ಹೊಳೆಯುವ ಹಲ್ಲುಗಳಿಗಾಗಿ ಮನೆಯಲ್ಲೇ ಇವೆ ನೈಸರ್ಗಿಕ ವಿಧಾನಗಳು
ಬಿಳಿ ಹಲ್ಲು ಬೇಕೆನ್ನುವುದು ಬಹಳಷ್ಟು ಮಂದಿಯ ಆಸೆ. ಪ್ರತೀ ವರ್ಷ ಹಲ್ಲು ಬಿಳಿ ಮಾಡಲು ಸಾಕಷ್ಟು ಹಣವನ್ನೂ ಜನರು ಖರ್ಚು ಮಾಡುತ್ತಾರೆ. ಬಿಳಿ ಮಾಡುವುದು ಅಥವಾ ಬ್ಲೀಚಿಂಗ್ ಸ್ವಲ್ಪ ಮಟ್ಟಿಗೆ ಕೆಲಸ ಮಾಡಬಹುದು. ಆದರೆ ಅದರಿಂದ ಹಲ್ಲು ಬಹಳ ಸೂಕ್ಷ್ಮವಾಗಿಬಿಡುತ್ತದೆ. ಇದಕ್ಕಾಗಿ ಪ್ರಾಕೃತಿಕವಾದ ಪರ್ಯಾಯಗಳ ಬಗ್ಗೆ ತಿಳಿದುಕೊಳ್ಳೋಣ.
1. ಸ್ಟ್ರಾಬೆರಿ, ಉಪ್ಪು ಮತ್ತು ಬೇಕಿಂಗ್ ಸೋಡಾ ಸ್ಕ್ರಬ್
ಸ್ಟ್ರಾಬರಿಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ಅದು ನಿಮ್ಮ ಹಲ್ಲನ್ನು ಹಳದಿ ಮಾಡುವುದನ್ನು ತಪ್ಪಿಸುತ್ತದೆ. 1-3 ದೊಡ್ಡ ಸ್ಟ್ರಾಬರಿಗಳು, ಒಂದು ಚಿಟಿಕೆ ಉಪ್ಪು, ಅರ್ಧ ಚಮದ ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಬೆರ್ರಿಗಳನ್ನು ಚೆನ್ನಾಗಿ ಹುಡಿ ಮಾಡಿ. ಉಪ್ಪನ್ನು ಮತ್ತು ಬೇಕಿಂಗ್ ಸೋಡಾ ಹಾಕಿ. ಪೇಪರ್ ಟವೆಲಿನಿಂದ ಹಲ್ಲಿನಲ್ಲಿದ್ದ ಜೊಲ್ಲನ್ನು ತೆಗೆಯಿರಿ. ನಂತರ ಮಿಶ್ರಣವನ್ನು ಟೂತ್‌ಬ್ರಷ್‌ಗೆ ಹಾಕಿ ಹಚ್ಚಿಕೊಳ್ಳಿ. ಮಿಶ್ರಣ 5 ನಿಮಿಷ ಇಟ್ಟು ತೊಳೆಯಿರಿ. ನಿಮ್ಮ ಹಲ್ಲು ಬಿಳಿಯಾಗಿರುತ್ತದೆ.
2. ಬೇಕಿಂಗ್ ಸೋಡಾ ಮತ್ತು ಲಿಂಬೆ ಪಾನೀಯ ಪೇಸ್ಟ್
ಬೇಕಿಂಗ್ ಸೋಡಾ, ಸೋಡಿಯಂ ಬೈಕಾರ್ಬೋನೇಟ್ ಬಿಳಿ ಹಲ್ಲಿನ ಕಲೆಗಳನ್ನು ನಿವಾರಿಸುವ ಗುಣ ಹೊಂದಿವೆ. ಲಿಂಬೆ ಸಹಜವಾದ ಬ್ಲೀಚ್ ಆಗಿ ಕೆಲಸ ಮಾಡುತ್ತದೆ.
ಬೇಕಿಂಗ್ ಸೋಡಾವನ್ನು ಸಾಕಷ್ಟು ಲಿಂಬೆ ರಸಕ್ಕೆ ಹಾಕಿ ಪೇಸ್ಟ್ ತಯಾರಿಸಿ. ಪೆೇಪರ್ ಟವೆಲಿನಿಂದ ಹಲ್ಲಿನಲ್ಲಿದ್ದ ಜೊಲ್ಲನ್ನು ತೆಗೆಯಿರಿ. ಪೇಸ್ಟನ್ನು ಟೂತ್ ಬ್ರಷ್‌ಗೆ ಹಾಕಿ ಹಲ್ಲಿಗೆ ಹಚ್ಚಿ. ಒಂದು ನಿಮಿಷ ಇಟ್ಟು ತೊಳೆಯಿರಿ. ನೀರು ಮಾತ್ರ ಬಳಸಿ ಹಲ್ಲು ತೊಳೆಯುವುಾದಲ್ಲಿ ಮೂರು ನಿಮಿಷ ಇಡಬಹುದು.
3. ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ನಿಮ್ಮ ಹಲ್ಲುಗಳನ್ನು ಹಳದಿ ಬಣ್ಣಕ್ಕೆ ತಿರುಗಿಸುವ ಬ್ಯಾಕ್ಟೀರಿಯವನ್ನು ನಿವಾರಿಸುತ್ತದೆ. ಅದು ಗಮ್ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಹಾಗೆ ಬಾಯಿಯಲ್ಲಿ ತಾಜಾ ವಾಸನೆ ಇರುವಂತೆ ಮಾಡುತ್ತದೆ.
ಬೆಳಗ್ಗೆ ಹಲ್ಲು ಉಜ್ಜುವ ಮೊದಲು ಸ್ವಲ್ಪ ತೆಂಗಿನೆಣ್ಣೆ ತೆಗೆದುಕೊಳ್ಳಿ. ಅದನ್ನು ಬಾಯಿಗೆ ಹಾಕಬಹುದು. ನಂತರ ಬಾಯಿಯಲ್ಲಿ ಅದನ್ನು ಮುಕುಳಿ ಹಾಕಿ. 10-15 ನಿಮಿಷಗಳ ಕಾಲ ಬಾಯೊಳಗೆ ಎಣ್ಣೆಯನ್ನು ಅತ್ತಿತ್ತ ಮುಕುಳಿ ಹಾಕಿದ ಮೇಲೆ ಹೊರಗೆ ಚೆಲ್ಲಿ. ನೀರು ಬಳಸಿ ತೊಳೆಯಿರಿ ಮತ್ತು ಹಲ್ಲುಜ್ಜಿ.
4. ಸೇಬಿನ ಸೈಡರ್
ಸೇಬಿನ ಸೈಡರ್ ವಿನೆಗರ್ ಬಾಯಿಯ ಗಮ್ ಕ್ಲೀನ್ಸರ್ ಆಗಿ ಕೆಲಸ ಮಾಡುತ್ತದೆ. ಹಾಗೆಯೇ ಹಲ್ಲಿಗೆ ಅಂಟಿಕೊಂಡ ಕೊಳೆಯನ್ನು ನಿವಾರಿಸುತ್ತದೆ. ಮುಖ್ಯವಾಗಿ ಕಾಫಿ ಮತ್ತು ನಿಕೊಟಿನ್ ಕೊಳೆ ನಿವಾರಿಸುತ್ತದೆ. ಇದು ಸಹಜವಾದ ಹಲ್ಲು ಬಿಳಿ ಮಾಡುವ ಪಾನೀಯವಾಗಿ ಸಾಬೀತಾಗಿದೆ. ಆದರೆ ಇದನ್ನು ಕನಿಷ್ಠ ಒಂದು ತಿಂಗಳಾದರೂ ದಿನವೂ ಬಳಸಬೇಕು.
ಕೃಪೆ: www.practo.com