ಬೆಡ್ ಕಾಫಿ ಬೇಡ, ಬೆಳಗ್ಗೆದ್ದು ಇವುಗಳನ್ನು ತಿಂದು ಚೈತನ್ಯ ಪಡೆಯಿರಿ
ಪೂರ್ಣ ರಾತ್ರಿಯ ನಿದ್ರೆಯ ಹೊರತಾಗಿಯೂ ನಿಮಗೆ ನಿದ್ದೆಯ ಅಮಲಿನಲ್ಲಿರುವಂತೆ ಅನಿಸುವುದಿದೆ. ಹೀಗಾಗಿ ಆಕಳಿಕೆ ತಡೆಯುವುದೇ ಕಷ್ಟವಾಗುತ್ತಿರುತ್ತದೆ. ಅಂತಹ ಸಮಯದಲ್ಲಿ ಕಾಫಿ ಕುಡಿದು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ನಿಮಗೆ ಶಕ್ತಿ ನೀಡುತ್ತದೆ ಎನ್ನುವುದು ಸತ್ಯವಾಗಿದ್ದರೂ ಕಾಫಿಗೆ ಪರ್ಯಾಯವೂ ಇದೆ. ಸಕ್ಕರೆ ಮತ್ತು ಕಫೈನ್ ಬದಲಿಗೆ ಬೇರೆ ಆಹಾರವನ್ನು ಸೇವಿಸಬಹುದು.
ಚಿಯ ಬೀಜಗಳು
ಚಿಯಾ ಬೀಜಗಳು ಒಮೆಗಾ3 ಫ್ಯಾಟಿ ಆಸಿಡುಗಳ ಶ್ರೀಮಂತ ಮೂಲ. ಅವುಗಳನ್ನು ಬ್ರೈನ್ ಬೂಸ್ಟರುಗಳೆಂದು ತಿಳಿಯಲಾಗಿದೆ. ಇವುಗಳು ಉದಾಸೀನ ಓಡಿಸುತ್ತವೆ ಮತ್ತು ಹೆಚ್ಚು ಜಾಗರೂಕವಾಗಿರುವಂತೆ ಮಾಡುತ್ತವೆ. ಚಿಯಾಬೀಜಗಳು ನೀರಿನಲ್ಲಿ ತಮ್ಮ ತೂಕಕ್ಕಿಂತ 10 ಪಟ್ಟು ಹೆಚ್ಚು ಭಾರವಿರುತ್ತವೆ. ವೇಗವಾಗಿ ಜೀರ್ಣಕ್ರಿಯೆಯ ಮೂಲಕ ನೀವು ಹೈಡ್ರೇಟೆಡ್ ಆಗಿರುವುದು ಮತ್ತು ಶಕ್ತಿಯುತವಾಗಿರುವುದನ್ನು ಖಾತರಿಗೊಳಿಸುತ್ತದೆ. ಸ್ಮೂತೀಸ್, ಶೇಕ್ಸ್ ಅಥವಾ ಯೊಗಾರ್ಟ್ಗೆ ಬೆರೆಸಬಹುದು.
ತಂಪಾದ ವಾಟರ್
ಹೌದು. ನೀರು ನಿಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಬಹುದು. ದೇಹದ ಕೋಶಗಳನ್ನು ಹೈಡ್ರೇಟ್ ಮಾಡಿ ಸಕ್ರಿಯಗೊಳಿಸುತ್ತದೆ. ಬಹಳಷ್ಟು ಮಂದಿ ನೀರು ಕುಡಿಯದೇ ಬೆಳಗು ಮುಗಿಸುತ್ತಾರೆ. ಮಧ್ಯಾಹ್ನವರೆಗೆ ಬಾಯಾರಿಕೆ ಅನಿಸುತ್ತದೆ. ಹೀಗೆ ಮಾಡುವುದರಿಂದ ಸಾಕಷ್ಟು ನಷ್ಟವಾಗಲಿದೆ. ಪ್ರತಿಯೊಬ್ಬರೂ ನೀರು ಕುಡಿಯುವ ಮೂಲಕ ದಿನ ಆರಂಭಿಸಬೇಕು. ಲಿಂಬೆ ಅಥವಾ ಇತರ ಆರೋಗ್ಯಕರ ಫ್ಲೇವರನ್ನು ನೀರಿಗೆ ಬೆರೆಸಬಹುದು.
ಓಟ್ ಮೀಲ್
ಓಟ್ ಮೀಲ್ ದಿನ ಆರಂಭಿಸಲು ಪರಿಪೂರ್ಣ ಆಹಾರ. ಗ್ಲಿಸೆಮಿಕ್ ಇಂಡೆಕ್ಸ್ ಅದರಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಸಂಕೀರ್ಣ ಕೊಬ್ಬುಗಳನ್ನು ನಿಧಾನವಾಗಿ ಇಳಿಸುತ್ತದೆ. ಹೀಗಾಗಿ ದಿನವಿಡೀ ಚಾರ್ಜ್ ಆಗಿರುವಂತೆ ಮಾಡುತ್ತದೆ. ಚಯಾಪಚಯ ಆರಂಭಿಸಿ ದಿನವಿಡೀ ಸಕ್ರಿಯವಾಗಿರಲು ನೆರವಾಗುತ್ತದೆ.
ಎಲೆ ತರಕಾರಿಗಳು
ಪಾಲಾಕ್ ಸೊಪ್ಪುಗಳಂತಹ ಹಸಿರು ತರಕಾರಿ ಶಕ್ತಿಯುತವಾದ ಭಾವನೆ ಕೊಡಲಿದೆ. ಈ ಹಸಿರು ತರಕಾರಿಗಳು ವಿಟಮಿನ್ ಬಿ ತುಂಬಿಕೊಂಡು ಆಹಾರವನ್ನು ಶಕ್ತಿಯಾಗಿ ಬದಲಿಸಲು ನೆರವಾಗಲಿದೆ. ಸಲಾಡ್, ಸ್ಮೂದಿಯಲ್ಲಿ ಹಾಕಿ ಸೇವಿಸಬೇಕು.
ಮೊಟ್ಟೆಗಳು
ಬೇಯಿಸಿದ, ಕರಿದ ಮೊಟ್ಟೆ ಬೆಳಗ್ಗೆ ಅತೀ ಆರೋಗ್ಯಕರ ಆಹಾರ. ಮೊಟ್ಟೆಯ ಬಿಳಿ ಭಾಗವನ್ನು ಮರೆಯಬೇಡಿ. ಪ್ರೊಟೀನಲ್ಲಿ ಶ್ರೀಮಂತವಾಗಿದ್ದು ದೇಹಕ್ಕೆ ಸಾಕಷ್ಟು ಶಕ್ತಿ ಕೊಡುತ್ತದೆ. ಉತ್ತಮ ಉಪಾಹಾರಕ್ಕೆ ಸ್ವಲ್ಪ ತರಕಾರಿಯೂ ಬೆರೆಸಿ.
ಚಾಕಲೇಟು ಹಾಲು
ಚಾಕಲೇಟನ್ನು ಕಡಿಮೆ ಗಾತ್ರದಲ್ಲಿ ಹಾಲಿನ ಜೊತೆಗೆ ಬೆರೆಸಿ ಸೇವಿಸಬಹುದು. ಇದು ತಾಜಾತನ ಕೊಡುವ ಜೊತೆಗೆ ಉತ್ತಮ ಆರೋಗ್ಯಕರ ಭಾವನೆ ತರುತ್ತದೆ. ಹಾಲಿನಿಂದ ಕ್ಯಾಲ್ಸಿಯಂ ಸಿಕ್ಕರೆ ಚಾಕಲೇಟು ಉತ್ತಮ ಶಕ್ತಿ ಕೊಡುತ್ತದೆ.
ಕೃಪೆ:timesofindia.indiatimes.com