ಆಕರ್ಷಕ, ಹಗುರ, ಸರಳ, ಸಣ್ಣ ಗಾತ್ರದ ಆ್ಯಪ್ ನಿಂದ ನಿಯಂತ್ರಿಸುವ AC ಬಂದಿದೆ!
ಬೇಕಾದಾಗ ಫಿಕ್ಸ್ ಮಾಡಿ, ಬೇಡದಾಗ ತೆಗೆದಿಡಿ

ಕಾಫಿ ಮೇಕರುಗಳಿಂದ ರೆಫ್ರಿಜರೇಟರುಗಳವರೆಗೆ ಎಲ್ಲವೂ ಅಂತರ್ಜಾಲದಲ್ಲಿ ಆ್ಯಪ್ ಮೂಲಕ ನಿಯಂತ್ರಣವಾಗುತ್ತಿದೆ. ಆದರೆ ಈ ಸ್ಮಾರ್ಟ್ ಕ್ರಾಂತಿಯ ಸಂದರ್ಭದಲ್ಲಿ ವಿಂಡೋ ಏರ್ ಕಂಡೀಷನರುಗಳಿಗೆ ಹೆಚ್ಚು ಗಮನ ಸಿಕ್ಕಿರಲಿಲ್ಲ. ಜನರಲ್ ಇಲೆಕ್ಟ್ರಿಕ್ ಸಹಯೋಗದಲ್ಲಿ ಮಾಡಿರುವ ಕ್ವಿರ್ಕಿ ಆರೋಸ್ ಸ್ಮಾರ್ಟ್ ಏರ್ ಕಂಡೀಷನರ್ ಇದೆಯಾದರೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೆ ಒಂದು ಸ್ಟಾರ್ಟಪ್ ಈಗ ವಿಂಡೋ ಏರ್ ಕಂಡೀಷನರುಗಳಿಗೆ ಹೊಸ ರೂಪ ಕೊಡಲು ಬಂದಿದೆ. ಸಾಮಾನ್ಯವಾಗಿ ಕೆಟ್ಟದಾಗಿ, ದೊಡ್ಡದಾಗಿ ಕಾಣುವ ಇತರ ಎಲ್ಲಾ ವಿಂಡೋ ಏರ್ ಕಂಡೀಷನರುಗಳಿಂತ ನೋರಿಯ ಚೆನ್ನಾಗಿ ಕಾಣಿಸುತ್ತಿದೆ.
ಇದರ ಅತ್ಯುತ್ತಮ ಲಕ್ಷಣವೆಂದರೆ ಬಹುತೇಕ ವಿಂಡೋ ಎಸಿಗಳಂತೆ ಇದು ನಿಮ್ಮ ಕಿಟಿಕಿ ದೃಶ್ಯದ ಅರ್ಧದಷ್ಟನ್ನು ಬಳಸಿಕೊಳ್ಳುವುದಿಲ್ಲ.
ಪಾರಂಪರಿಕ ಎಸಿಗಳಿಗೆ ಹೋಲಿಸಿದರೆ ಇದನ್ನು ವಿಂಡೋಸ್‌ಗೆ ಇನ್‌ಸ್ಟಾಲ್ ಮಾಡುವುದು ಬಹಳ ಸುಲಭ. ನೀವು ಮೊದಲಿಗೆ ಫ್ರೇಮನ್ನು ಇನ್ ಸ್ಟಾಲ್ ಮಾಡುತ್ತೀರಿ. ಅಲ್ಲಿ ನೋರಿಯ ಜಾರುತ್ತದೆ. ಅಲ್ಲದೆ ಇದು ಇನ್ನೂ ಹಗುರವಾಗಿರುತ್ತದೆ.
ನಾಬ್ ಮೂಲಕ ನೋರಿಯವನ್ನು ನಿಯಂತ್ರಿಸುವುದು ಬಹಳ ಸರಳ ಎಂದು ಕಾಣಿಸುತ್ತದೆ.
ಕಂಟ್ರೋಲ್ ಮಾಡಲು ಆ್ಯಪ್ ಇಲ್ಲದೆ ಇದ್ದರೆ ಕ್ರಾಂತಿಯುತ ಎಸಿ ಇದ್ದೇನು ಪ್ರಯೋಜನ. ಇದರಲ್ಲಿ ನೀವು ತಾಪಮಾನ ಮತ್ತು ಪಟ್ಟಿಗಳನ್ನು ಸೆಟ್ ಮಾಡಬಹುದಾಗಿದೆ.
ಇದು ತಂಪು ಗಾಳಿಯನ್ನು ಬದಿಗೆ ಹರಿಸುವ ಬದಲಾಗಿ ಮೇಲುಗಡೆಗೆ ಹರಿಸುತ್ತದೆ. ತಂಪಾದ ಗಾಳಿ ಕೆಳಗೆ ಇಳಿಯುವ ಕಾರಣ ಇದು ಹೆಚ್ಚು ಲಾಭ ಕೊಡುತ್ತದೆ.
ನಿತ್ಯ ಏರ್ ಕಂಡೀಷನರುಗಳು ಗಾಳಿಯನ್ನು ಬದಿಗೆ ಹರಿಸುತ್ತದೆ. ಅದು ಎಸಿಯ ಮುಂದುಗಡೆ ನೇರವಾಗಿರುವ ಮತ್ತು ನೆಲ ಮಟ್ಟದ ಗಾಳಿಯನ್ನು ಮಾತ್ರ ತಂಪಾಗಿಸುತ್ತದೆ.
ಚಳಿಗಾಲ ಬರುವಾಗ ಇದರ ನವಿರಾದ ವಿನ್ಯಾಸವು ಅದನ್ನು ನಿಮ್ಮ ಬೆಡ್ ಅಡಿಯಲ್ಲಿಡಲು ಅಥವಾ ಬಿಗಿಯಾದ ಜಾಗಗಳಲ್ಲಿ ಇಡಲು ಸಾಧ್ಯವಾಗಲಿದೆ.
ನಾರಿಯಾದ ಕಿಕ್‌ಸ್ಟಾರರ್ ಪ್ರಚಾರಾಭಿಯಾನ ಜಾರಿಯಲ್ಲಿದೆ. ಈಗಾಗಲೇ ಅದಕ್ಕೆ 35 ದಿನಗಳಿರುವಾಗಲೇ 3 ಲಕ್ಷ ಡಾಲರ್ ಅನುದಾನ ಸಿಕ್ಕಿದೆ. ಆರಂಭದಲ್ಲೇ ಖರೀದಿಸುವವರಿಗೆ ಇದ್ದ ಪ್ಯಾಕೇಜ್ ಮುಗಿದಿದೆ. ಆದರೆ ನೀವು 300 ಡಾಲರಿಗೆ ನಾರಿಯಾವನ್ನು ಪಡೆಯಬಹುದು. ಅದು ರಿಟೇಲಲ್ಲಿ 400 ಡಾಲರ್ ಬಾಳುತ್ತದೆ.
ಕೃಪೆ: www.techinsider.io