ಇದು ನಿಮ್ಮ ವೈಯಕ್ತಿಕ AC, ಬೇಕಾದಲ್ಲಿ ಕೊಂಡು ಹೋಗಿ

ಬೇಸಗೆಯು ನಮ್ಮ ಬೆವರಿಳಿಸಿ ಬಿಸಿಗಾಳಿ ಜೀವನ ದುಸ್ಸಾಧ್ಯವಾಗಿಸಿದೆ. ಇನ್ನೂ ಒಂದು ತಿಂಗಳು ಈ ಬಿರುಬೇಸಗೆಯನ್ನು ಸಹಿಸಬೇಕು. ಇದನ್ನು ಸಹಿಸಲು ನಿಮ್ಮ ಬಳಿ ಏರ್ ಕಂಡೀಷನರ್ ಇಲ್ಲವಾದಲ್ಲಿ ಜಗತ್ತಿನ ಮೊದಲ ಪರ್ಸನಲ್, ಪೋರ್ಟೇಬಲ್ ಏರ್ ಕಂಡೀಷನರ್ ಕೊಡುವ ಸ್ಟಾರ್ಟಪ್ ಒಂದಿದೆ.
ಇವಾಪೋಲರ್ ಎನ್ನುವುದು ರಷ್ಯಾದ ಉದ್ಯಮಿ ಯೂಜಿನ್ ಡುಬೊವೊಯ್ ಮತ್ತು ವ್ಲಾದಿಮಿರ್ ಲೆವಿಟಿನ್ ಅವರ ಕೂಸು. ತಂಪಾದ ಸಾಗರದ ಗಾಳಿ ಮತ್ತು ತೇವಾಂಶವಿರುವ ಒಣ ಹವೆಯನ್ನು ಕೊಡುವ ಸರಳವಾಗಿ ಬಳಸುವಂತಹದು ಇದು. ಸಾಂಪ್ರದಾಯಿಕ ಏರ್ ಕಂಡೀಷನರ್ ಬಳಸುವ ಫ್ರೆಯಾನ್ ಮೊದಲಾದ ರಾಸಾಯನಿಕ ಬಳಸುವ ಬದಲಾಗಿ ಇವಾಪೋಲರ್ ಪೇಟೆಂಟ್ ಇರುವ ಫಿಲ್ಟರ್ ಮತ್ತು ಇಂದು ಮರಳಿ ತುಂಬಿಸಬಹುದಾದ ನೀರಿನ ಕಂಟೇನರನ್ನು ತಂಪಾದ ಗಾಳಿಯನ್ನು ಸಣ್ಣ ಫ್ಯಾನಿನ ಮೂಲಕ ಮುಂದಕ್ಕೆ ದೂಡಲು ಉಪಯೋಗಿಸಿದೆ.
ಇವಾಪೋಲರ್ ಅದರ ಸುತ್ತಲಿನ ಗಾಳಿಯನ್ನು ಫಿಲ್ಟರ್ ಮಾಡುವುದು ಮತ್ತು ತೇವಾಂಶಗೊಳಿಸುವ ಮೂಲಕ ತಂಪಾಗಿಸುತ್ತದೆ. ಒಣಗಿದ ಮತ್ತು ಬಿಸಿ ಪರಿಸರದಲ್ಲಿ ಅದರ ತಂಪಿನ ಪರಿಣಾಮವನ್ನು ಅತ್ಯುತ್ತಮವಾಗಿ ಅನುಭವಿಸಬಹುದು. ಹೆಚ್ಚು ತೇವಾಂಶವಿರುವ ಪ್ರಾಂತಗಳಲ್ಲಿ ಅದು ಫ್ಯಾನಿಗಿಂತ ಹೆಚ್ಚು ತಂಪಾಗಿರಲು ಸಾಧ್ಯವಿಲ್ಲ. ಆದರೆ ಸೃಷ್ಟಿಕರ್ತರು ತಾವು ತೇವವಿರುವ ಸ್ಥಳಗಳಲ್ಲೂ ಪರೀಕ್ಷಿಸಿದ್ದಾಗಿ ಹೇಳುತ್ತಾರೆ.
ಸಣ್ಣ ಪರಿಣಾಮಕಾರಿ ಶ್ರೇಣಿಯಲ್ಲಿರುವ ಈ ಪರಿಸರ ಸ್ನೇಹಿ ಸಾಧನ ಎಸಿ ಯುನಿಟನ್ನು ಬದಲಿಸದು. ಆದರೆ ಡೆಸ್ಕನ್ನು ತಂಪಾಗಿರಿಸುತ್ತದೆ. ಇದು ವೈಯಕ್ತಿಕ ಬಳಕೆಗೆ ಇರುವುದು. 2015 ಅಕ್ಟೋಬರಿನಲ್ಲಿ ಇವಾಪೋಲರ್ ಅನುದಾನ ಸಂಗ್ರಹಿಸುವ ಗುರಿಯನ್ನು ಇಂಡಿಗೊಗೊದಲ್ಲಿ ಸಾಧಿಸಿದ್ದು, ಮೇಯಲ್ಲಿ ಯುನಿಟುಗಳನ್ನು ಸಾಗಿಸಲಿದೆ. ಮೊದಲೇ ಆರ್ಡರ್ ಮಾಡಿದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ 179 ಡಾಲರಿಗೆ ಲಭ್ಯವಿದೆ. ಹೆಚ್ಚುವರಿ ಕ್ಯಾಟ್ರಿಡ್ಜ್ ಬೇಕಾದರೆ 20 ಡಾಲರ್ ಹೆಚ್ಚು ತೆರಬೇಕು.
ಕೃಪೆ: www.businessinsider.in