ಹೆಲ್ಮೆಟ್ನಿಂದ ತಲೆ ತುರಿಕೆಯೆ?
ಇಲ್ಲಿದೆ ಪರಿಹಾರ!
ತುರಿಕೆ ಬಹಳ ಅಪಾಯಕಾರಿ. ಆದರೆ ಮೋಟಾರ್ ಸೈಕಲು, ಕುದುರೆ, ಸ್ನೋಬೋರ್ಡ್ನಲ್ಲಿ ವೇಗವಾಗಿ ಹೋಗುತ್ತಿರುವಾಗ ನಿಮ್ಮ ಹೆಲ್ಮೆಟ್ ಅಡಿಯಲ್ಲಿ ಗಂಭೀರವಾಗಿ ತುರಿಕೆ ಬಂದಲ್ಲಿ ಅದಕ್ಕೆ ಪರಿಹಾರವಾಗಿ ತುರಿಸಲು ಹೋಗುವುದು ಬಹಳ ಅಪಾಯಕಾರಿ.
ಹೆಲ್ಮೆಟ್ ಆಧಾರಿತ ತಲೆಬುರುಡೆಯ ತುರಿಕೆ ಬಾಗಶಃ ಪದೇ ಪದೇ ಅಥವಾ ಧೀರ್ಘ ಕಾಲ ಶಿರಸ್ತ್ರಾಣವನ್ನು ಬಳಸುವ ಕಾರಣದಿಂದ ಉಂಟಾಗುತ್ತದೆ. ಕೆಲವು ಹೆಲ್ಮೆಟ್ಧಾರಿಗಳು ಹೆಲ್ಮೆಟ್ ಧರಿಸಿದ ಮೇಲೆ ಗಂಭೀರ ತುರಿಕೆಯ ಸಮಸ್ಯೆ ಎದುರಿಸುತ್ತಾರೆ.
ಹೆಲ್ಮೆಟ್ ಸಂಬಂಧಿಸಿದ ತುರಿಕೆಯಲ್ಲಿ ಮೂರು ಪ್ರಮುಖ ಕಾರಣಗಳಿವೆ.
►ಹೆಲ್ಮೆಟಿನ ಆಂತರಿಕ ಸ್ಥಿತಿಗೆ ತಲೆಯ ಪ್ರತಿಕ್ರಿಯೆ
►ತಲೆಯಲ್ಲಿ ನಿರ್ಮಾಣವಾಗುವ ಸ್ಟಾಟಿಕ್ಗೆ ತಲೆಯ ಪ್ರತಿಕ್ರಿಯೆ
►ಹೊಸ ಹೆಲ್ಮೆಟ್ ಲೈನಿಂಗಿಗೆ ತಲೆಯ ಪ್ರತಿಕ್ರಿಯೆ
ಸೂಕ್ತ ಪರಿಹಾರವನ್ನು ನೀಡಲು ಕಾರಣವನ್ನು ಗುರುತಿಸುವುದು ಮುಖ್ಯ. ಈ ಕೆಳಗಿನ ವಿಧಾನದಿಂದ ಮೊದಲನೆ ಕಾರಣವನ್ನು ಪರಿಹಾರ ಮಾಡಬಹುದು.
1. ನಿಮ್ಮ ಶೈಲಿಯ ಹೆಲ್ಮೆಟ್ ತುರಿಕೆಗೆ ಕಾರಣವನ್ನು ಗುರುತಿಸಿ.
2. ನಿಮ್ಮ ಹೆಲ್ಮೆಟ್ ಲೈನಿಂಗ್ ಸ್ವಚ್ಛತೆಯನ್ನು ಕಾಪಾಡಿ. (ನೀವು ಶರಟು/ಬ್ಲೌಸನ್ನು ತೊಳೆಯದೆ ಬಳಸುತ್ತೇವೆಯೆ?)
3. ಗಾಡಿ ಚಲಾಯಿಸುವಾಗ / ಸ್ಕೀಯಿಂಗ್ ಮಾಡುವಾಗ ತುರಿಕೆಯನ್ನು ತಡೆಯಲು ತಲೆಗೆ ಸ್ಟಿಮ್ಯುಲಂಟುಗಳನ್ನು (ತುರಿಕೆ ನಿವಾರಕ) ಬಳಸಿ. ಚಾಲನೆಯಲ್ಲಿದ್ದಾಗ ತುರಿಸಲು ಪ್ರಯತ್ನಿಸಬೇಡಿ
4. ಕಡಿಮೆ ಕಿರಿಕಿರಿ ಎನಿಸುವ ಶಾಂಪೂ ಬಳಸಿ. ಅದು ನಿಮ್ಮ ತಲೆಯನ್ನು ಸೋಂಕಿನಿಂದ ರಕ್ಷಿಸುತ್ತದೆ.
5. ತಲೆಯಿಂದ ಬೆವರನ್ನು ದೂರ ಮಾಡುವ ಹೆಲ್ಮೆಟ್ ಲೈನರನ್ನು ಬಳಸಿ.
6. ಪ್ರಯಾಣಿಸುವಾಗ ಪ್ರತೀ ಬದಲಿ ಲೈನರುಗಳನ್ನು ಮತ್ತು ತಲೆಯ ಸ್ಟಿಮ್ಯುಲಂಟುಗಳನ್ನು ಗಮನಿಸಿ.
ಕೃಪೆ:www.wikihow.com