ಇನ್ನು ನೀವು ಫೇಸ್ಬುಕ್ ಮೆಸೆಂಜರ್ ನಿಂದ ಗ್ರೂಪ್ ಕರೆ ಮಾಡಿ
ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಗ್ರೂಪ್ ಕಾಲಿಂಗ್‌ಮೆಸೆಂಜರನ್ನು ಆರಂಭಿಸಿದ್ದಾರೆ. ಅದರಿಂದ ಇಂಟರ್ನೆಟ್ಟಲ್ಲಿ ಒಟ್ಟಾಗಿ 50 ಜನರು ಮಾತನಾಡುವ ಅವಕಾಶ ಕೊಟ್ಟಿದೆ.
ಮುಂದಿನ 24 ಗಂಟೆಗಳಲ್ಲಿ ಆಂಡ್ರಾಯ್ಡಾ ಮತ್ತು ಐಒಎಸ್ ಅಲ್ಲಿ ಮೆಸೆಂಜರಿನ ಇತ್ತೀಚೆಗಿನ ಲಕ್ಷಣಗಳನ್ನು ಉಚಿತವಾಗಿ ಜಾಗತಿಕವಾಗಿ ಆರಂಭಿಸಲಾಗುವುದು. ಬಳಕೆದಾರರು ಗ್ರೂಪ್ ವಾಯ್ಸ್ ಓವರ್ ಐಪಿ (VoIP) ಆಡಿಯೋ ಕಾಲನ್ನು ಆರಂಭಿಸಿ ಗ್ರೂಪ್ ಚಾಟ್ ಮಾಡಬಹುದು.
ವಾಯ್ಸ್ ಓವರ್ ಐಪಿ (VoIP) ಎನ್ನುವುದು ಧ್ವನಿ ಸಂಪರ್ಕ ಮತ್ತು ಮಲ್ಟಿಮೀಡಿಯ ಸೆಶನುಗಳನ್ನು ಇಂಟರ್ನೆಟ್ ಅಂತಹ ಇಂಟರ್ನೆಟ್ ಪ್ರೊಟೋಕಾಲ್ (IP) ನೆಟ್ವರ್ಕಿನಲ್ಲಿ ಮಾಡಲು ಒಂದು ವಿಧಾನ ಮತ್ತು ತಂತ್ರಜ್ಞಾನದ ಗ್ರೂಪ್ ಆಗಿದೆ.
ಕೆಲವೊಮ್ಮೆ ಟೈಪಿಂಗ್ ಸಾಕಾಗುವುದಿಲ್ಲ ಮತ್ತು ಜನರು ಪರಸ್ಪರರ ಜೊತೆ ಮಾತನಾಡಲು ಬಯಸುತ್ತಾರೆ ಎನ್ನುವುದು ಮೆಸೆಂಜರ್ ವಕ್ತಾರ ಅಭಿಪ್ರಾಯ. ಒಂದು ಗ್ರೂಪ್ ಕಾಲ್ ಮಾಡಲು ಬಳಕೆದಾರ ಫೋನ್ ಐಕಾನ್ ಮೇಲೆ ಟಾಪ್ ಮಾಡಬೇಕು. ಅವರು ಯಾವ ಗ್ರೂಪ್ ಚಾಟ್ ಸದಸ್ಯರನ್ನು ಸೇರಿಸಲು ಬಯಸಿದ್ದಾರೆ ಎಂದು ಆರಿಸಿಕೊಳ್ಳಬೇಕು.
ಎಲ್ಲಾ ಆರಿಸಿದ ಸದಸ್ಯರು ತಕ್ಷಣವೇ ಮೆಸೆಂಜರ್ ಕರೆಯನ್ನು ಏಕಕಾಲದಲ್ಲಿ ಪಡೆದುಕೊಳ್ಳುತ್ತಾರೆ. ಒಬ್ಬರು ಆರಂಭಿಕ ಕರೆಯನ್ನು ಮಿಸ್ ಮಾಡಿಕೊಂಡಿದ್ದರೂ, ಕರೆ ಮುಂದುವರಿಯುತ್ತದೆ. ಬಳಕೆದಾರರು ಗ್ರೂಪ್ ಚಾಟ್ ಮೇಲೆ ಫೋನ್ ಐಕಾನ್ ಮೇಲೆ ಟಾಪ್ ಮಾಡಿ ಕರೆಯನ್ನು ಸೇರಿಕೊಳ್ಳಬಹುದು.
ಯಾರೆಲ್ಲಾ ಕರೆಯಲ್ಲಿ ಸೇರಿಕೊಂಡಿದ್ದಾರೆ ಎನ್ನುವುದನ್ನೂ ಬಳಕೆದಾರರು ಕಾಣಬಹುದು ಮತ್ತು ಗ್ರೂಪ್ ಸಂಭಾಷಣೆ ನಡೆಯುತ್ತಿರುವಾಗಲೇ ಬಳಕೆದಾರರನ್ನು ಸೇರಿಸಿಕೊಳ್ಳಬಹುದು.
ಕೃಪೆ: times of india