿಮೆ ರೋಗಗ್ರಸ್ತರಾಗುತ್ತೀರಿ.
ಕೃಪೆ: times of india